Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳುವ ಈ ನಂಬಿಕೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗಲೂ ಅದು ಸತ್ಯ!
ನಮ್ಮ ದಿನ ನಿತ್ಯದ ಬದುಕಿನಲ್ಲಿ ನಾವು ಹಲವು ನಂಬಿಕೆಗಳನ್ನು ಪಾಲಿಸುತ್ತೇವೆ, ಕೆಲವೊಂದು ನಂಬಿಕೆಗಳನ್ನು ಯಾರೋ ಹೇಳಿದರು ಎಂದು ಪಾಲಿಸುತ್ತೇವೆ, ಉದಾಹರಣೆ ರಾತ್ರಿ ಹೊತ್ತಿನಲ್ಲಿ ಕಸ ಬಿಸಾಡಬಾರದು, ಹೀಗೆ ಹೇಳುವಾಗ ಏಕೆ ಹೀಗೆ ಮಾಡಬಾರದು ಎಂಬ ಪ್ರಶ್ನೆಗೆ ಲಕ್ಷ್ಮಿ ಮನೆಯಲ್ಲಿ ನೆಲೆಸಲ್ಲ ಎಂಬ ಉತ್ತರ ಬರುತ್ತದೆ, ಏಕೆ ಈ ರೀತಿ ಹೇಳುತ್ತಾರೆ, ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು? ಎಂದು ನೋಡೋಣ ಬನ್ನಿ:

ಹಲವರಿಗೆ ಈ ಅಭ್ಯಾಸ ಇದೆ, ಆದರೆ ಹೀಗೆ ತಿನ್ನುವುದನ್ನು ಮನೆಯಲ್ಲಿ ಹಿರಿಯರು ನೋಡಿದರೆ ಎಂಥ ಬುದ್ಧಿಯದು, ಹೀಗೆ ಮಾಡುವುದರಿಂದ ಮನೆಗೆ ದರಿದ್ರ ಬರುತ್ತದೆ ಎಂದು ಹೇಳುತ್ತಾರೆ. ಹಾಸಿಗೆಯಲ್ಲಿ ತಿನ್ನುವ ಅಭ್ಯಾಸ ಮನೆಗೆ ಅಶುಭ ನೆಮ್ಮದಿ ಇರಲ್ಲ ಎಂದು ಹೇಳುತ್ತಾರೆ. ಇದು ಮೂಡ ನಂಬಿಕೆಯಲ್ಲ ಸತ್ಯವೂ ಇದು, ಅಲ್ಲೇ ತಿನ್ನುವುದು, ಅಲ್ಲೇ ಮಲಗುವುದು ಮಾಡಿದರೆ ಎಷ್ಟು ಗಲೀಜು ಅನಿಸುತ್ತೆ ಅಲ್ವಾ? ಅಲ್ಲದೆ ನಾವು ತಿಂದ ಆಹಾರ ಹಾಸಿಗೆ ಮೇಲೆ ಬಿದ್ದರೆ ಹಾಸಿಗೆ ದುರ್ವಾಸನೆ ಬೀರುವುದು, ಇರುವೆ ಬರುವುದು, ಇದರಿಂದ ನೆಮ್ಮದಿಯ ನಿದ್ದೆ ದೂರಾಗುವುದು ಅಲ್ವಾ?
ಸೂರ್ಯಾಸ್ತದ ನಂತರ ಹಣದ ವಹಿವಾಟು ಮಾಡಬಾರದು
ತುಂಬಾ ಜನರು ಸೂರ್ಯಾಸ್ತದ ನಂತರ ಹಣದ ವಹಿವಾಟು ಮಾಡಲ್ಲ, ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂಬ ನಂಬಿಕೆ. ಈ ನಂಬಿಕೆಯನ್ನು ಬದಿಗಿಟ್ಟು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಈ ನಂಬಿಕೆ ಈ ಕಾಲಕ್ಕೆ ಅಷ್ಟು ಸೂಕ್ತವಲ್ಲ ಕಾಣುತ್ತೆ, ಹಿಂದೆಯಲ್ಲ ವಿದ್ಯುತ್ ಬೆಳಕು ಇಲ್ಲ, ಸೀಮೆಣ್ಣೆ ದೀಪ ಹಚ್ಚಿಡುತ್ತಿದ್ದರು, ಕತ್ತಲಾಗುತ್ತಿದ್ದಂತೆ ಏನೂ ಕಾಣುತ್ತಿರಲಿಲ್ಲ, ಈ ಸಮಯದಲ್ಲಿ ಹಣ ನೀಡಿದರೆ ಸರಿಯಾಗಿ ಕಾಣಿಸದೆ ಲೆಕ್ಕಾಚಾರದಲ್ಲಿ ತಪ್ಪಬಹುದು ಎಂದು ಈ ರೀತಿ ಹೇಳಿರಬಹುದು.
ಮರಗಳಿಂದ ಎಲೆಗಳನ್ನು ಕೀಳುವುದು, ಮನೆಯಿಂಲ್ಲಿ ಹಾವು ಅಥವಾ ಇತರ ವಿಷಕಾರಿ ಕೀಟವಿದ್ದರೆ ಕಾಣಿಸಲ್ಲ, ಕಸವನ್ನು ತೆಗೆದು ಹೊರಗಡೆ ಹಾಕಬಾರದು ಎಂದು ಹೇಳಿರುವುದರ ಹಿಂದೆ ಕೂಡ ಕಾರಣವಿದೆ, ಕಸ ಕುಡಿಸಿದಾಗ ಬೆಲೆ ಬಾಳುವ ವಸ್ತು ಬಿದ್ದದ್ದರೆ ಕಾಣಿಸದೆ ಬಿಸಾಡುತ್ತೇವೆ, ಈವಾಗ ಲೈಟ್ಸ್ ಇದೆ, ಬೆಳಕು ಚೆನ್ನಾಗಿ ಇರುತ್ತದೆ, ಆದರೂ ಈ ನಂಬಿಕೆ ಇನ್ನೂ ಬಲವಾಗಿದೆ.
ಅಡುಗೆ ಮನೆ ಸ್ವಚ್ಛವಾಗಿಡದಿರುವುದು
ಮಲಗುವ ಮುನ್ನ ಅಡುಗೆ ಮನೆ ಸ್ವಚ್ಛವಾಗಿಡದಿದ್ದರೆ ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳಲಾಗುವುದು, ಒಂದು ಲೆಕ್ಕದಲ್ಲಿ ಇದು ಸತ್ಯ ಕೂಡ. ಅಡುಗೆ ಮನೆಯನ್ನು ಗಲೀಜು ಬಿಟ್ಟು ಮಲಗಿದರೆ ಕೀಟ, ಜಿರಳೆ ಇವುಗಳ ಕಾಡ ಹೆಚ್ಚುವುದು, ಇದರಿಂದ ಆರೋಗ್ಯ ಕೈ ಕೊಡುತ್ತೆ, ಹಣ ಖರ್ಚಾಗುವುದು. ಇನ್ನು ಅಡುಗೆ ಮನೆಯಲ್ಲಿರವ ಸಾಮಗ್ರಿಗಳಿಗೆ ಹುಳ ಬಂದರೆ ಅದು ಕೂಡ ವ್ಯರ್ಥವಾಗಿ ಹಣ ನಷ್ಟವಾಗುವುದು, ಆದ್ದರಿಂದ ಲಕ್ಷ್ಮಿ ಕೋಪಿಸಿಕೊಳ್ಳುವುದು ನಿಜ ಮಾತ್ರ ಅಲ್ವಾ?
ರಾತ್ರಿ ಬಟ್ಟೆ ಒಗೆಯುವುದು:
ಬಟ್ಟೆ ಒಗೆಯುವುದು ಶನಿ ಎಂದು ಹೇಳಲಾಗುವುದು, 6 ಗಂಟೆಯ ಬಳಿಕ ಬಟ್ಟೆ ಒಗೆಯಬಾರದು ಎಂದು ಹೇಳುತ್ತಾರೆ. ಹಣ ನಷ್ಟವಾಗುವುದು ಎಂದು ಹೇಳುತ್ತಾರೆ. ನಾವು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಕತ್ತಲಲ್ಲಿ ಬಟ್ಟೆ ಒಗೆದರೆ ಕೊಳೆ ಹೋಗಿದೆಯೇ ಗೊತ್ತಾ ಶ್ರಮ, ನೀರು, ಸೋಪು ವ್ಯರ್ಥವಾಗುವುದು. ಇಗಂತೂ ವಾಷಿಂಗ್ ಮೆಷಿನ್ ಕಾಲ, ಅದಕ್ಕೆ ಇಂಥ ನಂಬಿಕೆ ಸೂಟ್ ಆಗಲ್ಲ ಅಲ್ವಾ?
ಈಗ ಹೇಳಿ ಆಗಿನಿಂದ ನಂಬಿಕೊಂಡು ಬಂದಿರುವ ಈ ನಂಬಿಕೆಗಳ ಹಿಂದೆ ಒಳ್ಳೆಯ ಕಾರಣ ಇದೆ ಅಲ್ವಾ?



Click it and Unblock the Notifications
