Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೀಪಾವಳಿಗೆ ಬಿರಿಯಾನಿ ಆರ್ಡರ್ ಮಾಡಿದ್ದಕ್ಕೆ ಡೆಲಿವರಿ ಬಾಯ್ ಹೀಗಾ ಮಾಡುವುದು?
ಇವತ್ತು ರಜೆಯಿದೆ, ಆರ್ಡರ್ ಮಾಡಿದ ಬಿರಿಯಾನಿ ಬರುತ್ತದೆ, ಅದನ್ನು ತಿಂದು ಆರಾಮವಾಗಿ ಇರೋಣ ಅಂತ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದವನಿಗೆ ಬಿರಿಯಾನಿಯೇನೋ ಬಂತು, ಆದರೆ ಆ ಬಿರಿಯಾನಿ ತಂದುಕೊಟ್ಟ ಡೆಲಿವರಿ ಬಾಯ್ ಬೈಯ್ದ ಪರಿಗೆ ಈತನಿಗೆ ತಾನು ಬಿರಿಯಾನಿ ಆರ್ಡರ್ ಮಾಡಿದ್ದು ತಪ್ಪಾಯ್ತಾ? ಅಯ್ಯೋ ಇದನೀಗ ತಿನ್ನುವುದಾ, ಎಸೆಯುವುದಾ ಎಂಬ ಪರಿಸ್ಥಿತಿ ಎದುರಾಯ್ತು ಎಂದು ಆ ಗ್ರಾಹಕನೇ ತಮಗಾದ ಅನುಭವದ ಬಗ್ಗೆ redditನಲ್ಲಿ ಬರೆದುಕೊಂಡಿದ್ದು Diet Tips for migraine ಎಂಬ ಕ್ಯಾಪಕ್ಷನ್ ಅಡಿಯಲ್ಲಿ ತಮ್ಮ ಕತೆ ಹೇಳಿಕೊಂಡಿದ್ದಾರೆ.

ಗ್ರಾಹಕನಿಗೆ ಬಿರಿಯಾನಿ ತಂದ ವ್ಯಥೆ ಏನು ಎಂದು ನೋಡೋಣ ಬನ್ನಿ:
ಅವರೇ ಹೇಳಿಕೊಂಡಂತೆ 'ಬಿರಿಯಾನಿ ಆರ್ಡರ್ ಮಾಡಿದಾಗ ಬಿರಿಯಾನಿ ಬಂತು, ಒಟಿಪಿ ಹಾಕಿದ ಮೇಲೆ ಬ್ರದರ್ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಾ, ಧರ್ಮದ ಪ್ರಕಾರ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳುತ್ತಾನೆ, ಈತನಿಗೂ ಗಾಬರಿಯಾಗಿ ಏನಾಯ್ತು ಬ್ರದರ್ ಅಂತಾನೆ, ಆಗ ಅವನು ಹೇಳುತ್ತಾನೆ ಚಿಕನ್, ಮಟನ್ ಎಲ್ಲಾ ನೀವು ನಂತರ ಕೂಡ ಸೇವಿಸಬಹುದ, ದೀಪಾವಳಿಗೆ ಸಾತ್ವಿಕ ಆಹಾರ ಸೇವಿಸಿ ಅಲ್ಲಾ, ಆ ಡೆಲಿವರಿ ಬಾಯ್ ಮಾತು ಕೇಳಿದ ಗ್ರಾಹಕನಿಗೆ ಏನು ಹೇಳಬೇಕೆಂಬುವುದೇ ಗೊತ್ತಾಗುವುದಿಲ್ಲ, ಅವನ್ಯಾಕೆ ಆ ರೀತಿ ಅಕ್ಕರೆ ತೋರಿಸಬೇಕು ಎಂದು ತೋಚದೆ ನಿಂತುಕೊಳ್ಳುವಂತಾಯ್ತು ನಾನೀಗ ಏನು ಮಾಡಬೇಕು? ನನ್ನ ಬಳಿ ಅವನ ಹೆಸರು ಮತ್ತು ನಂಬರ್ ಇದೆ, ಅವನಿಗೂ ನನ್ನ ಮನೆ ಗೊತ್ತಿದೆ, ರಿಪೋರ್ಟ್ ಮಾಡಿದ್ರೆ ಅವನು ಬಂದು ಸೀನ್ ಮಾಡಬಹುದು, ಇವತ್ತಿನ ಮೂಡ್ ಹಾಳಾಯ್ತು , ಈಗ ಇತ್ತ ಈ ಬಿರಿಯಾನಿ ತಿನ್ನಕ್ಕೂ ಆಗದ ಪರಿಸ್ಥಿತಿ ಉಂಟಾಯ್ತು ಎಂದು ತಮ್ಮ ಬಿರಿಯಾನಿ ವ್ಯಥೆಯ ಬಗ್ಗೆ ಬರೆದುಕೊಂಡಿದ್ದಾರೆ.
ಡೆಲಿವರಿ ಬಾಯ್ ವರ್ತನೆ ಅಧಿಕ ಪ್ರಸಂಗ ಅನಿಸಿದರೂ ಮುಗ್ಧತೆಯೂ ಎದ್ದು ಕಾಣುತ್ತೆ
ಆತನಿಗೆ ತಾನು ಡೆಲಿವರಿ ಕೊಟ್ಟಾಯ್ತು ಹೊರಟಾಯ್ತು ಎಂದು ಇರಬಹುದಿತ್ತು, ಆದರೆ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಆತನಲ್ಲಿ ಇರಬಹುದು, ಅಲ್ಲದೆ ಆಚಾರ-ವಿಚಾರಗಳನ್ನು ಪಾಲಿಸಿಕೊಂಡು ಹೋಗುವ ವ್ಯಕ್ತಿ ಆಗಿರಬಹುದು. ಹಾಗಾಗಿಯೇ ಆತ ದೀಪಾವಳಿ ಆಗಿ ಏಕೆ ನಾನ್‌ವೆಜ್ ತಿಂತೀರಾ ಎಂದು ಕೇಳಿರಬಹುದು. ಈ ದಿನ ಆ ಡೆಲಿವರಿ ಬಾಯ್ ಅದೃಷ್ಟವೂ ಚೆನ್ನಾಗಿತ್ತು ನಾನು ಏನು ಬೇಕಾದರು ತಿನ್ನುತ್ತೇನೆ ನಿನಗೇನು ಎಂದು ಜಗಳಕ್ಕೆ ನಿಂತಿದ್ದರೆ ಅಲ್ಲಿಯ ಪರಿಸ್ಥಿತಿಯೇ ಬದಲಾಗುತ್ತಿತ್ತು, ಪಾಪ ಆ ಗ್ರಾಹಕ ಏನೂ ಹೇಳಲಿಲ್ಲ.
ಬೇರೆಯವರು ಆಹಾರ ಸೇವಿಸುವಾಗ ಏನೂ ಹೇಳದಿರುವುದು ಸಭ್ಯತೆ
ಅವರು ಏನಾದರೂ ಅವರಿಗೆ ಇಷ್ಟಬಂದಿದ್ದು ತಿನ್ನಲಿ ಅದು ಅವರ ಇಷ್ಟ,ನಾವು ಹೋಗಿ ಈ ದಿನ ನಾನ್‌ವೆಜ್ ತಿಂತೀಯ, ವೆಜ್ ತಿನ್ನು ಅಥವಾ ಅಯ್ಯೇ ಈ ಆಹಾರ ಸೇವನೆ ಮಾಡುತ್ತೀಯ ಎಂದಲ್ಲಾ ಕೇಳುವುದೇ ಅನಾಗರಿಕತೆ, ಒಬ್ಬರು ಅವರಿಗಿಷ್ಟವಾದ ಆಹಾರ ಸೇವಿಸುತ್ತಾರೆ, ನಾವು ನಮ್ಮ ನಂಬಿಕೆ, ಆಚಾರದಂತೆ ಜೀವನ ಮಾಡಬೇಕು. ನಮ್ಮ ಅಭಿಪ್ರಾಯ ಬೇರೆಯವರ ಮೇಲೆ ಹಾಕಲು ಹೋಗಬಾರದು.
ಹಬ್ಬ-ಹರಿದಿನಗಳ ಆಚರಣೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವೂ ಇರುತ್ತದೆ
ನಾವು ದೇವಿ ಪೂಜೆ ಮಾಡುವಾಗ ಸಾತ್ವಿಕ ಆಹಾರ ಸೇವಿಸುತ್ತೇವೆ, ಅದೇ ಬೆಂಗಾಳಿಯರು ದೇವಿಗೆ ಮೀನು ಸಾರು ಮಾಡಿ ನೈವೇದ್ಯವಾಗಿ ಇಡುತ್ತಾರೆ. ಯುಗಾದಿಗೆ ಕೆಲವರು ವೆಜ್ ಮಾತ್ರ ಮಾಡುತ್ತಾರೆ, ಇನ್ನು ಕೆಲವು ಕಡೆ ಯುಗಾದಿ ಕಳೆದು ಮಾರನೇಯ ದಿನ ಹೊಸ ತೊಡಕು ಅಂತ ಮಾಡ್ತಾರೆ. ದೀಪಾವಳಿ ಸಮಯದಲ್ಲಿ ತರ್ಪಣ ನೀಡುತ್ತಾರೆ, ಈ ದಿನ ತೀರಿ ಹೋದ ಪಿತೃಗಳಿಗೆ ಅವರಿಗಿಷ್ಟವಾದ ಆಹಾರ ಮಾಡಿ ಬಡಿಸುತ್ತಾರೆ. ಆವಾಗ ನಾನ್‌ವೆಜ್ ಕೂಡ ಮಾಡುತ್ತಾರೆ ಕೆಲವರು ವೆಜ್ ಮಾತ್ರ ಮಾಡ್ತಾರೆ. ಹೀಗಾಗಿ ಎಲ್ಲರೂ ಒಂದೇ ರೀತಿ ಆಲೋಚಿಸಬೇಕು, ವರ್ತಿಸಬೇಕು ಎಂದು ಭಾವಿಸುವುದು ತಪ್ಪು.
ಡೆಲಿವರಿ ಬಾಯ್ ಹೇಳಿದ ಮಾತಿನಿಂದಾಗ ಆತನಿಗೆ ಬಿರಿಯಾನಿ ತಿನ್ನುವ ಮೂಡ್ ಹಾಳಾಯ್ತು, ಪಾಪ ಆತ ಇನ್ಮುಂದೆ ಇಂಥ ದಿನಗಳಲ್ಲಿ ಬಿರಿಯಾನಿ ಆರ್ಡರ್ ಮಾಡುವುದಕ್ಕೆ ಹಿಂದೇಟು ಹಾಕುವುದು ಗ್ಯಾರಂಟಿ...



Click it and Unblock the Notifications
