Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Super Blue Moon: ಇಂದು ರಾತ್ರಿ ಗೋಚರಿಸಲಿದೆ ಬ್ಲೂ ಮೂನ್: ಈ ದಿನ ಚಂದ್ರ ತುಂಬಾ ವಿಶೇಷವಾಗಿ ಗೋಚರಿಸಲಿದೆ, ಏಕೆ?
Super Blue Moon: ಆಗಸ್ಟ್ ಈ ದಿನ ಹುಣ್ಣಿಮೆ, ಈ ಹುಣ್ಣಿಮೆ ತುಂಬಾನೇ ವಿಶೇಷ, ಏಕೆಂದರೆ ಈ ದಿನ ಬ್ಲೂ ಮೂನ್ ಡೇ, ಮೀನ ರಾಶಿಯಲ್ಲಿ ಬ್ಲೂ ಮೂನ್ ಸಂಭವಿಸಲಿದೆ. ಈ ಬ್ಲೂ ಮೂನ್ ಎಂದರೇನು? 2023ರ ಬ್ಲೂ ಮೂನ್ ಏಕೆ ತುಂಬಾನೇ ವಿಶೇಷ ಎಂದು ನೋಡೋಣ ಬನ್ನಿ:

ಬ್ಲೂ ಮೂನ್ ಎಂದರೇನು?
ಬ್ಲೂ ಮೂನ್ ಎಂಬುವುದು ತುಂಬಾನೇ ಅಪರೂಪ, ತಿಂಗಳಿಗೆ ಒಂದು ಹುಣ್ಣಿಮೆ ಬರುವುದು, ಆದರೆ ಕೆಲವೊಂದು ತಿಂಗಳಿನಲ್ಲಿ ಎರಡು ಹುಣ್ಣಿಮೆ ಬರುವುದು. ಕೆಲವೊಮ್ಮೆ ತಿಂಗಳ ಮೊದಲ ವಾರದಲ್ಲಿ ಬಂದರೆ ನಂತರ ಹುಣ್ಣಿಮೆ ತಿಂಗಳ ಅಂತ್ಯದ ವೇಳೆ ಎರಡು ಹುಣ್ಣಿಮೆ ಬಂದರೆ ಬ್ಲೂ ಮೂನ್ ಡೇ ಎಂದು ಹೇಳಲಾಗುವುದು. ಕುಂಭದಲ್ಲಿ ಆಗಸ್ಟ್ 1ರಂದು ಹುಣ್ಣಿಮೆ ಬಂದಿತ್ತು, ಇದೀಗ ಆಗಸ್ಟ್ 30ಕ್ಕೆ ಹುಣ್ಣಿಮೆ ಬಂದಿದೆ. ಈ ಎರಡನೇ ಹುಣ್ಣಿಮೆಯನ್ನು ಬ್ಲೂ ಮೂನ್ ಡೇ ಎಂದು ಕರೆಯಲಾಗುವುದು.
ಬ್ಲೂ ಮೂನ್ ಡೇ 2023 ಏಕೆ ತುಂಬಾ ಸ್ಪೆಷಲ್?
ಸೂಪರ್ ಮೂನ್ ಸಮಯದಲ್ಲಿ ನೀವು ಚಂದ್ರನ ಗಾತ್ರ ಸಾಮಾನ್ಯವಾಗಿ ಕಾಣುವುದಕ್ಕಿಂತ ಹೆಚ್ಚು ದೊಡ್ಡದಾಗಿ ಕಾಣಲಿದೆ. ಈ ದಿನ ಚಂದ್ರ ಭೂ ಕಕ್ಷೆಯ ಸಮೀಪಕ್ಕೆ ಬರಲಿದೆ, ಆದ್ದರಿಂದ ಚಂದ್ರ ಸಾಮಾನ್ಯವಾಗಿ ಕಾಣುವುದಕ್ಕಿಂತ ದೊಡ್ಡದಾಗಿ ಕಾಣಲಿದೆ. ಈ ಸಮಯದಲ್ಲಿ ಶೇ. 8ರಿಂದ ಶೇ.16ರಷ್ಟು ದೊಡ್ಡದಾಗಿ ಕಾಣಲಿದೆ.
ನಾಸಾ ಪ್ರಕಾರ ಚಂದ್ರ ವರ್ಷದಲ್ಲಿ 2-3 ಬಾರಿ ಭೂ ಕಕ್ಷೆಯ ಸಮೀಪ ಬರಲಿದೆ. ಹೀಗಾಗಿ ಚಂದ್ರನ ಗಾತ್ರ ದೊಡ್ಡದಾಗಿ ಗೋಚರಿಸಲಿದೆ, ಇದನ್ನು ಸೂಪರ್‌ಮೂನ್ ಎಂದು ಕರೆಯಲಾಗುವುದು. ಈ ದಿನ ಚಂದ್ರ ಭೂಮಿಗೆ 30, 000 ಕಿ. ಮೀ ಸಮೀಪವಿರುವುದರಿಂದ ಚಂದ್ರ ದೊಡ್ಡದಾಗಿ ಗೋಚರಿಸಲಿದೆ.
ಬ್ಲೂ ಮೂನ್ ಸಮಯದಲ್ಲಿ ಸಮುದ್ರದಲ್ಲಿ ಅಲೆಗಳ ಹೊಡೆತ ಅಧಿಕವಿರಲಿದೆ
ಬ್ಲೂ ಮೂನ್‌ಗೂ ಹಾಗೂ ಸಮುದ್ರದ ಅಲೆಗಳ ಏರಳಿತಕ್ಕೂ ಸಂಬಂಧವಿದೆ. ಈ ಅವಧಿಯಲ್ಲಿ ಸಮುದ್ರದ ಅಲೆಗಳ ಹೊಡೆತ ಅಧಿಕವಿರಲಿದೆ. ಈ ಸಮಯದಲ್ಲಿ ಸಮುದ್ರದ ಸಮೀಪ ಹೋಗಬೇಡಿ.



Click it and Unblock the Notifications
