Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಚೆನಾಬ್ ಬ್ರಿಡ್ಜ್ ನಾಳೆ ಲೋಕಾರ್ಪಣೆ.!
ಜಮ್ಮು ಮತ್ತು ಕಾಶ್ಮೀರ ಭಾರತದ ಅತ್ಯಂತ ಸುಂದರ ಪ್ರದೇಶಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಪ್ರವಾಸಿ ಸ್ಥಳಗಳ ಪೈಕಿ ಜಮ್ಮು ಮತ್ತು ಕಾಶ್ಮೀರ ಅತೀ ಹೆಚ್ಚು ಪ್ರವಾಸಿಗರ ಸೆಳೆಯುತ್ತಿದೆ. ಹೀಗಾಗಿ ಅಲ್ಲಿನ ರಸ್ತೆ, ರೈಲು ಸೇವೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಮೇಲ್ದೆರ್ಜೆಗೆ ಏರಿಸುವ ಕೆಸಲ ನಡೆಯುತ್ತಲೇ ಇದೆ.
ಇದೀಗ ಈ ಸಾಲಿಗೆ ಹೊಸ ಸೇವೆ ಸೇರಿಕೊಳ್ಳುತ್ತಿದೆ. ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ ನಾಳೆ ಉದ್ಘಾಟನೆಗೊಳ್ಳುತ್ತಿದೆ. ಚೆನಾಬ್ ಸೇತುವೆ ಭಾರತದ ಅತ್ಯಂತ ದುಬಾರಿ ಸೇತುವೆಯಾಗಿದ್ದು, ವಿಶ್ವದ ಎತ್ತರದ ಸೇತುವೆ ಅಂತಲೂ ಹೆಸರಾಗಿದೆ. ಇದರ ಜೊತೆ ನಾಳೆ ಕಾಶ್ಮೀರದಲ್ಲಿ ಮೊದಲ ಎಲೆಕ್ಟ್ರಿಕ್ ರೈಲನ್ನು ಉದ್ಘಾಟಿಸಲಿದ್ದಾರೆ.
ಬನಿಹಾಲ್‌ನಿಂದ ಸಂಗಲ್ದಾನ್ ವಿಭಾಗಕ್ಕೆ 48 ಕಿಲೋಮೀಟರ್ ರೈಲು ಸಂಪರ್ಕವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಸಜ್ಜಾಗಿದ್ದಾರೆ. ಮಂಗಳವಾರ ಶ್ರೀನಗರ ರೈಲು ನಿಲ್ದಾಣದಿಂದ ಕಾಶ್ಮೀರದ ಮೊದಲ ಎಲೆಕ್ಟ್ರಿಕ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಜಮ್ಮು ಕಾಶ್ಮೀರ ಭೇಟಿಯ ಸಂದರ್ಭದಲ್ಲಿ ರೂ 3,161 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ / ಅಡಿಪಾಯ ಹಾಕಲಿದ್ದಾರೆ. ಸಾಂಬಾ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿ ಏಮ್ಸ್, ರಿಯಾಸಿ ಜಿಲ್ಲೆಯ ಅತಿ ಎತ್ತರದ ರೈಲ್ವೆ ಸೇತುವೆ, ದೇವಿಕಾ ಪುನರುಜ್ಜೀವನ ಯೋಜನೆ, ಶಹಪುರ್ ಕಂಡಿ ಯೋಜನೆ, IIM ಜಮ್ಮು, ಜಮ್ಮು ಮತ್ತು ಕಾಶ್ಮೀರ ಎರಡೂ ವಿಭಾಗಗಳಲ್ಲಿನ ಹಲವಾರು ಪ್ರಮುಖ ರಸ್ತೆಗಳು ಮತ್ತು ಯೋಜನೆಗಳು ಪ್ರಧಾನಮಂತ್ರಿಯವರು ಉದ್ಘಾಟನೆ ಮಾಡಲಿರುವ ಯೋಜನೆಗಳಾಗಿವೆ.
ಇದರ ನಂತರ 48.1 ಕಿಲೋಮೀಟರ್ ಬನಿಹಾಲ್-ಖಾರಿ-ಸುಂಬರ್-ಸಂಗಲ್ದನ್ ವಿಭಾಗದಲ್ಲಿ ರೈಲು ಸೇವೆಗಳ ಉದ್ಘಾಟನೆ ನಡೆಯಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವಿಭಾಗವು ಮೂರು ವಿಭಾಗಗಳನ್ನು ಒಳಗೊಂಡಿದೆ, ಖಾರಿ-ಸುಂಬರ್ 13.6 ಕಿಮೀ ಮತ್ತು ಸುಂಬರ್-ಸಂಗಲ್ದನ್ 19.5 ಕಿಮೀ ವ್ಯಾಪಿಸಿದೆ, ಇದರ ಪರಿಣಾಮವಾಗಿ ಒಟ್ಟು 33.42 ಕಿಮೀ ಉದ್ದದ ಮಾರ್ಗಕ್ಕೆ ರೈಲು ಸಂಚಾರ ಸಿಗಲಿದೆ.
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೆನಾಬ್ ಸೇತುವೆಯನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು ರಿಯಾಸಿಯಲ್ಲಿ 1.3 ಕಿ.ಮೀ ವರೆಗೆ ವ್ಯಾಪಿಸಿದೆ, ಚೆನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿ ಈ ಸೇತುವೆ ಇದ್ದು, ಐಫೆಲ್ ಟವರ್ ಎತ್ತರಕ್ಕಿಂತ ಇದು 35 ಮೀಟರ್ ಮೀರಿಸಿ, ಈ ಎಂಜಿನಿಯರಿಂಗ್ ಅದ್ಭುತವು ನಿಜವಾಗಿಯೂ ಆಧುನಿಕ ಆವಿಷ್ಕಾರಕ್ಕೆ ಸಾಕ್ಷಿಯಾಗಿದೆ.
ಮಹತ್ವಾಕಾಂಕ್ಷೆಯ USBRL (ಉದಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ) ಯೋಜನೆಯ ಭಾಗವಾಗಿ, ಸಂಪೂರ್ಣ ರೈಲ್ವೆ ಜಾಲವನ್ನು 272 ಕಿಮೀ ದೂರವನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ.
ಈ ಸೇತುವೆಯ ವಿಶೇಷವೇನು?
ಈ ಸೇತುವೆಯನ್ನು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾ-ಬನಿಹಾಲ್ ರೈಲು ವಿಭಾಗದಲ್ಲಿ ನಿರ್ಮಾಣಗೊಂಡಿದೆ. ಸುಮಾರು 1,315 ಮೀಟರ್ ಉದ್ದವಿದ್ದು, ಚೆನಾಬ್ ನದಿಯಿಂದ ಬರೋಬ್ಬರಿ 359 ಮೀಟರ್ ಎತ್ತರದಲ್ಲಿದೆ.
ಈ ಸೇತುವೆಯು 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದು ವಿಶ್ವದ ಅತ್ಯಂತ ಎತ್ತರ ರೈಲು ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೊದಲು ಈ ಸೇತುವೆಯ ಫೋಟೋವನ್ನು ರೈಲ್ವೆ ಇಲಾಖೆ ಹಂಚಿಕೊಂಡಿತ್ತು. ಮೋಡಗಳಿಗಿಂತಲೂ ಮೇಲಿರುವ ಸೇತುವೆ ನೋಡಲು ಸುಂದರವಾಗಿ ಕಾಣುತ್ತಿತ್ತು. ಇದನ್ನು ಭಾರತೀಯ ರೈಲ್ವೆ ಇಂಜಿನಿಯರಿಂಗ್‌ನ ಅದ್ಭುತ ಎಂದು ಕರೆಯಲಾಗಿದೆ.



Click it and Unblock the Notifications