Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಕೆಜಿಗೆ 2.7 ಲಕ್ಷ ಬೆಲೆಯ ಮಾವಿನ ಹಣ್ಣು: ನೆಟ್ಟು ಬೆಳೆಸಿದವರಿಗೆ ಅದು ದುಬಾರಿಯೆಂದೇ ತಿಳಿದಿರಲಿಲ್ಲ!
ಈಗಾಗಲೇ ನೀವು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ದುಬಾರಿ ಮಾವಿನ ಹಣ್ಣಿನ ಬಗ್ಗೆ ನೋಡಿರಬಹುದು. ಆ ಮಾವಿನ ಹಣ್ಣಿನ ಬಣ್ಣ ನೋಡಿದರನೇ ಬಾಯಲ್ಲಿ ನೀರೂರುತ್ತೆ, ಇನ್ನು ಅದನ್ನು ರುಚಿ ನೋಡುವ ಅಂದರೆ ಸ್ವಲ್ಪ ಮಟ್ಟಿಗೆ ದುಡ್ಡಿರುವವನು ಕೂಡ ಯೋಚಿಸಬೇಕಾಗಿದೆ, ಏಕೆಂದರೆ ಇದರ ಬೆಲೆ ಕೆಜಿ 2 ಲಕ್ಷ 70 ಸಾವಿರ! ಇಂಥ ಒಂದು ಮರವಿದ್ದರೆ ಸಾಕು ಲೈಫ್ ಸೆಟ್ಲ್ ಎಂದು ಯೋಚಿಸುತ್ತಿರಬಹುದು ಅಲ್ವಾ? ಆದರೆ ಈ ಹಣ್ಣು ಬೆಳೆದವರಿಗೆ ಇದು ಇಷ್ಟು ದುಬಾರಿ ಬೆಲೆಯ ಹಣ್ಣೆಂಬುವುದು ಗೊತ್ತೇ ಇರಲಿಲ್ಲ ಅಂತೆ.

ದುಬಾರಿ ಹಣ್ಣಿನ ಮರ
ಮಧ್ಯ ಪ್ರದೇಶದ ಜಬಲ್ ಪುರದ ಕೃಷಿ ದಂಪತಿ ರಾಣಿ ಹಾಗೂ ಸಂಕಲ್ಪ್ ಪರಿಹಾರ್‌ಗೆ ತಾವು ಬೆಳೆಸಿರುವುದು ವಿಶ್ವದ ದುಬಾರಿ ಮಾವಿನ ಹಣ್ಣಿನ ಮರಗಳನ್ನು ಎಂಬುವುದು ಗೊತ್ತೇ ಇರಲಿಲ್ಲ. ಆದರೆ ಅವರು ಬೆಳೆದದ್ದು ಜಪಾನಿನ ಮಿಯಾಜಾಕಿ ಎಂಬ ಮಾವಿನ ತಳಿಯ ಗಿಡಗಳನ್ನು. ಕೆಂಪು ಬಣ್ಣದ ಈ ಮಾವಿನ ಬೆಲೆ ಚಿನ್ನಕ್ಕಿಂತ ದುಬಾರಿಯಾಗಿದೆ.

ಒಂದು ಹಣ್ಣಿಗೆ 21 ಸಾವಿರ ರೂಪಾಯಿ
ಜಪಾನಿನ ಮೀಡಿಯಾ ವರದಿ ಪ್ರಕಾರ ಈ ಹಣ್ಣು ಕೆಜಿಗೆ 2 ಲಕ್ಷದ 70 ಸಾವಿರ ಇದ್ದು ಒಂದು ಹಣ್ಣಿಗೆ 21 ಸಾವಿರಕ್ಕೂ ಅಧಿಕ ರೂಪಾಯಿ ಇದೆ. ಈ ಮಾವಿನ ಹಣ್ಣುಗಳಲ್ಲಿ ಐಲ್ಯಾಂಡ್‌ನ ಕ್ಯುಶು ದಕ್ಷಿಣ ಜಪಾನ್ ಭಾಗಗಳಲ್ಲಿ ಬೆಳೆಯಲಾಗುತ್ತದೆ.
ಈ ಹಣ್ಣುಗಳು ತುಂಬಾ ಬಿಡುವುದಿಲ್ಲ, ಅಲ್ಲದೆ ತುಂಬಾ ಸಿಹಿಯಾಗಿರುತ್ತದೆ. ಈ ಹಣ್ಣನ್ನು ವಿದೇಶಗಳಲ್ಲಿ ದುಬಾರಿ ಗಿಫ್ಟ್ ಆಗಿ ತಮ್ಮ ಪ್ರೀತಿ ಪಾತ್ರರರಿಗೆ ನೀಡುತ್ತಾರೆ.

ಈ ದಂಪತಿಗೆ ಈ ಹಣ್ಣಿನ ಗಿಡ ಹೇಗೆ ಸಿಕ್ಕಿತು?
ಇವರು ಗಿಡಗಳನ್ನು ತರಲು ಚೆನ್ನೈಗೆ ಹೋಗುತ್ತಿದ್ದಾಗ ಟ್ರೈನ್‌ನಲ್ಲಿ ಸಿಕ್ಕ ವ್ಯಕ್ತಿಯೊಬ್ಬರು ಎರಡು ಮಾವಿನ ಸಸಿ ನೀಡುತ್ತಾ ಮಕ್ಕಳಮತೆ ಜೋಪಾನ ಮಾಡಿ ಇದನ್ನು ಬೆಳೆಸಿ ಅಂದಿದ್ದರು. ಆದರೆ ಅವರು ಏಕೆ ಆ ರೀತಿ ಹೇಳಿದರು ಎಂದು ಗಿಡ ನೆಟ್ಟು, ಮರ ಫಸಲು ನೀಡುವವರಿಗೂ ಇವರಿಗೆ ತಿಳಿದಿರಲಿಲ್ಲ.

5-6 ಹಣ್ಣಿಗಾಗಿ ಸೆಕ್ಯೂರಿಟಿ ಗಾರ್ಡ್ ನೇಮಿಸಿದ್ದಾರೆ
ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟಿದೆ ಎಂದು ತಿಳಿದ ಮೇಲೆ ಮರದಲ್ಲಿರುವ 5-6 ಹಣ್ಣಿನ ರಕ್ಷಣೆಗೆ ಸೆಕ್ಯೂರಿಟಿ ಗಾರ್ಡ್ ನೇಮಿಸಿದ್ದಾರೆ.
ಒಟ್ಟಿನಲ್ಲಿ ತಿಳಿಯದೇ ಬೆಳೆದ ಗಿಡದಿಂದ ಬಂಪರ್ ಲಾಟರಿಯನ್ನೇ ಪಡೆದಿದ್ದಾರೆ ಅಲ್ವಾ?



Click it and Unblock the Notifications
