Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಆಂಬ್ಯುಲೆನ್ಸ್‌ಗಾಗಿ ಕಾಯೋದು ಬೇಡ..!ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ..! 10 ನಿಮಿಷಕ್ಕೆ ನಿಮ್ಮ ಮುಂದೆ!!
ಭಾರತೀಯ ಮಾರುಕಟ್ಟೆ ಈಗ ಆನ್‌ಲೈನ್ ಯುಗದತ್ತ ತಿರುಗಿದೆ. ಆನ್‌ಲೈನ್‌ನಲ್ಲಿ ಈಗ ಎಲ್ಲಾ ವಸ್ತುಗಳು ಸಿಗುವಂತಹ ಕಾಲವಾಗಿದೆ. ಅದರಲ್ಲೂ ನಮಗೆ ಬೇಕಾದ ವಸ್ತುಗಳು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ನಿಮಿಷದಲ್ಲಿ ಮನೆಗೆ ಬರುವಂತಹ ವ್ಯವಸ್ಥೆ ಇದೆ. ಇದಕ್ಕಾಗಿಯೇ ದೊಡ್ಡ ದೊಡ್ಡ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಂಡಿವೆ.
ಹಾಗೆ ಈಗ ನೀವು ಮನೆಯಲ್ಲೇ ಕುಳಿತು ನಿಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಇದು ಬಹಳಷ್ಟು ಜನರಿಗೆ ಸಹಕಾರಿಯಾಗಿ ಮಾರ್ಪಟ್ಟಿದೆ, ಹಾಗೆ ಲಕ್ಷಾಂತರ ಉದ್ಯೋಗವಕಾಶ ನೀಡುವ ವಲಯವಾಗಿ ಈಗ ಬದಲಾಗಿದೆ. ಹಾಗೆ ನಾವೀಗ ವೈದ್ಯಕೀಯ ವಲಯದಲ್ಲೂ ಆನ್‌ಲೈನ್ ಮಾರ್ಕೆಟ್‌ಗೆ ಎಂಟ್ರಿ ಕೊಟ್ಟಿದ್ದೇವೆ.

ನೀವು ಆನ್‌ಲೈನ್‌ನಲ್ಲೂ ವೈದ್ಯರಿಂದ ಚಿಕಿತ್ಸೆ, ಶಿಫಾರಸ್ಸು ಹಾಗೆ ಔಷಧಿಗಳನ್ನು ಕೂಡ ಖರೀದಿಸಬಹುದು. ನೀವು ಮೆಡಿಕಲ್ ಆಸ್ಪತ್ರೆ ಎಲ್ಲಿಯೂ ಹೋಗದೆ ಮನೆಯಲ್ಲೇ ಚಿಕಿತ್ಸೆ, ಔಷಧಿ ಪಡೆಯುವ ಮಟ್ಟಕ್ಕೆ ಈ ಮಾರುಕಟ್ಟೆ ಬೆಳೆದಿದೆ. ನಿತ್ಯ ಈ ಮಾರುಕಟ್ಟೆ ತನ್ನ ವಿಸ್ತರತೆ ಹರಡುತ್ತಲೇ ಇದೆ. ಈಗ ಹೊಸದೊಂದು ಸಾಹಸಕ್ಕೆ ಕೈ ಹಾಕಿದೆ.
ಈಗ ನೀವು ಆಂಬ್ಯುಲೆನ್ಸ್ ಅನ್ನು ಕೂಡ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು. ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಎಷ್ಟು ಮುಖ್ಯ ಎಂಬುದು ನಿಮಗೆಲ್ಲಾ ತಿಳಿದಿದೆ. ಹಾಗೆ ಆಂಬ್ಯುಲೆನ್ಸ್ ಆಗಮಿಸುವ ಒಂದೊಂದು ಸೆಕೆಂಡ್‌ಗಳು ಕೂಡ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಆನ್‌ಲೈನ್ ಗ್ರೋಸರಿ ಡೆಲಿವರಿ ಸಂಸ್ಥೆ ಬ್ಲಿಂಕ್ ಇಟ್ ಈಗ ಆನ್‌ಲೈನ್‌ನಲ್ಲಿ ಆಂಬ್ಯುಲೆನ್ಸ್ ಬುಕ್ ಮಾಡುವ ಹೊಸ ಚಾಪ್ಟರ್ ತೆರೆದಿದೆ.
ಭಾರತದ ಪ್ರಮುಖ ನಗರಗಳಲ್ಲಿ ಕೇವಲ 10 ನಿಮಿಷದ ಒಳಗೆ ಆಂಬ್ಯುಲೆನ್ಸ್ ಸಿಗುವಂತೆ ಮಾಡುವ ಉದ್ದೇಶ ಸಂಸ್ಥೆಯದ್ದಾಗಿದೆಯಂತೆ. ಹಾಗೆ ಇಲ್ಲಿ ಲಾಭದ ಲೆಕ್ಕಾಚಾರವೇ ಇಲ್ಲವಂತೆ, ಬದಲಿಗೆ ಸೇವೆಗೆ ಪ್ರಾಶಸ್ತ್ಯ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪ್ರಾಯೋಗಿಕ ಹಂತವಾಗಿ ಈಗ ಗುರಗ್ರಾಮ್‌ನಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.
ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಅವರು ಕಂಪನಿಯು ಈಗ ಅಪ್ಲಿಕೇಶನ್ ಮೂಲಕ "10 ನಿಮಿಷಗಳಲ್ಲಿ ಆಂಬ್ಯುಲೆನ್ಸ್" ಅನ್ನು ಒದಗಿಸುತ್ತದೆ ಎಂದು ಘೋಷಿಸಿದ್ದಾರೆ. ತ್ವರಿತ ಮತ್ತು ವಿಶ್ವಾಸಾರ್ಹ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುವುದು ಹಾಗೂ ಸಮಸ್ಯೆಯನ್ನು ಪರಿಹರಿಸುವ ಕಡೆಗೆ ಕಂಪನಿಯು ಮೊದಲ ಹೆಜ್ಜೆ ಇಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಗೆ ಭಾರೀ ಮೆಚ್ಚುಗೆ ಕೂಡ ಕೇಳಿಬಂದಿದೆ.
ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಆ ಸ್ಥಳ ತಲುಪದೆ ಸಾವು ನೋವಿನ ಸಂಖ್ಯೆ ಹೆಚ್ಚಾಗುವುದು ನಡೆಯುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದಾಗಿ ಸಂಸ್ಥೆ ತಿಳಿಸಿದೆ.
ಬ್ಲಿಂಕ್‌ಇಟ್ ಆಂಬ್ಯುಲೆನ್ಸ್‌ನ ವಿಶೇಷವೇನು?
ಈ ಆಂಬ್ಯುಲೆನ್ಸ್ ಅನ್ನು ನೀವು ಬ್ಲಿಂಕ್‌ಇಟ್ ಆಪ್ ಮೂಲಕ ಆರ್ಡರ್ ಮಾಡಬಹುದು. ಹಾಗೆ ಈ ವಾಹನದಲ್ಲಿ ಆಮ್ಲಜನಕ ಸಿಲಿಂಡರ್‌ಗಳು, ಎಇಡಿ (ಆಟೋಮೇಟೆಡ್ ಎಕ್ಸ್‌ಟರ್ನಲ್ ಡಿಫಿಬ್ರಿಲೇಟರ್), ಸ್ಟ್ರೆಚರ್, ಮಾನಿಟರ್, ಸಕ್ಷನ್ ಮೆಷಿನ್ ಮತ್ತು ಅಗತ್ಯ ತುರ್ತು ಔಷಧಿಗಳು ಮತ್ತು ಚುಚ್ಚುಮದ್ದು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳಾದ ಜೀವರಕ್ಷಕ ವಸ್ತುಗಳಿರಲಿವೆ. ಹಾಗೆ ಒಬ್ಬರು ಅರೆ ವೈದ್ಯಕೀಯ ಸಿಬ್ಬಂದಿ, ಓರ್ವ ಸಹಾಯಕ ಹಾಗೆ ಓರ್ವ ಚಾಲಕ ಇರುತ್ತಾರೆ.
ಹಾಗೆ ಈ ಆಂಬ್ಯಲೆನ್ಸ್ ಕೈಗೆಟುಕುವ ದರದಲ್ಲಿ ಲಭ್ಯವಿರಲಿದೆಯಂತೆ. ಇದರಿಂದ ಲಾಭ ಮಾಡುವ ಉದ್ದೇಶವಿಲ್ಲ ಎಂದು ಸಂಸ್ಥೆ ತಿಳಿಸಿದೆ. ಸದ್ಯಕ್ಕೆ ಗುರುಗ್ರಾಮ್‌ನಲ್ಲಿ ಈ ಸೇವೆ ಆರಂಭಿಸಿ ಮುಂದಿನ ದಿನಗಳಲ್ಲಿ ಭಾರತದ ಪ್ರಮುಖ ನಗರಗಳಲ್ಲು ಆಂಬ್ಯುಲೆನ್ಸ್ ಸೇವೆ ಒದಗಿಸುವುದಾಗಿ ಸಂಸ್ಥೆಯ ಸಿಇಓ ತಿಳಿಸಿದ್ದಾರೆ.



Click it and Unblock the Notifications
