Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಟ್ರೆಕ್ಕಿಂಗ್ ಪ್ರಿಯರಿಗೊಂದು ಟ್ರೀಟ್! ಮಾನ್ಸೂನ್ ಟ್ರೆಕ್ಕಿಂಗ್‌ಗೆ ಭಾರತದ ಈ 5 ಸ್ಥಳಗಳು ಸೂಪರೋ ಸೂಪರ್
ಮಾನ್ಸೂನ್ ಟ್ರೆಕ್ಕಿಂಗ್ ಒಂದು ಅದ್ಭುತ ಅನುಭವ. ಮಳೆಗಾಲದಲ್ಲಿ ಚುಮು ಚುಮು ಚಳಿಯಲ್ಲಿ ಟ್ರೆಕ್ಕಿಂಗ್ ಮಾಡುವ ಅನುಭವ ಪಡೆಯುವುದು ಹಲವರಿಗೆ ಇಷ್ಟವಾಗುತ್ತದೆ. ಅದರಲ್ಲೂ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಮಾಡಿದರೆ, ಆ ಖುಷಿಯೇ ಬೇರೆ. ಹೌದು, ಭಾರತದಲ್ಲಿ ಮಳೆಗಾಲದಲ್ಲಿ ಟ್ರೆಕ್ಕಿಂಗ್ (Best Monsoon Trek In India) ಮಾಡಲು ಅನೇಕ ಸುಂದರವಾದ ಸ್ಥಳಗಳಿವೆ. ಈ ಸ್ಥಳಗಳು ಪ್ರಕೃತಿಯ ಮಡಿಲಲ್ಲಿ ನೆಲೆಸಿವೆ. ಚಾರಣಿಗರಿಗೆ ವಿಭಿನ್ನ ಮತ್ತು ಮರೆಯಲಾಗದ ಅನುಭವ ನೀಡುತ್ತವೆ. ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯ ಕಳೆಯಲು ಬಯಸುವವರಿಗೆ ಇವು ಹೇಳಿಮಾಡಿಸಿದ (monsoon trekking places) ಸ್ಥಳಗಳಾಗಿವೆ. ಇದರಲ್ಲಿ ಕರ್ನಾಟಕದ ಒಂದು ಸ್ಥಳಗಳವೂ ಇದೆ.
ಮಳೆಗಾಲದ (ಮಾನ್ಸೂನ್) ಟೈಮ್‌ನಲ್ಲಿ ಟ್ರೆಕ್ಕಿಂಗ್ ಮಾಡಲು ಸಾಧ್ಯ ಎನ್ನುವುದನ್ನು ಹಲವರು ನಂಬಲ್ಲ. ಆದರೆ, ಸಾಹಸ ಮತ್ತು ಟ್ರೆಕ್ಕಿಂಗ್ ಪ್ರಿಯರಿಗೆ ಭಾರತದಲ್ಲಿ ಮಳೆಗಾಲದಲ್ಲಿ ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ಹಲವಾರು ತಾಣಗಳಿವೆ. ಉತ್ತರಾಖಂಡದ ಹೂವುಗಳಿಂದ ತುಂಬಿರುವ ಕಣಿವೆಯಿಂದ ಹಿಡಿದು ಕರ್ನಾಟಕದ ಕುದುರೆಮುಖದ ಹಚ್ಚಹಸಿರಿನ ಕಾಡುಗಳವರೆಗೆ, ಭಾರತದಲ್ಲಿ ಮಾನ್ಸೂನ್ ಟ್ರೆಕ್ಕಿಂಗ್‌ಗೆ ಹಲವಾರು ಸುಂದರ ತಾಣಗಳಿವೆ. ಮಳೆಯ ಬಳಿಕದ ಹಸಿರು, ಮಂಜಿನಿಂದ ಆವೃತವಾದ ಪರ್ವತಗಳು ಮತ್ತು ಜಲಪಾತಗಳು ಪ್ರಕೃತಿ ಪ್ರೇಮಿಗಳಿಗೆ ಮತ್ತು ಟ್ರೆಕ್ಕಿಂಗ್ ಉತ್ಸಾಹಿಗಳಿಗೆ ಸ್ವರ್ಗದ ಅನುಭವ ನೀಡುತ್ತವೆ.

ಇವು ಟ್ರೆಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ತಾಣಗಳು
ಉತ್ತರಾಖಂಡದ ಹೂವುಗಳ ಕಣಿವೆ
ಉತ್ತರಾಖಂಡದ ಹೂವಿನ ಕಣಿವೆ (ಹೂವಿನ ಕಣಿವೆ) ಮಳೆಗಾಲದ ಸಮಯದಲ್ಲಿ ಜೀವಂತ ಸ್ವರ್ಗದಂತೆ ಬದಲಾಗುತ್ತದೆ. ಇದು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ. ಉತ್ತರಾಖಂಡದಲ್ಲಿರುವ ಈ ನ್ಯಾಷನಲ್ ಪಾರ್ಕ್ ಟ್ರೆಕ್ಕಿಂಗ್‌ಗೆ ಓಪನ್ ಆಗುವುದೇ ಮಳೆಗಾಲದ ದಿನಗಳಲ್ಲಿ. ಜುಲೈ ತಿಂಗಳ ಮಧ್ಯದಿಂದ ಆಗಸ್ಟ್ ಮಧ್ಯದವರೆಗೆ ಇಲ್ಲಿ ಟ್ರೆಕ್ಕಿಂಗ್ ಮಾಡಲು ಸೂಕ್ತ ಸಮಯ. ಹೂವಿನ ಕಣಿವೆಯು ಅಪರೂಪದ ಹಿಮಾಲಯದ ಹೂವುಗಳಿಂದ ಆವೃತವಾಗಿದೆ. ಟ್ರೆಕ್ಕಿಂಗ್ ಮಾಡುವಾಗ ಹಚ್ಚಹಸಿರಿನ ಹುಲ್ಲುಗಾವಲುಗಳು, ಜಲಪಾತಗಳು ಮತ್ತು ಮಂಜಿನಿಂದ ಕೂಡಿದ ಶಿಖರಗಳ ನೋಟವು ಕಣ್ಣಿಗೆ ಹಬ್ಬದಂತ ಭಾಸವಾಗುತ್ತದೆ. ಈ ಮಾರ್ಗವು ಸಾಧಾರಣ ಸವಾಲಿನಿಂದ ಕೂಡಿದ್ದು, ನೇಚರ್ ಫೋಟೋಗ್ರಫಿಗೆ ಹೇಳಿ ಮಾಡಿಸಿದ ತಾಣ.
ಮಹಾರಾಷ್ಟ್ರದ ಹರಿಶ್ಚಂದ್ರಗಢ
ಹರಿಶ್ಚಂದ್ರಗಢ ವೆಸ್ಟರ್ನ್ ಘಾಟ್‌ನಲ್ಲಿದೆ. ಇದು ಟ್ರೆಕ್ಕಿಂಗ್‌ಗೆ ಬಹಳ ಪ್ರಸಿದ್ಧವಾಗಿದೆ. ಎಲ್ಲಾ ರೀತಿಯ ಟ್ರೆಕ್ಕರ್‌ಗಳಿಗೆ ಸೂಕ್ತವಾಗಿದೆ. ಆದರೆ, ಈ ಟ್ರ್ಯಾಕ್ ಸ್ವಲ್ಪ ಸವಾಲಿನಿಂದ ಕೂಡಿದೆ. ಮಳೆಗಾಲದಲ್ಲಿ ಈ ಮಾರ್ಗವು ಹಸಿರಿನಿಂದ ತುಂಬಿರುತ್ತದೆ. ಇಲ್ಲಿನ ಅರ್ಧವೃತ್ತಾಕಾರದ ಬಂಡೆಯು ಕೊಂಕಣ ಪ್ರದೇಶದ ರಮಣೀಯ ನೋಟವನ್ನು ನೀಡುತ್ತದೆ. ಅಹಮದ್‌ನಗರ ಜಿಲ್ಲೆಯ ಮಾಲ್ಶೇಜ್ ಘಾಟ್‌ನಲ್ಲಿರುವ ಬೆಟ್ಟದ ಕೋಟೆಗೆ ಸಾಗುವ ಈ ಟ್ರ್ಯಾಕ್ 4,670 ಅಡಿ ಎತ್ತರದಲ್ಲಿದೆ. ಹರಿಶ್ಚಂದ್ರಗಢ ಟ್ರ್ಯಾಕ್‌ನಲ್ಲಿ ಹಲವಾರು ಮಾರ್ಗಗಳಿವೆ. ಪ್ರತಿಯೊಂದು ಮಾರ್ಗವು ಟ್ರೆಕ್ಕರ್‌ಗಳಿಗೆ ಅಚ್ಚರಿ ಉಂಟು ಮಾಡುತ್ತದೆ.
ಹಿಮಾಚಲ ಪ್ರದೇಶದ ಹಂಪ್ತಾ ಪಾಸ್
ಹಂಪ್ತಾ ಪಾಸ್ ಕ್ರಾಸ್ ವ್ಯಾಲಿ ಟ್ರ್ಯಾಕ್ ಆಗಿದೆ. ಕುಲು ಕಣಿವೆಯನ್ನು ಲಾಹೌಲ್‌ನ ಬಯಲು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಮಳೆಗಾಲದ ಸಮಯದಲ್ಲಿ ಕಾಡು ಹೂವುಗಳು, ನದಿಗಳನ್ನು ದಾಟುವುದು, ಮೋಡಗಳಿಂದ ಆವೃತವಾದ ಆಕಾಶ ನೋಡವುದೇ ಚೆಂದ. ಹಾಗೆಯೇ ಸೂರ್ಯನ ಕಿರಣಗಳಿಂದ ಹೊಳೆಯುವ ಪರ್ವತಗಳ ಕ್ಷಣ ಕ್ಷಣಕ್ಕೂ ಬದಲಾಗುವ ನೋಟಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಇದು ಟ್ರೆಕ್ಕಿಂಗ್ ಮಾಡುವವರಿಗೆ ಒಂದು ಅದ್ಭುತ ಅನುಭವ ನೀಡುತ್ತದೆ. ಹಂಪ್ಟಾ ಪಾಸ್ ಟ್ರೆಕ್ಕಿಂಗ್ ಜೋಬ್ರಾ ಎಂಬ ಸ್ಥಳದಿಂದ ಪ್ರಾರಂಭವಾಗುತ್ತದೆ. ಇದು ಮನಾಲಿ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ. ಇಲ್ಲಿ ಹವಾಮಾನ ಅನಿರೀಕ್ಷಿತವಾಗಿ ಬದಲಾಗುವುದರಿಂದ ಸಾಹಸಮಯ ಅನುಭವ ನೀಡುತ್ತದೆ.
ಮಹಾರಾಷ್ಟ್ರದ ಸಿಂಹಗಡ ಕೋಟೆ
ಪುಣೆಗೆ ಹತ್ತಿರವಿರುವ ಸಿಂಹಗಡ ಕೋಟೆಯು ಟ್ರೆಕ್ಕಿಂಗ್ ಪ್ರಿಯರಿಗೆ ಅಥವಾ ಆರಂಭಿಸುವವರಿಗೆ ಸೂಕ್ತವಾದ ತಾಣ. ಹಚ್ಚ ಹಸಿರಿನ ಬೆಟ್ಟಗಳು, ಮೋಡ ಕವಿದ ಆಕಾಶ ಮತ್ತು ಜಲಪಾತಗಳ ರಮಣೀಯ ನೋಟವನ್ನು ಈ ಟ್ರ್ಯಾಕ್‌ನಲ್ಲಿ ಸವಿಯಬಹುದು. ಸಿಂಹಗಡ ಕೋಟೆ ಮರಾಠಾ ಇತಿಹಾಸದ ಕುರುಹುಗಳನ್ನು ಹೊಂದಿದೆ. ಪುಣೆ ನಗರದಿಂದ 40 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಸಿಂಹಗಡವು ಈ ಪ್ರದೇಶದ ಪ್ರಸಿದ್ಧ ಟ್ರೆಕ್ಕಿಂಗ್ ತಾಣಗಳಲ್ಲಿ ಒಂದಾಗಿದೆ.
ಕರ್ನಾಟಕದ ಕುದುರೆಮುಖ
ಕುದುರೆಯ ಮುಖದ ಆಕಾರವನ್ನು ಹೋಲುವ ಕುದುರೆಮುಖವು ಮಳೆಗಾಲದಲ್ಲಿ ಬಹಳ ಸುಂದರವಾಗಿ ಕಾಣುತ್ತದೆ. ಈ ಟ್ರ್ಯಾಕ್ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿದೆ. ಮಳೆಯಿಂದ ತೊಯ್ದ ಕಾಡುಗಳು, ನದಿಗಳು ಮತ್ತು ಗುಡ್ಡಗಾಡುಗಳ ಮೂಲಕ ಈ ಟ್ರ್ಯಾಕ್ ಸಾಗುತ್ತದೆ. ದಟ್ಟವಾದ ಮಂಜು ಭೂದೃಶ್ಯವನ್ನು ಆವರಿಸಿಕೊಂಡಿರುತ್ತದೆ. ಇದು ಒಂದು ರಕ್ಷಿತ ಜೀವವೈವಿಧ್ಯ ಪ್ರದೇಶವಾಗಿದೆ. ಇದರಿಂದ ಇಲ್ಲಿ ಟ್ರೆಕ್ಕಿಂಗ್ ಮಾಡಲು ಅನುಮತಿ ಕಡ್ಡಾಯ.
ಒಟ್ಟಾರೆ, ಭಾರತದಲ್ಲಿ ಮಳೆಗಾಲದ ಸಮಯದಲ್ಲಿ ಟ್ರೆಕ್ಕಿಂಗ್ ಮಾಡಲು ಹಲವಾರು ಸುಂದರವಾದ ತಾಣಗಳಿವೆ. ಪ್ರತಿಯೊಂದು ಪ್ರದೇಶವು ತನ್ನದೇ ಆದ ವಿಶಿಷ್ಟ ಅನುಭವವನ್ನು ನೀಡುತ್ತದೆ. ಸಾಹಸ ಮತ್ತು ಪ್ರಕೃತಿಯನ್ನು ಪ್ರೀತಿಸುವವರಿಗೆ ಈ ತಾಣಗಳು ಹೇಳಿಮಾಡಿಸಿದಂತಿವೆ.



Click it and Unblock the Notifications
















