Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವೈರಲ್: ಆಮೆಗೆ ಸಹಾಯ ಮಾಡಿದ ಎಮ್ಮೆ, ಈ ವೀಡಿಯೋ ನೋಡಿದ ನೆಟ್ಟಿಗರು ಫುಲ್ ಫಿದಾ
ಕೆಲವೊಮ್ಮೆ ಮನುಷ್ಯರು ಮನುಷ್ಯತ್ವ ಮರೆತು ವರ್ತಿಸುತ್ತಾರೆ, ಮಾನವೀಯತೆ ಗುಣ ಮನುಷ್ಯರಲ್ಲಿ ಮಾತ್ರ ಇರುತ್ತದೆ ಎಂದು ನಾವೆಂದುಕೊಳ್ಳುತ್ತೇವೆ, ಆದರೆ ನಮ್ಮಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತವೆ. .

ಅಂಥ ಎಷ್ಟೋ ಘಟನೆಗಳನ್ನು ಆಗಾಗ ನೋಡುತ್ತಲೂ ಇರುತ್ತೇವೆ, ನಾಯಿ ಮರಿಗೆ ಹಾಲುಣಿಸಿದ ಹಸು, ಆಹಾರಕ್ಕಾಗಿ ತಾನು ಹಿಡಿದ ಜಿಂಕೆ ಗರ್ಭಿಣಿಯೆಂದು ತಿಳಿದಾಗ ಬಿಟ್ಟು ಹೋದ ಮೊಸಳೆ ಇಂಥ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ, ವೀಡಿಯೋಗಳನ್ನು ನೋಡಿರುತ್ತೇವೆ, ಅಂಥದ್ದೇ ಒಂದು ವೀಡಿಯೋ ವೈರಲ್ ಆಗುತ್ತಿದೆ.
ಆಮೆಯೊಂದನ್ನು ಎಮ್ಮೆ ಕಾಪಾಡಿರುವ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಮಾನವೀಯತೆ ಎಂಬುವುದು ಮನುಷ್ಯನಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತದೆ ಎಂಬುವುದಕ್ಕೆ ಉದಾಹರಣೆ ಈ ವೀಡಿಯೋ...
ಆಮೆಯೊಂದು ಮಗುಚಿ ಬಿದ್ದಿತ್ತು. ಅದು ಹಾಗೆ ಉಲ್ಟಾ ಅಸಹಾಯಕವಾಗಿ ಬಿದ್ದಾಗ ಅಲ್ಲಿಗೆ ಬಂದ ಎಮ್ಮೆ ಅದನ್ನು ನೋಡಿ ತನ್ನ ಕೊಂಬಿನಿಂದ ನೂಕಿ ಸರಿಯಾಗಿ ಮಾಡಿ ಆಮೆ ಚಲಿಸುವಂತೆ ಮಾಡಿದೆ.
ಆಮೆಗೆ ಎಮ್ಮೆ ಮಾಡಿದ ಸಹಾಯದ ವೀಡಿಯೋವನ್ನು ಡಾಗ್ಸ್ ಅಂಡ್ ವೈಲ್ಡ್ ಎನಿಮಲ್ಸ್ ಇನ್‌ಸ್ಟಾಗ್ರಾಮ್ ಅಕೌಂಡ್‌ನಲ್ಲಿ ಶೇರ್ ಮಾಡಲಾಗಿದ್ದು ಈ ವೀಡಿಯೋ ವೈರಲ್ ಆಗಿದೆ.
ಈ ವೀಡಿಯೋಗೆ 5 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಬಂದಿದೆ, ಈ ವೀಡಿಯೋವನ್ನು ನೆಟ್ಟಿಗರು ತುಂಬಾನೇ ಮೆಚ್ಚಿಕೊಂಡಿದ್ದು ಸಕತ್ ವೈರಲ್ ಆಗುತ್ತಿದೆ.



Click it and Unblock the Notifications

