Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಈ 6 ರಾಶಿಯ ಮಹಿಳೆಯರು ತುಂಬಾನೇ ರೊಮ್ಯಾಂಟಿಕ್!
ಒಂದು ಸಂಬಂಧ ಎಂದ ಮೇಲೆ ಅದ್ರಲ್ಲಿ ಪ್ರೀತಿ, ವಿಶ್ವಾಸ, ನೋವು, ನಲಿವುಗಳು ಸಾಮಾನ್ಯವಾಗಿ ಇರಲೇಬೇಕು. ಆಗಲೇ ಅದು ನಿಜವಾದ ಪ್ರೀತಿ ಅಂತ ಅನ್ನಿಸಿಕೊಳ್ಳೋದಕ್ಕೆ ಸಾಧ್ಯ. ಇದ್ರ ಜೊತೆಗೆ ಒಂದು ಮುಖ್ಯವಾದ ಅಂಶ ಎಂದರೆ ತನ್ನ ಗಂಡ ಅಥವಾ ಹೆಂಡತಿ ರೊಮ್ಯಾಂಟಿಕ್ ಆಗಿ ಇರ್ಬೇಕು ಅಂತಾನೂ ಇಚ್ಛಿಸುತ್ತಾರೆ.

ಈ ಜಗತ್ತಿನಲ್ಲಿ ಒಬ್ಬೊಬ್ಬರ ಗುಣ ಒಂದೊಂದು ರೀತಿಯಲ್ಲಿ ಇರೋದ್ರಿಂದ ಪ್ರತಿಯೊಬ್ಬರೂ ಇಲ್ಲಿ ರೊಮ್ಯಾಂಟಿಕ್ ಆಗಿ ಇರ್ತಾರೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಆದ್ರೆ ಅದ್ರಲ್ಲಿ ಕೆಲವ್ರು ಮಾತ್ರ ರೊಮ್ಯಾನ್ಸ್ ಮಾಡೋದ್ರಲ್ಲಿ ಎತ್ತಿದ ಕೈ. ಅಷ್ಟಕ್ಕೂ ಯಾವೆಲ್ಲಾ ರಾಶಿಯ ಮಹಿಳೆಯರು ರೊಮ್ಯಾಂಟಿಕ್ ಆಗಿರ್ತಾರೆ ಅನ್ನೋದನ್ನು ತಿಳಿಯೋಣ.
ಮೀನ ರಾಶಿ
ಮೀನ ರಾಶಿಯ ಮಹಿಳೆಯರು ತಮ್ಮ ರೊಮ್ಯಾಂಟಿಕ್ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಕಲ್ಪನೆಯ ಮತ್ತು ಆಧ್ಯಾತ್ಮಿಕತೆಯ ಗ್ರಹವಾದ ನೆಪ್ಚೂನ್‌ನಿಂದ ಆಳಲ್ಪಡುವ ಮೀನ ರಾಶಿಯವರು ಆದರ್ಶವಾದ ಮತ್ತು ಫ್ಯಾಂಟಸಿ ಕಡೆಗೆ ನೈಸರ್ಗಿಕ ಒಲವನ್ನು ಹೊಂದಿದ್ದಾರೆ. ಅವರು ಸೂಕ್ಷ್ಮ, ಅರ್ಥಗರ್ಭಿತ, ಭಾವನಾತ್ಮಕ ಸಂಪರ್ಕವನ್ನು ಹೊಂದಿರುತ್ತಾರೆ. ಮೀನ ರಾಶಿಯ ಮಹಿಳೆಯರು ತಮ್ಮ ನಿಸ್ವಾರ್ಥತೆಗೆ ಹೆಸರುವಾಸಿಯಾಗಿದ್ದಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಮಹಿಳೆಯರು ಭಾವನಾತ್ಮಕವಾಗಿ ಮಿಡಿಯುವ ಮನಸ್ಸನ್ನು ಹೊಂದಿರುತ್ತಾರೆ. ಇವರು ತಮ್ಮ ಸಂಗಾತಿಯ ಜೊತೆಗೆ ತುಂಬಾನೇ ರೊಮ್ಯಾಂಟಿಕ್ ಆಗಿ ಇರ್ತಾರೆ. ತಮ್ಮ ಪ್ರೀತಿಪಾತ್ರರ ಅಗತ್ಯತೆಗಳನ್ನು ಪೂರೈಸಲು ಯಾವಾಗಲೂ ಇವರು ಮುಂದಿರ್ತಾರೆ. ಇವರು ತಮ್ಮ ಪಾಲುದಾರರಿಗೆ ಸುರಕ್ಷಿತ ಮತ್ತು ಪ್ರೀತಿಯ ವಾತಾವರಣವನ್ನು ಸೃಷ್ಟಿಸಲು ಶ್ರಮಿಸುತ್ತಾರೆ. ಈ ರಾಶಿಯವರು ಶಾಶ್ವತವಾದ ನೆನಪುಗಳು ಮತ್ತು ಭಾವನಾತ್ಮಕ ಬಂಧಗಳನ್ನು ಸೃಷ್ಟಿಸುತ್ತಾರೆ.
ತುಲಾ ರಾಶಿ
ತುಲಾ ರಾಶಿಯ ಮಹಿಳೆಯರು ಸೌಂದರ್ಯವತಿಯರು ಹಾಗೂ ತಮ್ಮ ರೊಮ್ಯಾಂಟಿಕ್ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರದಿಂದ ಆಳಲ್ಪಡುವ ತುಲಾ ರಾಶಿಯವರು ಸಾಮರಸ್ಯದ ಸಂಬಂಧಗಳಿಗೆ ಆಕರ್ಷಿತರಾಗುತ್ತಾರೆ. ಮತ್ತು ಅವರ ಪ್ರೀತಿಯ ಜೀವನದಲ್ಲಿ ಸಮತೋಲನದ ಅರ್ಥವನ್ನು ಬಯಸುತ್ತಾರೆ. ತಮ್ಮ ಸಂಗಾತಿಯೊಂದಿಗೆ ಯಾವಾಗಲೂ ರೊಮ್ಯಾಂಟಿಕ್ ಆಗಿರಲು ಇಷ್ಟ ಪಡ್ತಾರೆ.
ವೃಷಭ ರಾಶಿ
ವೃಷಭ ರಾಶಿಯ ಮಹಿಳೆಯರು ಪ್ರೀತಿಯಲ್ಲಿ ಸ್ಥಿರತೆಯನ್ನು ತೋರುತ್ತಾರೆ. ಶುಕ್ರನಿಂದ ಆಳಲ್ಪಟ್ಟ ವೃಷಭ ರಾಶಿಯವರು ಸಂಬಂಧಗಳಲ್ಲಿ ಸ್ಥಿರತೆ, ನಿಷ್ಠೆ ಮತ್ತು ದೈಹಿಕ ಅನ್ಯೋನ್ಯತೆಯನ್ನು ಗೌರವಿಸುತ್ತಾರೆ. ಇವರೂ ಕೂಡ ಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಆಗಿರೋದಕ್ಕೆ ಇಷ್ಟ ಪಡುತ್ತಾರೆ. ಸಂಗಾತಿಯನ್ನು ಮೆಚ್ಚಿಸೋದಕ್ಕೆ ಆಗಾಗ್ಗೆ ಕ್ಯಾಂಡಲ್ ಲೈಟ್ ಡಿನ್ನರ್ ಕೂಡ ಅರೇಂಜ್ ಮಾಡ್ತಾರೆ. ಇವರು ಯಾವಾಗಲೂ ತಮ್ಮ ಪ್ರೀತಿ ಪಾತ್ರರ ಸಂತೋಷಕ್ಕೆ ಮೊದಲ ಆಧ್ಯತೆ ನೀಡುತ್ತಾರೆ.
ಸಿಂಹ ರಾಶಿ
ಸೂರ್ಯನು ಸಿಂಹ ರಾಶಿಯನ್ನು ಆಳುತ್ತಿದ್ದಾನೆ. ಈ ರಾಶಿಯ ಮಹಿಳೆಯರು ಭಾವೋದ್ರಿಕ್ತರಾಗಿರ್ತಾರೆ. ಇವರು ಸಂಗಾತಿಯ ಜೊತೆಗೆ ತುಂಬಾನೇ ರೊಮ್ಯಾಂಟಿಕ್ ಆಗಿರ್ತಾರೆ. ಇವರು ಸಂಬಂಧಕ್ಕೆ ತುಂಬಾನೇ ಬೆಲೆ ಕೊಡುತ್ತಾರೆ. ಈ ರಾಶಿಯವರು ತಮ್ಮ ಪ್ರೀತಿ ಪಾತ್ರರಿಗಾಗಿ ಅದ್ಧೂರಿ ಉಡುಗೊರೆಗಳನ್ನು ನೀಡುತ್ತಾರೆ. ಪ್ರೀತಿಸಿದವರ ಮೇಲೆ ಅತಿಯಾದ ಪ್ರೀತಿ ಹಾಗೂ ಕಾಳಜಿ ಹೊಂದಿರುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಹಿಳೆಯರು ತುಂಬಾನೇ ರೊಮ್ಯಾಂಟಿಕ್ ಆಗಿರ್ತಾರೆ. ಈ ರಾಶಿಯವರು ತಮ್ಮ ಕಾಂತೀಯ ಆಕರ್ಷಣೆ ಮತ್ತು ಭಾವೋದ್ರಿಕ್ತ ಭಾವನೆಗಳಿಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಪ್ರೀತಿಗೆ ಅತಿಯಾದ ಗೌರವ ನೀಡುತ್ತಾರೆ. ಜೊತೆಗೆ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಇರುತ್ತಾರೆ. ಇವರು ತಮ್ಮ ಪ್ರೀತಿಯನ್ನು ಆಳವಾದ ಅನ್ಯೋನ್ಯತೆ ಮತ್ತು ಅಚಲ ನಿಷ್ಠೆಯ ಮೂಲಕ ವ್ಯಕ್ತಪಡಿಸುತ್ತಾರೆ.



Click it and Unblock the Notifications
