Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಎಲ್ಲೀಸ್ ಪೆರ್ರಿ ಅತ್ಯುತ್ತಮ ಆಟಗಾರ್ತಿ ಅತ್ಯುತ್ತಮ ಮನುಷ್ಯಳು ಎನ್ನುವುದಕ್ಕೆ ಈ ವೀಡಿಯೋನೇ ಸಾಕ್ಷಿ
RCB ಅಭಿಮಾನಿಗಳು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ, ಇಷ್ಟು ವರ್ಷಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದ ನಾವು ಈ ಸಲ ಕಪ್ ನಮ್ದು ಎಂದು ಹೆಮ್ಮೆಯಿಂದ ಬೀಗುತ್ತಿದ್ದೇವೆ, ಈ ಸಲ RCBಯ ಮಹಿಳಾ ಕ್ರಿಕೆಟಿಗರು ಕಪ್ ತಂದುಕೊಟ್ಟ ಖುಷಿಯನ್ನು ನಾವೆಲ್ಲಾ ಸಂಭ್ರಮಿಸುತ್ತಿದ್ದೇವೆ. ಆ ಟೀಂನಲ್ಲಿದ್ದ ಅಷ್ಟೂ ಆಟಗಾರರ ಶ್ರಮದಿಂದಾಗಿ ಇಂದು ಈ ಸಲ ಕಪ್ ನಮ್ಮದು ಎಂದು ಹೇಳುವಂತಾಗಿದೆ.
ಟೀಂನಲ್ಲಿದ್ದ ಆಟಗಾರರು ತಮ್ಮ ಕೌಶಲ್ಯದಿಂದ ಗಮನ ಸೆಳೆದರು ಅವರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹೈಪ್ ಕ್ರಿಯೇಟಿ ಮಾಡಿದವರು ಎಲ್ಲಿಸ್ ಪೆರ್ರಿ. ಎಲ್ಲಿಸ್ ಆಟ, ಅವರ ಲುಕ್‌ಗೆ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿದೆ. ಕೊಹ್ಲಿ --ಕೊಹ್ಲಿ ಅಂತ ಜನ ಕೂಗುವ ಹಾಗೆ ಪೆರ್ರಿ ಪೆರ್ರಿ ಎಂಬ ಕೂಗು ಕೇಳಿಸುತ್ತದೆ.

ಟಾಟಾ ಪಂಚ್ ಕಾರಿನ ಕ್ಲಾಸ್ ಪುಡಿ ಪುಡಿ ಮಾಡುವ ಮೂಲಕ RCB ಅಭಿಮಾನಿ ಮನಸ್ಸು ಕೊಳ್ಳೆ ಹೊಡೆದಿದ್ದರು, ಮುಂಬೈ ಇಂಡಿಯನ್ಸ್ ಸೋಲಿಸುವಲ್ಲಿ ಪೆರ್ರಿ ಪಾತ್ರ ಪ್ರಮುಖವಾದದ್ದು. ಅವರಿಗೆ ಒಡೆದ ಗ್ಲಾಸ್‌ನ ಫ್ರೇಂ ಕೂಡ ಬಹುಮಾನವಾಗಿ ಸಿಕ್ಕಿದೆ. ಆಟದಲ್ಲಿ ಇಷ್ಟೆಲ್ಲಾ ಗಮನ ಸೆಳೆದಿರುವ ಪೆರ್ರಿ ತಮ್ಮ ನಡತೆಯ ಮೂಲಕ ಕೂಡ ನಮ್ಮ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡ ಆಟಗಾರ್ತಿ ಎಂಬ ಹಮ್ಮು ಬಿಮ್ಮು ಇಲ್ಲದೆ ಕಸ ಎತ್ತಿದ ಪೆರ್ರಿ
ಆ ವೀಡಿಯೋ ನೋಡುವಾಗ ಪೆರ್ರಿ ಮೇಲಿನ ಪ್ರೀತಿ, ಗೌರವ ಹೆಚ್ಚಾಗುವುದು, ತಾನು ಆರ್‌ಸಿಬಿಯ ಪ್ರಮುಖ ಆಟಗಾರ್ತಿ ಎಂಬ ಯಾವ ಅಹಂಕಾರವೂ ಇಲ್ಲ, ಸ್ಟೇಡಿಯಂನಲ್ಲಿ ತಾವು ಕೂತಿದ್ದ ಕಡೆ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್‌ಗಳನ್ನು ಕಸದ ಬುಟ್ಟಿಗೆ ಹಾಕಿದ್ದಾರೆ. ಆ ವೀಡಿಯೋ ನೋಡುವಾಗ ಖಂಡಿತ ಅಚ್ಚರಿಯಾಗುತ್ತೆ.
ಕಸದ ಬುಟ್ಟಿಯನ್ನು ತಾವೇ ಕೈಯಲ್ಲಿ ಎತ್ತಿ ಕಸ ಎತ್ತಿ ಹಾಕುವುದನ್ನು ನೋಡಿ, ಇತರ ಆಟಗಾರರು ಮುಂದೆ ಬಂದಿದ್ದಾರೆ. ಇದು ನಿಜವಾಗಲೂ ಮೆಚ್ಚಬೇಕಾಗಿರುವ ವಿಷಯವೇ ಹೌದು ಅಲ್ವಾ? ಇವರು ಹೇಳಿದರೆ ಕಸ ಎತ್ತಿ ಹಾಕಲು ಜನ ಬರುತ್ತಾರೆ, ಆದರೆ ಸ್ವತಃ ಇವರೇ ಆ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾದ ಪೆರ್ರಿ RCB ಅಭಿಮಾನಿಗಳ ಹೃದಯದಲ್ಲಿ ಭದ್ರ ಸ್ಥಾನ ಪಡೆದಾಯ್ತು.
ನಮ್ಮ ಬಂಗಾರ ಎಂದು ಹೇಳುತ್ತಿರುವ RCB ಅಭಿಮಾನಿಗಳು
ಮುಂಬೈ ಇಂಡೆಯನ್ಸ್ ಎದುರಿಗೆ ಪೆರ್ರಿಯ ಅಮೋಘ ಆಟದ ವೈಖರಿ ನೋಡಿದ ಅಭಿಮಾನಿಗಳು ಫುಲ್ ಖುಷ್, ತಂಡ ಫೈನಲ್‌ಗೆ ಬಂದಾಗ ನಮ್ಮ ಬಂಗಾರ ಹಾಗೆಯೇ ನಮಗೆ ಕಪ್ ತಂದುಕೊಂಡು ಎಂದು ಸಾಮಾಜಿಕ ತಾಣದಲ್ಲಿ ಹೊಗಳುತ್ತಿದ್ದರು. ಅದರಂತೆ ನಮ್ಮ ಆರ್‌ಸಿಬಿ ವನಿತೆಯರು ನಮಗೆ ಕಪ್ ತಂದುಕೊಟ್ಟಿದ್ದಾರೆ.
ಸೌಂದರ್ಯ ದೇವತೆ ಈ ಪೆರ್ರಿ
ಪೆರ್ರಿ ನೋಡಿದರೆ ಬರೀ ಹುಡುಗರಷ್ಟೇ ಅಲ್ಲ ಹುಡುಗಿಯರು ಕೂಡ ಅಬ್ಬಾ ಎಷ್ಟೊಂದು ಚೆನ್ನಾಗಿದ್ದಾರೆ ಎಂದು ಅಂದುಕೊಳ್ಳದೆ ಇರಲ್ಲ, ಅಷ್ಟೊಂದು ಆಕರ್ಷಕ, ಆ ಗ್ಲಾಸ್ ಪುಡಿ ಪುಡಿ ಮಾಡಿದಾಗ ಅವರು ಕೊಟ್ಟ ಆ ನಗುವಿಗೆ ಎಲ್ಲರೂ ಎಷ್ಟು ಸುಂದರಿ ಈಕೆ ಎಂದು ಹಾಡಿ ಹೊಳಿದ್ದರು. ಸುಂದರಿ, ಆಟದಲ್ಲಿಯೂ ಎತ್ತಿದ ಕೈ, ಗುಣದಲ್ಲಿಯೂ ಅಪ್ಪಟ ಅಪರಂಜಿ ಹೀಗಾಗಿ ಎಲ್ಲೀಸ್ ಪೆರ್ರಿ ಎಂಬ ಆಸ್ಟ್ರೇಲಿಯನ್ ಆಟಗಾರ್ತಿ RCB ಅಭಿಮಾನಿಗಳ ಎವರ್‌ಗ್ರೀನ್ ಫೇವರೆಟ್ ಆಗುವುದರಲ್ಲಿ ನೋ ಡೌಟ್.
ಸೆಲೆಬ್ರಿಟಿಗಳ ಈ ರೀತಿಯ ವರ್ತನೆ ಸಾಮಾನ್ಯ ಜನರಿಗೆ ಸ್ಪೂರ್ತಿಯಾಗುವುದು, ಎಷ್ಟು ನಯ ವಿನಯದಿಮದ ನಡೆದುಕೊಳ್ಳುತ್ತಾರೋ ಅಷ್ಟು ಬೇಗ ಜನರ ಹೃದಯ ಗೆಲ್ಲುತ್ತಾರೆ.



Click it and Unblock the Notifications
