Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾನುವಾರದ ದಿನ ಸೂರ್ಯ ಮಂತ್ರವನ್ನು ಪಠಿಸೋದ್ರಿಂದ ಇಷ್ಟೆಲ್ಲಾ ಲಾಭಗಳಿದ್ಯಾ?
ಹಿಂದೂ ಧರ್ಮದಲ್ಲಿ ಮಂತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಮನಸ್ಸು ಮತ್ತು ಆತ್ಮವನ್ನು ಕೇಂದ್ರೀಕರಿಸಲು ಮತ್ತು ಶಾಂತಗೊಳಿಸಲು ಮಂತ್ರಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಇದು ಪ್ರಾಣಾಯಾಮ ಮತ್ತು ಧ್ಯಾನದ ಸಮಯದಲ್ಲಿ ಮತ್ತು ಮಾನಸಿಕ ಸ್ಥಿರತೆಯ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.
ನಿಮಗೆಲ್ಲಾ ಸೂರ್ಯ ಮಂತ್ರದ ಬಗ್ಗೆ ಗೊತ್ತಿರಬಹುದು. ಭಗವಾನ್ ಸೂರ್ಯನನ್ನು ಪೂಜಿಸುವ ಸಂದರ್ಭದಲ್ಲಿ ಈ ಸೂರ್ಯ ಮಂತ್ರವನ್ನು ಹೇಳಲಾಗುತ್ತದೆ. ಅದ್ರಲ್ಲೂ ಭಾನುವಾರದ ದಿನ ಈ ಸೂರ್ಯ ಮಂತ್ರವನ್ನು ಪಠಿಸೋದ್ರಿಂದ ಒರ್ವ ವ್ಯಕ್ತಿಯ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತಂತೆ. ಅಷ್ಟಕ್ಕು ಸೂರ್ಯ ಮಂತ್ರ ಪಠಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿದೆ? ಸೂರ್ಯ ಮಂತ್ರವನ್ನು ಪಠಿಸಲು ಸರಿಯಾದ ವಿಧಾನ ಯಾವುದು? ಇದರಿಂದ ಆಗುವ ಉಪಯೋಗಗಳು ಏನು ಅನ್ನೋದನ್ನು ತಿಳಿಯೋಣ.

ಸೂರ್ಯ ಮಂತ್ರ ಯಾವ ರೀತಿ ಸಹಾಯವಾಗಲಿದೆ?
ಸೂರ್ಯ ಮಂತ್ರವನ್ನು ಪಠಿಸೋದ್ರಿಂದ ನಮ್ಮ ಮನಸ್ಸು ಶಾಂತವಾಗುತ್ತದೆ. ಮತ್ತು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತೆ. ಜ್ಯೋತಿಷ್ಯದ ಪ್ರಕಾರ ಅನೇಕ ಸೂರ್ಯ ಮಂತ್ರಗಳಿವೆ. ಮತ್ತು ಪ್ರತಿಯೊಂದೂ ತನ್ನದೇ ಆದ ಅರ್ಥ ಮತ್ತು ಪ್ರಭಾವವನ್ನು ಹೊಂದಿದೆ. ಸೂರ್ಯ ಮಂತ್ರದ ಪಠಣೆಯಿಂದ ಮನಸ್ಸಿಗೆ ಶಾಂತಿ ದೊರಕುವುದು ಮಾತ್ರವಲ್ಲದೇ ಸಮೃದ್ಧಿಯನ್ನು ಆಕರ್ಷಿಸಲು ಇದು ಸಹಾಯ ಮಾಡುತ್ತದೆ.
ಸಂಪತ್ತು, ಆರೋಗ್ಯ ಮತ್ತು ದೀರ್ಘಾಯುಷ್ಯ ವೃದ್ಧಿ!
ಸೂರ್ಯ ಮಂತ್ರಗಳ ಅರ್ಥವು ಅವುಗಳನ್ನು ಪಠಿಸುವ ವ್ಯಕ್ತಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವುದು ಮತ್ತು ಅವರನ್ನು ಭಕ್ತಿ ಮತ್ತು ನಂಬಿಕೆಯ ಮಾರ್ಗಕ್ಕೆ ಸೆಳೆಯುವುದು. ನಿಮಗಿರುವ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕೂಡ ನೀವು ಪರಿಹಾರವನ್ನು ಕಂಡುಕೊಳ್ಳಬಹುದು. ಸೂರ್ಯದೇವನು ರೋಗಗಳನ್ನು ತೊಡೆದುಹಾಕುತ್ತಾನೆ. ಮತ್ತು ಇಡೀ ಜಗತ್ತನ್ನು ಪುನರುಜ್ಜೀವನಗೊಳಿಸುತ್ತಾನೆ ಎಂದರ್ಥ. ಆದ್ದರಿಂದ ಸಂಪತ್ತು, ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಪಡೆಯಲು ಸೂರ್ಯ ಮಂತ್ರವನ್ನು ಪಠಿಸಿದರೆ ಒಳ್ಳೆಯದು.
ಸೂರ್ಯ ಮಂತ್ರವನ್ನು ಯಾವ ರೀತಿ ಪಠಿಸಬೇಕು?
- ಸೂರ್ಯನು ರವಿವಾರದ ಅಧಿಪತಿಯಾಗಿರುವುದರಿಂದ ಭಾನುವಾರದಂದು ಸೂರ್ಯ ಮಂತ್ರವನ್ನು ಪಠಿಸುವುದು ಒಳ್ಳೆಯದು. ಒಂದು ವೇಳೆ ನೀವು ಈಗಾಗಲೇ ಸೂರ್ಯ ಮಂತ್ರವನ್ನು ಜಪಿಸಲು ಆರಂಭಿಸಿದ್ದರೆ ಭಾನುವಾರದ ದಿನ ಸೂರ್ಯ ಮಂತ್ರ ಜಪಿಸೋದಕ್ಕೆ ಆರಂಭಿಸಲು ಶುಭ ದಿನ.
- ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ನಂತರ ಸೂರ್ಯ ಮಂತ್ರ ಜಪಿಸಲು ಕುಳಿತುಕೊಳ್ಳಬೇಕು. ಸೂರ್ಯ ಉದಯಿಸಿದ ಕ್ಷಣದಿಂದ ಪ್ರಾರ್ಥನೆ ಮತ್ತು ಧ್ಯಾನವನ್ನು ಪ್ರಾರಂಭಿಸಬೇಕು. ಇನ್ನೂ ಮಂತ್ರ ಪಠಣೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಬೇಕು.
- ಮಂತ್ರ ಪಠಣೆಯನ್ನು ಆರಂಭಿಸುವಾಗ ದೇವರಿಗೆ ತಾಜಾ ಹೂವುಗಳನ್ನು ಅರ್ಪಿಸಿ, ಧೂಪ ದ್ರವ್ಯಗಳನ್ನು ಹಚ್ಚಬೇಕು. ಆ ನಂತರ ಮಂತ್ರ ಪಠಣೆಯನ್ನು ಆರಂಭಿಸಿ.
- ಮಂತ್ರ ಪಠಣೆಗೂ ಮೊದಲೂ ಒಂದು ಪಾತ್ರೆಯಲ್ಲಿ ನೀರು ಹಾಗೂ ಕುಂಕುಮವನ್ನು ಇಟ್ಟುಕೊಳ್ಳುವುದು ಕೂಡ ಒಳ್ಳೆಯದು.
- ನಿಮ್ಮ ಮನಸ್ಸು ನಕಾರಾತ್ಮಕ ಮತ್ತು ಕೆಟ್ಟ ಆಲೋಚನೆಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
- ಸೂರ್ಯ ಮಂತ್ರವನ್ನು ಪಠಿಸುವಾಗ ನೀವು ಯಾವುದೇ ರೀತಿಯ ಅಸೂಯೆ ಅಥವಾ ಕೋಪವನ್ನು ನಿಮ್ಮ ಮನಸ್ಸಿನಲ್ಲಿಇಟ್ಟುಕೊಳ್ಳಬಾರದು. ಇದು ಧನಾತ್ಮಕ ಶಕ್ತಿಗಳನ್ನು ತಡೆಯುತ್ತದೆ ಮತ್ತು ಮಂಗಳಕರ ಆಗೋದಕ್ಕೆ ಅಡ್ಡಿಯಾಗುತ್ತದೆ.
ಸೂರ್ಯ ಮಂತ್ರ :
ನಮಃ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೇ,
ಆಯುರಾರೋಗ್ಯ ಮೈಶ್ವೈರ್ಯಂ ದೇಹಿ ದೇವಃ ಜಗತ್ಪತೇ
ಸೂರ್ಯ ನಮಸ್ಕಾರ ಮಂತ್ರ :
ಓಂ ಮಿತ್ರಾಯ ನಮಃ
ಓಂ ರವಾಯ್ರೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪುಷ್ನೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚಯೇ ನಮಃ
ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಸೂರ್ಯ ಬೀಜ ಮಂತ್ರ :
ಓಂ ಹರಂ ಹ್ರೀ ಹ್ರೌಂ ಸಃ ಸೂರ್ಯಾಯ ನಮಃ
ಸೂರ್ಯ ಗಾಯತ್ರಿ ಮಂತ್ರ :
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹಿ ತಾನಃ ಸೂರ್ಯ ಪ್ರಚೋದಯಾತ್
ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡೇ ಧೀಮಹಿ ತನಃ ಸೂರ್ಯ ಪ್ರಚೋದಯಾತ್
ಓಂ ಸಪ್ತ ತುರಂಗಾಯ ವಿದ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್
ಆದಿತ್ಯ ಹೃದಯಂ ಮಂತ್ರ :
ಆದಿತ್ಯನ ಹೃದಯದ ಪುಣ್ಯವೇ ಶತ್ರುನಾಶ
ಜಯವಹಂ ಜಪೇನ್ನಿತ್ಯಂ ಅಕ್ಷಯ ಪರಂ ಶಿವಮ್
ಸೂರ್ಯ ಮಂತ್ರ ಪಠಿಸೋದ್ರಿಂದ ಆಗುವ ಪ್ರಯೋಜನಗಳೇನು?
- ಸೂರ್ಯ ಮಂತ್ರ ಪಠಣವು ದೇಹವನ್ನು ಚೈತನ್ಯಗೊಳಿಸುತ್ತದೆ ಮತ್ತು ಮನಸ್ಸನ್ನು ನಕಾರಾತ್ಮಕ ಆಲೋಚನೆಗಳಿಂದ ಮುಕ್ತಗೊಳಿಸುತ್ತದೆ.
- ಒರ್ವ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಮಟ್ಟವನ್ನು ಕಾಪಾಡುತ್ತದೆ
- ದೃಷ್ಟಿಗೆ ಸಂಬಂಧಿಸಿದ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
- ಸೂರ್ಯ ಮಂತ್ರವನ್ನು ಪಠಿಸುವ ಮತ್ತೊಂದು ಪ್ರಯೋಜನವೆಂದರೆ ಇದು ನಿಮ್ಮ ಗಮನವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
- ಭಗವಾನ್ ಸೂರ್ಯ ಬುದ್ಧಿವಂತಿಕೆಯನ್ನು ನೀಡುತ್ತಾನೆ. ಮತ್ತು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಆನಂದಿಸಲು ಅವಕಾಶ ಮಾಡಿಕೊಡುತ್ತಾನೆ.
- ಸೂರ್ಯ ಮಂತ್ರ ಪಠಿಸೋದ್ರಿಂದ ಸಮೃದ್ಧಿಯನ್ನು ಆಕರ್ಷಿಸಬಹುದು
- ಸೂರ್ಯ ಮಂತ್ರವನ್ನು ಪಠಿಸುವವರು ಜೀವನದಲ್ಲಿ ನಿರ್ಭೀತರಾಗುತ್ತಾರೆ ಮತ್ತು ಜೀವನದಲ್ಲಿ ಅಡೆತಡೆಗಳನ್ನು ಆತ್ಮವಿಶ್ವಾಸ ಮತ್ತು ತಾಳ್ಮೆಯಿಂದ ಎದುರಿಸುತ್ತಾರೆ.
ಸೂರ್ಯ ಮಂತ್ರವನ್ನು ಪಠಿಸೋದ್ರಿಂದ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.



Click it and Unblock the Notifications

