Latest Updates
-
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಫ್ಲಿಪ್ಕಾರ್ಟ್ GOAT ಸೇಲ್: ಮಳೆಗಾಲಕ್ಕೆ ಬೇಕಾದ ಹೋಮ್ ಸ್ಟೋರೇಜ್ ಐಟಂಗಳು ಈಗ ₹1,499 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! ನಿಮ್ಮ ಆರೋಗ್ಯಕ್ಕೆ ಕಂಟಕವಾಗುತ್ತಿದೆಯೇ ಈ ಪಾನೀಯಗಳು?
ಶ್ರೀರಾಮನಿಗೂ ಕರ್ನಾಟಕಕ್ಕೂ ಇದೆ ನಂಟು..! ಈ ಪುರಾಣ ಸ್ಥಳಗಳ ಬಗ್ಗೆ ಗೊತ್ತಾ?
ಅಯೋಧ್ಯೆಯ ಶ್ರೀರಾಮ ಮಂದಿರ ಇನ್ನೇನು ಉದ್ಘಾಟನೆಗೆ ಸಿದ್ಧಗೊಂಡಿದೆ. ಜನವರಿ 22ರಂದು ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ನಾವು ಚಿಕ್ಕವರಿದ್ದಾಗಿನಿಂದಲೂ ರಾಮನ ಬಗೆಗಿನ ಹಲವು ಕಥೆಗಳನ್ನು ಕೇಳಿದ್ದೇವೆ. ಇನ್ನೂ ನೂರಾರು ಕಥೆಗಳು ಇತಿಹಾಸದಲ್ಲಿ ಅಡಗಿದೆ. ಅಂತಹ ಕೆಲವು ಕಥೆಗಳು ನಿಮಗೂ ಅಚ್ಚರಿ ಉಂಟು ಮಾಡುತ್ತೆ.
ಇನ್ನು ಶ್ರೀರಾಮ ಮತ್ತು ಕರ್ನಾಟಕದ ನಡುವ ಅವಿನಾಭಾವ ಸಂಬಂಧವಿದೆ. ರಾಮ ವನವಾಸದ ಸಮಯದಲ್ಲಿ ಕರ್ನಾಟಕ್ಕೆ ಬಂದಿದ್ದ ಎಂಬ ಕುರಿತು ಹಲವು ಕಡೆ ಉಲ್ಲೇಖವಿದೆ. ರಾಜ್ಯದ ಹತ್ತಾರು ಕಡೆಗಳಲ್ಲಿ ಶ್ರೀರಾಮನ ಇರುವಿಕೆಯ ಕುರಿತು ದಾಖಲೆಗಳಿವೆ. ಅಂತಹ ಕೆಲ ಸ್ಥಳಗಳ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.

ಹಂಪಿಗೆ ಬಂದಿದ್ದನಂತೆ ಶ್ರೀರಾಮ
ರಾಮಾಯಣದಲ್ಲಿ ಕಿಷ್ಕಿಂದೆ ಎಂದು ಕರೆಯಲಾಗಿರುವ ಪಟ್ಟಣ ಈಗಿನ ಹಂಪಿ ಎಂಬ ಉಲ್ಲೇಖವಿದೆ. ಈ ಹಂಪಿಗೂ ಅಯೋಧ್ಯೆಯ ರಾಮನಿಗೂ ಸಂಬಂಧವಿದೆ. ಸೀತೆಯನ್ನು ಹುಡುಕುತ್ತಾ ಬಂದಿದ್ದ ರಾಮ ಹಂಪಿಯಲ್ಲಿ ತಂಗಿದ್ದ ಎನ್ನಲಾಗಿದೆ. ಹಂಪಿಯಲ್ಲಿರುವ ರಘೂನಾಥ ದೇವಾಲಯದಲ್ಲಿ ತಪಸ್ಸಿಗೆ ಕುಳಿತಿದ್ದ ಎನ್ನಲಾಗಿದ್ದು, ಈ ಗಲೂ ಇಲ್ಲಿ ಶ್ರೀರಾಮ ತಪಸ್ಸು ಮಾಡುತ್ತಿರುವ ಮೂರ್ತಿ ಇದೆ. ಸೀತೆಯನ್ನ ಅರಸುತ್ತಾ ಹಂಪಿಗೆ ಬಂದ ಶ್ರೀರಾಮ ಸುಗ್ರೀವನ ಕೂಡಿಕೊಳ್ಳುತ್ತಾನೆ. ಅಲ್ಲದೆ ಸೀತೆಯ ಹುಡುಕಲು ಆತನ ಬಳಿ ನೆರವು ಕೇಳುತ್ತಾನೆ. ಆಗ ವಾಲಿ-ಸುಗ್ರೀವರ ನಡುವೆ ನಡೆದ ಯುದ್ದದಲ್ಲಿ ಶ್ರೀರಾಮ ವಾಲಿಯನ್ನು ಸಂಹಾರ ಮಾಡುತ್ತಾನೆ. ಹೀಗೆ ಸುಗ್ರೀವ ವಾಸವಾಗಿದ್ದ ಗುಹೆಯನ್ನ ಈಗಲೂ ಹಂಪಿಯಲ್ಲಿ ಕಾಣಬಹುದಾಗಿದೆ.
ಬ್ರಹ್ಮಗಿರಿ ಬೆಟ್ಟ
ರಾವಣ ಸೀತೆಯನ್ನ ಅಪಹರಿಸಿದ ವೇಳೆ ರಾಮ, ಲಕ್ಷ್ಮಣರಿಬ್ಬರು ಸೀತೆಯನ್ನು ಹುಡುಕಿ ಬ್ರಹ್ಮಗಿರಿ ಬೆಟ್ಟಕ್ಕೆ ಬಂದಿದ್ದರು ಎಂಬ ಮಾತಿದೆ. ಈ ವೇಳೆ ಲಕ್ಷ್ಮಣನ ಬಾಣದಿಂದ ಹುಟ್ಟಿದ ತೀರ್ಥವೆ ಈ ಲಕ್ಷ್ಮಣ ತೀರ್ಥ ಎನ್ನಲಾಗಿದೆ. ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟುವ ಲಕ್ಷ್ಮಣ ತೀರ್ಥ ನದಿ ಮೈಸೂರು ಜಿಲ್ಲೆಯ ಹುಣಸೂರು ಸಮೀಪ ಕಾವೇರಿ ನದಿ ಸೇರುತ್ತದೆ.
ರಾಮ ನಾಮ ಚಿಲುಮೆ
ತುಮಕೂರಿನ ಈ ವಿಶಿಷ್ಟ ಸ್ಥಳ ಶ್ರೀರಾಮನ ಆಗಮನದ ಕುರುಹು ತನ್ನಲ್ಲಿಟ್ಟುಕೊಂಡಿದೆ. ರಾಮ, ಸೀತೆ, ಲಕ್ಷ್ಮಣರು ತಮ್ಮ ವನವಾಸದಲ್ಲಿ ಇಂದಿನ ನಾಮದ ಚಿಲುಮೆಯನ್ನು ತಮ್ಮ ಹಳ್ಳಕೊಳ್ಳಗಳಲ್ಲಿ ಒಂದಾಗಿಸಿಕೊಂಡಿದ್ದರು. ಇಲ್ಲಿ ತಂಗಿದ್ದ ಸಮಯದಲ್ಲಿ ಒಂದು ದಿನ ರಾಮನು ತನ್ನ ಹಣೆಗೆ ತಿಲಕವನ್ನು ಹಚ್ಚಲು ನೀರನ್ನು ಹುಡುಕಲು ಹೊರಟನು. ನೀರಿಗಾಗಿ ದೀರ್ಘ ಮತ್ತು ಪ್ರಯಾಸಕರ ಹುಡುಕಾಟ ನಡೆಸುತ್ತಿರುವ ಸಮಯದಲ್ಲಿ ಆ ಒರಟು ಭೂಪ್ರದೇಶದಲ್ಲಿ ನೀರು ಸಿಗಲಿಲ್ಲ. ನಂತರ ಒಂದು ಬಂಡೆಯ ಮೇಲೆ ಬಾಣವನ್ನು ಹೊಡೆದನು ನಂತರ ಆ ಬಂಡೆಯಲ್ಲಿ ರಂಧ್ರವು ಮೂಡಿ ನೀರು ಹೊರಹೊಮ್ಮಿತು. ಆ ನೀರನ್ನು ತೆಗೆದುಕೊಂಡು ರಾಮನು ತನ್ನ ಹಣೆಗೆ ನಾಮವನ್ನು ಧರಿಸಿದ ಎಂಬ ಪುರಾತನ ಕಥೆಯಿದೆ. ಹಾಗಾಗಿ ಈ ಚಿಲುಮೆಗೆ ನಾಮ ಚಿಲುಮೆ ಎಂಬ ಹೆಸರು ಬಂದಿದೆ. ಇಲ್ಲಿ ಬೇಸಿಗೆಯಲ್ಲೂ ನೀರು ಚಿಮ್ಮುವುದು ವಿಸ್ಮಯ ಹುಟ್ಟಿಸುತ್ತದೆ.
ರಾಮನ ಪ್ರತೀಕವಾಗಿ ಅಂಬುತೀರ್ಥ
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಅಂಬುತೀರ್ಥ ಶ್ರೀರಾಮನ ಬಾಣದಿಂದ ಹುಟ್ಟಿದ ತೀರ್ಥವಾಗಿದೆ. ಸೀತೆ ಜೊತೆ ಆತ ನೆಲೆಸಿದ್ದ ವೇಳೆ ತನ್ನದ ಕೆಲಸಗಳಿಗಾಗಿ ನೀರು ಅರಸುತ್ತಿದ್ದ, ಹೀಗಾಗಿ ಬಾಣವನ್ನು ಬಿಟ್ಟು ಅಲ್ಲಿಯೇ ತೀರ್ಥೋದ್ಭವವಕ್ಕೆ ಕಾರಣವಾಗಿದ್ದ. ಹೀಗಾಗಿ ಈ ಸ್ಥಳಕ್ಕೆ ಅಂಬುತೀರ್ಥ ಎಂಬ ಹೆಸರಿಗೆ ಅಂಬು ಎಂದರೆ ಬಾಣ ಎಂದರ್ಥ. ಈ ಅಂಬುತೀರ್ಥವೇ ಶರಾವತಿ ನದಿಯಾಗಿ ಹರಿಯುತ್ತದೆ. ಅಲ್ಲದೆ ಸಾಗರದಲ್ಲಿ ಜೋಗ ಜಲಪಾತವಾಗಿ ಬೋರ್ಗರೆಯುತ್ತದೆ.
ಶಬರಿ ರಾಮನಿಗೆ ಕಾದಿದ್ದು
ರಾಮಾಯಣದಲ್ಲಿ ನಾವು ಕೇಳಿರುವ ಶಬರಿ ಕತೆಗೂ ಕರ್ನಾಟಕಕ್ಕೂ ನಂಟಿದೆ. ಶಬರಿ ರಾಮನಿಗಾಗಿ ಕಾದಿದ್ದು ಬೇರೆಲ್ಲೂ ಅಲ್ಲ ಬೆಳಗಾವಿಯ ರಾಮದುರ್ಗದ ಸುರೇಬಾನ ಗ್ರಾಮದಲ್ಲಿ. ರಾಮ ಲಕ್ಷ್ಮಣನೊಂದಿಗೆ ವನವಾಸಕ್ಕೆ ಬರುವ ಮಾರ್ಗದಲ್ಲಿ ಶಬರಿ ರಾಮನಿಗಾಗಿ ತಾನು ಸಂಗ್ರಹಿಸಿದ ಬೋರೆ ಹಣ್ಣುಗಳನ್ನು ನೀಡಿದ್ದು ಇಲ್ಲಿಯೇ ಎಂದು ನಂಬಲಾಗಿದೆ.



Click it and Unblock the Notifications