Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಷ್ಣು ಪುರಾಣದ ಭವಿಷ್ಯ ವಾಣಿಗಳು ಕಲಿಯುಗಕ್ಕೂ ಆಧಾರವಾಗಿದ್ಯಾ?
ನಾವು ಜೀವನ ನಡೆಸುತ್ತಿರುವುದೇ ಪುರಾಣ ಹಾಗೂ ಐತಿಹಾಸಿಕ ಚರಿತ್ರೆಗಳ ಆಧಾರದ ಮೇಲೆ ಪುರಾಣ ಕಥೆಗಳು, ಅದರಲ್ಲಿ ಬರುವ ಸನ್ನಿವೇಶಗಳು ನಮ್ಮ ಜೀವನದಲ್ಲಿ ಇಂದು ಹಾಸುಹೊಕ್ಕಾಗಿದೆ. ಈಗಿನ ಜೀವನಕ್ಕೆ, ಜೀವಮಾನಕ್ಕೆ ಹೊಂದಿಕೊಳ್ಳುವಂತಹ ಸಾಕಷ್ಟು ಪುರಾಣ ಕಥೆಗಳು ಇವೆ. ಅಷ್ಟೇ ಅಲ್ಲದೆ ಹಿಂದೂ ಧರ್ಮ ಗ್ರಂಥಗಳಲ್ಲಿಯೂ ಕೂಡ ಜನರ ಜೀವನಕ್ಕೆ ಅನುಕೂಲವಾಗುವಂತಹ ಅನ್ವಯವಾಗುವಂತಹ ವಿಷಯಗಳನ್ನು ಹೇಳಲಾಗಿದೆ. ಅಂತವುಗಳಲ್ಲಿ ಗರುಡ ಪುರಾಣ, ಶಿವ ಪುರಾಣ, ವಿಷ್ಣು ಪುರಾಣ ಮೊದಲಾದವು ಸೇರಿವೆ.
ಗರುಡ ಪುರಾಣ ಹಾಗೂ ಶಿವ ಪುರಾಣಗಳಿಗೆ ಹೋಲಿಸಿದರೆ ವಿಷ್ಣು ಪುರಾಣ ಪ್ರಸ್ತುತವನ್ನಷ್ಟೇ ಅಲ್ಲ ಭವಿಷ್ಯದ ಬಗ್ಗೆಯೂ ಕೂಡ ಹೇಳುತ್ತೆ. ವಿಷ್ಣು ಪುರಾಣದಲ್ಲ, ಕಲಿಯುಗದಲ್ಲಿ ಹೇಗೆ ಏನೆಲ್ಲಾ ಅಚ್ಚರಿಗಳು ನಡೆಯಬಹುದು ಕಲಿಯುಗ ಹೇಗೆ ಇರಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಚ್ಚರಿ ಮೂಡಿಸುವಂತಹ ವಿಷಯಗಳನ್ನು ಹೇಳಲಾಗಿದೆ.

ಹಿಂದೂ ಧರ್ಮದಲ್ಲಿ ವಿಷ್ಣು ಪುರಾಣಕ್ಕೆ ಬಹಳ ಮಹತ್ವವಿದೆ. ಇದನ್ನು ಪವಿತ್ರ ಗ್ರಂಥ ಎಂದು ಕರೆಯಲಾಗುತ್ತದೆ. ಇಂದಿನ ದಿನದಲ್ಲಿ ನಡೆಯುತ್ತಿರುವ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ ಅದು ಅಲ್ಲದೆ ಆಗಲೇ ಹೇಳಿದಂತೆ ವಿಷ್ಣು ಪುರಾಣ ನಮ್ಮ ಜೀವನದ ಆಗುಹೋಗುಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ. ಹಾಗಾದ್ರೆ ವಿಷ್ಣು ಪುರಾಣ ನಮ್ಮ ಜೀವನಕ್ಕೆ ಹೇಗೆ ಅನ್ವಯವಾಗುತ್ತೆ ನೋಡೋಣ.
ಅತಿಯಾದ ಉಷ್ಣತೆ ಹಾಗೂ ನೀರಿನ ಕೊರತೆ:
ಕಲಿಯುಗ ಹೇಗಿರಬಹುದು ಎನ್ನುವುದರ ಬಗ್ಗೆ ವಿಷ್ಣು ಪುರಾಣದಲ್ಲಿ ಹೇಳಲಾಗಿದೆ ಈ ಪುರಾಣದ ಪ್ರಕಾರ ಕಲಿಯುಗದಲ್ಲಿ ಪ್ರಳಯದ ಮುನ್ಸೂಚನೆಗಳನ್ನು ಹೇಳಲಾಗಿತ್ತು. ಕಲಿಯುಗದಲ್ಲಿ ಶಾಖ ಅಥವಾ ಉಷ್ಣತೆ ಅತಿಯಾಗಿ ಇರುತ್ತದೆ ಭೂಮಿಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುವ ಮಟ್ಟಕ್ಕೆ ಶಾಖ ಉತ್ಪತ್ತಿಯಾಗುತ್ತದೆ ಇದರಿಂದಾಗಿ ನೀರಿನ ಮಟ್ಟ ಬಹಳಷ್ಟು ಕುಸಿತ ಕಾಣುತ್ತದೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಅತಿಯಾದ ಮಳೆ ಜನರ ಜೀವನವನ್ನೇ ಅಸ್ತವ್ಯಸ್ತ ಮಾಡುತ್ತದೆ ಎನ್ನುವುದರ ಬಗ್ಗೆ ಹೇಳಲಾಗಿತ್ತು. ನಾವು ಇದನ್ನ ಈಗ ಅನುಭವಿಸುತ್ತಿದ್ದೇವೆ.
ಹಣದ ಬಗ್ಗೆ ಅಪಾರ ಪ್ರೀತಿ:
ಶ್ರೀಮಂತರನ್ನ ಮಾತ್ರ ಹೊಗಳುತ್ತಾರೆ. ಬಡವರ ಬಗ್ಗೆ ಯಾರು ಚಕಾರ ಎತ್ತುವುದಿಲ್ಲ. ಹಣ ಸಂಪಾದಿಸುವ ಕೆಲಸದಲ್ಲಿ ವ್ಯಕ್ತಿ ಕೆಟ್ಟ ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ ಹಣದ ಬಗ್ಗೆ ಹೆಮ್ಮೆ ಅಹಂಕಾರ ಬೆಳೆಸಿಕೊಳ್ಳುತ್ತಾರೆ. ಇದರಿಂದಾಗಿ ಸಂಬಂಧಗಳು ಹಣದ ಆಧಾರವಾಗಿರುತ್ತದೆ. ಈ ರೀತಿಯಾಗಿ ಕಲಿಯುಗದಲ್ಲಿ ಹಣ ಕೈ ಸೇರಿದಾಗ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದರ ಬಗ್ಗೆ ಕೂಡ ವಿಷ್ಣು ಪುರಾಣದಲ್ಲಿ ಹೇಳಲಾಗಿತ್ತು. ಈಗ ನಡಿತಾ ಇರೋದು ಅದೇ ತಾನೆ?
ಮನೆ ನಿರ್ಮಾಣಕ್ಕಾಗಿಯೇ ಹಣ ವಹಿಸಲಾಗುತ್ತೆ:
ಜನರು ಕಲಿಯುಗದಲ್ಲಿ ತಾವು ಗಳಿಸಿದ, ಉಳಿಸಿದ, ಸಂಪಾದಿಸಿದ ಹಣವನ್ನೆಲ್ಲ ಮನೆ ಕಟ್ಟಲು ಖರ್ಚು ಮಾಡುತ್ತಾರೆ. ಎಲ್ಲರಿಗೂ ಸ್ವಂತ ಮನೆ ಹೊಂದಲು ಸಾಧ್ಯವಿಲ್ಲ ಆದರೆ ತಮ್ಮ ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳಲು ಜೀವನದುದ್ದಕ್ಕೂ ಜನ ಕಷ್ಟಪಟ್ಟು ದುಡಿಯುತ್ತಾರೆ. ತಮ್ಮ ದುಡಿಮೆ, ಜೀವನವನ್ನೇ ಪಣಕ್ಕಿಟ್ಟು ಮನೆ ಕಟ್ಟಲು ಮುಂದಾಗುತ್ತಾರೆ. ಈಗ ನಡೆಯುತ್ತಿರುವುದು ಅದೇ. ಜನ ಒಂದು ಫ್ಲಾಟ್ ಖರೀದಿ ಮಾಡಿ ಅದರ ಇಎಂಐ ಕಟ್ಟಲು ಜೀವನವನ್ನೇ ಮುಡಿಪಾಗಿಡುತ್ತಾರೆ.
ಅಕಾಲಿಕ ಮರಣದ ಬಗ್ಗೆ ವಿಷ್ಣು ಪುರಾಣದ ಭವಿಷ್ಯ ವಾಣಿ:
ಹೌದು, ವಿಷ್ಣು ಪುರಾಣದಲ್ಲಿ, ಕಲಿಯುಗದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಜನರು ಮಾಡುವ ತಪ್ಪುಗಳಿಂದ ಅಪಘಾತಗಳು ಹೆಚ್ಚಾಗುತ್ತವೆ ಜೊತೆಗೆ ಸಾಂಕ್ರಾಮಿಕ ರೋಗಗಳು ಕೂಡ ಮಾನವನನ್ನು ಮುಟ್ಟುತ್ತವೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಸ್ಯೆ ಜನರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ. ಜನರು ತಮ್ಮ ಆಯಸ್ಸು ಎಷ್ಟಿದೆಯೋ ಅಷ್ಟು ವರ್ಷ ಬದುಕುವುದಿಲ್ಲ ಬದಲಾಗಿ ಅಕಾಲಿಕ ಮರಣವನ್ನು ಕಾಣಬೇಕಾಗುತ್ತದೆ. ರೈತರು ಸಾಲ ಬಾಧೆಯಿಂದ ತತ್ತರಿಸುತ್ತಾರೆ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಈ ರೀತಿಯಾಗಿ ವಿಷ್ಣು ಪುರಾಣ ಮನುಷ್ಯನ ಆಯಸ್ಸಿನ ಬಗ್ಗೆಯೂ ಭವಿಷ್ಯ ವಾಣಿ ನುಡಿದಿದೆ ಎನ್ನಬಹುದು. ಈಗ ವಿಷ್ಣು ಪುರಾಣದ ಈ ಎಲ್ಲಾ ಭವಿಷ್ಯ ನುಡಿಗಳು ಸತ್ಯವಾಗುತ್ತಿವೆ.
ಕೆಲವು ಪುರಾಣ ಗ್ರಂಥಗಳು ಮೇಲ್ನೋಟಕ್ಕೆ ಕೇವಲ ಪುರಾಣ ಎಂದು ಅನ್ನಿಸಬಹುದು ಆದರೆ ಮನುಷ್ಯನ ಜೀವನಕ್ಕೆ ಪ್ರತಿಯೊಂದು ಗ್ರಂಥಗಳಲ್ಲಿ ಹೇಳಲಾದ ಪ್ರತಿಯೊಂದು ಸಾಲುಗಳು ಕೂಡ ಜನರ ಜೀವನಕ್ಕೆ ಅನ್ವಯವಾಗುತ್ತವೆ. ಅಂತ ವಿಷ್ಣು ಪುರಾಣದ ಭವಿಷ್ಯ ವಾಣಿಗಳು ಕೂಡ ಇಂದು ನಾವು ಕಾಣುತ್ತಿರುವ ಅನುಭವಿಸುತ್ತಿರುವ ಘಟನೆಗಳಿಗೆ ಹಿನ್ನೆಲೆಯಾಗಿವೆ.



Click it and Unblock the Notifications
