Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಹಳ್ಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಯೋಧರು, 600ಕ್ಕೂ ಹೆಚ್ಚು ಶಿಕ್ಷಕರು..! ನಮ್ಮ ರಾಜ್ಯದಲ್ಲಿದೆ ಅಚ್ಚರಿ ಊರು!
ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ವೈಶಿಷ್ಟ್ಯಗಳಿಂದ ತುಂಬಿಕೊಂಡಿದೆ. ಒಂದೊಂದು ರಾಜ್ಯವೂ ವಿಭಿನ್ನ ಸಂಸ್ಕೃತಿ, ವಿಭಿನ್ನ ಭಾಷೆ, ವೈವಿದ್ಯತೆಯಿಂದ ಕೂಡಿರುವುದು ವಿಶೇಷ. ಹಾಗೆ ನಮ್ಮ ರಾಜ್ಯ ಕೂಡ ಹಲವು ರೀತಿಯ ವಿಶೇಷತೆಗಳಿಗೆ ಕಾರಣವಾಗಿರುವುದು ನೋಡಬಹುದು. ಕರ್ನಾಟಕ ಪ್ರಾಕೃತಿಕ ವೃಶಿಷ್ಟ್ಯ ಸೇರಿ ಭಾಷೆಗಳು, ಸಂಸ್ಕೃತಿ, ಆಚರಣೆಯಿಂದಲೂ ವಿಶೇಷ ಎನಿಸುತ್ತದೆ.
ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆ ಸೇರಿದಂತೆ ಹಲವು ರೀತಿಯ ವಿಶೇಷಗಳಿಂದ ಕೂಡಿದೆ. ನಾವಿಂದು ನಮ್ಮ ರಾಜ್ಯ ಯಾವೆಲ್ಲಾ ವಿಚಾರಗಳಿಂದಾಗಿ ವಿಶೇಷ ಎನಿಸುತ್ತಿದೆ ಎಂಬುದನ್ನು ಹೇಳುತ್ತಿಲ್ಲ ಬದಲಾಗಿ ಭಾರತದಲ್ಲಿ ಕೆಲವೊಂದು ವಿಚಾರವಾಗಿ ಗಮನ ಸೆಳೆದಿರುವ ವಿಚಾರಗಳ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಇಡೀ ದೇಶದಲ್ಲಿ ಬೇರೆಲ್ಲೂ ನೋಡಲಾಗದಂತಹ ವಿಶೇಷ ಸಂಗತಿಗಳ ಕುರಿತಾಗಿ ತಿಳಿಯೋಣ.
ರಾಜ್ಯದಲ್ಲಿದೆ ಯೋಧರ ಗ್ರಾಮ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬುದು ಹಲವರ ಕನಸಾಗಿರುತ್ತೆ. ದೇಶ ಸೇವೆ ಮಾಡೋದು ಕೂಡ ಏಳೇಳು ಜನ್ಮದ ಪುಣ್ಯದ ಕೆಲಸ ಎಂದು ಹೇಳಲಾಗುತ್ತದೆ. ದೇಶ ಸೇವೆಗೆ ಮಾಡೋದು ಕೂಡ ಪುಣ್ಯದ ಕೆಲಸ. ಆದ್ರೆ ಎಲ್ಲರ ಕನಸು ಅಷ್ಟು ಸುಲಭವಾಗಿ ನೆರವೇರೋದಿಲ್ಲ. ಆದ್ರೆ ರಾಜ್ಯದ ಇಲ್ಲೊಂದು ಗ್ರಾಮದಲ್ಲಿ ತೋಧರೆ ತುಂಬಿದ್ದಾರೆ. ಹೌದು ಈ ಗ್ರಾಮದ ಮನೆ ಮನೆಯಲ್ಲೂ ಯೋಧರಿದ್ದಾರೆ. ಬೆಳಗಾವಿಯ ಸವದತ್ತಿ ತಾಲೂಕಿನ ಇಂಚಲ ಎಂಬ ಗ್ರಾಮದಲ್ಲಿ 250ಕ್ಕೂ ಹೆಚ್ಚು ಮಂದಿ ಶಸಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗ್ರಾಮವು ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠಕ್ಕೆ ಹೆಸರುವಾಸಿಯಾಗಿದೆ. ಡಾ. ಶಿವಾನಂದ ಭಾರತಿ ಸ್ವಾಮೀಜಿಯವರ ದೂರದೃಷ್ಟಿಯ ಪರಿಣಾಮವಾಗಿ ಈ ಗ್ರಾಮವು ಶಿಕ್ಷಣ ಕ್ರಾಂತಿಗೆ ಸಾಕ್ಷಿಯಾಗಿದೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪೂರ್ವ ವಿಶ್ವವಿದ್ಯಾಲಯ, ಪದವಿ, ಬಿಎಡ್ ಮತ್ತು ಬಿಎಎಂಎಸ್ ಕಾಲೇಜುಗಳನ್ನು ತೆರೆಯುವ ಮೂಲಕ ಸ್ವಾಮೀಜಿ ಈ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿಗೆ ಹೆಸರಾಗಿದ್ದಾರೆ. ಹೀಗಾಗಿ ಈ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲೂ ಶಿಕ್ಷಣ ಪಡೆದವರು ಹಾಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಸಿಗುತ್ತಾರೆ.
ಈ ಗ್ರಾಮದಲ್ಲಿ 250 ಕ್ಕೂ ಹೆಚ್ಚು ಮಂದಿ ಸೈನಿಕರು ಮತ್ತು 90ಕ್ಕೂ ಹೆಚ್ಚು ಮಾಜಿ ಸೈನಿಕರಿದ್ದಾರೆ. ಗ್ರಾಮದ ನಿವಾಸಿಗಳು ಭೂಸೇನೆ, ವಾಯುಪಡೆ, ನೌಕಾಪಡೆ, ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಮತ್ತು ಎಸ್‌ಎಸ್‌ಬಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಹಲವರು ಈ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಈಗಾಗಲೇ ನಿವೃತ್ತಿ ಪಡೆದು ಹಳ್ಳಿಯ ಯುವಕರು ಸೇನೆಗೆ ಸೇರುವಂತೆ ಬೆಂಬಲಿಸುತ್ತಾರೆ.
ಮನೆಗೊಬ್ಬರು ಶಿಕ್ಷಕರು
ಇನ್ನು ಇದೇ ಇಂಚಲ ಗ್ರಾಮದಲ್ಲಿ ಮನೆಗೊಬ್ಬರು ಶಿಕ್ಷಕರು ಕೂಡ ಸಿಗುತ್ತಾರೆ. ಹೀಗಾಗಿ ಈ ಗ್ರಾಮ ಶಿಕ್ಷಕರ ಗ್ರಾಮವಾಗಿ ಬದಲಾಗಿದೆ. ಸುಮಾರು 6 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಮನೆಗೊಬ್ಬರಂತೆ ಶಿಕ್ಷಕರಿದ್ದಾರೆ. ಅಂದರೆ ಬರೋಬ್ಬರಿ 600ಕ್ಕೂ ಹೆಚ್ಚ ಮಂದಿ ಶಿಕ್ಷಕರು ಈ ಗ್ರಾಮದಲ್ಲಿದ್ದಾರೆ. ಭಾರತದ ಯಾವುದೇ ಗ್ರಾಮದಲ್ಲಿ ಇಷ್ಟು ಪ್ರಮಾಣದ ಶಿಕ್ಷಕರು ಇರುವುದು ಅನುಮಾನ. ಹಾಗೆ ರಾಜ್ಯದ ಮಟ್ಟಿಗಂತು ಅತೀ ಹೆಚ್ಚು ಶಿಕ್ಷಕರನ್ನು ಹೊಂದಿರುವ ಗ್ರಾಮ ಇದಾಗಿದೆ. ಇವರಲ್ಲಿ ಬಹುತೇಕರು ರಾಜ್ಯಾದ್ಯಂತ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳು ಮತ್ತು ಅನುದಾನರಹಿತ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ.
ಈ ಗ್ರಾಮದ ಕುಟುಂಬವೊಂದರಲ್ಲಿ ಪ್ರಸ್ತುತ 5 ಮಂದಿ ಶಿಕ್ಷಕರಿದ್ದಾರೆ. ಆದರೆ ಈ ಹಿಂದೆ ಶಬ್ಬೀರ್ ಎಂಬುದರ ಕುಟುಂಬವು ಬರೋಬ್ಬರಿ 13 ಮಂದಿ ಶಿಕ್ಷಕರನ್ನು ಸಮಾಜಕ್ಕೆ ನೀಡಿದೆ. ಈ ಎಲ್ಲಾ ಶಿಕ್ಷಣ ಕ್ರಾಂತಿಗೂ ಈ ಊರಿನ ಡಾ. ಶಿವಾನಂದ ಭಾರತಿ ಸ್ವಾಮೀಜಿ ಕಾರಣ ಎಂದು ಹೇಳಲಾಗಿದೆ.
ಭಾರತದ ಏಕೈಕ ಸಂಸ್ಕೃತ ಹಳ್ಳಿ
ಭಾರತದ ಬಹು ರಾಜ್ಯಗಳಲ್ಲಿ ಒಂದೊಂದು ಭಾಷೆ ಮಾತನಾಡುವುದು ನೀವು ಸಹ ನೋಡಿರುತ್ತೀರಿ. ಅದ್ರಲ್ಲೂ ಕರ್ನಾಟಕದ ಒಂದೊಂದು ಭಾಗದಲ್ಲೂ ಕೂಡ ಒಂದೊಂದು ರೀತಿಯ ಭಾಷೆ ಮಾತನಾಡುವ ಮಂದಿ ಸಿಗುತ್ತಾರೆ. ರಾಜ್ಯದಲ್ಲಿ ಕನ್ನಡ, ತುಳು ಸೇರಿ ಹಲವು ಭಾಷೆ ಮಾಡುವವರು ಸಿಗುತ್ತಾರೆ. ಅದೇ ರೀತಿ ಭಾರತದಲ್ಲೇ ವಿಶಿಷ್ಟ ಎನಿಸುವಂತಹ ಸಂಸ್ಕೃತ ಭಾಷೆಯನ್ನು ಮಾತನಾಡುವ ಗ್ರಾಮವೂ ಇದೆ. ಹೌದು ಶಿವಮೊಗ್ಗದ ಮುತ್ತೂರು ಗ್ರಾಮ ಇಂದಿಗೂ ಸಂಸ್ಕೃತ ಬಳಸುತ್ತಿರುವ ಏಕೈಕ ಹಳ್ಳಿಯಾಗಿದೆ. ಇಲ್ಲಿನ ಜನರು ದೈನಂದಿನ ಸಂವಹನಕ್ಕಾಗಿ ಸಂಸ್ಕೃತವನ್ನು ಬಳಸುವ ಭಾರತದ ಅಪರೂಪದ ಸ್ಥಳಗಳಲ್ಲಿ ಒಂದಾಗಿದೆ.
ಸಂಸ್ಕೃತದಲ್ಲಿ ವ್ಯವಹರಿಸಲು ಕಾರಣವೇನು?
ಇಲ್ಲಿನ ಜನರು ಇಂದಿಗೂ ಸಂಸ್ಕೃತದಲ್ಲೇ ವ್ಯವಹರಿಸಲು ಒಂದು ಕಾರಣವಿದೆ. ಸುಮಾರು 40 ವರ್ಷಗಳ ಹಿಂದೆ, ಸಂಸ್ಕೃತವನ್ನು ಉತ್ತೇಜಿಸುವ ಸಂಘಟನೆಯಾದ ಸಂಸ್ಕೃತ ಭಾರತಿ ಇಲ್ಲಿ 10 ದಿನಗಳ ಕಾರ್ಯಾಗಾರವನ್ನು ನಡೆಸಿತ್ತು. ಮುತ್ತೂರು ಮತ್ತು ಹತ್ತಿರದ ಹಳ್ಳಿಗಳ ಪ್ರಮುಖ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಪ್ರಾಚೀನ ಭಾಷೆಯನ್ನು ಸಂರಕ್ಷಿಸುವ ಮತ್ತು ಅದನ್ನು ಸಂಸ್ಕೃತ ಗ್ರಾಮವಾಗಿ ಪರಿವರ್ತಿಸುವ ಆಲೋಚನೆಯಿಂದ ತಕ್ಷಣವೇ ಪ್ರೇರೇಪಿಸಲ್ಪಟ್ಟರು.
ಹೀಗಾಗಿ ಅಲ್ಲಿನ ಮಕ್ಕಳು ಆರಂಭಿಕ ಹಂತವಾಗಿಯೇ ಸಂಸ್ಕೃತ ಕಲಿಯುತ್ತಾರೆ. ಹಾಗೆ ಅಲ್ಲಿನ ಗೋಡೆಗಳ ಮೇಲೆಯೂ ಸಂಸ್ಕೃತ ಶ್ಲೋಕಗಳಿವೆ. ಅಚ್ಚರಿ ಏನೆಂದರೆ ಈ ಗ್ರಾಮದಲ್ಲಿ ಇಂದಿಗೂ 6 ದಿನಗಳ ಕಾಲ ಮದುವೆ ಕಾರ್ಯ ನಡೆಯಲಿದೆ. ಹಾಗೆ ಬಹುತೇಕ ಪ್ರಾಚೀನ ಕಾಲದ ಸಂಸ್ಕೃತಿಗಳು ಇಂದಿಗೂ ಜೀವಂತವಾಗಿರುವ ಒಂದು ಹಳ್ಳಿ ಇದಾಗಿದೆ.



Click it and Unblock the Notifications
