Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಅ.2 ರಂದು ಸಂಪೂರ್ಣ ಸೂರ್ಯಗ್ರಹಣ..! ಭಾರತದಲ್ಲಿ ಗೋಚರವಾಗುತ್ತಾ?
ಈ ವರ್ಷದ 2ನೇ ಹಾಗೂ ಕೊನೆಯ ಸೂರ್ಯ ಗ್ರಹಣವು ಇದೆ ಅಕ್ಟೋಬರ್ 2ರಂದು ಸಂಭವಿಸುತ್ತಿದೆ, ಅಂದು ಮಹಾಲಯ ಅಮವಾಸ್ಯೆಯಾಗಿದ್ದು, ಪಿತೃಪಕ್ಷದ ಕೊನೆಯ ದಿನವಾಗಿದೆ. ಹೀಗಾಗಿ ಈ ಸೂರ್ಯಗ್ರಹಣ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದು ಸಂಪೂರ್ಣ ಸೂರ್ಯ ಗ್ರಹಣವಾಗಿದ್ದು, ರಿಂಗ್ಸ್ ಆಫ್ ಫೈರ್ ಮಾದರಿಯಲ್ಲಿ ಕಂಡು ಬರಲಿದೆಯಂತೆ.
ಚಂದ್ರನ ನೆರಳು ವಾಯುವ್ಯದಿಂದ ಆಗ್ನೇಯಕ್ಕೆ ಚಲಿಸುತ್ತದೆ ಮತ್ತು ಭೂಮಿಯ ವಕ್ರತೆ ಮತ್ತು ಚಂದ್ರನ ಬದಲಾಗುತ್ತಿರುವ ದೂರ ಮತ್ತು ಕಕ್ಷೆಯ ವೇಗದಿಂದಾಗಿ, ನೆರಳಿನ ವೇಗವು ವಿವಿಧ ಪ್ರದೇಶಗಳಲ್ಲಿ ನಾಟಕೀಯವಾಗಿ ಏರಿಳಿತಗೊಳ್ಳುತ್ತದೆ. ಹೀಗಾಗಿ ರಿಂಗ್ಸ್ ಆಫ್ ಫೈರ್ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು.

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರನು ಆಗಮಿಸಿದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ, ಇದು ಸೂರ್ಯಗ್ರಹಣವಾಗಲು ಕಾರಣವಾಗುತ್ತದೆ ಎಂಬುದು ನಮಗೆ ತಿಳಿದಿರುವ ವಿಚಾರವಾಗಿದೆ. ಈಗ ಸಂಭವಿಸುತ್ತಿರುವ ಸೂರ್ಯಗ್ರಹಣವು ಫೆಸಿಫಿಕ್ ಸಮುದ್ರದಿಂದ ಆರಂಭಗೊಳ್ಳುತ್ತದೆ. ಹಾಗೆ ಈ ಸೂರ್ಯಗ್ರಹಣವು ಒಟ್ಟು 7 ನಿಮಿಷ ಮತ್ತು 25 ಸೆಕೆಂಡುಗಳ ಕಾಲ ದೀರ್ಘವಾಗಿರಲಿದೆ.
ಭಾರತದಲ್ಲಿ ಗೋಚರವಾಗುತ್ತಾ?
ಈ ಹಿಂದೆ ಸಂಭವಿಸಿದ್ದ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಗಳು ಭಾರತದಲ್ಲಿ ಗೋಚರವಾಗಿರಲಿಲ್ಲ. ಈಗ ಅಕ್ಟೋಬರ್ 2ರಂದು ಸಂಭವಿಸುತ್ತಿರುವ ಸೂರ್ಯಗ್ರಹಣ ಸಹ ಭಾರತದಲ್ಲಿ ಗೋಚರವಾಗುತ್ತಿಲ್ಲ. ಗ್ರಹಣ ಸಂಭವಿಸುವ ಸಮಯದಲ್ಲಿ ಭಾರತದಲ್ಲಿ ರಾತ್ರಿ ಆಗಿರುವುದರಿಂದ ಭಾರತದ ಯಾವುದೇ ಮೂಲೆಯಿಂದ ಈ ಗ್ರಹಣ ಗೋಚರವಾಗುವುದಿಲ್ಲ. ಗ್ರಹಣವು 9:13 PM IST ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 3:17 PM IST ಕ್ಕೆ ಕೊನೆಗೊಳ್ಳುತ್ತದೆ. ಭಾರತೀಯ ಕಾಲಮಾನದಲ್ಲಿ (ತ್ರಿ 9.17 ರಿಂದ ಮುಂಜಾನೆ 3.14 ರವರೆಗೆ ಸೂರ್ಯಗ್ರಹಣ ಸಂಭವಿಸಲಿದೆ)
ಇನ್ನು ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ 2026ರ ವರೆಗೆ ಗೋಚರವಾಗುವುದಿಲ್ಲ. ಮುಂದಿನ ವರ್ಷ ಸಹ ಎರಡು ಗ್ರಹಣಗಳನ್ನು ನಾವು ನೋಡಬಹುದಾಗಿದೆ.
ಮುಂದಿನ ವರ್ಷ ಗ್ರಹಣ ಗೋಚರ
ಈ ವರ್ಷದ 4 ಗ್ರಹಣಗಳು ಭಾರತದಲ್ಲಿ ಗೋಚರವಾಗಿಲ್ಲ. ಆದ್ರೆ ಮುಂದಿನ ವರ್ಷ ಸಂಭವಿಸಲಿರುವ ಸೂರ್ಯಗ್ರಹಣ ಕೂಡ ಗೋಚರವಾಗುವುದು ಅನುಮಾನ. ಆದರೆ 2025ರಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತಿವೆ.
ಭಾರತದಲ್ಲಿ ಗ್ರಹಣ ಗೋಚರವಾಗದಿದ್ದರೂ ಅಕ್ಟೋಬರ್ 2ರಂದು ಗ್ರಹಣ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಈ ಗ್ರಹಣದ ಸಮಯದಲ್ಲಿ ಯಾರು ಸಹ ಮನೆಯಿಂದ ಹೊರಬರುವುದಿಲ್ಲ. ದೇವಾಲಯದಲ್ಲಿ ಪೂಜೆಗಳು ನೆರವೇರುವುದಿಲ್ಲ. ಆದರೆ ಭಾರತದಲ್ಲಿ ಗೋಚರ ಆಗದಿರುವ ಕಾರಣ ಅಷ್ಟೊಂದು ಪರಿಣಾಮಕಾರಿಯಲ್ಲ.
ಧಾರ್ಮಿಕ ಗ್ರಂಥಗಳ ಪ್ರಕಾರ, ಚಂದ್ರ ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಮತ್ತು ಸೂರ್ಯಗ್ರಹಣ ಕೊನೆಗೊಳ್ಳುವ 12 ಗಂಟೆಗಳ ಮೊದಲು ಸಮಯವನ್ನು ಸೂತಕ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಗ್ರಹಣ ಸಂಪ್ರದಾಯಗಳು, ನಿಯಮಗಳನ್ನು ಪಾಲಿಸಲಾಗುತ್ತದೆ. ಅದರಲ್ಲೂ ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆಯಂದು ಈ ಗ್ರಹಣ ಬಂದಿರುವುದಿರಿಂದ ಹಲವು ನಿಯಮ ಪಾಲನೆ ಅಗತ್ಯವಾಗಿದೆ.
ಈ ಸೂರ್ಯಗ್ರಹಣ ಮುಗಿದ ಬಳಿಕ ಸ್ನಾನ ಮಾಡಿ ಪೂಜೆ ಮಾಡಿ. ಕಾಳು, ಗೋಧಿ, ಬೆಲ್ಲ ಮತ್ತು ಬೇಳೆಕಾಳುಗಳನ್ನು ಬಡವರಿಗೆ ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಇದರಿಂದ ಜಾತಕ ದೋಷ ಮುಕ್ತಿಯಾಗುತ್ತದೆ.



Click it and Unblock the Notifications