Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
2024ರಲ್ಲಿ ಬರೋಬ್ಬರಿ 24 ದಿನ ಮದ್ಯ ಮಾರಾಟ ಬಂದ್? ಯಾವಾಗ ನೋಡಿ..
2023ಕ್ಕೆ ಗುಡ್‌ಬೈ ಹೇಳಿ 2024ನ್ನು ಬರಮಾಡಿಕೊಳ್ಳಲು ನಾವೆಲ್ಲ ಉತ್ಸುಕರಾಗಿದ್ದೇವೆ. ಅಲ್ಲದೆ 2024ರಲ್ಲಿ ಯಾವೆಲ್ಲಾ ದಿನ ಏನೆಲ್ಲಾ ವಿಶೇಷ ಹಬ್ಬಗಳು, ರಾಷ್ಟ್ರೀಯ ಹಬ್ಬಗಳು ಬಂದಿವೆ ಎಂಬ ಕುತೂಹಲವಿದೆ. ಅದರಲ್ಲೂ ಯಾವೆಲ್ಲಾ ದಿನದಲ್ಲಿ ಮದ್ಯ ಮಾರಾಟ ಬಂದ್ ಆಗಿರಲಿದೆ. ಎಷ್ಟು ದಿನ ಈ ವರ್ಷ ಮದ್ಯ ಮಾರಾಟದ ಮೇಲೆ ನಿಷೇಧರಲಿದೆ ಎಂಬ ಮಾಹಿತಿ ಇಲ್ಲಿದೆ..
2024ರಲ್ಲಿ ಬರೋಬ್ಬರು 24 ದಿನಗಳ ಕಾಲ ಮದ್ಯದಂಗಡಿಗಳು ಬಂದ್ ಆಗಿರಲಿದೆ. ಅಂದರೆ 24 ಹಬ್ಬಗಳ ವೇಳೆ ಮದ್ಯ ಮಾರಾಟ ನಿಷೇಧವಿರಲಿದೆ. ಇದರ ಜೊತೆ ಮುಂದಿ ವರ್ಷ ಲೋಕಸಭಾ ಚುನಾವಣೆ ಸಹ ಘೋಷಣೆಯಾಗಲಿದ್ದು, ಈ ಚುನಾವಣೆ ವೇಳೆ ಹಾಗೂ ಫಲಿತಾಂಶ ವೇಳೆ ಮದ್ಯ ಮಾರಾಟ ಬಂದ್ ಇರಲಿದೆ. ಇದನ್ನು ಹೊರತುಪಡಿಸಿ ಸ್ಥಳೀಯ ಮಟ್ಟದಲ್ಲಿ ಜಿಲ್ಲಾಡಳಿತಗಳು ಕೆಲವೊಮ್ಮೆ ಮದ್ಯ ಮಾರಾಟದ ಮೇಲೆ ನಿಷೇಧ ಹೇರುವ ಸಂಭವವೂ ಇರಲಿದೆ.

ಹಾಗಾದರೆ ಯಾವೆಲ್ಲಾ ದಿನಗಳಲ್ಲಿ ಮದ್ಯ ಮಾರಾಟ ನಿಷೇಧವಿರಲಿದೆ ನೋಡೋಣ.
ಜನವರಿ
15 ಜನವರಿ, ಸೋಮವಾರ: ಮಕರ ಸಂಕ್ರಾಂತಿ
26 ಜನವರಿ, ಶುಕ್ರವಾರ: ಗಣರಾಜ್ಯೋತ್ಸವ
30 ಜನವರಿ, ಬುಧವಾರ: ಶಹೀದ್ ದಿವಸ್ (ಮಹಾರಾಷ್ಟ್ರದಲ್ಲಿ ಮಾತ್ರ)
ಫೆಬ್ರವರಿ
19 ಫೆಬ್ರವರಿ, ಸೋಮವಾರ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಮಹಾರಾಷ್ಟ್ರದಲ್ಲಿ ಮಾತ್ರ)
ಮಾರ್ಚ್
ಮಾರ್ಚ್ 5, ಮಂಗಳವಾರ: ಸ್ವಾಮಿ ದಯಾನಂದ ಸರಸ್ವತಿ ಜಯಂತಿ
ಮಾರ್ಚ್ 8, ಶುಕ್ರವಾರ: ಶಿವರಾತ್ರಿ
25 ಮಾರ್ಚ್, ಸೋಮವಾರ: ಹೋಳಿ
29 ಮಾರ್ಚ್, ಶುಕ್ರವಾರ: ಶುಭ ಶುಕ್ರವಾರ (ಗುಡ್ ಫ್ರೈಡೆ)
ಏಪ್ರಿಲ್
10 ಏಪ್ರಿಲ್, ಬುಧವಾರ: ಈದ್ ಉಲ್-ಫಿತರ್
14 ಏಪ್ರಿಲ್, ಶನಿವಾರ: ಅಂಬೇಡ್ಕರ್ ಜಯಂತಿ
ಏಪ್ರಿಲ್ 17, ಬುಧವಾರ: ರಾಮ ನವಮಿ
21 ಏಪ್ರಿಲ್, ಭಾನುವಾರ: ಮಹಾವೀರ ಜಯಂತಿ
ಮೇ
1 ಮೇ, ಸೋಮವಾರ: ಮಹಾರಾಷ್ಟ್ರ ದಿನ (ಮಹಾರಾಷ್ಟ್ರದಲ್ಲಿ ಮಾತ್ರ)
ಜುಲೈ
17 ಜುಲೈ, ಬುಧವಾರ: ಮೊಹರಂ ಮತ್ತು ಆಷಾಡ ಏಕಾದಶಿ
ಜುಲೈ 21, ಭಾನುವಾರ: ಗುರು ಪೂರ್ಣಿಮೆ
ಆಗಸ್ಟ್
15 ಆಗಸ್ಟ್, ಬುಧವಾರ: ಸ್ವಾತಂತ್ರ್ಯ ದಿನ
26 ಆಗಸ್ಟ್, ಸೋಮವಾರ: ಕೃಷ್ಣ ಜನ್ಮಾಷ್ಠಮಿ
ಸೆಪ್ಟೆಂಬರ್
7 ಸೆಪ್ಟೆಂಬರ್, ಶನಿವಾರ: ಗಣೇಶ ಚತುರ್ಥಿ (ಮಹಾರಾಷ್ಟ್ರದಲ್ಲಿ ಮಾತ್ರ)
17 ಸೆಪ್ಟೆಂಬರ್, ಮಂಗಳವಾರ: ಈದ್-ಎ-ಮಿಲಾದ್ ಮತ್ತು ಅನಂತ ಚತುರ್ದಶಿ
ಅಕ್ಟೋಬರ್
2 ಅಕ್ಟೋಬರ್, ಮಂಗಳವಾರ: ಗಾಂಧಿ ಜಯಂತಿ
8 ಅಕ್ಟೋಬರ್, ಸೋಮವಾರ: ನಿಷೇಧ ವಾರ (ಮಹಾರಾಷ್ಟ್ರದಲ್ಲಿ ಮಾತ್ರ)
12 ಅಕ್ಟೋಬರ್, ಶನಿವಾರ: ದಸರಾ
17 ಅಕ್ಟೋಬರ್, ಗುರುವಾರ: ಮಹರ್ಷಿ ವಾಲ್ಮೀಕಿ ಜಯಂತಿ
ನವೆಂಬರ್
1 ನವೆಂಬರ್, ಶುಕ್ರವಾರ: ದೀಪಾವಳಿ
12 ನವೆಂಬರ್, ಮಂಗಳವಾರ: ಕಾರ್ತಿಕ ಏಕಾದಶಿ
15 ನವೆಂಬರ್, ಶುಕ್ರವಾರ: ಗುರುನಾನಕ್ ಜಯಂತಿ
ಡಿಸೆಂಬರ್
25 ಡಿಸೆಂಬರ್, ಮಂಗಳವಾರ: ಕ್ರಿಸ್‌ಮಸ್
ಇದಿಷ್ಟು ದಿನಗಳ ಹೊರತುಪಡಿಸಿ ಉಳಿದಂತೆ ಆಯಾ ಸ್ಥಳೀಯ ಮಟ್ಟದಲ್ಲಿ ಯಾವ ಸಮಯದಲ್ಲಿ ಮದ್ಯ ಮಾರಾಟ ಬಂದ್ ಮಾಡಬೇಕು ಎಂಬುದು ಸ್ಥಳೀಯಾಡಳಿತಕ್ಕೆ ಬಿಡಲಾಗಿರುತ್ತದೆ. ಅಲ್ಲದೆ ಚುನಾವಣಾ ಸಮಯದಲ್ಲಿ ಮದ್ಯ ಮಾರಾಟ ಬಂದ್ ಆಗಿರಲಿದೆ.



Click it and Unblock the Notifications
