Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹುಡುಗರೇ, ಕಮಿಟ್ಮೆಂಟ್ ನಿಂದಾಗಿ ಪ್ರೀತಿ ಬಗ್ಗೆ ಭಯವೇ? ಇಲ್ಲಿದೆ ಟಿಪ್ಸ್!
ನಮಗೆ ಒಬ್ಬರ ಮೇಲೆ ಪ್ರೀತಿ ಆಗೋದು ತುಂಬಾನೇ ಸುಲಭ. ಅದು ಶಾಲೆ, ಕಾಲೇಜು, ಆಫೀಸ್ ನಲ್ಲಿರಬಹುದು. ಅದ್ರಲ್ಲೂ ಹುಡುಗರು ಬೇಗನೇ ಪ್ರೀತಿಯಲ್ಲಿ ಬೀಳುತ್ತಾರೆ ಅನ್ನೋದು ಅಧ್ಯಯನದಿಂದ ಸಾಬೀತಾಗಿದೆ. ಹುಡುಗಿಯರ ಅಂದ-ಚೆಂದ ಅಥವಾ ಗುಣ-ನಡೆತೆ ನೋಡಿ ಹುಡುಗರು ಇಷ್ಟ ಪಡುತ್ತಾರೆ.

ಈ ರೀತಿ ಒಂದೊಂದು ಕಾರಣಕ್ಕೆ ಹುಡುಗಿಯರು ಹುಡುಗರಿಗೆ ಇಷ್ಟ ಆಗುತ್ತಾರೆ. ಆದರೆ ಹೆಚ್ಚಿನವರು ಹುಡುಗಿ ಎಷ್ಟೇ ಇಷ್ಟ ಆದರೂ ಕೂಡ ಪ್ರೀತಿಯಲ್ಲಿ ಬೀಳೋದಕ್ಕೆ ಭಯ ಪಡುತ್ತಾರೆ. ಪ್ರೀತಿಯಲ್ಲಿ ಬಿದ್ರೆ ಮುಂದೇನು ಅವಾಂತರ ಆಗುತ್ತೆ ಅನ್ನೋ ಭಯದಲ್ಲೇ ಇರುತ್ತದೆ. ಅಷ್ಟಕ್ಕು ಹುಡುಗರೇ ಪ್ರೀತಿಯಲ್ಲಿ ಬೀಳುವ ಭಯ ನಿಮಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
1. ಭಾವನಾತ್ಮಕ ಗೋಡೆಗಳನ್ನು ನಿರ್ಮಿಸಿ!
ನಮಗೆ ಯಾರಾದರೂ ಇಷ್ಟ ಆಗಬೇಕೆಂದರೆ ಮೊದಲು ನಮಗೆ ಅವರ ಮೇಲೆ ಭಾವನೆಗಳು ಹುಟ್ಟಿಕೊಳ್ಳಬೇಕು. ಒಂದು ಸಾರಿ ಯಾರ ಮೇಲಾದರೂ ಭಾವನೆಗಳು ಹುಟ್ಟಿಕೊಂಡರೆ ಅದನ್ನು ನಿಯಂತ್ರಿಸಿಕೊಳ್ಳುವುದು ಬಹಳ ಕಷ್ಟ. ನೀವು ಪ್ರೀತಿಯಲ್ಲಿ ಬೀಳಬಾರದೆಂದರೆ ಮೊದಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ. ನಿಮಗೆ ಇಷ್ಟ ಆಗುವವರ ಜೊತೆಗೆ ಹೆಚ್ಚಿನ ಸಮಯ ಕಳೆಯುವುದನ್ನು ತಪ್ಪಿಸಿ. ಇದರಿಂದ ಅವರು ನಿಮಗೆ ಮತ್ತಷ್ಟು ಹತ್ತಿರವಾಗುವ ಸಾಧ್ಯತೆಯಿದೆ.
2. ಕಮಿಟ್ಮೆಂಟ್ ಮಾಡಿಕೊಳ್ಳಬೇಡಿ!
ಹೆಚ್ಚಿನವರಿಗೆ ಪ್ರೀತಿ ಅಂದ್ರೆ ಭಯ ಇರೋದಿಲ್ಲ. ಪ್ರೀತಿಸೋದಕ್ಕೆ ಇಷ್ಟ ಪಡುತ್ತಾರೆ. ಆದರೆ ಪ್ರೀತಿ ಆದ ನಂತರದ ಕಮಿಟ್ಮೆಂಟ್ ಗಳು ಅವರಲ್ಲಿ ಭಯವನ್ನು ಹುಟ್ಟು ಹಾಕುತ್ತದೆ. ಹೀಗಾಗಿ ಒಂದು ವೇಳೆ ಆ ಹುಡುಗಿ ನಿಮ್ಮ ಮನಸ್ಸಿಗೆ ತುಂಬಾನೇ ಇಷ್ಟ ಆಗಿದ್ದರೂ ಕೂಡ ಅವರ ಜೊತೆಗೆ ಸ್ನೇಹಿತರಂತೆ ಚೆನ್ನಾಗಿ ಇರಲು ಪ್ರಯತ್ನಿಸಿ. ಪ್ರೀತಿಯತ್ತ ನಿಮ್ಮ ಮನಸ್ಸು ವಾಲೋದಕ್ಕೆ ಅವಕಾಶ ಕೊಡದಿರಿ.
3. ನಿಮ್ಮ ಸ್ವತಂತ್ರ ಬದುಕನ್ನು ಗೌರವಿಸಿ!
ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವತಂತ್ರ ಬದುಕು ಇದ್ದೇ ಇರುತ್ತದೆ. ಪ್ರೀತಿಯಲ್ಲಿ ಬಿದ್ದ ಮೇಲೆ ನಾವು ಸ್ವತಂತ್ರವನ್ನು ಕಳೆದುಕೊಳ್ಳುತ್ತೇವೆ ಅನ್ನೋ ಭಯ ಅನೇಕರಿಗೆ ಇರುತ್ತದೆ. ಹುಡುಗಿಯರಿಗೆ ತಮ್ಮ ಹುಡುಗ ಸ್ನೇಹಿತರ ಜೊತೆಗೆ ಹೊರ ಹೋಗುವುದು, ಕುಡಿಯೋದು, ಪಾರ್ಟಿ ಮಾಡೋದು ಜೊತೆಗೆ ಇತರ ಹುಡುಗಿರ ಜೊತೆಗೆ ಕ್ಲೋಸ್ ಆಗಿ ಇರೋದು ಇಷ್ಟ ಆಗೋದಿಲ್ಲ. ಇದು ಹುಡುಗರಿಗೆ ಉಸಿರುಗಟ್ಟಿಸಿದಂತಾಗುತ್ತದೆ. ಈ ರೀತಿ ಇರುವವರು ಖಂಡಿತ ಪ್ರೀತಿಯಲ್ಲಿ ಬೀಳಬಾರದು.
4. ಆತ್ಮೀಯ ಸ್ನೇಹಿತರಾಗಿ ಇದ್ದು ಬಿಡಿ!
ಅನೇಕ ಬಾರಿ ಹುಡುಗರಿಗೆ ಹುಡುಗಿಯರ ಅಂದ-ಚೆಂದಕ್ಕಿಂತ ಅವರ ಗುಣ-ನಡೆತೆ ನೋಡಿ ತುಂಬಾನೇ ಇಷ್ಟ ಆಗುತ್ತದೆ. ಆ ಹುಡುಗಿಯ ಬಗ್ಗೆ ಪ್ರೀತಿಯ ಭಾವನೆಗಳು ಇದ್ದರೂ ಕೂಡ ಅನೇಕ ಕಾರಣಗಳಿಂದ ಹುಡುಗರು ಕಮಿಟ್ ಆಗೋದಕ್ಕೆ ಇಷ್ಟ ಪಡೋದಿಲ್ಲ. ಮನೆಯ ಜವಾಬ್ದಾರಿ ಅಥವಾ ಬೇರೆ ಕಾರಣಗಳಿಂದ ಕೂಡ ಹುಡುಗರು ಪ್ರೀತಿಯಲ್ಲಿ ಬೀಳುವ ಮನಸ್ಸು ಮಾಡೋದಿಲ್ಲ.
ಇಂತಹ ಸಂದರ್ಭದಲ್ಲಿ ಅವರ ಜೊತೆಗೆ ಆತ್ಮೀಯ ಸ್ನೇಹಿತರಂತೆ ಇದ್ದು ಬಿಡಿ. ಪ್ರೀತಿಯ ಭಾವನೆಗಳಿಗೆ ಬ್ರೇಕ್ ಹಾಕಿ. ಸ್ನೇಹದ ಭಾವನೆಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿ.
5. ಗುರಿಯ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಿ!
ನಮ್ಮ ಮನಸ್ಸು ಯಾವಾಗಲೂ ಗುರಿಯ ಕಡೆಗೆ ಕೇಂದ್ರೀಕೃತವಾಗಿ ಇರಬೇಕು. ಗುರಿಯನ್ನು ಮುಟ್ಟುವತ್ತ ಪರಿಶ್ರಮ ಪಟ್ಟು ಕೆಲಸ ಮಾಡಬೇಕು. ಹೆಚ್ಚಿನ ಹುಡುಗರಿಗೆ ಒಂದು ಭಯ ಇರುತ್ತೆ. ಅದೇನೆಂದರೆ ನಾವೇನಾದರೂ ಪ್ರೀತಿ-ಪ್ರೇಮ ಅಂತ ಹುಡುಗಿಯ ಹಿಂದೆ ಬಿದ್ದರೆ ನಮ್ಮ ಗುರಿಯನ್ನು ತಲುಪೋದಕ್ಕೆ ಸಾಧ್ಯವಾಗುತ್ತೋ ಅಲ್ಲವೋ ಅನ್ನೋ ಭಯ ಕಾಡುತ್ತಿರುತ್ತದೆ. ಅಂತವರು ಪ್ರೀತಿಯಲ್ಲಿ ಕಮಿಟ್ ಆಗೋ ಮುನ್ನ ನೂರು ಬಾರಿ ಯೋಚಿಸಿದರೆ ಒಳ್ಳೆಯದು.
ಪ್ರೀತಿ ಕೆಟ್ಟದಲ್ಲ, ಆದರೆ ಅನೇಕ ಹುಡುಗರು ಹುಡುಗಿಯ ಬಗ್ಗೆ ನೂರಾರು ಭಾವನೆಗಳು ಇದ್ದರೂ ಕೂಡ ತಮ್ಮ ಪ್ರೀತಿಯನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟುಕೊಳ್ಳುತ್ತಾರೆ. ಅಂತವರು ಈ ಟಿಪ್ಸ್ ಗಳನ್ನು ಪಾಲೋ ಮಾಡಬಹುದು.



Click it and Unblock the Notifications
