Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮೈಗೆ ಬೆಂಕಿ ಹೊತ್ತಿಸಿಕೊಂಡ ವೇದಿಕೆಗೆ ಬಂದ ವಧು-ವರ..! ವಿಡಿಯೋ ವೈರಲ್
ಮದುವೆ ಕಾರ್ಯಕ್ರಮಗಳೆಂದರೆ ಅಲ್ಲಿ ಸಂಭ್ರಮ ಇರೋದು ಕಾಮನ್, ಅದರಲ್ಲೂ ಹುಡುಗ ಹುಡುಗಿಯ ವಿಶೇಷ ಉಡುಗೆ ತೊಡುಗೆ, ಊಟ ಉಪಚಾರ ಹೀಗೆ ಒಂದಲ್ಲಾ ಒಂದು ಸುದ್ದಿಯಾಗುತ್ತದೆ. ಆದರೆ ಇತ್ತೀಚಿನ ಮದುವೆ ಸಮಾರಂಭಗಳು ಅನಗತ್ಯ ವಿಚಾರಗಳಿಂದಲೇ ಸುದ್ದಿಯಾಗುತ್ತವೆ.
ಅಲ್ಲದೆ ಅಲ್ಲಿ ಯಾರು ನಂಬಲಾಗದಂತಹ ಸಂಭ್ರಮ, ವಿಚಿತ್ರ ಆಚರಣೆಗಳು ನಡೆಯುತ್ತದೆ. ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿಯೂ ಸಹ ಇದೇ ರೀತಿ ಹುಡುಗ ಹುಡುಗಿಯ ವಿಡಿಯೋ ವೈರಲ್ ಆಗಿದೆ. ಅವರು ಬೆಂಕಿಯ ನಡುವೆ ಓಡಿ ಬರುತ್ತಿರುವುದು ನೋಡುಗರ ಎದೆ ಝೆಲ್ ಎನಿಸುತ್ತಿದೆ.

ಹೌದು ಮದುವೆ ಸಂಭ್ರಮದಲ್ಲಿ ಹುಡುಗ ಹುಡುಗಿ ವೇದಿಕೆ ಮೇಲೆ ಬರುವ ಮುನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದು ಇದನ್ನು ಕಂಡ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಮದುವೆ ಸಂಭ್ರಮದ ನಡುವೆ ಈ ರೀತಿ ಹುಚ್ಚಾಟ ಪ್ರದರ್ಶಿಸಿದ ಜೋಡಿ ವಿರುದ್ಧ ಟೀಕೆಗಳು ಸಹ ಕೇಳಿಬಂದಿದ್ದು, ವಿಡಿಯೋ ವೈರಲ್ ಆಗಿದೆ.
ಅಮೆರಿಕದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಹಳೆಯದಾಗಿದ್ದೂ ಹಲವು ವಿಚಾರವಾಗಿ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಅಚ್ಚರಿ ಏನೆಂದರೆ ಸ್ಟಂಟ್ ಪ್ರದರ್ಶನ ಮಾಡುವ ಇವರಿಬ್ಬರು ಮದುವೆಯಾಗುತ್ತಿದ್ದು, ಹೀಗಾಗಿ ಈ ಸಾಹಸಕ್ಕೆ ಮುಂದಾದರಂತೆ.
ವೃತ್ತಿಪರ ಸ್ಟಂಟ್ ಡಬಲ್ಸ್ ಆಗಿರುವ ಗೇಬ್ ಜೆಸ್ಸಾಪ್ ಮತ್ತು ಅಂಬಿರ್ ಬಾಂಬಿರ್ ತಮ್ಮ ಮದುವೆಯ ದಿನದಂದು ಈ ರೀತಿಯ ಸ್ಟಂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸಮಾನ್ಯವಾಗಿ ನವ ದಂಪತಿಯನ್ನು ಹೂವಿನ ಮಳೆಯಲ್ಲಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗುತ್ತದೆ. ಆದರೆ ಇಲ್ಲಿ ಬೆಂಕಿ ಹೊತ್ತಿಸಿಕೊಂಡು ವೇದಿಕೆ ಮೇಲೆ ಬಂದಿದ್ದು ಅಚ್ಚರಿ ಮೂಡಿಸಿದೆ.
ಇಬ್ಬರು ಮೈಗೆ ಬೆಂಕಿ ಹಚ್ಚಿಕೊಂಡು ಓಡಿಬರುತ್ತಿದ್ದರೆ ಹಿಂದೆ ಸುರಕ್ಷತಾ ಕ್ರಮವಾಗಿ ಒಬ್ಬ ಬೆಂಕಿ ನಂದಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಸಹ ನಾವು ನೋಡಬಹುದು.
ಈ ವಿಡಿಯೋ ವೈರಲ್ ಆದ ಬಳಿಕ ಇಬ್ಬರ ಈ ಸಾಹಸ ಕುರಿತು ಜನರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ. ಹಲವರು ಇಂತಹ ಸಾಹಸಕ್ಕೆ ಕೈಹಾಕಬಾರದಂತೆ ಎಚ್ಚರಿಸಿದ್ದಾರೆ. ಈ ವಿಡಿಯೋವನ್ನು ಮಾಡುವ ಮುನ್ನ ಅವರಿಬ್ಬರು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು. ಹಾಗೆ ಮುಖ ಹಾಗೂ ಕೂದಲು ಇಡೀ ದೇಹಕ್ಕೆ ಆಂಟಿ ಬರ್ನ್ ಜೆಲ್ ಹಚ್ಚಿಕೊಂಡಿದ್ದರು. ಜೊತೆಗೆ ಇಬ್ಬರೂ ಸಾಹಸ ಪ್ರೇಮಿಗಳು ದಯವಿಟ್ಟು ಈ ಸಾಹಸವನ್ನು ಮನೆಯಲ್ಲಿ ಯಾರು ಪ್ರಯತ್ನಿಸಬೇಡಿ ಎಂದು ಮನವಿ ಸಹ ಮಾಡಲಾಗಿದೆ.
ಈ ರೀತಿ ಬೆಂಕಿ ಹೊತ್ತಿಕೊಂಡು ತಮಾಷೆ ಮಾಡಲು ಹೋಗಿ ಜೀವಕ್ಕೆ ಹಾನಿಯಾಗಬಹುದು ಎಂಬುದು ನೆಟ್ಟಿಗರ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಅಗರು ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ಮೈ ಮೇಲೆ ಹೊತ್ತಿಕೊಂಡಿರುವ ಬೆಂಕಿ ಕ್ಷಣಾರ್ಧದಲ್ಲಿ ಸುಡಬಹುದು. ಜೊತೆಗೆ ಈ ಸಾಹಸವನ್ನು ನೋಡಿ ಮತ್ತೆ ಒಂದಿಷ್ಟು ಮಂದಿ ಇದನ್ನು ಅನುಸರಿಸಕು ಮುಂದಾಗಿ ಜೀವಕ್ಕೆ ಸಂಚಕಾರ ತಂದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಂಟಿ ಬರ್ನ್ ಜೆಲ್‌ಗಳು ಬಹಳ ಕಾಲ ಬೆಂಕಿಯನ್ನು ತಡೆದುಕೊಳ್ಳುವುದಿಲ್ಲ. ಈ ಜೆಲ್ ಉರಿಯುವರೆಗೆ ಯಾವ ಹಾನಿಯೂ ಕಾಣುವುದಿಲ್ಲ. ಇದು ಉರಿದು ಆವಿಯಾದ ಬಳಿಕ ಬೆಂಕಿ ಆರಿಕೊಳ್ಳುತ್ತದೆ ಅಂತ ಏನಿಲ್ಲ ಬೆಂಕಿಯನ್ನು ತಾವಾಗಿಯೇ ಆರಿಸಬೇಕಾಗುತ್ತದೆ. ಹೀಗಾಗಿ ಇದೊಂದು ಅಪಾಯಕಾರಿ ಸಾಹಸ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಅದರಲ್ಲೂ ಮದುವೆ ಮನೆಯಲ್ಲಿ ಈ ರೀತಿಯ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದು ಮಾತ್ರ ಹಲವರಿಗೆ ಅಚ್ಚರಿ ಮೂಡಿಸಿದೆ. ಆದರೆ ಅವರಿಬ್ಬರು ಈ ಸಾಹಸ ಮಾಡಿ ಜನರು ನಿಬ್ಬೆರಗಾಗುವಂತೆ ಮಾಡಿದ್ದಾರೆ.



Click it and Unblock the Notifications
