Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಬಾಯ್‌ಫ್ರೆಂಡ್‌ನ ಟ್ರಂಕ್ ಪೆಟ್ಟಿಗೆಯೊಳಗಿಟ್ಟು ಸಿಕ್ಕಿಬಿದ್ದ ಯುವತಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಆಗಿದ್ದು ಮಾತ್
ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನ ಮನೆಯವರ ಕಣ್ಣಿನಿಂದ ಬಚ್ಚಿಡಲು ಕಬ್ಬಿಣದ ಟ್ರಂಕ್ ಪೆಟ್ಟಿಗೆಯೊಳಗೆ ಬಚ್ಚಿಟ್ಟು ನಂತರ ಸಿಕ್ಕಿ ಬಿದ್ದಿರುವ ಘಟನೆಯ ವೀಡಿಯೋ ವೈರಲ್ ಆಗುತ್ತಿದೆ,ಇಂಥ ದೃಶ್ಯ ಸೀರಿಯಲ್‌ಗಳಲ್ಲಿ ನೋಡಬಹುದು, ಆದರೆ ನಿಜ ಜೀವನದಲ್ಲಿ ಉಂಟಾಗುತ್ತದೆ ಎಂದರೆ ನಂಬುವುದು ಕಷ್ಟ, ಪುಣ್ಯಕ್ಕೆ ಆತ ಬದುಕಿದ್ದಾನೆ, ಉಸಿರಾಡಲು ಸಾಧ್ಯವಾಗದೆ ಮೇಲಕ್ಕೆ ಹೋಗಿದ್ದರೆ? ಏನೋ ಮಾಡಲು ಹೋಗಿ ಇನ್ನೇನೋ ಆಗ್ತಾ ಇತ್ತು.

ಈ ಘಟನೆ ನಡೆದಿರುವುದು ಒಡಿಸ್ಸಾದ ಭುವನೇಶ್ವರ್‌ನಲ್ಲಿ. ಅವರಿಬ್ಬರು ಪ್ರೇಮಿಗಳು, ಯಾರ ಕಣ್ಣಿಗೆ ಕಾಣದಂತೆ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು, ಮನೆಯವರಿಗೆ ಗೊತ್ತಾದರೆ ಮನೆಯವರು ನಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಗೊತ್ತಿರುವ ಕಾರಣದಿಂದಲೇ ಯಾರ ಕಣ್ಣಿಗೆ ಬೀಳದಂತೆ ಎಚ್ಚರವಹಿಸುತ್ತಿದ್ದರು. ಈ ಬಾರಿ ಕೂಡ ಅದೇ ರೀತಿ ಭೇಟಿಯಾಗಿದ್ದಾರೆ, ಅದೂ ಆಕೆಯ ಮನೆಯಲ್ಲಿ. ಬಹುಶಃ ಮನೆಯವರು ಯಾರೂ ಇಲ್ಲದ ಸಮಯದಲ್ಲಿ ಆಕೆ ಕರೆಸಿಕೊಂಡಿರಬಹುದು.
ಮನೆಯಲ್ಲಿ ಯಾರೂ ಇಲ್ಲ, ಇಬ್ಬರು ಸ್ವಲ್ಪ ಸಮಯ ಕಳೆಯಬಹುದೆಂದು ಭಾವಿಸಿದ್ದರು, ಥೇಟ್ ಸಿನಿಮಾ, ಸೀರಿಯಲ್‌ನಲ್ಲಿ ಕಾಣುವಂತೆ ಅದೇ ಸಮಯಕ್ಕೆ ಮನೆಯವರು ಬಂದಿದ್ದಾರೆ, ಈತನನ್ನು ಬಚ್ಚಿಡಬೇಕಲ್ಲಾ? ನೋಡಿದರೆ ಅದೊಂದು ಪುಟ್ಟ ಮನೆಯಂತೆ ಕಾಣುತ್ತದೆ, ಅಷ್ಟು ಚಿಕ್ಕ ಮನೆಯಲ್ಲಿ ಎಲ್ಲಿ ಬಚ್ಚಿಟ್ಟರೂ ಕಾಣುತ್ತದೆ, ಏನು ಮಾಡಬೇಕೆಂಬುವುದು ತಿಳಿಯಲ್ಲ, ಕೈ ಕಾಲು ಆಡಲ್ಲ, ಕೂಡಲೇ ಅಲ್ಲಿದ್ದ ಟ್ರಂಕ್ ಕಾಣುತ್ತೆ(ಗ ಇಂಥ ಪೆಟ್ಟಿಗೆ ಕಾಣ ಸಿಗುವುದೇ ಅಪರೂಪ, ಕಬೋರ್ಡ್, ಗೋದ್ರೇಜ್ ಅಲ್ಲ ಬಂದಿರುವಾಗ ಇದರ ಬಳಕೆತುಂಬಾ ವಿರಳ, ಹಿಂದೆಯೆಲ್ಲಾ ಇಂಥ ಪೆಟ್ಟಿಗೆಯಲ್ಲಿ ಬಟ್ಟೆ, ವಸ್ತುಗಳನ್ನು ಇಡುತ್ತಿದ್ದರು), ಅದರೊಳಗಿನ ಪಟ್ಟೆಯೆಲ್ಲಾ ಹೊರಗಡೆ ಹಾಕಿ ಅದರೊಳಗೆ ಅವನ ಹಾಕಿ ಲಾಕ್ ಮಾಡ್ತಾಳೆ.
ಅಷ್ಟರಲ್ಲಿ ಮನೆಯವರು ಬರ್ತಾರೆ
ಚೆಲ್ಲಾಪಿಲ್ಲಿ ಬಿದ್ದಿರುವ ವಸ್ತುಗಳು, ಲಾಕ್ ಆದ ಪೆಟ್ಟಿಗೆ, ಅವಳಲ್ಲಿ ಭಯ, ಕಳ್ಳ ನೋಟ ಇದೆಲ್ಲಾ ನೋಡಿದಾಗ ಮನೆಯವರಿಗೂ ಏನೋ ಮಿಸ್ ಹೊಡೆಯುತ್ತೆ, ಆ ಪೆಟ್ಟಿಗೆ ಓಪನ್ ಮಾಡು ಅಂತಾರೆ, ಆದರೆ ಆಕೆ ಮಾತ್ರ ರೆಡಿ ಇರಲ್ಲ, ಮನೆಯವರು ಅವಳ ಮೇಲೆ ಹೆಚ್ಚು ಒತ್ತಡ ಹಾಕುತ್ತಾರೆ ನೀನು ಓಪನ್ ಮಾಡು ಇಲ್ಲದಿದ್ದರೆ ನಮಗೆ ಗೊತ್ತು ಹೇಗೆ ಓಪನ್ ಮಾಡಬೇಕು ಎಂಬುವುದು ಗೊತ್ತು ಎಂದಿರಬಹುದು, ಮನೆಯವರು ಪೆಟ್ಟಿಗೆಯನ್ನು ಏನಾದರು ವಸ್ತು ವಸ್ತುವಿನಲ್ಲಿ ಬಡೆದು ಓಪನ್ ಮಾಡ್ತಾರೆ, ಹಾಗೆ ಮಾಡಿದರೆ ಅದರೊಗಿರುವ ಬಾಯ್‌ಫ್ರೆಂಡ್‌ಗೆ ಪೆಟ್ಟಾಗುತ್ತೆ ಎಂದು ಆಕೆಗೆ ಲಾಕ್ ತೆಗೆಯಲೇಬೇಕಾದ ಅನಿವಾರ್ಯತೆ ಬರುತ್ತೆ.
ನಂತರ ಇರುವುದು ತಮಾಷೆ:
ಆಕೆ ಪೆಟ್ಟಿಗೆ ತೆಗೆಯುತ್ತಿದ್ದಂತೆ ಅದರಿಂದ ಹೊರಬರುವ ಬಾಯ್‌ಫ್ರೆಂಡ್‌ನ ನೋಡುವಾಗ ನಮಗೆ ನಗು ಬರುತ್ತೆ, ಹಾವನ್ನು ಬುಟ್ಟಿಯೊಳಗೆ ಹಾಕಿಟ್ಟು ನಂತರ ಓಪನ್ ಮಾಡುವಾಗೆ ಹೆಡೆಎತ್ತಿ ಬರುವಂತೆ ತಲೆ ಮೇಲಕ್ಕೆ ಎತ್ತಿ ಬರುತ್ತಾನೆ,ಅದರೊಳಗೆ ಕೈ ಕಾಲೆಲ್ಲಾ ಮುದುರಿ ಮಲಗಿದ್ದ, ಅಷ್ಟು ದೊಡ್ಡ ದೇಹ ಪೆಟ್ಟಿಗೆಯೊಳಗೆ ತುಂಬುವುದು ಸಾಮಾನ್ಯವಲ್ಲ.
ಮನೆಯವರು ಹೊಡೆಯಲು ಬರುವಾಗ ಆಕೆ ಬಾಯ್‌ಫ್ರೆಂಡ್ ರಕ್ಷಣೆಗೆ ನಿಲ್ಲುತ್ತಾಳೆ
ಮನೆಯವರ ಮುಂದೆ ಸಿಕ್ಕಿ ಬಿದ್ದ ಮೇಲೆ ಕೂಡ ಆಕೆಯ ಧೈರ್ಯವನ್ನು ಮೆಚ್ಚಬೇಕು, ಮನೆಯವರು ಹೊಡೆಯಲು ಬರುವಾಗ ಅವನಿಗೆ ಏಟು ಬೀಳದಂತೆ ಅಡ್ಡ ಬರ್ತಾಳೆ, ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.
ಕೆಲವರು ಆಕೆಯ ಬಗ್ಗೆ ಸಿಂಪತಿ ತೋರಿಸುತ್ತಿದ್ದಾರೆ, ಪಾಪ ಪ್ರೇಮಿಗಳು ಅವರಿಬ್ಬರು ಒಂದು ಮಾಡಿ ಅಂತಿದ್ದಾರೆ. ಬಹುಶಃ ಸ್ಟ್ರಿಕ್ಟ್ ಫ್ಯಾಮಿಲಿ ಇರಬೇಕು, ಹಾಗಾಗಿ ಆಕೆಯ ಪ್ರೀತಿಯನ್ನು ಬಚ್ಚಿಡಬೇಕಾಯ್ತು ಎಂದು ಕೂಡ ಹೇಳುತ್ತಿದ್ದಾರೆ. ಆದರೆ ಆತ ಎಂಥವನು ಒಂದು ವೇಳೆವೇಳೆ ಅವನಿಗೆ ಬೇರೆ ಮದುವೆಯಾಗಿರುವುದಕ್ಕೆ ಮನೆಯವರು ವಿರೋಧ ಮಾಡುತ್ತಿರಬಹುದೇ? ಇದೆಲ್ಲಾ ಯಾರಿಗೆ ಗೊತ್ತು? ಆದರೆ ಇವರ ಲವ್‌ಸ್ಟೋರಿ ಮನೆಯವರಿಗೆ ತಿಳಿದು ಬಂದ ರೀತಿ ಮಾತ್ರ ಸಕತ್ ಥ್ರಿಲ್ಲಿಂಗ್ ಆಗಿದೆ.
ashleelgyaaan_ ಇನ್‌ಸ್ಟಾ ಖಾತೆಯಲ್ಲಿ ವೀಡಿಯೋ ಇದೆ



Click it and Unblock the Notifications