Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಇದು ಹಿಮವಲ್ಲ ದೆಹಲಿಯ ಯಮುನಾ ನದಿ: ಈ ನೀರು ಹೀಗೆ ಬದಲಾಗಿದ್ದೇಕೆ..?
ದೆಹಲಿ ಸದ್ಯ ವಿಶ್ವದಾದ್ಯಂತ ಮಾಲಿನ್ಯ ಕಾರಣದಿಂದಾಗಿ ಸದ್ದು ಮಾಡುತ್ತಿದೆ. ಅಲ್ಲಿ ಉಸಿರಾಡುವುದು ಎಷ್ಟು ಹಾನಿಕಾರಕ ಅಂದರೆ ನಿರಂತರ ಉಸಿರಾಟದಿಂದಾಗಿ ನಿಮಗೆ ಶ್ವಾಸಕೋಶದ ಸಮಸ್ಯೆ ಎದುರಾಗುವುದ ಖಚಿತ. ಪ್ರಾಣಕ್ಕೆ ಕುತ್ತು ತರುವಷ್ಟು ಅಪಾಯಕಾರಿ ರಾಸಾಯನಿಕ ಅಲ್ಲಿನ ಗಾಳಿಯಲ್ಲಿ ಸೇರಿಬಿಟ್ಟಿದೆ. ಈ ಮಾಲಿನ್ಯದ ಮತ್ತೊಂದು ಭಾಗವಾಗಿ ಈಗ ಯಮುನಾ ನದಿ ಸಂಪೂರ್ಣ ನೊರೆಯಿಂದ ಆವೃತವಾಗಿದೆ.
ಮೇಲ್ನೋಟಕ್ಕೆ ಈ ಕೆಳಗಿನ ಫೋಟೋ ನಿಮಗೆ ಹಿಮಾಲಯದಲ್ಲಿ ತೆಗೆದಿರುವಂತೆ ಕಾಣುತ್ತಿರಬಹುದು ಆದ್ರೆ ಇದು ಯಮುನಾ ನದಿಯ ಚಿತ್ರಣ. ಅದರಲ್ಲೂ ಪತ್ರಕರ್ತರೊಬ್ಬರು ಅಲ್ಲಿನ ಚಿತ್ರಣವನ್ನು ಸೆರೆ ಹಿಡಿಯಲು, ವರದಿ ಮಾಡಲು ತೆರಳಿದಾಗ ಆತ ನೊರೆಯಲ್ಲಿ ಸಂಪೂರ್ಣ ಮುಚ್ಚಿ ಹೋಗಿದ್ದಾನೆ. ನೋಡಿದವರು ಇದೇನು ಹಿಮಾಲಯ ಶ್ರೇಣಿ ಇರಬಹುದು ಎಂದು ಕೊಳ್ಳಬಹುದು ಆದ್ರೆ ಅಪಾಯಕಾರಿ ರಾಸಾಯನಿಕ ತುಂಬಿರುವ ನದಿಯಾಗಿದೆ.

ನಮ್ಮ ಬೆಂಗಳೂರಿನ ಅರ್ಕಾವತಿ ನದಿ ಕೂಡ ಕೆಲವೊಮ್ಮೆ ನೊರೆಯಾಗಿ ಹರಿಯುವುದನ್ನ ನಾವು ನೋಡಿದ್ದೇವೆ. ಹಾಗೆ ಯಮುನೆ ಕೂಡ ನೊರೆಯಾಗಿ ಹರಿಯುತ್ತಿದ್ದಾಳೆ. ಅದೆಷ್ಟು ದಟ್ಟ ನೊರೆ ತುಂಬಿಕೊಂಡಿದೆ ಅಂದ್ರೆ ಈ ನೊರೆ ಇಡೀ ದೆಹಲಿಯನ್ನು ಆವರಿಸಿಕೊಳ್ಳಬಹುದು. ಹಾಗೆ ಗಾಳಿಯಲ್ಲಿ ಈ ನೊರೆ ಹಾರಿ ಕಿ.ಮೀಟರ್ ದೂರ ರಾಸಾಯನಿಕ ಹರಡಲು ಕಾರಣವಾಗುತ್ತಿದೆ.
ನದಿಯಲ್ಲಿ ಈ ರೀತಿ ನೊರೆ ಮೂಡಲು ಕಾರಣವೇನು?
ನದಿ ನೀರಿನಲ್ಲಿ ಅತೀ ಹೆಚ್ಚು ಅಮೋನಿಯಾ ಮತ್ತು ಫಾಸ್ಪೇಟ್ ತುಂಬಿದಾಗ ನೀರಿನ ಜೊತೆಗೆ ಇದು ರಾಸಾಯನಿಕ ಕ್ರಿಯೆಗೆ ಒಳಗಾಗುತ್ತಿದೆ. ಹೀಗಾಗಿ ನೀರಿನ ಮೇಲೆ ನೊರೆ ಮೂಡಲು ಆರಂಭವಾಗುತ್ತದೆ. ಇದು ಎಷ್ಟು ಅಪಾಯಕಾರಿ ಎಂದರೆ ಚರ್ಮದ ಕ್ಯಾಕ್ಸರ್, ಅಲರ್ಜಿ, ಉಸಿರಾಟ ಸಮಸ್ಯೆ ಸೇರಿ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತವೆ.
ಕೊಳೆಯುತ್ತಿರುವ ಸಸ್ಯಗಳು ಮತ್ತು ಮಾಲಿನ್ಯಕಾರಕಗಳು ನೀರಿನೊಂದಿಗೆ ಬೆರೆತಾಗ ಈ ರೀತಿಯ ನೊರೆ ಮೂಡುತ್ತದೆ. ಆದರೆ ಕೆಲ ದಿನದ ಹಿಂದೆ ಮಳೆ ಬಂದಾಗ ನೀರು ರಭಸದಿಂದ ಹರಿಯುವಾಗ ಈ ರೀತಿ ನೊರೆ ಕಾಣಿಸುವುದು ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ನದಿಯಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಈ ಪ್ರಕ್ರಿಯೆಗೆ ತುತ್ತಾಗುವುದು ಸಾಮಾನ್ಯ ಸಂಗತಿ. ಆದರೆ ನೀರು ತುಂಬಿ ಹರಿಯುವಾಗ ಈ ರೀತಿ ರಾಸಾಯನಿಕ ಕ್ರಿಯೆಗೆ ಒಳಗಾಗುವುದು ಅಪರೂಪ ಎಂಬುದು ತಜ್ಞರ ವಾದವಾಗಿದೆ.
ಚಳಿಗಾಲಕ್ಕೂ ಮುನ್ನವೇ ದೆಹಲಿಯ ಮಾಲಿನ್ಯ ಏರಿಕೆಯಾಗಿದೆ. ಸೂಚ್ಯಾಂಕಗಳು ಕಳಪೆ ಎಂದು ತೋರಿಸಿದ್ದು ಗಾಳಿಯ ಗುಣಮಟ್ಟ 300ಕ್ಕಿಂತ ಹೆಚ್ಚು ಎಂದು ತೋರಿಸುತ್ತಿದೆ. ಸದ್ಯದಲ್ಲೇ ಸಾವಿರಾರು ಮಂದಿ ಛತ್ ಪೂಜೆ ಅಂಗವಾಗಿ ಇದೇ ಯಮನಾ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಾರೆ. ಇದು ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಇದರಿಂದ ನೀರಿನ ಮಾಲಿನ್ಯ ಹೆಚ್ಚುವ ಜೊತೆಗೆ ಜನರಿಗೂ ಇದರಿಂದ ಅಪಾಯ ತಪ್ಪಿದ್ದಲ್ಲ.
ದೆಹಲಿಯ ಮಾಲಿನ್ಯ ತಡೆಯಲೆಂದು ಸರ್ಕಾರ ಸಮನ್ವಯ ಸಮಿತಿ ರಚಿಸಿದೆ. ಹಾಗೆ 13 ಸ್ಥಳಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದ್ದು, ಈ ಎಲ್ಲಾ ಪ್ರದೇಶದಲ್ಲಿ ಒಟ್ಟು 80 ಮೊಬೈಲ್ ಆಂಟಿಸ್ಮಾಗ್‌ಗಳನ್ನು ನಿಯೋಜಿಸಲಾಗಿದೆ. ದೀಪಾವಳಿ ಮುನ್ನವೇ ದೆಹಲಿಯ ಪರಿಸ್ಥಿತಿ ಈ ರೀತಿಯಾಗಿದ್ದು, ಇನ್ನೊಂದು ತಿಂಗಳಿನಲ್ಲಿ ರೆಡ್‌ಝೋನ್‌ನಲ್ಲಿ ದೆಹಲಿ ಸಿಲುಕಲಿದೆ. ಮಾಸ್ಕ್ ಇಲ್ಲದೆ ಹೊರಬರುವುದೇ ಕಷ್ಟವಾಗಲಿದೆ.
ಇನ್ನು ದೀಪಾವಳಿಯ ಬಳಿಕ ಗಾಲಿಯ ಗುಣಮಟ್ಟ ಮತ್ತಷ್ಟು ಕೆಳಗಿಳಿಯುವ ಸಾಧ್ಯತೆ ಇದೆ. ಇದರಿಂದ ಇನ್ನಷ್ಟು ಹಾನಿ ಉಂಟಾಗುವ ಲಕ್ಷಣ ಈಗಾಗಲೇ ಕಂಡುಬರುತ್ತಿದೆ. ಈ ಮೊದಲು ದೆಹಲಿಯಲ್ಲಿ ಮಾಲಿನ್ಯ ಸಂಬಂಧಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿರುವ ಕುರಿತು ಅಧ್ಯಯನ ವರದಿಯೂ ಸಹ ತಿಳಿಸಿತ್ತು.



Click it and Unblock the Notifications
