Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಆಗಸ್ಟ್ 17ಕ್ಕೆ ಸಿಂಹ ಸಂಕ್ರಾಂತಿ: ಸಮಯ ಹಾಗೂ ಇದರ ಮಹತ್ವವೇನು?
ಪ್ರತಿ ತಿಂಗಳು ಸೂರ್ಯ ತನ್ನ ರಾಶಿಪಥ ಬದಲಾಯಿಸುತ್ತಲೇ ಇರುತ್ತಾನೆ, ಇದೀಗ ಸೂರ್ಯ ತಾನು ಅಧಿಪತಿಯಾಗಿರುವ ಸಿಂಹ ರಾಶಿಗೆ ಸಂಚಾರ ಮಾಡುವುದು. ಸೂರ್ಯನು ಆಗಸ್ಟ್ 17ರಂದು ಸಿಂಹ ರಾಶಿಗೆ ಸಂಚಾರ ಮಾಡಲಿದೆ, ಸಿಂಹ ಸಂಕ್ರಾಂತಿ ಮಹತ್ವವೇನು ನೋಡೋಣ ಬನ್ನಿ:

ಸಿಂಹ ಸಂಕ್ರಾಂತಿ 2023: ದಿನಾಂಕ ಮತ್ತು ಸಮಯ
ಸೂರ್ಯೋದಯ: ಬೆಳಗ್ಗೆ 06:07ಕ್ಕೆ
ಸೂರ್ಯಾಸ್ತ: ಸಂಜೆ 06:54ಕ್ಕೆ
ಪುಣ್ಯ ಕಾಲ ಮುಹೂರ್ತ: ಆಗಸ್ಟ್ 17 ಬೆಳಗ್ಗೆ 07:11ರಿಂದ ಮಧ್ಯಾಹ್ನ 01:35ರವರೆಗೆ
ಮಹಾ ಪುಣ್ಯಕಾಲ ಮುಹೂರ್ತ: ಆಗಸ್ಟ್ 17 ಮಧ್ಯಾಹ್ನ 01:11ರಿಂದ ಮಧ್ಯಾಹ್ನ 01:35ರವರೆಗೆ
ಸಿಂಹ ಸಂಕ್ರಾಂತಿ ಮಹತ್ವ
ಸಿಂಹ ಸಂಕ್ರಾಂತಿಯಂದು ಜನರು ದೇವಾಲಯಕ್ಕೆ ಹೋಗಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಹಸುವಿನ ತುಪ್ಪ ತಿಂದರೆ ಒಳ್ಳೆಯದು ಎಂದು ಹೇಳಲಾಗುವುದು. ಕರ್ನಾಟಕದಲ್ಲಿ ಇಂದಿನಿಂದ ನಿಜ ಶ್ರಾವಣ ಮಾಸ ಶುರು, ನಿಜ ಶ್ರಾವಣ ಮಾಸ ಶುಭ ಕಾರ್ಯಗಳಿಗೆ ಶ್ರೇಷ್ಠವಾಗಿರುವುದರಿಂದ ಪೂಜಾ ಕಾರ್ಯಗಳು ಈ ಸಮಯದಲ್ಲಿ ನಡೆಯುವುದು. ಈ ದಿನ ಸೂರ್ಯದೇವ, ಶ್ರೀ ವಿಷ್ಣು, ನರಸಿಂಹನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಸಿಂಹ ಸಂಕ್ರಾಂತಿಯ ಪೂಜಾ ವಿಧಿಗಳು
* ಈ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು.
* ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು
* ಶ್ರೀ ವಿಷ್ಣುವಿಗೆ ಹೂವಿನ ಪೂಜೆ ಅಂತ ಮಾಡಲಾಗುವುದು, ಸೂರ್ಯ ಕನ್ಯಾ ರಾಶಿಗೆ ಸಂಚಾರ ಮಾಡುವವರಿಗೂ ಈ ಪೂಜೆಯನ್ನು ಮಾಡಲಾಗುವುದು.
ಸೂರ್ಯದೇವ ದುರ್ಬಲ ಸ್ಥಾನದಲ್ಲಿದ್ದರೆ ಈ ಪರಿಹಾರ ಮಾಡಿ
* ಸೂರ್ಯ ಸಂಕ್ರಮಣದಂದು ಕೆಂಪು ವಸ್ತ್ರ ಧರಿಸಿ
* ಬೆಳಗ್ಗೆ ಬೇಗನೆ ಎದ್ದು ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಈ ದಿನ ದಾನ-ಧರ್ಮಗಳಿಗೆ ತುಂಬಾನೇ ಶ್ರೇಷ್ಠ
ಸೂರ್ಯ ಯಂತ್ರ ಸ್ಥಾಪಿಸಿದರೆ ಒಳ್ಳೆಯದು
ಯಾರು ಸೂರ್ಯ ಯಂತ್ರ ಸ್ಥಾಪಿಸಬೇಕು?
* ಯಾರಿಗೆ ಸೂರ್ಯ ಮಂತ್ರ ಪಠಿಸಲು ಸಾಧ್ಯವಿಲ್ಲವೋ
* ಹರಳುಗಳನ್ನು ಖರೀದಿಸಿ ಧರಿಸುವಷ್ಟು ಶಕ್ತಿಯಿಲ್ಲದಿದ್ದರೆ ಈ ಸೂರ್ಯ ಯಂತ್ರ ಸ್ಥಾಪಿಸುವುದರ ಮುಖಾತರ ಪರಿಹಾರ ಕಂಡು ಕೊಳ್ಳಬಹುದು.
ಸೂರ್ಯ ಮಂತ್ರ
ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ
ಸೂರ್ಯ ಗಾಯತ್ರಿ ಮಂತ್ರ:
ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್
ಸೂರ್ಯ ವಶೀಕರಣ ಮಂತ್ರ:
ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ
ಸೂರ್ಯ ಬೀಜ ಮಂತ್ರ:
ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ
ಆದಿತ್ಯ ಹೃದಯಂ ಸ್ತೋತ್ರಂ
ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ



Click it and Unblock the Notifications
