Latest Updates
-
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್
ತಲೆ ಎರಡು ದೇಹ ಅಂಟಿಕೊಂಡಿದ್ದ ಅವಳಿಗಳ ನೆನಪಿದೆಯೇ? ಅದೇ ಮಕ್ಕಳಾ ಇವರು?
ಕೆಲವು ವರ್ಷಗಳ ಹಿಂದೆ ಒಂದು ದೇಹ ಹಾಗೂ ಎರಡು ತಲೆಯಾಗಿ ಜನಿಸಿದ ಮಕ್ಕಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಪ್ರತ್ಯೇಕಿಸಿದ ಸುದ್ದಿ ಓದಿರುವುದು ನಿಮಗೆ ನೆನಪಿರಬಹುದು. ಈಗ ಆ ಮಕ್ಕಳು ಹೇಗಿದ್ದಾರೆ, ಅವರಿಬ್ಬರು ಈಗ ಹೇಗೆ ಕಾಣುತ್ತಿದ್ದಾರೆ ಎಂಬುವುದರ ಬಗ್ಗೆ ನೋಡೋಣ ಬನ್ನಿ:

ಹೊಟ್ಟೆ, ಎದೆ ಭಾಗ ಅಂಟಿಕೊಂಡು ಮುಖಗಳು ಎದುರು ಬದುರಾಗಿ ಹುಟ್ಟಿದ ಮಕ್ಕಳು
ಈ ಮಕ್ಕಳ ಹೆಸರು ಅಬ್ಬೆ ಮತ್ತು ಇಸಬೆಲ್ಲೆ, ಇವರಿಬ್ಬರು ಎದೆಭಾಗ ಮತ್ತು ಹೊಟ್ಟೆಯ ಭಾಗ ಅಂಟಿಕೊಂಡಂತೆ ಇರುತ್ತದೆ. ಈ ಮಕ್ಕಳನ್ನು ಪರೀಕ್ಷೆ ಮಾಡಿದಾಗ ಅವರ ಹೃದಯಗಳು ಒಂದಕ್ಕೊಂದು ಅಂಟಿಕೊಂಡಿರುತ್ತದೆ, ಪಿತ್ತಜನಕಾಂಗ ಜೋಡಣೆಯಾಗಿತ್ತು, ಕರುಳುಗಳು ಒಂದಕ್ಕೊಂದು ಅಂಟಿಕೊಂಡಿತ್ತು.
ಈ ಮಕ್ಕಳ ಶಸ್ತ್ರ ಚಿಕಿತ್ಸೆ ಮಾಡುವುದೇ ವೈದ್ಯ ಲೋಕಕ್ಕೆ ಸವಾಲಾಗಿತ್ತು
ಡಾ. ಮೋಯಿರ್ ಈ ಮಕ್ಕಳನ್ನು ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿಕೊಂಡಿದ್ದರು. ಆದರೆ ಇಬ್ಬರ ಪ್ರಾಣಕ್ಕೆ ಅಪಾಯ ಉಂಟಾಗದಂತೆ ಇವರಿಬ್ಬರನ್ನು ಬೇರ್ಪಡಿಸುವುದೇ ದೊಡ್ಡ ಸವಾಲಾಗಿತ್ತು. 30 ಸರ್ಜನ್‌ಗಳ ಗುಂಪು ಇವರುಗಳಿಗೆ ಆಪರೇಷನ್ ಕಾರ್ಯ ಮಾಡಿದರು. ಇವರಿಗೆ ಒಂದರ ಹಿಂದೆ ಮತ್ತೊಂದು ಎಂಬಂತೆ ಒಟ್ಟು 10 ವರ್ಷ ಆಸ್ತ್ರ ಚಿಕಿತ್ಸೆ ಮಾಡಿದ್ದಾರೆ. 10 ವರ್ಷದ ಬಳಿಕ ಅವರಿಬ್ಬರನ್ನೂ ಸಂಪೂರ್ಣವಾಗಿ ಬೇರ್ಪಡಿಸುವಲ್ಲಿ ವೈದ್ಯ ಲೋಕ ಸಕ್ಸಸ್ ಆಯ್ತು.
ದೇಹ ಒಂದಾಗಿದ್ದರೂ ಇಬ್ಬರ ಪರ್ಸನಾಲಿಟಿ ಭಿನ್ನವಾಗಿತ್ತು
ಅಬ್ಬೆ ಮತ್ತು ಇಸ್ಸೆಬೆಲ್ಲೆ ಜನಿಸಿದ ದಿನದಿಂದಲೂ ಇಬ್ಬರ ಗುಣಗಳೂ, ಸ್ವಭಾವ ಸಂಪೂರ್ಣ ಭಿನ್ನವಾಗಿರುತ್ತದೆ. ಬೆಲ್ಲೆ ಅಳುತ್ತಿದ್ದರೆ ಇಸೆಬೆಲ್ಲೆ ನಿದ್ದೆ ಮಾಡುತ್ತಿದ್ದಳು, ಒಬ್ಬಳು ಎದ್ದಿದ್ದರೆ ಮತ್ತೊಬ್ಬಳು ನಿದ್ದೆ ಮಾಡುತ್ತಿರುವವಳನ್ನು ಹೊಡೆಯುತ್ತಿದ್ದಳು,ಅದರಲ್ಲಿ ಅಬ್ಬೆ ತುಂಬಾನೇ ಸೆನ್ಸಿಟಿವ್ ಅಲ್ಲದೆ ಹೈಪರ್ ಆಕ್ಟಿವ್, ಇಬ್ಬರು ಒಬ್ಬರನ್ನೊಬ್ಬರ ಕೈ ಹಿಡಿದು ಮಾಲ್‌ನಲ್ಲಿ ನಡೆಯುವಾಗ ಪರಸ್ಪರ ದೇಹಗಳು ಅಂಟಿಕೊಂಡಿರುವುದು ನೋಡಿರುವಾಗ ಜನರು ಕೌತುಕದಿಂದ ಅವರನ್ನು ನೋಡುತ್ತಿದ್ದರು.
ನವೆಂಬರ್ 29ಕ್ಕೆ 18ನೇ ವರ್ಷದ ಹುಟ್ಟುಹಬ್ಬ ಆಚರಿಸಲಿದ್ದಾರೆ
ಇವರಿಬ್ಬರನ್ನ ಅವರಿಗೆ 10 ವರ್ಷ ಇರುವಾಗ ಮೇ 12ಕ್ಕೆ ಪ್ರತ್ಯೇಕ ಮಾಡಲಾಯ್ತು. ಈಗ ಅವರಿಬ್ಬರು ಹೇಗಿದ್ದಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಫೋಟೋ...
isabelle.carlsen ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇವರು ಶೇರ್ ಮಡಿರುವ ಫೋಟೋಗಳು ತುಂಬಾನೇ ಆಕರ್ಷಕವಾಗಿವೆ, ಇಬ್ಬರು ರೂಪವಂತೆಯರು, ಇಬ್ಬರು ಅವರದ್ದೇ ಆದ ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ, ಅಬ್ಬೆಗೆ ಬೇಕಾದ ಕಡೆ ಅವಳು ಹೋಗಬಹುದು, ಇಬ್ಬರು ಅಂಟಕೊಂಡು ಓಡಾಡಬೇಕಾಗಿಲ್ಲ, ಇಬ್ಬರು ಆರೋಗ್ಯವಂತರಾಗಿದ್ದಾರೆ ಎಂಬುವುದು ಮತ್ತೊಂದು ವಿಶೇಷ.
God has certainly blessed you two sweethearts ! I hope you both live long and healthy lives ! ❤️🙏😊💕😃 ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.



Click it and Unblock the Notifications
