ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಯೆಚೂರಿ ಕಾಮ್ರೆಡ್ ಆಗಿ ಬದಲಾದ ಕಥೆ.! ಯಾರು ಈ ಸೀತಾರಾಮ್ ಯೆಚೂರಿ.!?

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಹಿರಿಯ ನಾಯಕ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ನಿಧನವಾಗಿದ್ದಾರೆ. ಅವರ ಏಕಾಎಕಿ ನಿಧನವು ಹಲವರಲ್ಲಿ ಆಘಾತ ಮೂಡಿಸಿದೆ. 72 ವರ್ಷದ ಅವರು ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಅನಾರೋಗ್ಯಕ್ಕೆ ಒಳಗಾದ ಅವರನ್ನು ಸೆ.10ರಂದು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತಿ ಆದ್ರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಅವರಿಗೆ 72 ವರ್ಷ ವಯಸ್ಸಾಗಿತ್ತು. ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಸೆಪ್ಟೆಂಬರ್ 10 ರಂದು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಗೆ ದಾಖಲಿಸಲಾಗಿತ್ತು, ಅಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಅವರು ಚಿಕಿತ್ಸೆ ಪಡೆಯದೆ ಮೃತಪಟ್ಟಿದ್ದಾರೆ.

Sitaram Yechury The Communist And A Comrade Who Born In Brahmin Family

ಯಾರು ಈ ಸೀತಾರಾಮ್ ಯೆಚೂರಿ? ಅವರ ಕಥೆ ಗೊತ್ತಾ?

ಶುದ್ಧ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಯೆಚೂರಿ ಆಂಧ್ರಪ್ರದೇಶದಲ್ಲಿ ತಮ್ ಬಾಲ್ಯ ಕಳೆದರು. ಹೈದರಾಬಾದ್‌ನಲ್ಲಿ ತಮ್ಮ ಶಿಕ್ಷಣ ಪೂರೈಸಿದ ಅವರು ಅವರು ವಿದ್ಯಾರ್ಥಿ ಜೀವನದಲ್ಲೇ ಅವರು ಪ್ರತಿಭಟನೆ, ವಿದ್ಯಾರ್ಥಿ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡವರು. ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹಾಗೂ ಕಾಲೇಜಿನಲ್ಲಿ ಹೇರಲಾಗಿದ್ದ ವಿವಿಧ ನಿಯಮಗಳ ವಿರೋಧಿಸಿ ಆಡಳಿತ ಮಂಡಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದವರು. ವಿದ್ಯಾರ್ಥಿ ಸಂಘಟನೆಗಳಲ್ಲಿ ಅವರು ಗುರುತಿಸಿಕೊಂಡವರು.

1970ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರು ಸರ್ಕಾರದ ವಿರುದ್ಧವೇ ಹೋರಾಟ ನಡೆಸಿ ಆಗಲೇ ಫೈರ್‌ಬ್ರಾಂಡ್ ಎಂದು ಕರೆಸಿಕೊಂಡರು. ಈ ವೇಳೆ ಅವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದರು, ಆದರೆ ಅವರಲ್ಲಿ ಕಮ್ಯೂನಿಸ್ಟ್ ಸಿದ್ಧಾಂತ ಬೇರೂರಲು ಆರಂಭಿಸಿದ ದಿನಗಳವು, ದೇಶದಲ್ಲಿ ಕಾರ್ಮಿಕರ ಹಕ್ಕು ಸೇರಿ ಹಲವು ರೀತಿಯ ಹೋರಾಟ ಆರಂಭಗೊಂಡಿತ್ತು, ಇದರಿಂದ ಪ್ರಭಾವಿತರಾದ ಅವರು ಕಮ್ಯೂನಿಸ್ಟ್ ವಾದದಲ್ಲಿ ಬಲವಾದ ನಂಬಿಕೆ ಇಟ್ಟರು.

ತುರ್ತು ಪರಿಸ್ಥಿತಿಯ ನಂತರ, ಅವರು 1977 ಮತ್ತು 1978 ರ ನಡುವೆ ಮೂರು ಬಾರಿ JNU ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1984 ರಲ್ಲಿ, ಅವರು ತಮ್ಮ JNU ಸಂಗಾತಿ ಪ್ರಕಾಶ್ ಕಾರಟ್ ಜೊತೆಗೆ ಕೇಂದ್ರ ಸಮಿತಿಗೆ ಸೇರ್ಪಡೆಗೊಂಡರು. ಅವರು 1992 ರಲ್ಲಿ ಸಿಪಿಐ(ಎಂ) ಪಾಲಿಟ್‌ಬ್ಯೂರೊ ಸದಸ್ಯರಾದರು.

ಹೀಗಾಗಿ ಕಾಲೇಜಿನಲ್ಲಿಓದುತ್ತಿರುವಾಗಲೇ ಅವರು ಸಿಪಿಐ(ಎಂ)ಗೆ ಸೇರಿದರು. ಇದಾಗಿ ಕೇಂದ್ರ ಸಮಿತಿಯ ಸದಸ್ಯರಾಗಿ ಹುದ್ದೆಗೆ ಏರುವಾಗ ಬರೋಬ್ಬರಿ 32 ವರ್ಷ ವಯಸ್ಸಾಗಿತ್ತು. ಈ ಅವಧಿಯಲ್ಲಿ ಹತ್ತು ಹಲವು ಹೋರಾಟ, ಜೈಲು ಅನುಭವಿಸಿದ್ದರು. 1990ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಏರಲು ಕಾಂಗ್ರೆಸ್ ಅನ್ನು ವಿರೋಧಿಸುವ ಬಣದಲ್ಲಿ ಯಚೂರಿ ಕಾಣಿಸಿಕೊಂಡರು ಅಲ್ಲದೆ ಈ ಸರ್ಕಾರಕ್ಕೆ ಮುಂದಾಳತ್ವ ವಹಿಸಿದರು. ಸಮ್ಮಿಶ್ರ ಸರ್ಕಾರದ ಪ್ರಮುಖ ಮುಂದಾಳತ್ವ ವಹಿಸಿದ್ದವರಲ್ಲಿ ಇವರೂ ಒಬ್ಬರಾದರು.

ಇದಾದ ಬಳಿಕ ಅವರು ರಾಜಕೀಯದಲ್ಲಿದ್ದರೂ ಅವರ ಪಕ್ಷ ಮಾತ್ರ ಸ್ಥಾನಗಳ ಗಿಟ್ಟಿಸುವಲ್ಲಿ ವಿಫಲವಾಗುತ್ತಾ ಸಾಗಿತ್ತು. ಈಗ ಕೇವಲ 4 ಸ್ಥಾನ ಪಡೆದು 1.76ರಷ್ಟು ಮತಗಳನ್ನಷ್ಟೇ ಹೊಂದಿದೆ.

CPI(M) 2019 ರಲ್ಲಿ ಅಥವಾ 2024 ರಲ್ಲಿ ತನ್ನ ಲೋಕಸಭೆಯ ಸಂಖ್ಯೆಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ. 2014 ರಲ್ಲಿ ಲೋಕಸಭೆಯಲ್ಲಿ 9 ಸ್ಥಾನಗಳಿಂದ, 2019 ರಲ್ಲಿ 3 (ಜೊತೆಗೆ ಅದು ಸ್ವತಂತ್ರವಾಗಿ ಬೆಂಬಲಿತವಾಗಿದೆ) ಗೆ ಇಳಿಯಿತು. 2022 ರಲ್ಲಿ, ಯೆಚೂರಿ ಮೂರನೇ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಯೆಚೂರಿಯವರು ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ಗಿಂತಲೂ ಹೆಚ್ಚಾಗಿ ರಾಹುಲ್ ಗಾಂಧಿ ಅಬರಿಗೆ ಹತ್ತಿರವಾಗಿದ್ದರು. ಅಲ್ಲದೆ ಇತ್ತೀಚಿಗೆ ಪ್ರಧಾನಿ ಮೋದಿ ಅವರು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಿ ಮೋದಿ ಅವರೊಂದಿಗೆ ಮಾತನಾಡುತ್ತಿದ್ದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

English summary

Sitaram Yechury: The Communist And A Comrade Who Born In Brahmin Family

Suffering from a respiratory infection, he was admitted to the All India Institute of Medical Sciences (AIIMS) in New Delhi on September 10, where he was being treated in the intensive care unit. Today he died without treatment.
Story first published: Friday, September 13, 2024, 7:30 [IST]
X
Desktop Bottom Promotion