Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
60 ವರ್ಷದಲ್ಲಿ ಮೊದಲ ವಿಶ್ರಾಂತಿ..! ತಾಯಿಯನ್ನು ಪ್ರವಾಸಕ್ಕೆ ಕರೆದೊಯ್ದ ಮಗ..!
ತಾಯಂದಿರು ತಮ್ಮ ಮಕ್ಕಳಿಗಾಗಿ ಎಲ್ಲವನ್ನು ತ್ಯಾಗ ಮಾಡುತ್ತಾರೆ. ಅದರಲ್ಲು ಭಾರತದಲ್ಲಿ ತಾಯಿ ತನ್ನ ಮಗುವಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿರುತ್ತಾಳೆ. ಹಾಗೆ ಮಕ್ಕಳ ಖುಷಿಗಾಗಿ ಆಕೆ ನಿರಂತರ ದುಡಿಯುತ್ತಾಳೆ. ಚಿಕ್ಕ ಮಕ್ಕಳಿಂದ ಹಿಡಿದು ಮಕ್ಕಳು ಮದುವೆಯಾಗಿ ಅವರಿಗೆ ಮಕ್ಕಳಾದರು ತಾಯಿ ಪ್ರೀತಿ ಎಂದಿಗೂ ಕಡಿಮೆಯಾವುದೇ ಇಲ್ಲ.
ಇನ್ನು ಮಕ್ಕಳು ದುಡಿಮೆ ಮಾಡುವವರೆಗೂ ತಾಯಿ ತನ್ನ ಅಂಗೈಯಲ್ಲಿ ಹಿಡಿದು ಅವರನ್ನು ಸಾಕುತ್ತಾಳೆ. ಹೀಗಾಗಿ ಆಕೆಯನ್ನು ಕರುಣಾಮಯಿ, ಸಹೃದಯಿ ಎನ್ನಲಾಗುತ್ತೆ. ಹೀಗೆ ಮಕ್ಕಳ ಸಂತೋಷ ಮಾತ್ರ ಬಯಸುವ ತಾಯಿಗೆ ಇಲ್ಲೊಬ್ಬ ಮಗ ಮೊಟ್ಟ ಮೊದಲ ಪ್ರವಾಸ ಕರೆದೊಯ್ದು ಆಕೆಯ ಸಂತೋಷ ಇಮ್ಮಡಿಗೊಳಿಸಿದ್ದಾರೆ.

ಆಕೆ ಮಕ್ಕಳು, ಕುಟುಂಬ, ಸಂಬಂಧ, ಮನೆ ಹೀಗೆ ಎಲ್ಲಾ ಜಂಜಾಟದಲ್ಲಿಯೇ ತನ್ನ ದಿನಗಳ ಕಳೆಯುತ್ತಾಳೆ. ಒಂದು ದಿನವು ವಿಶ್ರಾಂತಿ ಪಡೆಯದೇ ಆಕೆ ಕೆಲಸ ಮಾಡುತ್ತಾಳೆ. ಹೀಗಿದ್ದಾಗ ತಾಯಿಯನ್ನು ಆತ ಒಂದಿಷ್ಟು ದಿನಗಳ ಕಾಲ ಪ್ರವಾಸ ಕರೆದೊಯ್ದು ಆಕೆಯನ್ನು ಸಂತೋಷವಾಗಿಡುವ ಯತ್ನ ಮಾಡಿದ್ದಾನೆ.
ಬೆಂಗಳೂರಿನ ಯುವಕನೊಬ್ಬ ತಾಯಿಯನ್ನು ಪ್ರವಾಸಕ್ಕೆ ಕರೆದೊಯ್ದಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು ಭಾರೀ ಮೆಚ್ಚುಗೆ ಕೇಳಿಬಂದಿದೆ.
ನೀಲ್ ಮುಕ್ತಿ ಎಂಬ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ತಾಯಿ ಹಿಮ ತುಂಬಿರುವ ಪ್ರವಾಸಿ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದು ಮನಾಲಿ ಅಥವಾ ಹಿಮಾಚಲ ಪ್ರದೇಶದ ಪ್ರವಾಸಿ ಸ್ಥಳವಾಗಿರಬಹುದು ಎಂದು ನೆಟ್ಟಿಗರು ಅಂದಾಜಿಸಿದ್ದಾರೆ. ಪೋಸ್ಟ್‌ನಲ್ಲೇ ಹೇಳಿರುವಂತೆ 60 ವರ್ಷದಲ್ಲೇ ಆಕೆ ಪಡೆದಿರುವ ಮೊದಲ ವಿಶ್ರಾಂತಿ ಎನ್ನಲಾಗಿದೆ. ಹಾಗಾದರೆ ಇದು ಆಕೆಯ ಮೊದಲ ಪ್ರವಾಸ ಆಗದೆ.
"60 ವರ್ಷಗಳ ನಂತರ ನನ್ನ ತಾಯಿ ತನ್ನ ಮೊದಲ ಸರಿಯಾದ ವಿರಾಮವನ್ನು ತೆಗೆದುಕೊಳ್ಳುತ್ತಿದ್ದಾರೆ, ಅದು ತುಂಬಾ ಮನವರಿಕೆಯಾದ ನಂತರ ಅವರು ನನ್ನ ತಂದೆಯ ಬಗ್ಗೆ ಚಿಂತಿತರಾಗಿದ್ದರು. ಹೆಚ್ಚಿನ ಭಾರತೀಯ ಪುರುಷರು ಹಾಗೆ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ನೀಲ್ ಬರೆದುಕೊಂಡಿದ್ದಾರೆ.
ಇನ್ನು ಫೋಟೋದಲ್ಲಿ ನೀಲ್ ಅವರ ತಾಯಿ ಹಿಮದ ನಡುವೆ ತಮ್ಮ ಪ್ರವಾಸ ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು. ಅವರು ಹಿಮದಿಂದ ಆವೃತವಾಗಿರುವ ಸ್ಥಳದಲ್ಲಿ ಜಾಕೆಟ್ ಹಾಕಿಕೊಂಡು ಫೋಟೋ ಫೋಸ್ ಕೊಟ್ಟಿದ್ದಾರೆ. ಅವರ ಮುಖದಲ್ಲಿ ನಾವು ಸಂತೋಷ ಕಾಣಬಹುದು. ಆಕೆ ಮಂಜುಗಡ್ಡೆ ಕೈಯಲ್ಲಿ ಹಿಡಿದು ಪ್ರವಾಸವನ್ನ ಎಂಜಾಯ್ ಮಾಡುತ್ತಿದ್ದಾರೆ. ಇತ್ತ ಈ ಫೋಟೋಗೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮಹಿಳೆಯರು ಎಷ್ಟು ದುಡಿದರು ಅವರಿಗೆ ಈ ರೀತಿ ಎಂಜಾಯ್ ಮಾಡಲು ಅವಕಾಶಗಳೇ ಸಿಗುವುದಿಲ್ಲ ಏಕೆಂದರೆ ಕೇವಲ ಮನೆಯನ್ನು ನಿಭಾಯಿಸುವುದೇ ಆಕೆಯ ಉದ್ದೇಶ ಹಾಗೂ ಕೆಲಸ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ನೀವು ಇದೆಲ್ಲವನ್ನು ಮೀರಿ ಅವರನ್ನು ಸಂತೋಷದಿಂದ ಇಡಲು ಮುಂದಾಗಿರುವುದಕ್ಕೆ ಸಲಾಮ್ ಎಂದಿದ್ದಾರೆ.
"ತುಂಬಾ ಮುದ್ದಾಗಿದೆ! ನಾನು ನನ್ನ ತಾಯಿಯೊಂದಿಗೆ ಸಾಕಷ್ಟು ಪ್ರಯಾಣಿಸಿದ್ದೇನೆ. ಅವರು ನಿಜವಾಗಿಯೂ ಆನಂದಿಸುತ್ತಾರೆ ಮತ್ತು ಬಹುಶಃ ನಮಗಿಂತ ಹೆಚ್ಚಿನದನ್ನು ಗ್ರಹಿಸುತ್ತಾರೆ. ಅವರು ನಮಗಿಂತ ಉತ್ತಮವಾದ ಪ್ರವಾಸ ಕಥನಗಳನ್ನು ಬರೆಯುತ್ತಾರೆ'' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
'ಹೀಗೆ ಪ್ರತಿಯೊಬ್ಬರು ತಮ್ಮ ತಂದೆ-ತಾಯಿಯನ್ನು ಪ್ರವಾಸಕ್ಕೆಂದು ಕರೆದೊಯ್ದರು ಅವರಿಗೆ ತುಂಬ ಸಂತೋಷವಾಗುತ್ತದೆ. ಅವರಿಗೆ ಜೀವನದಲ್ಲಿ ಕಷ್ಟಗಳ ಕಂಡು ಇಂತಹ ವಿರಾಮ ಬೇಕೆನಿಸುತ್ತದೆ. ನಮಗಿಂತ ಒಳ್ಳೆಯ ವಿಶ್ರಾಂತಿ ಅಗತ್ಯವಿರುವುದು ಅವರಿಗೆ. ಈ ರೀತಿ ಪ್ರತಿಯೊಬ್ಬರು ಒಂದಲ್ಲಾ ಒಂದು ಕರೆ ಅವರನ್ನು ಪ್ರವಾಸಕ್ಕೆ ಕರೆದೊಯ್ದು ಅವರಲ್ಲಿ ಸಂತೋಷ ಮೂಡಿಸಿ. ನೀವು ಬಾಲ್ಯದಲ್ಲಿದ್ದಾಗ ನಿಮ್ಮ ಸಂತೋಷ ಕಂಡು ಅವರು ಸಹ ನಕ್ಕು ಹಗುರಾಗಿದ್ದವರಲ್ಲವೇ'' ಎಂದು ಮತ್ತೊಬ್ಬರು ಹೇಳಿದ್ದಾರೆ.



Click it and Unblock the Notifications