Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿಚಿತ್ರ ಆಹಾರ..ಕಪ್ಪು ಇರುವೆಯ ಕಾಕ್‌ಟೈಲ್ ಸೇವಿಸಿದ ವ್ಯಕ್ತಿ..!
ಇತ್ತೀಚಿನ ದಿನಗಳಲ್ಲಿ ನಾವು ಚಿತ್ರ ವಿಚಿತ್ರ ರೀತಿಯ ಫುಡ್‌ಗಳನ್ನು ನೋಡಿದ್ದೇವೆ. ಅದ್ರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಭರದಲ್ಲಿ ಜನ ಯಾವ ರೀತಿಯ ಫುಡ್ ಬೇಕಾದರು ತಿನ್ನುವ ಒಂದಿಷ್ಟು ಅಸಹ್ಯಕರ ವಿಡಿಯೋಗಳು ಸಹ ಹರಿದಾಡುತ್ತವೆ. ಆದ್ರೆ ಇಲ್ಲೊಬ್ಬ ಬೇರೆಯದ್ದೇ ಕಾರಣಕ್ಕೆ ಸುದ್ದಿಯಾಗಿದ್ದಾನೆ.
ಮುಂಬೈ ಮೂಲದ ಕಂಟೆಂಡ್ ಕ್ರಿಯೇಟರ್ ನಿತಿನ್ ತಿವಾರಿ ಈಗ ಇರುವೆಯ ಕಾಕ್‌ಟೈಲ್ ಸೇವಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆಕ್ರೋಶವೂ ಕೇಳಿಬಂದಿದೆ. ಮುಂಬೈನ ಬಾಂದ್ರಾದ ಹಿಲ್ ರೋಡ್‌ನಲ್ಲಿರುವ ಸೀಫಾ ರೆಸ್ಟೋರೆಂಟ್‌ನಲ್ಲಿ ಈ ರೀತಿ ಕಪ್ಪು ಇರುವೆಯ ಕಾಕ್‌ಟೈಲ್ ನೀಡುತ್ತಾರೆ ಎಂದು ಹೇಳಲಾಗಿದೆ.
ವೀಡಿಯೊದಲ್ಲಿ, ವ್ಲಾಗರ್ ಕಾಕ್‌ಟೈಲ್ ಸೇವಿಸಿ ರುಚಿಕರ ಎಂದು ವಿವರಿಸುವುದಲ್ಲದೆ, ಮೆನು ಕಾರ್ಡ್‌ನಲ್ಲಿ ಸ್ನೀಕ್ ಪೀಕ್ ಅನ್ನು ಒದಗಿಸುತ್ತದೆ, ಪಾನೀಯದ ಹೆಸರು 'ದಿ ಆಂಟ್ಜ್' ಎಂಬುದಾಗಿ ಬರೆಯಲಾಗಿದೆ. ಇದರಲ್ಲಿ ಮೆಜ್ಕಲ್, ಟಕಿಲಾ ಬ್ಲಾಂಕೊ, ದ್ರಾಕ್ಷಿಹಣ್ಣು, ವೆಟಿವರ್, ಸಲೈನ್ ಮತ್ತು, ವಿಶೇಷವಾಗಿ, ಕಪ್ಪು ಇರುವೆಗಳನ್ನು ಹಾಕಲಾಗಿದೆ.
"ಸೀಫಾ_ಹಿಲ್‌ರೋಡ್‌ನಂತೆ ಇರುವೆಗಳೊಂದಿಗೆ ಕಾಕ್‌ಟೇಲ್ ಅನ್ನು ಅಲಂಕರಿಸಿ. ನೀವು ಈ ಕಾಕ್‌ಟೈಲ್ ಅನ್ನು ಟ್ರೈ ಮಾಡುತ್ತೀರಾ? ಕಾಕ್‌ಟೈಲ್‌ಗಳನ್ನು ಇಷ್ಟಪಡುವ ಮತ್ತು ಈ ಕಾಕ್‌ಟೈಲ್ ಅನ್ನು ಪ್ರಯತ್ನಿಸಲು ಉತ್ಸುಕರಾಗಿರುವ ನಿಮ್ಮ ಸ್ನೇಹಿತರೊಂದಿಗೆ ಈ ವಿಡಿಯೋ ಹಂಚಿಕೊಳ್ಳಿ, ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ.

ಈ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಇದೇ ಮೊದಲ ಬಾರಿಗೆ ಇರುವೆ ಕಾಕ್‌ಟೈಲ್ ಕಂಡ ಜನ ಬೆರಗಾಗಿದ್ದಾರೆ. ಜೊತೆಗೆ ಇನ್ನೂ ಕೆಲವರು ಈ ವಿಡಿಯೋ ವಿರುದ್ಧ ಕಿಡಿಕಾರಿದ್ದಾರೆ. "ಅವರು ಇರುವೆಗಳನ್ನು ಹುರಿದಿದ್ದಾರೆಯೇ ಅಥವಾ ಜೀವಂತ ಇರುವೆಗಳ ಹಾಕಿದ್ದಾರೆಯೇ? ಎಂದು ಓರ್ವ ಬಳಕೆದಾರ ಪ್ರಶ್ನಿಸಿದ್ದಾರೆ.
"ನಾವು ಇದನ್ನು ಪ್ರಚಾರ ಮಾಡಿದರೆ ನಾವು ಶೀಘ್ರದಲ್ಲೇ ಚೀನಾದಂತೆಯೇ ಇರುತ್ತೇವೆ. ಹುಡುಗರೇ ಎಚ್ಚರವಾಗಿರಬೇಕು. ಈ ರೀತಿಯ ಬಾರ್ ಅನ್ನು ಮುಚ್ಚಲು ನಾನು ಬಲವಾಗಿ ಶಿಫಾರಸು ಮಾಡುತ್ತೇವೆ' ಎಂದು ಮತ್ತೋರ್ವ ಪ್ರತಿಕ್ರಿಯಿಸಿದ್ದಾನೆ. ಇನ್ನೂ ಕೆಲವರು ಇರುವೆಗಳನ್ನು ಈ ರೀತಿ ಆಹಾರವಾಗಿ ಬಳಸುವುದು ನಮ್ಮ ಸಂಸ್ಕೃತಿಯಲ್ಲ. ಇರುವೆಗಳನ್ನು ಪಾನಿಯದೊಂದಿಗೆ ಬೆರೆಸುವುದು ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದಿದ್ದಾರೆ.
ನಮ್ಮ ದೇಶದಲ್ಲಿ ಮಾತ್ರ ಅಲ್ಲ ಹಲವು ದೇಶದಲ್ಲಿ ಚಿತ್ರ ವಿಚಿತ್ರ ರೀತಿಯ ಆಹಾರಗಳಿವೆ. ಅದರಲ್ಲೂ ಇಂಡೋನೇಷ್ಯಾದಲ್ಲಿ ಫ್ರುಟ್ ಬ್ಯಾಡ್ ಸೂಪ್ ಹೆಸರುವಾಸಿದ್ದು ಬಾವಲಿಯನ್ನುಕೊಂದು ತಯಾರಿಸಲಾಗುತ್ತದೆ. ಇದನ್ನು ಕಾಯಿಸಿದ ತೆಂಗಿನ ಹಾಲಿಗೆ ಹಾಕಿ ತಯಾರು ಮಾಡುತ್ತಾರೆ. ಇನ್ನು ಕೊರಿಯಾ ದೇಶದಲ್ಲಿ ಸಣಾಬೀಚಿ ಎಂಬ ಆಹಾರವನ್ನು ಹೆಚ್ಚು ಇಷ್ಟ ಪಡುತ್ತಾರೆ. ಸಣಾಬೀಚಿ ಎಂಬ ಸಜೀವ ಆಕ್ಟೋಪಸ್ಗಳನ್ನು ಹಸಿಯಾಗಿ ಸೇವಿಸುತ್ತಾರೆ.
ಏಷ್ಯನ್ ಫ್ಲೇಮ್ಸ್ ಎಂಬ ಬೆಂಕಿನ ಜಾತಿಗೆ ಸೇರಿದ ಪ್ರಾಣಿಯು ಕಾಫಿ ಬೀಜವನ್ನು ತಿಂದು ಬಳಿಕ ಮಲ ವಿಸರ್ಜನೆ ಮಾಡುತ್ತದೆ. ಈ ಮಲವನ್ನು ಒಟ್ಟು ಮಾಡಿ ಅದರಿಂದ ಕಾಫಿಯನ್ನು ತಯಾರಿಸಲಾಗುತ್ತದೆ. ಇದು ವಿಶ್ವದ ದುಬಾರಿ ಕಾಫಿಯಾಗಿದೆ.
ಹಸುವಿನ ಮೆದುಳು ತಿನ್ನುತ್ತಾರೆ
ಅಮೆರಿಕದಲ್ಲಿ ಹಸುವನ್ನು ಆಹಾರವಾಗಿ ಬಳಕೆ ಮಾಡುತ್ತಾರೆ. ಇನ್ನು ಹಸುವಿನ ಮೆದುಳನ್ನು ಅವರು ಅರ್ಧ ಬೇಯಿಸಿ ಬಳಿಕ ಬ್ರೆಡ್ ಜೊತೆ ಸೇವಿಸುತ್ತಾರೆ. ಇದನ್ನು ನಾನ್‌ವೆಜ್ ಸ್ಯಾಂಡ್‌ವಿಚ್ ರೀತಿ ಅವರು ಸೇವಿಸುತ್ತಾರೆ. ಆದರೆ ಹಸುವಿನಲ್ಲಿ ಸಾಂಕ್ರಾಮಿಕ ಕಾಯಿಲೆ ಹೆಚ್ಚಾದ ಬಳಿಕ ಈ ಆಹಾರ ಅಮೆರಿಕದಲ್ಲಿ ನಿಷೇಧಗೊಂಡಿದೆ.
ಕೋಳಿ ಕಾಲಿನ ಫ್ರೈ
ಪೂರ್ವ ಏಷ್ಯಾ, ಕೆರಿಬಿಯನ್, ದಕ್ಷಿಣ ಅಮೆರಿಕಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೋಳಿ ಕಾಲುಗಳನ್ನು ಫ್ರೈ ಮಾಡಿ ಸೇವಿಸುತ್ತಾರೆ. ಕಾಲನ್ನು ಕತ್ತರಿಸಿದ ಬಳಿಕ ಅದಕ್ಕೆ ಹಿಟ್ಟನ್ನು ಮೆತ್ತಿ ಎಣ್ಣೆಯಲ್ಲಿ ಬಿಡುತ್ತಾರೆ. ಆದರೆ ಅದನ್ನು ಅರ್ಧ ಬೇಯಿಸಿ ಬಳಿಕ ಮೊಸರಿನಲ್ಲಿ ಅದ್ದಿಡುತ್ತಾರೆ. ಇದರಿಂದ ಕೋಳಿಯ ಕಾಲು ಮೃದುವಾಗಿ ಸೇವಿಸಲು ರುಚಿಕರವಾಗಲಿದ್ಯಂತೆ.



Click it and Unblock the Notifications