Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವ ಈ ಜೋಡಿಯ ಕತೆ ನೀವು ಅಂದುಕೊಂಡಂತೆ ಅಲ್ವೇ ಅಲ್ಲ!
ನೀವು ಫೇಸ್‌ಬುಕ್‌ನಲ್ಲಿ ರೀಲ್ಸ್ ನೋಡುವುದಾದರೆ ಈ ಜೋಡಿಯಂತು ನಿಮ್ಮ ಕಣ್ಣಿಗೆ ಬೀಳಬಹುದು. ಬಾಹ್ಯ ಸೌಂದರ್ಯಕ್ಕೆ ಬೆಲೆ ಕೊಡುವವರು ಈ ಜೋಡಿಯನ್ನು ನೋಡಿ ಆಡಿಕೊಂಡಿದ್ದೂ ಇದೆ. ಈ ಹುಡುಗನಿಗೆ ನೀನು ರೀಲ್ಸ್‌ಗಾಗಿ ಅವಳ ಜೊತೆ ಪ್ರೀತಿಯಲ್ಲಿ ಇರುವಂತೆ ನಟಿಸುತ್ತಿದ್ದೀಯ ಎಂದೆಲ್ಲಾ ಕಮೆಂಟ್ ಮಾಡುತ್ತಾರೆ.
ಕಾರಣ ಇಷ್ಟೇ ಆತ ತುಂಬಾ ಸುಂದರವಾಗಿದ್ದಾನೆ, ಆಕೆ ಅವನಷ್ಟು ಸುಂದರಿಯಲ್ಲ, ಉಬ್ಬಿದ ಹಲ್ಲುಗಳ ಹುಡುಗಿ . ಹಾಗಾಗಿ ಈ ಹುಡುಗ ರೀಲ್‌ಗಾಗಿ ಇವಳ ಜೊತೆ ಇದ್ದಾನೆ ಎಂದನಿಸಬಹುದು, ಇವರಿಬ್ಬರ ಬಾಂಧವ್ಯ ಇದೆಯೆಲ್ಲಾ ನಮ್ಮೆಲ್ಲಾ ಊಹೆಗೂ ಮೀರಿದ್ದು. ಇವರಿಬ್ಬರು ಬಾಲ್ಯ ಸ್ನೇಹಿತರು.

ಪರ್ಣಜ್ ರಾಂಧವ್ ಎಂಬ ಅಕೌಂಟ್‌ನಲ್ಲಿ ಇವರ ರೀಲ್ಸ್ ಶೇರ್ ಆಗುತ್ತೆ, ಒಳ್ಳೆಯ ಫಾಲೊವರ್ಸ್ ಕೂಡ ಇದ್ದಾರೆ. ಆ ವೀಡಿಯೋಗಳಲ್ಲಿ ಅವನು ಅವಳನ್ನು ನೋಡಿಕೊಳ್ಳುವ ರೀತಿ ತುಂಬಾ ಖುಷಿ ಕೊಡುತ್ತಾರೆ. ಅವನು ರೂಪಕ್ಕಿಂತ ಗುಣಕ್ಕೆ ಹೆಚ್ಚು ಬೆಲೆ ಕೊಟ್ಟಂತೆ ಕಾಣುತ್ತದೆ.
ಬಹುಕಾಲದ ನಂತರ 2019ರ ಭೇಟಿ, ಅವರ ಜೀವನವೇ ಬದಲಾಯ್ತು
ಅವರೇ ಹೇಳುಕೊಂಡಂತೆ ಅವರಿಬ್ಬರು ಬಾಲ್ಯ ಸ್ನೇಹಿತರು, ತುಂಬಾ ವರ್ಷಗಳು ಒಬ್ಬರನ್ನೊಬ್ಬರು ಭೇಟಿಯಾಗಿರಲಿಲ್ಲ.ಒಂದು ದಿನ ಇಬ್ಬರು ನೇರವಾಗಿ ಭೇಟಿಯಾಗಲು ತೀರ್ಮಾನಿಸುತ್ತಾರೆ. ಅವಳು ಇವನ ಭೇಟಿಯಾಗಲು ಬರುತ್ತಾರೆ. ಇಬ್ಬರು ಬಾಲ್ಯದ ನೆನಪುಗಲನ್ನು ಮೆಲುಕು ಹಾಕಿ ನಗುತ್ತಾರೆ. ಆವಾಗ ಅವಳು ಅವಳ ಜೀವನದ ಬಗ್ಗೆ ಹೇಳುತ್ತಾ ತುಂಬಾನೇ ಬೇಸರ ಪಡುತ್ತಾಳೆ. ಜನರು ನನ್ನ ರೂಪ ನೋಡಿ ಆಡಿಕೊಳ್ಳುವ ರೀತಿಯಿಂದಾಗಿ ನನಗೆ ಜೀವನದಲ್ಲಿ ಬೇಸರವಾಗಿದೆ, ಈ ಬದುಕೇ ಬೇಡ ಅನಿಸುತ್ತೆ ಎಂದು ಹೇಳುತ್ತಾಳೆ.
ಅವಳ ಕತೆ ಕೇಳಿದಾಗ ಇವನಿಗೂ ಬೇಸರವಾಗುತ್ತದೆ, ಏನೇ ಆಗಲಿ ನನ್ನ ಕೈಲಾದಷ್ಟು ನಾನು ಇವಳನ್ನು ಖುಷಿಯಾಗಿಡುತ್ತೇನೆ ಎಂಬ ತೀರ್ಮಾನಕ್ಕೆ ಬರುತ್ತಾಳೆ, ಅಲ್ಲಿಂದ ಅವರಿಬ್ಬರ ಬದುಕೇ ಬದಲಾಗುತ್ತೆ. ಅವಳಿಗೆ ಅವನು, ಅವಳಿಗೆ ಅವನು ಎಂಬಂತಾಗುತ್ತಾರೆ. ಇವರಿಬ್ಬರ ಪ್ರೀತಿಯನ್ನು ರೀಲ್ಸ್ ಮಾಡುವ ಮೂಲಕ ಹೇಳಿಕೊಳ್ಳುವ ಮೂಲಕ ತುಂಬಾ ಗಮನ ಸೆಳೆಯುತ್ತಾರೆ.
ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್
ಆತ ಸೋಷಿಯಲ್ ಮೀಡಿಯಾದಲ್ಲಿ ಈಕೆಯಿಂದಾಗಿ ಫೇಮಸ್ ಆಗಿದ್ದಾನೆ ಎಂದರೆ ತಪ್ಪಾಗಲ್ಲ, ಇಬ್ಬರು ತ ಜೊತೆಯಾಗಿ ಖುಷಿಯಾಗಿದ್ದರೆ. ಈ ಜೋಡಯಾಗಿ ಜೊತೆಯಾಗಿ ಐದು ವರ್ಷಗಳಾಗಿವೆ, ಈ ಖುಷಿಯ ವೀಡಿಯೋ ಕೂಡ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಜೋಡಿಗೆ ಯಾರ ಕಣ್ಣೂ ಬೀಳದಿರಲಿ
ಎಷ್ಟೂ ಸೋಷಿಯಲ್ ಮೀಡಿಯಾ ಜೋಡಿಗಳನ್ನು ನೋಡುತ್ತೇವೆ, ಇಬ್ಬರು ಖುಷಿಯಾಗಿ ಸುತ್ತಾಡುತ್ತಾರೆ, ರೀಲ್ಸ್ ಮಾಡಿ ಹಾಕುತ್ತಾರೆ. ಎಲ್ಲರೂ ಅವರನ್ನು ಸೂಪರ್ ಜೋಡಿ ಎಂದು ಹೇಳುತ್ತಾರೆ, ಕೆಲ ಸಮಯದ ಬಳಿಕ ಬ್ರೇಕಪ್ ಸುದ್ದಿ ಬರುತ್ತದೆ.
ಇಲ್ಲಿ ಈತ ತಾನು ಸೆಲೆಬ್ರಿಟಿ ಆಗಲು ಪ್ಲಸ್ ಮಾಡಿಕೊಂಡಿರುವುದೇ ಆಕೆಯ ರೂಪ. ಅವಳಿಗೂ ತನ ಮೇಲೆ ತುಂಬಾ ಪ್ರೀತಿ ಇದೆ, ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡದೆ ಮನದ ಸೌಂದರ್ಯದಲ್ಲಿ ಹೀಗೇ ಚೆನ್ನಾಗಿರಲಿ ಈ ಜೋಡಿ ಅಲ್ವಾ?



Click it and Unblock the Notifications
