Latest Updates
-
ಆಕಾಶದಲ್ಲಿ ಅದ್ಭುತ ಕೌತುಕ: ನಾಳೆ ರಾತ್ರಿ ಪರ್ಸೀಡ್ ಉಲ್ಕಾಪಾತ ವೀಕ್ಷಿಸಲು ಮಿಸ್ ಮಾಡ್ಬೇಡಿ! -
ಕಾಡಿನ ಅಂಚಿನಲ್ಲಿ ವಾಕಿಂಗ್ ಹೋಗ್ತೀರಾ? ಆನೆಗಳ ಕಾಟ ತಪ್ಪಿಸಲು ಮತ್ತು ಫಿಟ್ ಆಗಿರಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು
ಸಿಂಧೂ ನಾಗರಿಕತೆಯ ಲಿಪಿ ಅರ್ಥೈಸಿದರವರಿಗೆ 8.5 ಕೋಟಿ ಬಹುಮಾನ ಘೋಷಿಸಿದ ಸ್ಟಾಲಿನ್!!
ವಿಶ್ವದ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ಸಿಂಧೂ ಕಣಿವೆ ನಾಗರಿಕತೆ ಕುರಿತು ತಿಳಿದಿರಬಹುದು. ಸುಮಾರು 7 ಸಾವಿರ ವರ್ಷಗಳ ಹಿಂದೆ ಅತ್ಯಂತ ಸೌಲಭ್ಯಗಳ ಆತ್ಯಾಧುನಿಕ ನಗರ ಎಂಬ ಕೀರ್ತಿಗೆ ಸಿಂಧೂ ಕಣಿವೆ ನಾಗರಿಕತೆ ಸಾಕ್ಷಿಯಾಗಿತ್ತು. ಸಿಂಧೂ ಕಣಿವೆ ನಾಗರೀಕತೆಯು ಅದರ ಪ್ರಮುಖ ನಗರ ಕೇಂದ್ರಗಳಾದ ಹರಪ್ಪಾ ಮತ್ತು ಮೊಹೆಂಜೊ-ದಾರೊಗಳಿಗೆ ಹೆಸರುವಾಸಿಯಾಗಿರುವುದು ಕೂಡ ನಾವು ಓದಿದ್ದೇವೆ.
ಈ ನಾಗಕರಿಕತೆ ಹೇಗೆ ಅಂತ್ಯವಾಯಿತು ಎಂಬುದು ಇಂದಿಗೂ ಚರ್ಚಾ ವಿಷಯವಾಗಿಯೇ ಉಳಿದಿದೆ. ಹಲವು ತರ್ಕಗಳು, ವಿಚಾರಗಳು ಜನರ ಮುಂದೆ ಇಟ್ಟಿದ್ದರೂ ಕೂಡ ಅದನ್ನು ಸಂಪೂರ್ಣವಾಗಿ ಯಾರು ಸಹ ಒಪ್ಪಿಕೊಂಡಿಲ್ಲ. ಇತ್ತೀಚಿನ ಹುಡುಕಾಟದಲ್ಲಿ ಉಲ್ಕೆಯೊಂದು ಈ ನಾಗಕರಿತೆ ವಿನಾಶಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಆದ್ರೆ ಈ ಸಿಂಧೂ ಕಣಿವೆಯ ನಾಗಕರಿಕತೆಯ ಲಿಪಿಗಳು ಈಗಲೂ ಲಭ್ಯವಿದ್ದು ಅದನ್ನು ಅರ್ಥೈಸುವುದು ಇಂದಿಗೂ ಕಠಿಣವೇ ಆಗಿದೆ. ಹೀಗಾಗಿ ಈ ಲಿಪಿಗಳ ಓದಿ ಸರಿಯಾಗಿ ಅರ್ಥೈಸುವವರಿಗೆ ತಮಿಳುನಾಡು ಸರ್ಕಾರ ಬಂಪರ್ ಬಹುಮಾಣ ಘೋಷಿಸಿದೆ. ಈ ಲಿಪಿಗಳ ಚೆನ್ನಾಗಿ ವಿವರಣೆ ಮಾಡುವವರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸಿಂಧೂ ಕಣಿವೆ ನಾಗರಿಕತೆಯ ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸುವವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದರರು, ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 8.5 ಕೋಟಿ ರೂಪಾಯಿಯಾಗುತ್ತದೆ. ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಿಂಧೂ ಕಣಿವೆಯ ಬರವಣಿಗೆಯ ವ್ಯವಸ್ಥೆಯನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಐವಿಸಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ಪುರಾತತ್ವಶಾಸ್ತ್ರಜ್ಞರು ಮತ್ತು ತಜ್ಞರ ಹಲವಾರು ಪ್ರಯತ್ನಗಳ ಹೊರತಾಗಿಯೂ ಸಿಂಧೂ ಕಣಿವೆ ನಾಗರಿಕತೆ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪುರಾತತ್ವ ತಜ್ಞರ ತೃಪ್ತಿಗಾಗಿ ಈ ಲಿಪಿಗಳ ಓದಿ ಅರ್ಥೈಸಿದವರಿಗೆ ನಾನು 1 ಮಿಲಿಯನ್ ಡಾಲರ್ ಬಹುಮಾನ ನೀಡುತ್ತೇವೆ ಎಂದು ಅವರು ಘೋಷಿಸಿದರು.
ಸಿಂಧೂ ಕಣಿವೆಯಲ್ಲಿ ಗೂಳಿಗಳಿದ್ದವು. ಎತ್ತುಗಳು ದ್ರಾವಿಡ ಸಂಕೇತವಾಗಿದ್ದವು. ಎತ್ತುಗಳು ಸಿಂಧೂ ಕಣಿವೆಯಿಂದ ಅಲಂಗನಲ್ಲೂರ್ (ಜಲ್ಲಿಕಟ್ಟುಗೆ ಪ್ರಸಿದ್ಧವಾದ ಮಧುರೈ ಬಳಿಯ ಗ್ರಾಮ) ವರೆಗೆ ಹರಡಿವೆ. ಇದು ನಮ್ಮ ಸಂಸ್ಕೃತಿಗೆ ಬಹಳ ಹತ್ತಿರವಾಗಿದೆ. ಹೀಗಾಗಿ ಸಿಂಧೂ ಕಣಿವೆಯ ಲಿಪಿ ಅರಿಯುವುದು ಅವಶ್ಯಕ ಎಂದಿದ್ದಾರೆ.
ಜಾನ್ ಮಾರ್ಷಲ್ ನೆನೆದ ಸ್ಟಾಲಿನ್!
1924 ರಲ್ಲಿ ಸರ್ ಜಾನ್ ಮಾರ್ಷಲ್ ಸಿಂಧೂ ಕಣಿವೆ ನಾಗರಿಕತೆಯನ್ನು ಜಗತ್ತಿಗೆ ಪರಿಚಯಿಸಿದರ. ಈ ಆವಿಷ್ಕಾರವು ಭಾರತೀಯ ನಾಗರಿಕತೆ ಎಷ್ಟು ಪ್ರಾಚೀನವಾದದು ಎಂಬುದರ ಮೇಲೆ ಬೆಳಕು ಚೆಲ್ಲಿತ್ತು. ಹಾಗೆ ಸಿಂಧೂ ಕಣಿವೆಯಲ್ಲಿದ್ದವರು ಕಾಲ ಕ್ರಮೇಣ ವಲಸೆ ಹೋಗಿ ದಕ್ಷಿಣದ ಕಡೆಗೆ ಬಂದು ನೆಲೆಸಲು ಆರಂಭಿಸಿದ್ದರು ಎಂಬುದು ಕೂಡ ವಾದವಾಗಿತ್ತು.
ದ್ರಾವಿಡ ಸಂಸ್ಕೃತಿಯ ಪ್ರಾತಿನಿಧ್ಯವೆಂದು ಪರಿಗಣಿಸಲಾದ ಗೂಳಿಗಳ ಚಿಹ್ನೆಗಳು ಸಿಂಧೂ ಕಣಿವೆಯ ಕಲಾಕೃತಿಗಳಲ್ಲಿ ಪ್ರಚಲಿತದಲ್ಲಿವೆ ಎಂದು ಅಧ್ಯಯನಗಳು ತೋರಿಸುತ್ತವೆ ತಮಿಳುನಾಡಿನ ಶಿವಕಲೈ, ಆದಿಚನಲ್ಲೂರು, ಮೈಲಾಡುಂಪರೈ ಮುಂತಾದ ಸ್ಥಳಗಳಲ್ಲಿ ಚಿಹ್ನೆಗಳು ಮತ್ತು ಶಾಸನಗಳು ಕಂಡುಬರುತ್ತವೆ. ಇಲ್ಲಿನ ಕುಂಬಾರಿಕೆ ಎಲ್ಲವು ಶೇ.60 ರಷ್ಟು ಸಿಂಧೂ ಕಣಿವೆ ನಾಗರಿಕತೆಗೆ ಹೋಲಿಕೆಯಾಗುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಸದ್ಯ ಈ ಸಿಂಧೂ ಕಣಿವೆಯ ನಾಗರಿಕತೆ ಕುರಿತಾದ ಲಿಪಿಯನ್ನು ಯಾರು ಸಹ ಸಂಪೂರ್ಣವಾಗಿ ಅರ್ಥೈಸಿಲ್ಲ. ಅಲ್ಲಿ ಕೇವಲ ಚಿಹ್ನೆಗಳ ಮೂಲಕ ಸಂಭಾಷಣೆ, ಬರವಣಿಗೆ ಇರುವುದು ನೋಡಬಹುದು. ಹೀಗಾಗಿ ಒಂದೊಂದು ಚಿಹ್ನೆಗಳು ಒಂದೊಂದು ರೀತಿಯ ಅರ್ಥವಿದೆ ಎಂದು ತಜ್ಞರು ಹೇಳಿದ್ದಾರೆ.



Click it and Unblock the Notifications