Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಈ ಊರಿನ ಹೆಸರೇ ದೀಪಾವಳಿ..! ಏಕೆ ಗೊತ್ತಾ? ನಾಮಕರಣ ಮಾಡಿದ್ಯಾರು ಗೊತ್ತಾ?
ದೀಪಾವಳಿಯು ಹಿಂದೂಗಳಿಗೆ ಪ್ರಮುಖ ಹಬ್ಬವಾಗಿದೆ. ದೀಪಾವಳಿ ಬೆಳಕಿನ ಹಬ್ಬವಾಗಿದೆ. ಪಟಾಕಿ, ಸಿಹಿ ದೀಪಾವಳಿಗೆ ಮತ್ತಷ್ಟು ಮೆರಗು ತರಲಿದೆ. ಈ ದೀಪಾವಳಿಯನ್ನು ಇದೇ ಅಕ್ಟೋಬರ್ 31ರಂದು ಆಚರಿಸಲಾಗುತ್ತಿದೆ. ಕತ್ತಲೆಯ ವಿರುದ್ಧ ಬೆಳಕಿನ ಜಯದ ಸಂಕೇತವಾಗಿ ಈ ಹಬ್ಬವನ್ನ ಆಚರಿಸಲಾಗುತ್ತದೆ. ಹಾಗೆ ಪುರಾಣದಲ್ಲಿ ಹಲವು ಕಥೆಗಳು ಕೇಳಿಬರುತ್ತದೆ.
ರಾಮಾಯಣ ಪುರಾಣದ ಪ್ರಕಾರ ಶ್ರೀಲಂಕಾದ ರಾಜ ರಾವಣನನ್ನು ಸೋಲಿಸಿದ ನಂತರ ಶ್ರೀರಾಮ, ಸೀತಾಮಾತೆ ಹಾಗೂ ಲಕ್ಷ್ಮಣರು ಅಯೋಧ್ಯೆಗೆ ಹಿಂದಿರುಗುತ್ತಾರೆ. ಹಿಂದಿರುಗುವ ಶುಭ ಸಂದರ್ಭವನ್ನು ಸಂಭ್ರಮದಿಂದ ದೀಪಗಳ ಹಚ್ಚಿ ಆಚರಿಸಲಾಯಿತು. ನಂತರ ಇದು ದೀಪಾವಳಿಯಾಗಿ ಬದಲಾಯಿತು ಎಂದು ಹೇಳಲಾಗಿದೆ. ಹಾಗೆ ದೇಶದ ವಿವಿಧ ಮೂಲೆಯಲ್ಲಿ ವಿವಿಧ ಕಾರಣಗಳಿಗೆ ಹಬ್ಬದ ಆಚರಣೆ ಮಾಡಲಾಗುತ್ತದೆ.

ಕಾರ್ತಿಕ ಮಾಸದಲ್ಲಿ ಬರುವ ಅಮಾವಾಸ್ಯೆ ರಾತ್ರಿಯನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವು ನಮ್ಮ ಜೀವನದ ಕೆಟ್ಟ ಗಳಿಗೆಗಳು, ನಕಾರಾತ್ಮಕ ವಿಚಾರಗಳನ್ನು ನಿರ್ಮೂಲನೆ ಮಾಡಿ ಧನಾತ್ಮಕ ಶಕ್ತಿಯನ್ನು ನಿಮಗೆ ನೀಡಲಿದೆ ಎಂದು ಹೇಳಲಾಗಿದೆ. ಈ ಹಬ್ಬದಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಹಾಗೂ ವಿಘ್ನ ನಿವಾರಕ ವಿನಾಯಕನನ್ನೂ ಪೂಜಿಸಲಾಗುತ್ತದೆ.
ಈ ದೀಪಾವಳಿಯನ್ನು ದಕ್ಷಿಣ ಭಾರತದಲ್ಲಿ ಬಲಿ ಪಾಡ್ಯಮಿ ಎಂದು. ಪಶ್ಚಿಮ ಬಂಗಾಳದಲ್ಲಿ ಮಾ ಕಾಳಿಯ ಆರಾಧನೆಯಾಗಿ ಹಾಗೂ ನೇಪಾಳದಲ್ಲಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸುವ ಹಬ್ಬವಾಗಿ ಆಚರಿಸಲಾಗುತ್ತದೆ. ಇನ್ನು ದೀಪಾವಳಿ ಎಂಬ ಹೆಸರಿನಲ್ಲಿ ಒಂದೂ ಊರು ಕೂಡ ಇದೆ ಎಂಬುದು ನಿಮಗೆ ಗೊತ್ತಾ?
ಹೌದು ದೀಪಾವಳಿ ಎಂಬ ಹೆಸರಿನಲ್ಲಿ ಒಂದು ಊರಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಗಾರ ಎಂಬ ಮಂಡಲದಲ್ಲಿ ದೀಪಾವಳಿ ಎಂಬ ಹೆಸರಿನ ಊರು ಇದೆ. ಈ ಊರಿಗೆ ದೀಪಾವಳಿ ಎಂಬ ಹೆಸರು ಹೇಗೆ ಬಂದಿದೆ ಎಂಬುದು ತಿಳಿದರೆ ನಿಮಗೂ ಅಚ್ಚರಿಯಾಗುತ್ತದೆ. ಶತಮಾನಗಳ ಹಿಂದೆ ಈ ಗ್ರಾಮವು ಒಂದು ರಾಜನ ಆಳ್ವಿಕೆಗೆ ಒಳಗಾಗಿತ್ತಂತೆ. ಆತ ಶ್ರೀ ಕೂರ್ಮನಾಥ ದೇವಾಲಯಕ್ಕೆ ಹೋಗಬೇಕಾದರೆ ಈ ಹಳ್ಳಿಯನ್ನು ದಾಟಿಕೊಂಡೇ ಹೋಗಬೇಕಿತ್ತಂತೆ.
ಒಂದು ವರ್ಷ ಇದೇ ಮಾರ್ಗವಾಗಿ ಆ ರಾಜ ದೂರದ ದೇವಾಲಯಕ್ಕೆ ಹೋಗಿದ್ದನಂತೆ. ಆ ಕಾಲದಲ್ಲಿ ಕುದುರೆ ಮೇಲೆ ಆತ ಸಾಗಬೇಕಿತ್ತು. ಆತನ ಜೊತೆಗೆ ಒಂದಿಷ್ಟು ಮಂದಿ ರಕ್ಷಕರು ತೆರಳುತ್ತಿದ್ದರು. ಆದ್ರೆ ಒಮ್ಮೆ ಆತ ದೇವಾಲಯಕ್ಕೆ ಹೋಗಿ ಪೂಜೆ ಮುಗಿಸಿ ವಾಪಾಸಾಗುವಾಗ ರಾತ್ರಿಯಾಗಿಬಿಟ್ಟಿತ್ತಂತೆ. ಅಲ್ಲದೆ ಬೆಳಗ್ಗೆಯಿಂದ ಓಡಾಡಿದ್ದ ರಾಜ ಸುಸ್ತಾಗಿ ಕುಸಿದು ಬಿದ್ದನಂತೆ.
ಈ ವಿಚಾರ ತಿಳಿದ ಗ್ರಾಮಸ್ಥರು ದೊಡ್ಡ ದೊಡ್ಡ ದೀಪಗಳೊಂದಿಗೆ ರಾಜನ ನೋಡಲು ಆಗಮಿಸಿ ಆತನಿಗೆ ನೀರು ನೀಡಿ, ಆರೈಕೆ ಮಾಡಿದರಂತೆ. ಇಡಿ ರಾತ್ರಿ ರಾಜ ಈ ಹಳ್ಳಿಯಲ್ಲಿ ಕಳೆದನಂತೆ. ಮಾರನೆ ದಿನ ಬೆಳಗ್ಗೆ ಈ ಗ್ರಾಮದಲ್ಲಿದ್ದ ಸಣ್ಣ ಗುಡಿಗೆ ಪೂಜೆ ಮಾಡಿದ ರಾಜ ದೀಪ ಬೆಳಗಿನಂತೆ. ಹಾಗೆ ಗ್ರಾಮಕ್ಕೆ ವಿಶೇಷವಾಗಿ ದೀಪಾವಳಿ ಎಂದು ನಾಮಕರಣ ಮಾಡಿದನಂತೆ ಎಂಬ ಕಥೆ ಇದೆ.
ದೀಪಾವಳಿಯಲ್ಲಿ ಈ ಗ್ರಾಮ ವಿಶೇಷವಾಗಿ ಅಲಂಕರಿಸಲ್ಪಡುತ್ತದೆ. ಮನೆಯ ಹಿರಿಯರು ಸೂರ್ಯೋದಯಕ್ಕೂ ಮೊದಲೇ ಎದ್ದು ಈ ಗುಡಿಯ ಬಳಿ ಬಂದು ದೀಪಾವಳಿಯಂದು ದೀಪ ಹಚ್ಚುವ ವಾಡಿಕೆ ಇದೆಯಂತೆ. ಹಾಗೆ ತಮ್ಮ ಪೂರ್ವಜರು ರಾಜನಿಗೆ ಈ ಸೇವೆ ಮಾಡಿದ್ದರಿಂದ ಮೋಕ್ಷ ಪಡೆದರು ಎಂದು ನಂಬಿದ್ದಾರೆ. ಹೀಗಾಗಿ ದೀಪಾವಳಿಯಲ್ಲಿ ಸೋಂಡಿ ಎಂಬ ಸಮುದಾಯ ಪೂರ್ವಜರಿಗೆ ಈ ದಿನ ಪಿಂಡ ಪ್ರಧಾನ ಮಾಡುತ್ತಾರೆ. ಈ ದಿನ ಪಿತೃ ಪೂಜೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗ್ರಾಮಸ್ಥರು ನಂಬಿದ್ದಾರೆ.



Click it and Unblock the Notifications
