Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೆಹಲಿ ತಾಜ್ ಮಹಲ್ ಅಲ್ಲ.! ಭಾರತದಲ್ಲೇ ಮತ್ತೊಂದು ತಾಜ್ ಇದೆ ಎಂಬುದು ಗೊತ್ತಾ?
ಷಹಜಹಾನ್ ತನ್ನ ಪತ್ನಿಯ ನೆನಪಿಗಾಗಿ ಕಟ್ಟಿಸಿರುವ ಭವ್ಯ ಪ್ರೇಮ ಮಂದಿರ ಎಂದು ಹೆಸರಾಗಿರುವ ತಾಜ್ ಮಹಲ್ ಕುರಿತು ನಿಮಗೆಲ್ಲಾ ತಿಳಿದಿರಬಹುದು. ಹಾಗೆ ಈಗ ಪ್ರೇಮದ ಸಂಕೇತವಾಗಿ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿಯೂ ಗುರುತಿಸಿಕೊಂಡಿರುವ ತಾಜ್ ಮಹಲ್ ಪ್ರಪಂಚದ 7 ಅದ್ಭುತಗಳಲ್ಲಿ ಒಂದಾಗಿದೆ.
ಈ ತಾಜ್ ಮಹಲ್ ನಿರ್ಮಾಣಕ್ಕೆ ಬರೋಬ್ಬರಿ 22 ವರ್ಷ ಸಮಯ ಹಿಡಿದಿತ್ತಂತೆ. ಸಂಪೂರ್ಣ ಅಮೃತ ಶಿಲೆಯಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. ಈ ಸ್ಮಾರಕವನ್ನು 1631 ರಲ್ಲಿ 5ನೇ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜ್ ಅವರ ಸಮಾಧಿಯನ್ನು ಇರಿಸಲು ಹಾಗೆ ಆಕೆ ಪ್ರೀತಿಗೆ ಸಂಕೇತವಾಗಿ ಇದನ್ನು ನಿರ್ಮಿಸಿದ ಎಂದು ಹೇಳಲಾಗಿದೆ. ಆದ್ರೆ ನಮ್ಮದೇ ದೇಶದಲ್ಲಿ ಇನ್ನೊಂದು ತಾಜ್ ಮಹಲ್ ಕೂಡ ಇದೆ ಎಂಬ ಸತ್ಯ ನಿಮಗೆ ಗೊತ್ತಿದ್ಯಾ?

ನೀವು ಇದನ್ನು ಕೇಳಿ ಅಚ್ಚರಿಗೊಳಗಾಗಬಹುದು. ಆಗ್ರಾದಲ್ಲಿರುವ ಒಂದು ತಾಜ್ ಮಹಲ್ ಷಹಜಹಾನ್ ಕಟ್ಟಿಸಿದ್ದ. ಆದ್ರೆ ಮತ್ತೊಂದು ತಾಜ್ ಮಹಲ್ ಕುರಿತು ಬಹುತೇಕರಿಗೆ ತಿಳಿದಿಲ್ಲ. ಅಂದ್ರೆ ಇದೇನು ರಹಸ್ಯವಾಗಿ ಇಡಲಾಗಿಲ್ಲ, ಅಥವಾ ದುರಸ್ಥಿಯಾಗಿ ಮೂಲೆಗೂ ಬಿದ್ದಿಲ್ಲ. ಇಂದಿಗೂ ಗಟ್ಟಿಮುಟ್ಟಾಗಿ ನಿಂತುಕೊಂಡಿದೆ. ಹೀಗಿದ್ದರೂ ಈ ಮಿನಿ ತಾಜ್‌ಮಹಲ್ ಕುರಿತು ತಿಳಿದಿರುವುದು ಬೆರಳೆಣಿಕೆಯ ಜನರಿಗಷ್ಟೇ.
ಹೌದು ಬೇಬಿ ತಾಜ್ ಮಹಲ್, ಡೆಕ್ಕನ್ ತಾಜ್, ಅಥವಾ ಬೀಬಿ ಕಾ ಮಕ್ಬರಾ ಎಂದು ಕರೆಯಲ್ಪಡುವ ಅದ್ಭುತ ರಚನೆಯನ್ನು ಔರಂಗಜೇಬ್ ನಿರ್ಮಿಸಿದ್ದಾನೆ. ತನ್ನ ಪತ್ನಿ ದಿಲ್ರಾಸ್ ಬಾನು ಬೇಗಂ ಅವರ ನೆನಪಿಗಾಗಿ ಈ ಮಿನಿ ತಾಜ್ ಅನ್ನು ಆತ 1660ರಲ್ಲಿ ನಿರ್ಮಿಸಿದ್ದಾನೆ. ಔರಂಗಜೇಬ್ ಮೊಘಲ್ ದೊರೆ ಷಹಜಹಾನ್‌ನ ಪುತ್ರನಾಗಿದ್ದ.
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಈ ಮಿನಿ ತಾಜ್ ಮಹಲ್ ನಿರ್ಮಾಣಗೊಂಡಿದೆ. ಬೀಬಿ ಕಾ ಮಕ್ಬರಾದ ಮುಖ್ಯ ಪ್ರವೇಶ ದ್ವಾರದ ಮೇಲಿನ ಶಾಸನವು ಸಮಾಧಿಯನ್ನು ವಾಸ್ತುಶಿಲ್ಪಿ ಅತಾ-ಉಲ್ಲಾ ಮತ್ತು ಇಂಜಿನಿಯರ್ ಹನ್ಸ್ಪತ್ ರಾಯ್ ವಿನ್ಯಾಸಗೊಳಿಸಿದ್ದಾರೆ. ಅತಾ-ಉಲ್ಲಾ ತಾಜ್ ಮಹಲ್‌ನ ಮುಖ್ಯ ವಾಸ್ತುಶಿಲ್ಪಿ ಉಸ್ತಾದ್ ಅಹ್ಮದ್ ಲಹೌರಿ ಅವರ ಪುತ್ರನಾಗಿದ್ದಾನೆ ಎಂಬುದು ಇಲ್ಲಿ ಗಮನಿಸಬಹುದು.
ದಿಲ್ರಾಸ್ ಬಾನು ಬೇಗಂ ಯಾರು?
ದಿಲ್ರಾಸ್ ಬಾನು ಬೇಗಂ ಪರ್ಷಿಯಾದ ಇರಾನ್‌ನ ಸಫಾವಿದ್ ರಾಜವಂಶದ ರಾಜಕುಮಾರಿಯಾಗಿದ್ದಳು. ಆಕೆ 1637 ರಂದು ರಾಜಕುಮಾರ ಔರಂಗಜೇಬ್ ಅವರನ್ನು ವಿವಾಹವಾದರು. ಆಕೆ ತನ್ನ ಮೂರನೇ ಪುತ್ರನಿಗೆ ಜನ್ಮ ನೀಡುವ ಸಂದರ್ಭದಲ್ಲಿ ತೀವ್ರ ಜ್ವರಕ್ಕೆ ಒಳಗಾದರು. ಆಕೆಯನ್ನು ಉಳಿಸಲು ಔರಂಗಜೇಬ್ ಹಲವು ಪ್ರಯತ್ನ ಮಾಡಿದ್ದ. ಆದ್ರೆ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಳು. ಆಕೆಯ ನೆನಪಿನಲ್ಲಿ ನೊಂದ ದೊರೆ ಔರಂಗಜೇಬ್ ಆಕೆಯ ನೆನಪಿನಲ್ಲಿ ಆಗ್ರಾದಲ್ಲಿದ್ದ ತಾಜ್‌ನಂತೆಯೇ ಔರಂಗಾಬಾದ್‌ನಲ್ಲಿ ಮಿನಿ ತಾಜ್ ನಿರ್ಮಿಸಿದನು ಎಂದು ಹೇಳಲಾಗಿದೆ.
ಆಗ್ರಾದ ತಾಜ್ ಮಹಲ್‌ನಂತೆಯೇ ರಚನೆ ಹೊಂದಿರುವ ಈ ಮಿನಿ ಮಹಲ್ ಇಂದಿಗೂ ಸಾವಿರಾರು ಪ್ರವಾಸಿಗರ ಸೆಳೆಯುತ್ತಿದೆ. ಹಾಗೆ ನೋಡಲು ಸ್ವಲ್ಪ ಚಿಕ್ಕದಾಗಿ ಕಾಣಸಲಿದೆ ಆದ್ರೆ ಎರಡೂ ಕೂಡ ಒಂದೇ ರೀತಿಯಲ್ಲಿ ನಿರ್ಮಿಸಲಾಗಿದೆ. ಆದ್ರೆ ಈ ಕುರಿತಂತೆ ಬಹುತೇಕರಿಗೆ ತಿಳಿದಿಲ್ಲ. ಭಾರತದಲ್ಲಿ ಎರಡು ತಾಜ್ ಮಹಲ್ ಇವೆ ಎಂಬುದನ್ನು ಕೇಳುವುದು ಅಪರೂಪವಾಗಿದೆ.
ಆಗ್ರಾದಲ್ಲಿರುವ ತಾಜ್ ಮಹಲ್ ನಿರ್ಮಾಣ ಕಾರ್ಯಗಳಿಗೆ ಮೊಘಲ್ ಖಜಾನೆ ಮತ್ತು ಆಗ್ರಾ ಪ್ರಾಂತ್ಯದ (ಸುಬಾ ಅಕ್ಬರಾಬಾದ್) ಸರ್ಕಾರದ ಖಜಾನೆಯಿಂದ ಹಣಕಾಸು ಒದಗಿಸಲಾಯಿತು. ತಾಜ್ ಮಹಲ್ ನಿರ್ಮಾಣಕ್ಕೆ ಇಂದಿನ 466 ಕೆ.ಜಿ ಚಿನ್ನಕ್ಕೆ ಸಮನಾದ ಹಣವನ್ನು ಅಂದು ವ್ಯಯಿಸಲಾಗಿತ್ತು. ಬರೋಬ್ಬರಿ 22 ವರ್ಷಗಳ ಕಾಲ ಸಾವಿರಾರು ಕಾರ್ಮಿಕರು ಈ ಕಟ್ಟಡ ನಿರ್ಮಿಸಲು ಮುಂದಾಗಿದ್ದರು.



Click it and Unblock the Notifications