Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪಿತೃಪಕ್ಷದಲ್ಲಿ ಹಸುವಿಗೆ ಶಾಪ ನೀಡಿದ್ದ ಸೀತೆ: ಈ ಕಥೆ ಕೇಳಿದ್ದೀರಾ?
ಪೂರ್ವಜನರನ್ನು ನೆನೆಯಲು ಹಾಗೆ ಅವರಿಗೆ ಗೌರವ ಅರ್ಪಿಸುವ ಸಲುವಾಗಿ ಆಚರಿಸುವ ಪಿತೃ ಪಕ್ಷ ಆರಂಭಗೊಂಡಿದೆ. ಮಹಾಲಯ ಅಮಾವಾಸ್ಯೆಯ ದಿನದಂದು ಕೊನೆಯದಾಗಿ ತರ್ಪಣ ಕಾರ್ಯ ಮಾಡುತ್ತಾರೆ. ಹಾಗೆ 16 ದಿನಗಳ ಕಾಲ ನಡೆಯುವ ಈ ಸಂಪ್ರದಾಯದಲ್ಲಿ ಪೂರ್ವಜರ ಆಶೀರ್ವಾದ ಪಡೆಯಲು ಈ ದಿನ ಉತ್ತಮ ಎಂದು ಹೇಳಲಾಗಿದೆ.
ಇನ್ನು ಈ ಪಿತೃಪಕ್ಷದ ಸಂಪ್ರದಾಯ ಆರಂಭಗೊಂಡಿದ್ದರ ಹಿಂದೆ ಹಲವು ಕಥೆಗಳಿವೆ. ಹಾಗೆ ಮಹಾಭಾರತದ ಕರ್ಣನಿಗೂ ಈ ಪಿತೃಪಕ್ಷಕ್ಕೂ ಒಂದು ಕಥೆ ಇದೆ. ಹಾಗೆ ಭೀಷ್ಮ ಪಿತಾಮಹಾನಿಗೂ ಈ ಪಿತೃಪಕ್ಷಕ್ಕೂ ಕೂಡ ಒಂದು ಕಥೆ ಇದೆ. ಹಾಗೆ ಈ ಪಿತೃಪಕ್ಷವು ಪುರಾತನ ಕಾಲದಲ್ಲೂ ಉಲ್ಲೇಖ ಇರುವುದು ನೋಡಬಹುದು.

ಹಾಗೆ ಈ ಪಿತೃ ಪಕ್ಷದಲ್ಲಿ ಕೆಲವು ಯಾವ ಕೆಲಸ ಮಾಡಬೇಕು ಯಾವುದನ್ನು ಮಾಡಬಾರದು ಎಂಬುದು ಕೂಡ ಹೇಳಲಾಗಿದೆ. ಹಾಗೆ ಈ ದಿನ ಕೆಲವು ಪ್ರಾಣಿಗಳಿಗೆ ಆಹಾರ ನೀಡುವಂತೆ ಹೇಳಲಾಗುತ್ತದೆ. ಆದ್ರೆ ಪಿತೃ ಪಕ್ಷದಲ್ಲಿ ಕೆಲವರು ಹಸುಗಳಿಗೆ ಆಹಾರ ನೀಡಬಾರದು ಎಂದು ಹೇಳುತ್ತಾರೆ. ಹಾಗಾದ್ರೆ ಹಸು ಗಳಿಗೆ ಏಕೆ ಆಹಾರ ನೀಡಬಾರದು ಎಂಬುದು ನಿಮಗೆ ಗೊತ್ತಾ?
ಪಿತೃ ಪಕ್ಷದಂದು ಹಸುಗಳಿಗೆ ಆಹಾರ ನೀಡದೆ ಇರುವುದಕ್ಕೂ ರಾಮಾಯಣದ ಸೀತೆಗೂ ಸಂಬಂಧವಿದೆ. ರಾಮಾಯಣದ ಸೀತೆಯು ಹಸುವಿಗೆ ಆಹಾರ ನೀಡದೆ ಶಾಪ ನೀಡಿರುವ ಕಥೆ ಪಿತೃ ಪಕ್ಷಕ್ಕೆ ಸಂಬಂಧಿಸಿದೆ ಎಂಬುದು ನಿಮಗೆ ಗೊತ್ತಾ? ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮ ಮತ್ತು ಲಕ್ಷ್ಮಣರು ರಾಜ ದಶರಥನ ಶ್ರಾದ್ಧಕ್ಕೆ ಬೇಕಾದ ವಸ್ತುಗಳನ್ನು ಒಟ್ಟು ಮಾಡಲು ಮುಂದಾಗಿದ್ದರು.
ಈ ಸಮಯದಲ್ಲಿ ಸೀತಾ ಮಾತೆ ನದಿ ದಡದಲ್ಲಿ ಶ್ರಾದ್ಧ ನಡೆಸಲು ಹಾಗೆ ವಿಧಿ ವಿಧಾನವನ್ನು ನಿರ್ವಹಿಸಲು ಕುಳಿತಿದ್ದಳು. ಅದರೆ ಸಮಯ ಮೀರುತ್ತಿದೆ ಎಂದು ಆಕೆ ಭಾವಿಸಿದಳು, ಯಮಗಂಡಕಾಲದಲ್ಲಿ ಶ್ರಾದ್ಧ ಮಾಡಬಾರದು ಎಂದು ತಿಳಿದ ಆಕೆ ರಾಮ ಲಕ್ಷ್ಮಣರು ಬರುವವರೆಗೆ ಕಾಯದೆ ಇರಲು ನಿರ್ಧರಿಸಿದಳು.
ಅವರು ಬರುವ ಮುನ್ನವೇ ಅಲ್ಲಿದ್ದ ವಸ್ತುಗಳ ಬಳಸಿಯೇ ದಶರಥನ ಶ್ರಾದ್ಧ ಮಾಡಲು ಮುಂದಾದಳು. ಈ ಸಮಯದಲ್ಲಿ ರಾಮ ಲಕ್ಷ್ಮಣರು ಅಲ್ಲಿಗೆ ಬಂದರು ಆದ್ರೆ ಶ್ರಾದ್ಧ ನಾನೇ ಮುಗಿಸಿರುವುದಾಗಿ ಹೇಳಿದಳು. ಆದ್ರೆ ರಾಮ ಇದನ್ನು ನಂಬಲಿಲ್ಲ, ಹೀಗಾಗಿ ಆತ ಸೀತೆಯ ಬಳಿ ಸಾಕ್ಷಿ ಕೇಳಿದ. ಹೀಗಾಗಿ ಸೀತೆ 5 ಬಗೆಯ ಸಾಕ್ಷಿ ನೀಡಿದಳು.
ಆದ್ರೆ ಈ ಎಲ್ಲಾ ಸಾಕ್ಷಿಗಳು ಸತ್ಯ ನುಡಿದವಂತೆ ಆದ್ರೆ ಹಸು ಮಾತ್ರ ಆಕೆ ಶ್ರಾದ್ಧ ಮಾಡಿದ್ದನು ನಾನು ನೋಡಿಲ್ಲ ಎಂದು ಹೇಳಿತಂತೆ. ಏಕೆಂದರೆ ಸೀತಾ ದೇವಿ ನೀಡಿದ್ದ ಅನ್ನದಿಂದ ಹಸುವಿನ ಹೊಟ್ಟೆ ತುಂಬಿರಲಿಲ್ಲವಂತೆ. ರಾಮನ ಬಳಿ ನಾನು ಏನು ತಿಂದಿಲ್ಲ ಎಂದರೆ ಮತ್ತೆ ಆಹಾರ ನೀಡುವರು ಎಂದು ಭಾವಿಸಿ ಸುಳ್ಳು ಹೇಳಿತು ಎಂದು ನಂಬಲಾಗಿದೆ.
ಆದ್ರೆ ಹಸು ಹೇಳಿದ ಸುಳ್ಳು ಸೀತೆಗೆ ಕೋಪ ತರಿಸಿತು. ಹೀಗಾಗಿ ಸೀತೆ ಹಸುವಿಗೆ ಶಾಪ ನೀಡಿದಳಂತೆ. ನಿನಗೆ ಎಲ್ಲಾ ಊಟ ಮಾಡಿದ ಬಳಿಕ ಉಳಿದ ಅನ್ನ ಸಿಗಲಿ, ಕೊನೆಯಲ್ಲಿ ನಿನ್ನನ್ನು ಎಲ್ಲರು ನೆನೆಯುವಂತೆ ಆಗಲಿ ಎಂದು ಶಪಿಸಿದಳಂತೆ. ಹೀಗಾಗಿ ಮನೆಯಲ್ಲಾಗಲಿ ಅಥವಾ ಎಲ್ಲಿಯೆ ಆಗಲಿ ಹಸುವಿಗೆ ಉಳಿದ ಅನ್ನ ನೀಡುತ್ತಾರೆ. ಹಾಗೆ ಪೂಜೆಗಳು ಮುಗಿದ ಬಳಿಕ ಹಸುವಿಗೆ ಆಹಾರ ನೀಡುತ್ತಾರೆ ಎಂದು ಹೇಳಲಾಗಿದೆ.
ಹೀಗಾಗಿ ಕೆಲವರು ಪಿತೃಪಕ್ಷದಲ್ಲಿ ಹಸುವಿಗೆ ಆಹಾರ ನೀಡಬೇಡಿ ಅನ್ನುತ್ತಾರೆ, ಹಾಗೆ ಮತ್ತೆ ಕೆಲವರು ಕೊನೆಯಲ್ಲಿ ಆಹಾರ ನೀಡುವುದು ಶುಭಕರ ಎಂದು ಹೇಳುತ್ತಾರೆ.



Click it and Unblock the Notifications
