Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸ್ಟ್ರಾಬೆರಿ ಹಣ್ಣು ತಿನ್ನೋರು ಈ ವಿಡಿಯೋ ನೋಡಿ..!
ನೀವು ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳ ಖರೀದಿಸಿ ತಿಂದಿರುತ್ತೀರಿ. ಹೊರಗೆ ಮಾರುಕಟ್ಟೆಗೆ ಬಂದಾಗಲೆಲ್ಲ ಹಣ್ಣುಗಳ ಖರೀದಿಸಿ ಮನೆತೆ ತೆಗೆದುಕೊಂಡು ಹೋಗಿರುತ್ತೀರಿ. ಅದರಲ್ಲೂ ಬೇಸಿಗೆಯಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣುಗಳ ಅವಶ್ಯಕತೆ ಬಹಳಷ್ಟಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಹಣ್ಣುಗಳ ನೀವು ಖರೀದಿಸುತ್ತೀರಿ.
ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದಿಷ್ಟು ಹಣ್ಣು ನೀವು ಸೇವಿಸುವುದರಿಂದ ಪ್ರೋಟೀನ್ ಹಾಗೂ ವಿವಿಧ ರೀತಿಯ ವಿಟಮಿನ್ ಪಡೆಯಲು ಇವು ಸಹಾಯ ಮಾಡಲಿವೆ. ಆದ್ರೆ ನಾವು ಖರೀದಿಸುವ ಹಣ್ಣು ಎಷ್ಟು ಆರೋಗ್ಯಕರ ಸಂಶಗಳ ಹೊಂದಿವೆ ಎಂಬುದು ನಮಗೆ ತಿಳಿದಿರುವುದಿಲ್ಲ.

ನೀವು ಮಾರುಕಟ್ಟೆಯಲ್ಲಿ ಕೆಂಪು ಕೆಂಪು ಹೊಳೆಯುವತಹ ಸ್ಟ್ರಾಬೆರಿ ಹಣ್ಣನ್ನು ಕಂಡು ಬಾಯಲ್ಲಿ ನೀರು ಬಂದಿರಬಹುದು. ಅದನ್ನು ಎಷ್ಟು ಹಣವಾದರು ಸರಿ ಎಂದು ಖರೀದಿ ಮಾಡಿ ಮನೆಗೆ ತಂದು ಬಾಯಿ ಚಪ್ಪರಿಸಿ ತಿಂದಿರಬಹುದು. ಆದ್ರೆ ಇಲ್ಲೊಂದು ಸ್ಟ್ರಾಬೆರಿ ಹಣ್ಣಿನ ವಿಡಿಯೋ ನೀವು ಹಣ್ಣು ಸೇವಿಸುವುದನ್ನೇ ಕೊನೆಗಾಡಿಸಬಹುದು.
ಹೌದು ಈ ವಿಡಿಯೋದಲ್ಲಿ ಸ್ಟ್ರಾಬೆರಿಯನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ವೀಕ್ಷಿಸಿದರೆ ಏನು ಕಾಣಿಸುತ್ತೆ ಅಂತ ತಿಳಿದರೆ ನಿಮಗೂ ಶಾಕ್ ಆಗಬಹುದು. ಈ ಸುಂದರ ಹಣ್ಣಿನ ಒಳಗೆ ಸಣ್ಣ ಸಣ್ಣ ಕೀಟಗಳು ಓಡಾಡುತ್ತಿರುವುದು ಕಂಡುಬರುತ್ತದೆ. ಇವು ಬರಿಗಣ್ಣಿನಿಂದ ಕಾಣುವುದಿಲ್ಲ ಬದಲಿಗೆ ಮೈಕ್ರೋಸ್ಕೋಪ್‌ನಲ್ಲಿ ನೋಡಿದಾಗ ಅದರಲ್ಲಿ ಹುಳುಗಳಂತ ಕೀಟಗಳು ಓಡಾಡುವುದು ಕಾಣುತ್ತದೆ.
ವಿಡಿಯೋದಲ್ಲಿ ಏನಿದೆ?
ಕೈಗೆ ಗ್ಲೌಸ್ ಹಾಕಿರುವ ವ್ಯಕ್ತಿಯೊಬ್ಬ ಸ್ಟ್ರಾಬೆರಿ ಹಣ್ಣನ್ನು ಮೊದಲು ಸೂಕ್ಷ್ಮ ದರ್ಶಕದ ಅಡಿ ಇಡುತ್ತಾನೆ. ಇದರಲ್ಲಿ ಸಣ್ಣ ಸಣ್ಣ ಹುಳುಗಳು ಓಡಾಡುತ್ತಿರುವುದು ಕಾಣುತ್ತದೆ. ಬಳಿಕ ಆತ ಆ ಹಣ್ಣನ್ನು ನೀರಿನಿಂದ ತೊಳೆದು ಮತ್ತೊಮ್ಮೆ ಮೈಕ್ರೋಸ್ಕೋಪ್ ಅಡಿ ಇಡುತ್ತಾನೆ. ಆದ್ರೆ ಈ ವೇಳೆ ಯಾವ ಕೀಟಗಳು ಕಾಣುವುದಿಲ್ಲ.
ಇದಾದ ಬಳಿಕ ಆತ ಸ್ಟ್ರಾಬೆರಿ ಹಣ್ಣನ್ನು ಕತ್ತರಿಸಿ ಸೂಕ್ಷ್ಮ ದರ್ಶಕದ ಅಡಿ ಇಡುತ್ತಾನೆ. ಈಗ ಬೆಚ್ಚಿ ಬೀಳಿಸುವಂತಹ ಅಂಶ ಎದುರಿಗೆ ಬರುತ್ತದೆ. ಅದರಲ್ಲಿ ಸಣ್ಣ ಸಣ್ಣ ಹುಳುಗಳು ಕಾಣಿಸುತ್ತವೆ. ಈ ಹುಳುಗಳು ನೋಡಲು ಅಕ್ಕಿಯಲ್ಲಿ ಬೆಳೆಯುವ ಹುಳುಗಳಂತೆ ಕಾಣುತ್ತವೆ. ಇವು ಹಣ್ಣಿನೊಳಗೆ ಬೆಳೆದು ಅಲ್ಲಿಯೇ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುವ ಹುಳುಗಳಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತವೆ. ಆದರೆ ಎಲ್ಲಾ ಸ್ಟ್ರಾಬೆರಿ ಹಣ್ಣುಗಳ ಒಳಗೂ ಇವು ಇರುತ್ತವೆಯೇ ಎಂಬುದು ಪ್ರಶ್ನೆ ಹುಟ್ಟುಹಾಕಿದೆ.
ಸ್ಟ್ರಾಬೆರಿ ಒಳಗೆ ತೆವಳುತ್ತಿರುವ ಕೀಟಗಳು ಗೋಚರಿಸುವ ಚುಕ್ಕೆ ರೆಕ್ಕೆ ಡ್ರೊಸೊಫಿಲಾ ಸೇರಿದಂತೆ ಹಣ್ಣಿನ ನೊಣಗಳಾಗಿರಬಹುದು. ವಿಶಿಷ್ಟವಾದ ಹಣ್ಣಿನ ನೊಣಗಳಿಗಿಂತ ಭಿನ್ನವಾಗಿ, ಅತಿಯಾದ ಅಥವಾ ಹಾನಿಗೊಳಗಾದ ಹಣ್ಣುಗಳನ್ನು ಆದ್ಯತೆ ನೀಡುತ್ತದೆ, ಮಚ್ಚೆಯುಳ್ಳ ರೆಕ್ಕೆ ಡ್ರೊಸೊಫಿಲಾ ಆರೋಗ್ಯಕರ ಹಣ್ಣುಗಳಲ್ಲಿ ಮೊಟ್ಟೆಗಳನ್ನು ಇಡಬಹುದು.
ಆದರೆ ಈ ಹುಳುಗಳಿಂದ ಹಾನಿ ಏನಿಲ್ಲ
ಈ ಹುಳುಗಳಿಂದ ಮಾನವರ ದೇಹಕ್ಕೆ ಯಾವ ಹಾನಿಯೂ ಇಲ್ಲ ಎಂಬುದು ಕೆಲವರ ವಾದವಾಗಿದೆ. ಏಕೆಂದರೆ ನಾವು ಸೇವಿಸುವ ಬಹುಪಾಲು ಹಣ್ಣು, ಆಹಾರಗಳಲ್ಲಿ ಈ ಕಿಣ್ವಗಳು ಇರಲಿವೆಯಂತೆ. ಇವು ಸಹ ನಮ್ಮ ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್ ನೀಡುತ್ತವೆ ಎಂಬುದು ಚರ್ಚೆಗೂ ಕಾರಣವಾಗಿದೆ.
ಸ್ಟ್ರಾಬೆರಿಯ ಉಪಯೋಗಗಳೇನು?
ಸ್ಟ್ರಾಬೆರಿ ಹಣ್ಣಿನಲ್ಲಿ Ellagic ಆಸಿಡ್ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯ ದೇಹಕ್ಕೆ ದೊರೆಯುತ್ತದೆ.
ಸೌಂದರ್ಯ ರಕ್ಷಣೆಯಲ್ಲಿ ಸ್ಟ್ರಾಬೆರಿ ಮಹತ್ವದ ಪಾತ್ರವನ್ನು ವಹಿಸುತ್ತದೆ, ಬಿಸಿಲಿಗೆ ಹೋದಾಗ ತ್ವಚೆ ರಕ್ಷಣೆಯನ್ನು ಮಾಡುತ್ತದೆ, ಸ್ಟ್ರಾಬೆರಿ ತಿನ್ನುವವರಿಗೆ ಯಾವ Anti aging ಕ್ರೀಮ್ ನ ಅವಶ್ಯಕತೆ ಬೀಳುವುದಿಲ್ಲ.
ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗುತ್ತಾ ಹೋದರೆ ಹೃದಯದ ಆರೋಗ್ಯ ಕಡಿಮೆಯಾಗಿ ಹೃದಯಾಘಾತ ಉಂಟಾಗುವುದು. ಸ್ಟ್ರಾಬೆರಿಯೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಶೇಖರವಾಗಲು ಬಿಡುವುದಿಲ್ಲ.



Click it and Unblock the Notifications