Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
ಟ್ವಿಟರ್‌ನಲ್ಲಿ ಶೇರ್ ಮಾಡಲಾದ ಆ ವೀಡಿಯೋ ನೋಡುವಾಗ ಎಂಥವರಿಗೂ ಮೈ ಝುಂ ಎನ್ನುತ್ತೆ, ಇನ್ನೇನು ಮಗುವಿಗೆ ಕಾರು ಬಂದು ಗುದ್ದುವುದರಲ್ಲಿತ್ತು, ಅಷ್ಟರಲ್ಲಿ ರಾಕೆಟ್ ಸ್ಪೀಡ್‌ನಲ್ಲಿ ಬಂದ ಸೈನಿಕ ಮಗುವನ್ನು ಕಾಪಾಡುತ್ತಾರೆ.

ಅಷ್ಟ ಬೇಗ ಅಪಾಯವನ್ನು ಊಹಿಸಿ, ಕ್ಷಣಾರ್ಧದಲ್ಲಿ ಮಗುವನ್ನು ಕಾಪಾಡಿರುವ ಆ ವೀಡಿಯೋ ನಮ್ಮ ಯೋಧರು ಎಷ್ಟು ಚುರಾಗಿ ಕಾರ್ಯ ಪ್ರವೃತ್ತರಾಗಿ ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬುವುದಕ್ಕೆ ಒಂದು ಚಿಕ್ಕ ಉದಾಹರಣೆ.
ದೇಶ ಹಾಗೂ ದೇಶದ ಜನತೆ ಅಂತ ಬಂದಾಗ ಅವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಮ್ಮ ರಕ್ಷಣೆಗೆ ನಿಲ್ಲುತ್ತಾರೆ. ಅವರು ಬರೀ ರಕ್ಷಣೆಯಷ್ಟೇ ಮಾಡುವುದಿಲ್ಲ, ನಮ್ಮ ನಿರ್ಲಕ್ಷ್ಯಕ್ಕೆ ತಕ್ಕ ಪಾಠನೂ ಕಲಿಸುತ್ತಾರೆ
ಈ ವೀಡಿಯೋದಲ್ಲಿ ನೀವು ನೋಡಬಹುದು ತಾಯಿ ಜೊತೆ ಮಗು ನಿಂತಿರುತ್ತದೆ, ಆ ತಾಯಿ ಫೋನ್‌ನಲ್ಲಿ ಫುಲ್ ಬ್ಯುಸಿ, ಎಷ್ಟು ಬ್ಯುಸಿಯೆಂದರೆ ಮಗು ರಸ್ತೆ ಮಧ್ಯ ಹೋಗಿರುವುದನ್ನೂ ಅವಳು ಗಮನಿಸಿರುವುದಿಲ್ಲ, ಅಷ್ಟರಲ್ಲಿ ಕಾರೊಂದು ವೇಗವಾಗಿ ಬರುತ್ತಿರುತ್ತದೆ. ಇನ್ನೇನು ಆ ಮಗುವಿಗೆ ಆ ಕಾರು ಡಿಕ್ಕಿ ಹೊಡೆಯಬೇಕು, ಅಷ್ಟರಲ್ಲಿ ದೇವಧೂತನಂತೆ ಮಿಂಚಿನ ವೇಗದಲ್ಲಿ ಬಂದ ಸೈನಿಕ ಮಗುವನ್ನು ಎತ್ತಿ ಆ ಕಡೆ ಓಡಿ ಬಿಡುತ್ತಾರೆ.
ಸೈನಿಕ ಕಾರು ಚಾಲಕನತ್ತ ಕೈ ತೋರಿಸಿ ಏನೋ ಬೈಯುತ್ತಿರುರುವುದನ್ನು ಕಾಣಬಹುದು, ಆದರೆ ಅಷ್ಟಕ್ಕೆ ಅವರ ಕೋಪ ನಿಲ್ಲುವುದಿಲ್ಲ, ಸೀದಾ ಹೋಗಿ ಆ ತಾಯಿಯ ಮೊಬೈಲ್ ಕಿತ್ತು ರೋಡ್‌ಗೆ ಎಸೆದು ಪುಡಿ ಮಾಡುತ್ತಾರೆ.
ಆ ಸೈನಿಕ ಆ ಕ್ಷಣದಲ್ಲಿ ಬಂದಿದ್ದಕ್ಕೆ ಆಯ್ತು ಇಲ್ಲದಿದ್ದರೆ... ಪೋಷಕರೇ ಮಕ್ಕಳ ಬಗ್ಗೆ ಎಷ್ಟು ಜಾಗ್ರತೆ ವಹಿಸಿದರೂ ಸಾಲದು, ಹೊರಗಡೆ ಹೋದಾಗ ಮೈಯೆಲ್ಲಾ ಕಣ್ಣಾಗಿ ಅವರನ್ನು ನೋಡಬೇಕಾಗುತ್ತೆ, ಸ್ವಲ್ಪ ನಿರ್ಲಕ್ಷ್ಯ ದೊಡ್ಡ ಅಪಾಯ ತರಬಹುದು ಹುಷಾರ್!



Click it and Unblock the Notifications

