ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನದಂದು ಧ್ವಜ ಹಾರಿಸುವ ವಿಧಾನ ಭಿನ್ನ..! ಏಕೆ ಗೊತ್ತಾ?

ದೇಶದ ರಾಷ್ಟ್ರಧ್ವಜವು ಘನತೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ಪ್ರತಿ ವರ್ಷ ಧ್ವಜವನ್ನು ಸ್ವಾತಂತ್ರ್ಯ ದಿನಾಚರಣೆ (15 ಆಗಸ್ಟ್) ಮತ್ತು ಗಣರಾಜ್ಯೋತ್ಸವ (ಜನವರಿ 26) ದಂದು ಹಾರಿಸಲಾಗುತ್ತದೆ, ಆದರೆ ಸ್ವಾತಂತ್ರ್ಯ ದಿನಾಚರಣೆಯಂದು ಅಂದರೆ ಆಗಸ್ಟ್ 15 ಮತ್ತು ಗಣರಾಜ್ಯೋತ್ಸವದಂದು ರಾಷ್ಟ್ರಧ್ವವನ್ನು ಹಾರಿಸುವುದರಲ್ಲಿ ಕೆಲವು ವ್ಯತ್ಯಾಸಗಳಿವೆ. ಎರಡೂ ದಿನ ಧ್ವಜಾರೋಹಣ ನಡೆಯುತ್ತದೆ. ಆದರೆ ಈ ಎರಡೂ ವಿಧಾನಗಳಲ್ಲಿ ಬದಲಾವಣೆಗಳಿವೆ.

ಭಾರತ ಈ ವರ್ಷ 75ನೇ ವರ್ಷದ ಗಣರಾಜ್ಯೋತ್ಸವ ಆಚರಿಸುತ್ತಿದೆ. ಈ ಇತಿಹಾಸದ ಬಗ್ಗೆ ನಿಮಗೆ ತಿಳಿದಿದೆ. ಭಾರತ ಸಂವಿಧಾನ ಅಂಗೀಕಾರಗೊಂಡ ದಿನದ ಅಂಗವಾಗಿ ಭಾರತವನ್ನು ಗಣರಾಜ್ಯವಾಗಿ ಘೋಷಿಸಿಕೊಂಡ ಹಿನ್ನೆಲೆ ಈ ದಿನ ಗಣರಾಜ್ಯೋತ್ಸ ಆಚರಣೆಯಲ್ಲಿದೆ. ಆದರೆ ಈ ದಿನ ಧ್ವಜಾರೋಹಣ ನೆರವೇರಿಸುವ ವಿಧಾನದ ಕುರಿತು ಕೆಲ ಅಚ್ಚರಿಯ ವಿಷಯಗಳು ಇಲ್ಲಿವೆ.

Republic Day

ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಹೇಗಿರುತ್ತದೆ?

15 ಆಗಸ್ಟ್ 1947 ರ ಐತಿಹಾಸಿಕ ಘಟನೆಯನ್ನು ಗೌರವಿಸುವ ಹಿನ್ನೆಲೆ ಧ್ವಜಾರೋಹಣವನ್ನು ಮಾಡಲಾಗುತ್ತದೆ. ಈ ದಿನದಂದು, ಧ್ವಜವನ್ನು ಹಗ್ಗದಲ್ಲಿ ಧ್ವಜ ಸ್ಥಂಬದ ಕೆಳಗೆ ಕಟ್ಟಲಾಗುತ್ತದೆ. ನಂತರ ಆದ ಹಗ್ಗವನ್ನು ಅತಿಥಿಗಳು ಎಳೆಯುವ ಮೂಲಕ ಧ್ವಜಾರೋಹಣ ನೆರವೇರುತ್ತದೆ. ತ್ರಿವರ್ಣ ಧ್ವಜವನ್ನು ಸರಿಯಾದ ರೀತಿಯಲ್ಲಿ ಕಟ್ಟಲಾಗಿರುತ್ತದೆ. ಅತಿಥಿಗಳು ಕೇವಲ ಹಗ್ಗವನ್ನು ಮೇಲೆ ಎಳೆಯುತ್ತಾರೆ. ಇದು ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದ ಹಿನ್ನೆಲೆ ನಾವು ಈ ರೀತಿಯಾಗಿ ಬಾವುಟವನ್ನು ಹಾರಿಸುತ್ತೇವೆ. ಇದಕ್ಕೆ ಸಂವಿಧಾನದಲ್ಲಿ ಇದನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಧ್ವಜಾರೋಹಣ ಮಾಡುತ್ತಾರೆ, ಏಕೆಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನದಲ್ಲಿ ಭಾರತದ ಸಂವಿಧಾನವು ಜಾರಿಗೆ ಬರಲಿಲ್ಲ. ಅಧ್ಯಕ್ಷರು (ರಾಷ್ಟ್ರದ ಸಾಂವಿಧಾನಿಕ ಮುಖ್ಯಸ್ಥರು) ಅಲ್ಲಿಯವರೆಗೆ ಅಧಿಕಾರ ವಹಿಸಿಕೊಂಡಿರಲಿಲ್ಲ.

ಗಣರಾಜ್ಯದಲ್ಲಿ ಹೇಗೆ ಹಾರಿಸಲಾಗುತ್ತೆ ತ್ರಿವರ್ಣ ಧ್ವಜ!

ಜನವರಿ 26ರ ದಿನ ಗಣರಾಜ್ಯೋತ್ಸವನ್ನು ದೇಶದಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲೂ ದೇಶದ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಆದ್ರೆ ಈ ದಿನ ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ, ನಂತರ ಹಗ್ಗದಿಂದ ಮೇಲಿಂದಲೇ ಅದನ್ನು ತೆರೆಯಲಾಗುತ್ತದೆ ಮತ್ತು ಹಾರಿಸಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಫ್ಲ್ಯಾಗ್ ಅನ್ ಫರ್ಲಿಂಗ್ ಎಂದು ಕರೆಯಲಾಗುತ್ತದೆ. ಹೀಗಾಗಿ ಫ್ಲ್ಯಾಗ್ ಅನ್ ಫರ್ಲಿಂಗ್ ಮತ್ತು ಫ್ಯ್ಲಾಗ್ ಹೊಯಿಸ್ಟಿಂಗ್ ಎನ್ನುವ ವ್ಯತ್ಯಾಸವನ್ನು ನಾವು ಕಾಣಬಹುದಾಗಿದೆ.ಮತ್ತೊಂದೆಡೆ, ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ದೇಶದಲ್ಲಿ ಸಂವಿಧಾನದ ಅನುಷ್ಠಾನದ ನೆನಪಿಗಾಗಿ ಜನವರಿ 26 ಅನ್ನು ಆಚರಿಸಲಾಗುತ್ತದೆ. ಈ ದಿನ ರಾಷ್ಟ್ರಪತಿಗಳು ಧ್ವಜಾರೋಹಣ ಮಾಡುತ್ತಾರೆ.

ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ದಿನ ಪ್ರಧಾನಿಗಳು ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ ಗಣರಾಜ್ಯೋತ್ಸವ ಕಾರ್ಯಕ್ರಮವು ದೆಹಲಿಯ ರಾಜಪಥದಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಧ್ವಜಾರೋಹಣದಲ್ಲಿ ಭಾಗಿಯಾಗಿರುತ್ತಾರೆ ಹಾಗೂ ಬೇರೆ ದೇಶದ ಅಧ್ಯಕ್ಷ, ಪ್ರಧಾನಿ ಮುಖ್ಯ ಅತಿಥಿಯಾಗಿ ಭಾಗಿಯಾಗಿರುತ್ತಾರೆ.

ರಾಷ್ಟ್ರಪತಿಗಳು ಜನವರಿ 26ರಂದು ಮಾತ್ರ ಏಕೆ ಧ್ವಜಾರೋಹಣ ಮಾಡುತ್ತಾರೆ?

ಪ್ರಧಾನಿ ದೇಶದ ರಾಜಕೀಯ ಮುಖ್ಯಸ್ಥರಾಗಿದ್ದರೆ ರಾಷ್ಟ್ರಪತಿಗಳು ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ. ದೇಶದ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. ಅದಕ್ಕೂ ಮೊದಲು ದೇಶದಲ್ಲಿ ಸಂವಿಧಾನವೂ ಇರಲಿಲ್ಲ, ರಾಷ್ಟ್ರಪತಿಯೂ ಇರಲಿಲ್ಲ. ಈ ಕಾರಣಕ್ಕಾಗಿ, ಪ್ರತಿ ವರ್ಷ ಜನವರಿ 26 ರಂದು ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ.

English summary

The Method Of Hoisting The Flag On Republic Day And Independence Day Is Different..! Do You Know Why?

India is celebrating its 75th Republic Day this year. You know about this history. As part of the day on which the Constitution of India was adopted, India was declared as a republic and this day is celebrated as Republic Day. But here are some surprising facts about the manner in which flag hoisting is performed on this day.
Story first published: Wednesday, January 24, 2024, 11:05 [IST]
X
Desktop Bottom Promotion