Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಿಎಂಡಬ್ಲ್ಯೂ ಕಾರಲ್ಲಿ ಬಂದು ಬೀದಿ ಬದಿ ಅಂಗಡಿ ಹಾಕ್ತಾನೆ..! ಈತ ಈಗ ಕೋಟ್ಯಧಿಪತಿ ಚಾಟ್‌ವಾಲಾ.!
ಭಾರತದಲ್ಲಿ ಬೀದಿ ಬದಿಯ ತಿಂಡಿಗಳು ಎಷ್ಟು ಫೇಮಸ್ ಅನ್ನೋದನ್ನ ತಿಳಿದಿದ್ದೇವೆ. ಸ್ಟಾರ್ ಹೋಟೆಲ್‌ನಂತಹ ರುಚಿಗೆ ಬೀದಿ ಬದಿಯ ಅಂಗಡಿಗಳು, ಗಾಡಿಗಳು ಸವಾಲು ಹಾಕುತ್ತವೆ. ಜೊತೆಗೆ ಗಳಿಕೆಯಲ್ಲೂ ಅವರಿಗಿಂತ ಏನು ಕಡಿಮೆಯಿಲ್ಲ ಎಂದು ಸಹ ತೋರಿಸಿವೆ. ದೊಡ್ಡ ನಗರಗಳಲ್ಲಿ ಬೀದಿ ಬದಿ ಸಾವಿರಾರು ಮಂದಿ ವ್ಯಾಪಾರಿಗಳು ಕಾಣಸಿಗುತ್ತಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ದುಡಿಯುತ್ತಾರೆ.
ಈ ರೀತಿ ಬೀದಿ ಬದಿಯ ಅಂಗಡಿ ತೆರೆಯಬೇಕು, ಗಾಡಿಯಲ್ಲಿ ರುಚಿ ರುಚಿಯ ಖಾದ್ಯ ನೀಡಬೇಕು ಎಂಬುದು ಲಕ್ಷ ಲಕ್ಷ ಮಂದಿಯ ಕನಸಾಗಿರುತ್ತದೆ. ಇದೇ ಕನಸು ಇಟ್ಟುಕೊಂಡು ಮಹಾನಗರಗಳತ್ತ ಜನರು ವಲಸೆ ಬರುತ್ತಾರೆ. ಅದರಲ್ಲಿ ಕೆಲವೇ ಕಲವು ಮಂದಿ ಯಶಸ್ವಿಯೂ ಆಗುತ್ತಾರೆ. ಇದೇ ಬೀದಿ ಬದಿಯ ವ್ಯಾಪಾರ ಅವರ ಜೀವನವನ್ನೇ ಶಾಶ್ವತವಾಗಿ ಬದಲಾಯಿಸಿ ಬಿಡುತ್ತೆ.

ಇಂತಹ ಬೀದಿ ಬದಿ ವ್ಯಾಪಾರ ಮಾಡಿ ಯಶಸ್ಸು ಕಂಡವರಲ್ಲಿ ಈ ಶರ್ಮಾಜಿ ಸಹ ಒಬ್ಬರು. ಇವರ ಕಥೆ ಕೇಳಿದರೆ ನೀವು ಸಹ ಅಚ್ಚರಿ ಪಡುತ್ತೀರಿ. ಈ ಶರ್ಮಾಜಿ ದೆಹಲಿಯ ಬೀದಿಯಲ್ಲಿ ಆಹಾರ ವ್ಯಾಪಾರ ಮಾಡುತ್ತಿದ್ದವರು. ಈಗ ಕಾರಿನಲ್ಲಿ ಬಂದು ಅದೇ ಆಹಾರ ನೀಡುತ್ತಾರೆ. ಅದು ಅಂತಿತ ಕಾರಲ್ಲ ಐಷಾರಾಮಿ ಕಾರು. ಹೌದು ಬೀದಿ ಬದಿ ಫುಡ್ ಮಾರಾಟ ಮಾಡಿ ಈಗ ಕೋಟ್ಯಧಿತಿಯಾಗಿದ್ದಾರೆ.
ದೆಹಲಿಯ ನೆಹರೂ ಪ್ಲೇಸ್‌ನಲ್ಲಿರುವ ಜನಪ್ರಿಯ ಶರ್ಮಾ ಚಾಟ್ ತನ್ನ ರುಚಿಗೆ ಹೆಸರುವಾಸಿಯಾಗಿದೆ. ಇಲ್ಲಿಯೇ ಶರ್ಮಾಜಿ ದಹಿ ಭಲ್ಲಾ ಮಾರಾಟ ಮಾಡಿ ಕೋಟ್ಯಂತರ ರೂ. ಮಾಲೀಕರಾಗಿದ್ದಾರೆ. ಶರ್ಮಾ ಜಿ ಚಾಟ್ ಭಂಡಾರ್ ಅತ್ಯಂತ ರುಚಿಯಲ್ಲಿ ಕಡಿಮೆ ದರದಲ್ಲಿ ಫುಡ್ ನೀಡುತ್ತಿದ್ದರು ಹೀಗಾಗಿ ಅವರನ್ನು ಹುಡುಕಿ ಕೊಂಡು ಗ್ರಾಹಕರು ಬರುತ್ತಿದ್ದರು.
2 ರೂಪಾಯಿಯಿಂದ 40 ರೂಪಾಯಿಗೆ
ಇವರ ಕಥೆ ಬೀದಿಯಲ್ಲೇ ಆರಂಭಗೊಂಡಿತ್ತು. ದೆಹಲಿ ಬೀದಿ ಬೀದಿ ಅಲೆದ ಅವರು ಧಹಿ ಭಲ್ಲ ಖಾದ್ಯ ಮಾರಾಟ ಮಾಡಲು ನಿರ್ಧರಿಸಿದರು. ಇದಕ್ಕಾಗಿ ಚಿಕ್ಕ ಗಾಡಿಯನ್ನು ರೆಡಿ ಮಾಡಿಕೊಂಡರು. ಆರಂಭದಲ್ಲಿ ಒಂದು ಪ್ಲೇಟ್ ಧಹಿ ಭಲ್ಲಗೆ ಕೇವಲ 2 ರೂಪಾಯಿ ಆಗಿತ್ತು. ಬರುಬರುತ್ತಾ ಇವರ ರುಚಿ ಕಂಡ ಗ್ರಾಹಕರು ಅಂಗಡಿ ಮುಂದೆ ಸಾಲು ನಿಲ್ಲಲು ಆರಂಭಿಸಿದರು. 2 ರೂಪಾಯಿ ಇದ್ದ ಒಂದು ಪ್ಲೇಟ್ ದರ ಇಂದು 40 ರೂಪಾಯಿಯಾಗಿದೆ. ಅಷ್ಟೊಂದು ಫೇಮಸ್ ಆಗಿದ್ದಾರೆ ಈ ಶರ್ಮಾ ಜಿ.
ದಶಕಗಳಿಂದ ಬೀದಿಯಲ್ಲೇ ವ್ಯಾಪಾರ
ಶರ್ಮಾಜಿ 1989ರಿಂದ ದೆಹಲಿಯ ಇದೇ ಬೀದಿಯಲ್ಲಿ ವ್ಯಾಪಾರ ಆರಂಭಿಸಿದರು. ಆರಂಭದಲ್ಲಿ ನಿಧಾನವಾಗಿ ಅವರ ವ್ಯಾಪಾರ ಜನರ ಗಮನ ಸೆಳೆಯಲು ಮುಂದಾಗಿತ್ತು. ಆದರೆ ಲಾಭ ಮಾಡಿಕೊಳ್ಳಲು ವರ್ಷಗಳೇ ಕಳೆದರು. ಆದರೆ ತಮ್ಮ ಕಠಿಣ ನಿರ್ಧಾರ ಬದಲಿಸದೆ ವ್ಯಾಪಾರ ಮುಂದುವರೆಸಿದ್ದರು. ಆದರೆ 1995ರಿಂದ ಅವರ ವ್ಯಾಪಾರ ಚೆನ್ನಾಗಿ ನಡೆದಿತ್ತು. ಇತ್ತೀಚಿಗೆ ಅವರು ಶರ್ಮಾಜಿ ಅಂತಲೇ ಫೇಮಸ್ ಆದರು.
ದುಬಾರಿ ಕಾರು ಖರೀದಿಸಿದ ಶರ್ಮಾಜಿ
ಅವರ ವ್ಯಾಪಾರದಲ್ಲಿ ಲಾಭ ಗಳಿಸುವುದು ಹಾಗೆ ಮುಂದುವರೆದಿತ್ತು. ಬಳಿಕ ಮನೆ, ಕಾರು ಎಲ್ಲವೂ ಅವರದ್ದಾಯಿತು. ಇತ್ತೀಚಿಗೆ ಅವರು ಐಷಾರಾಮಿ ಬಿಎಂಡಬ್ಲ್ಯೂ ಕಾರು ಖರೀದಿಸಿದ್ದಾರೆ. ಅದರಲ್ಲಿಯೇ ಆಹಾರಗಳನ್ನು ತಂದು ಮಾರಾಟ ಮಾಡುತ್ತಾರೆ. ಇದು ಜನರ ಗಮನ ಸೆಳೆದಿದ್ದು, ಅವರ ಕೆಲಸದ ಕಡೆಗಿನ ನಿಷ್ಠೆಗೆ ಮೆಚ್ಚುಗೆಯೂ ಕೇಳಿಬಂದಿದೆ.
ಕಾರಿನಲ್ಲಿ ಅಂಗಡಿ
ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಅಂಗಡಿಯ ವಸ್ತುಗಳನ್ನು ತರುತ್ತಾರೆ. ಒಂದು ಟೇಬಲ್, ಮೊಸರು, ನೀರು ಹೀಗೆ ಎಲ್ಲಾ ವಸ್ತುಗಳನ್ನು ಕಾರಿನಲ್ಲಿ ತಂದು ಅವರು ಬೀದಿಯಲ್ಲಿ ಅಂಗಡಿ ಹಾಕಿಕೊಳ್ಳುತ್ತಾರೆ. ಇದನ್ನು ನೋಡುವ ಸುತ್ತಲಿನ ಜನ ಮಾತ್ರ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.



Click it and Unblock the Notifications
