Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
3 ವರ್ಷದ ನಂತರ ವೇಷಮರೆಸಿ ಬಂದ ಮಗ, ಆದ್ರೆ ತಾಯಿನ ಯಾಮಾರಿಸಲು ಸಾಧ್ಯನಾ? ಎಮೋಷನಲ್ ವೀಡಿಯೋ ವೈರಲ್
ವೇಷ ಮರೆಸಿ ಬಂದರೆ ಹೆತ್ತ ಕರುಳು ತನ್ನ ಕುಡಿಯನ್ನು ಅರಿಯದೆ ಇರುತ್ತದೆಯೇ? ಅಂಥದ್ದೊಂದು ತುಂಬಾ ಸುಂದರ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದವರು ತಾಯಿಯನ್ನು ಮೀರಿಸಿದ ದೇವರಿಲ್ಲ ಎಂದು ಹೇಳುವುದು ಇದೇ ಕಾರಣಕ್ಕೆ ಎಂದು ಹೇಳುತ್ತಿದ್ದಾರೆ, ಈ ವೀಡಿಯೋ ಭಾವನಾತ್ಮಕವಾಗಿ ನಮ್ಮನ್ನು ತುಂಬಾನೇ ಸೆಳೆಯುತ್ತದೆ.

ಆತ ಮನೆ ಬಿಟ್ಟು 3 ವರ್ಷ ಆಗಿತ್ತು, ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿಯದ್ದು ಮೀನು ಮಾರುವ ವೃತ್ತಿ. ಮೀನು ಮಾರಿ ಮಕ್ಕಳನ್ನು ಬೆಳೆಸಿದ್ದಳು, ಮಗ ಕೆಲಸಕ್ಕಾಗಿ ದುಬೈಗೆ ಹೋಗಿದ್ದ. 3 ವರ್ಷದ ಬಳಿಕ ದುಬೈನಿಂದ ಬಂದವ ಸೀದಾ ತನ್ನ ತಾಯಿಯನ್ನು ನೋಡಲು ಹೋಗಿದ್ದಾನೆ. ಆದರೆ ತಾಯಿಗೆ ಗುರುತು ಸಿಗಬಾರದು ಎಂದು ಮುಖವನ್ನು ಮುಚ್ಚಿ, ಕಣ್ಣು ನೋಡಿ ಎಲ್ಲಿ ಕಂಡು ಹಿಡಿಯುತ್ತಾಳೋ ಎಂದು ಕಣ್ಣಿಗೆ ತಂಪು ಕನ್ನಡಕ ಧರಿಸಿ ಹೋಗಿದ್ದಾನೆ.
ಗ್ರಾಹಕನಂತೆ ಬಂದು ತನ್ನ ತಾಯಿ ಬಳಿ ಮೀನಿನ ರೇಟ್ ಕೇಳುತ್ತಾನೆ, ತಾಯಿಯೂ ಹೇಳುತ್ತಾಳೆ, ಆದರೆ ಆ ತಾಯಿಗೆ ಆ ವ್ಯಕ್ತಿಯನ್ನು ನೋಡುವಾಗ ಏನೋ ಒಂದು ಅನುಮಾನ, ಮೀನನ್ನು ಕವರ್‌ಗೆ ಹಾಕುತ್ತಿರುವಾಗಲೂ ಅವಳಿಗೆ ಇದು ನನ್ನ ಮಗನಾಗಿರಬಹುದೇ ಒಂದು ಸಂಶಯ ಬರುತ್ತದೆ, ನೋಡೇ ಬಿಡುವ ಎಂದು ಸೀದ ಎದ್ದೇಳುವ ಆಕೆ , ಆತ ಮುಖಕ್ಕೆ ಮುಚ್ಚಿದ್ದ ಟವಲ್ ಎಳೆಯುತ್ತಾಳೆ, ನೋಡಿದರೆ ಮಗ! ಮಗ ಅಮ್ಮನನ್ನು ತಬ್ಬಿಕೊಂಡಾಗ ಆ ತಾಯಿ ಎಮೋಷನ್ ಆಗುವ ವೀಡಿಯೋ ತುಂಬಾನೇ ವೈರಲ್ ಆಗಿದೆ. ಈ ವೀಡಿಯೋದಲ್ಲಿರುವವರು ಗಂಗೊಳ್ಳಿಯ ನಿವಾಸಿ ರೋಹಿತ್ ಹಾಗೂ ಅವರ ತಾಯಿ. ಈ ಎಮೋಷನಲ್ ವೀಡಿಯೋ ಫುಲ್ ವೈರಲ್ ಆಗಿದೆ.
ತನ್ನ ಕರುಳ ಬಳ್ಳಿಯನ್ನು ತಾಯಿಯಾದವಳು ಗುರುತಿಸಿಯೇ ಗುರುತಿಸುತ್ತಾಳೆ, ಎದುರಿಗೆ ಬಂದಾಗ ಮಾತ್ರ ಏಕೆ ಎಷ್ಟೇ ದೂರದಲ್ಲಿರಲಿ ತನ್ನ ಮಕ್ಕಳಿಗೆ ಏನೋ ಸಮಸ್ಯೆಯಾದಾಗ ಇಲ್ಲಿ ತಾಯಿಗೆ ಏನೋ ಒಂಥರ ಕಳವಳ ಆಗುತ್ತದೆ, ತಾಯಿ-ಮಕ್ಕಳ ಸಂಬಂಧವೇ ಅಂಥದ್ದು, ಅದರಲ್ಲು ತಾಯಿ ನೀಡುವ ಪ್ರೀತಿಯನ್ನು ಯಾರಿಂದಲೂ ನೀಡಲು ಸಾಧ್ಯವಿಲ್ಲ ಎಂಬುವುದು ಕೂಡ ಅಷ್ಟೇ ಸತ್ಯ.



Click it and Unblock the Notifications
