Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಚಿಲ್ಲರೆ ಮಾರುಕಟ್ಟೆ ದೈತ್ಯ ಬಿಗ್‌ಬಜಾರ್‌ಗೆ ಏನಾಯಿತು..!? ಕಿಶೋರ್ ಬಿಯಾನಿ ಸಾಮ್ರಾಜ್ಯ ಮುಳುಗಿದ್ದು ಹೇಗೆ?
ನೀವು ಕೆಲವೇ ಕೆಲವು ವರ್ಷದ ಹಿಂದೆ ದೊಡ್ಡ ದೊಡ್ಡ ಮಾಲ್‌ಗಳಂತೆ ದೊಡ್ಡ ಕಟ್ಟಡದಲ್ಲಿ ಬಿಗ್ ಬಜಾರ್ ಎಂಬ ಶಾಪಿಂಗ್ ಮಾಲ್ ನೋಡಿರಬಹುದು, ಆದ್ರೆ ಈಗ ಒಂದೇ ಒಂದು ಬಿಗ್ ಬಜಾರ್ ನಿಮ್ಮ ಕಣ್ಣ ಮುಂದೆ ಕಾಣಿಸಲ್ಲ. ಒಂದು ಕಾಲದಲ್ಲಿ ಬಿಗ್ ಬಜಾರ್ ಶಾಪ್ ತೆರೆಯುವುದನ್ನೇ ಜನ ಕಾಯುತ್ತಾ ಕುಳಿತ್ತಿದ್ದರು. ಮುಂಬೈನಲ್ಲಿ ಮೊದಲ ಬ್ರಾಂಚ್ ತೆರೆದಾಗ ಅಲ್ಲಿದ್ದ ಜನರ ಕ್ರೇಜ್ ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು.
ಹಾಗಾದ್ರೆ ಬಿಗ್ ಬಜಾರ್ ಸೋತಿದ್ಯಾಕೆ? ಒಂದೇ ಒಂದು ನಗರದಲ್ಲಿ ಈಗ ಬಿಗ್ ಬಜಾರ್ ನೋಡಲು ಸಾಧ್ಯವಾಗುತ್ತಿಲ್ಲ ಏಕೆ ಎಂಬುದು ನಿಮಗೆ ಗೊತ್ತಾ? ಬಿಗ್ ಬಜಾರ್ ಸೋಲಿಗು ಮುನ್ನ ಈ ರೀಟೈಲ್ ಕಿಂಗ್ ಹುಟ್ಟಿದ್ದು ಹೇಗೆ? ಇದನ್ನು ಆರಂಭಿಸಿದ್ದು ಯಾರು ಎಂಬುದನ್ನು ತಿಳಿಯೋಣ.

ಕೇವಲ ಬಟ್ಟೆ ವ್ಯಪಾರಿಯಾಗಿದ್ದ ಕಿಶೋರ್ ಬಿಯಾನಿ ಎಂಬಾತ ಕಟ್ಟಿ ಬೆಳೆಸಿದ ಸಾವಿರಾರು ಕೋಟಿ ಕಂಪನಿ ಇದು. ಪ್ಯೂಚರ್ ಗ್ರೂಪ್ ಹೆಸರು ನೀವು ಕೇಳಿದ್ದರೆ ಅದರ ಸಂಸ್ಥಾಪಕ ಇವರು, ಅದರ ಅಡಿಯಲ್ಲಿ ಬಿಗ್ ಬಜಾರ್, ಪ್ಯಾಂಟಲೂನ್, ಸೆಂಟ್ರಲ್ ಮಾಲ್ ಹೀಗೆ ಈ ಕಂಪನಿ ಹೆಸರು ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ಈಗ ಒಂದು ಹೆಸರು ಕೂಡ ಅವರ ಮಾಲಿಕತ್ವದಲ್ಲಿ ಇಲ್ಲ.
ಚಿಲ್ಲರೆ ವ್ಯಾಪಾರ ವಲಯದ ದೊರೆ ಎಂದು ಈ ಕಿಶೋರ್ ಬಿಯಾನಿ ಅವರನ್ನು ಕರೆಯಲಾಗಿತ್ತು. ಆಗಸ್ಟ್ 9, 1961 ರಂದು ರಾಜಸ್ಥಾನದ ಮಧ್ಯಮ ವರ್ಗದ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಅವರು ತಂದೆ ಅವರ ಅಂಗಡಿ ನೊಡಿಕೊಳ್ಳಬೇಕಾದ ಅನಿವಾರ್ಯತೆ ಬಿಟ್ಟು ಬಟ್ಟೆ ವ್ಯಪಾರಕ್ಕೆ ಮುಂದಾದರು. ಅವರು ಆರಂಭದಲ್ಲಿ ಬಟ್ಟೆ ಖರೀದಿಸಿ ತಂದು ಪ್ಯಾಂಟ್ ಹೊಲಿದು ಮಾರಾಟ ಮಾಡಲು ಮುಂದಾದರು. ಮುಂದೆ ಇದೇ ಪ್ಯಾಂಟಲೂನ್ ಎಂಬ ದೊಡ್ಡ ಉದ್ಯಮಕ್ಕೆ ಕಾರಣವಾಯಿತು. ನಿಧಾನಕ್ಕೆ ಪ್ಯಾಂಟಲೂನ್ ಮಳಿಗೆಗಳು ಹುಟ್ಟಿಕೊಂಡವು.
ಆದರೆ 2009ರಲ್ಲಿ ಚಿಲ್ಲರೆ ವಲಯವಾಗಿದ್ದ ಕಿರಾಣಿ ಕ್ಷೇತ್ರದಲ್ಲಿ ಮೈಲಿಗಲ್ಲು ಸೃಷ್ಟಿಸುವ ಬಿಗ್ ಬಜಾರ್ ತೆರೆದರು. ಒಂದೇ ದಿನ 30 ಕೋಟಿ ರೂಪಾಯಿ ವ್ಯವಹಾರ ನಡೆಸಿರುವ ಕೀರ್ತಿ ಕೂಡ ಬಿಗ್ ಬಜಾರ್‌ಗೆ ಇದೆ. ಅನಂತರ ಪ್ರತಿಯೊಂದು ನಗರದಲ್ಲಿ ಬಿಗ್ ಬಜಾರ್ ಬಂದಿತ್ತು. ಎಲ್ಲಿ ನೋಡಿದ್ರು ರಿಯಾಯಿತಿ ದರದಲ್ಲಿ ಮಾರ್ಕೆಟ್ ಹಾಗೆ ಅಲ್ಲಿ ಸಿಗದೆ ವಸ್ತುಗಳೆ ಇರಲಿಲ್ಲ. ಇದು ಭಾರತೀಯ ಗ್ರಾಹಕರ ತನ್ನತ್ತ ಸೆಳೆದಿತ್ತು.
ಆದ್ರೆ ಕೆಲವೇ ವರ್ಷದಲ್ಲಿ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ಕಂಪನಿಯನ್ನು ಸಾಲದ ಸುಳಿಯಲ್ಲಿ ಮುಳುಗಿಸಿತು. ಹತ್ತಾರು ಹೊಸ ಉದ್ಯಮ ಆರಂಭಿಸಿದರು, ಹಾಗೆ ಮಾರುಕಟ್ಟೆಯಲ್ಲಿದ್ದ ಕೆಲವೊಂದು ಸಂಸ್ಥೆಗಳನ್ನು ಖರೀದಿಸಿದರು, ಆದ್ರೆ ಯಾವುದೂ ಕೈ ಹಿಡಿಯಲಿಲ್ಲ. ಹಾಗೆ ಆನ್‌ಲೈನ್ ಮಾರುಕಟ್ಟೆಯಿಂದಾಗಿ ಬಿಗ್ ಬಜಾರ್ ಕುಸಿತ ಕಂಡಿತು.
ಫ್ಲಿಕ್‌ಕಾರ್ಟ್, ಅಮೇಜಾನ್ ಜೊತೆಗೆ ಹೋರಾಟ
ಆರಂಭದಲ್ಲಿಯೇ ಈ ಆನ್‌ಲೈನ್ ಶಾಪಿಂಗ್ ಆಪ್‌ಗಳು ಬಿಗ್ ಬಜಾರ್‌ಗೆ ಅಪಾಯ ತಂದವು. ಸದ್ಯದ ಟ್ರೆಂಡ್‌ಗೆ ಹೊಂದಿಕೊಳ್ಳಲು ಕಿಶೋರ್ ಪರದಾಡಿದರು, ಆಡಳಿತ ಮಂಡಳಿಗಳ ನಿರ್ಧಾರಗಳಲ್ಲಿ ವೈಫಲ್ಯ ಕಾಣುತ್ತಿತ್ತು. ಈ ಆನ್‌ಲೈನ್ ಆಪ್‌ಗಳು ಬಿಗ್ ಬಜಾರ್‌ಗೆ ದೊಡ್ಡ ಹೊಡೆತ ನೀಡದವು, ಕೊನೆಗೂ ಬಿಗ್ ಬಜಾರ್ ಆನ್‌ಲೈನ್‌ಗೆ ಎಂಟ್ರಿಕೊಟ್ಟಿತು. ತನ್ನದೆ ವೆಬ್‌ಜೈಟ್ ಮೂಲಕ ವ್ಯಾಪಾರಕ್ಕೆ ಮುಂದಾಯಿತು. ಆದ್ರೆ ಯಾವುದು ಅವರಂದುಕೊಂಡಂತೆ ನಡೆಯಲಿಲ್ಲ. ಹೀಗಿದ್ದರು ಕಿಶೋರ್ ಬಿಯಾನಿ ಬ್ಯಾಂಕ್‌ನಿಂದ ಸಾಲ ಪಡೆದು ಹೊಸ ಹೊಸ ಉದ್ಯಮ ತೆರೆದರು ಎಲ್ಲವು ನಷ್ಟಕ್ಕೆ ದಾರಿಯಾದವು.
ಒಂದೊಂದೇ ಮಳಿಗೆಗಳು ಮುಚ್ಚಲ್ಪಟ್ಟವು ಬಿಗ್‌ಬಜಾರ್ ರಿಲಾಯನ್ಸ್ ಗ್ರೂಪ್‌ಗೆ ಮಾರಾಟ ಮಾಡಬೇಕಾಯಿತು, ಹಾಗೆ ಪ್ಯಾಂಟಲೂನ್ ಕೂಡ ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸಬೇಕಾಯಿತು. ಅಂತಿಮವಾಗಿ ಕೋವಿಡ್‌ನಲ್ಲಿ ಉಂಟಾದ ಆರ್ಥಿಕ ಸಮಸ್ಯೆಯಿಂದ ಸಂಸ್ಥೆ ಮೇಲೆದ್ದು ಬರುವುದು ಕಷ್ಟವಾಗಿತ್ತು, ಹೀಗಾಗಿ ಎಲ್ಲಾ ಸಂಸ್ಥೆಗಳ ಮಾರಾಟ ಮಾಡಲಾಯಿತು.



Click it and Unblock the Notifications