Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ವಾರದ ದಿನಗಳಲ್ಲಿ ಬುಧವಾರ ಗಣೇಶನ ಪೂಜೆಗೆ ವಿಶೇಷವಾದ ದಿನ, ಏಕೆ?
ಭಾದ್ರಪದ ಮಾಸದ ಚೌತಿಯಂದು ಗಣೇಶ ಹಬ್ಬವನ್ನು ಆಚರಿಸುತ್ತೇವೆ, ಅದೇ ರೀತಿ ಪ್ರತಿ ಬುಧವಾರ ಗಣೇಶನ ಆರಾಧನಿಗೆ ವಿಶೇಷವಾದ ದಿನವಾಗಿದೆ. ನಮ್ಮ ಸಂಕಲ್ಪ ನೆರವೇರಲು ಬುಧವಾರದಂದು ಗಣೇಶನ ಆರಾಧನೆ ಮಾಡಲಾಗುವುದು.

ಗಣೇಶನ ಆರಾಧನೆ ಮಾಡುವುದರಿಂದ ಎಲ್ಲಾ ಕಷ್ಟಗಳು ದೂರಾಗುವುದು ಎಂಬುವುದು ಅವನನ್ನು ನಂಬಿದ ಭಕ್ತರ ಬಲವಾದ ನಂಬಿಕೆ, ನಮ್ಮ ಬದುಕಿನಲ್ಲಿರುವ ಎಲ್ಲಾ ವಿಘ್ನಗಳನ್ನು ದೂರ ಮಾಡಿ ನಮ್ಮ ಬದುಕಿನಲ್ಲಿ ನೆಮ್ಮದಿ ತರುತ್ತಾನೆ ಎಂದು ನಂಬಲಾಗಿದೆ. ವಾರದಲ್ಲಿ ಗಣೇಶನ ಆರಾಧನೆಗೆ ಶ್ರೇಷ್ಠವಾದ ದಿನವೆಂದರೆ ಬುಧವಾರ, ಕೆಲವರು ಮಂಗಳವಾರ ಹಾಗೂ ಶುಕ್ರವಾರದಂದೂ ಕೂಡ ಗಣೇಶ ಹಬ್ಬವನ್ನು ಆಚರಿಸುತ್ತಾರೆ.
ಬುಧವಾರ ಗಣೇಶ ಪೂಜೆಯ ವಿಶೇಷತೆ
ಗುರುವಾರದಂದು ಗಣೇಶನ ಪೂಜೆ ಮಾಡುವುದರಿಂದ ಗಣೇಶನ ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಹೇಳಲಾಗುವುದು. ತಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವ ಸಂಕಲ್ಪಗಳು ನೆರವೇರಲು ಶ್ರೀಗಣೇಶ ಸಹಾಯ ಮಾಡುತ್ತಾನೆ, ದುಃಖವನ್ನು ದೂರ ಮಾಡುತ್ತಾನೆ, ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತಾನೆ, ನಮ್ಮ ಬದುಕಿನಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಾನೆ.
ಬುಧವಾರ ಗಣೇಶನ ಆರಾಧನೆ ಹೇಗೆ ಮಾಡಬೇಕು?
ಬುಧ ಗ್ರಹ ದೋಷವಿದ್ದರೆ ಬುಧವಾರ ಗಣೇಶನ ಪೂಜೆ ಮಾಡುವುದರಿಂದ ಗ್ರಹದೋಷ ನಿವಾರಣೆಯಾಗುವುದು, ಅಲ್ಲದೆ ಈ ದಿನ ಉಪವಾಸವಿದ್ದು ಭಕ್ತಿಯನ್ನು ಶ್ರೀ ಕೃಷ್ಣ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು, ಅಲ್ಲದೆ ಗಣೇಶನ ಪೂಜೆಯ ಬಳಕ ಮನೆಯಿಂದ ಹೊರಗಡೆ ಹೋಗುವಾಗ ತಮ್ಮ ಬಳಿ ಹಸಿರು ಬಣ್ಣದ ಕರ್ಚೀಫ್ ಹಿಡಿದುಕೊಳ್ಳಬೇಕು, ಇದರಿಂದ ಬಯಧ ಗ್ರಹ ನಮ್ಮ ಕುಂಡಲಿಯಲ್ಲಿ ಬಲವಾಗುವುದು, ಸವಾಲುಗಳು ದೂರಾಗುವುದು ಎಂದು ಹೇಳಲಾಗುವುದು.
ಗಣೇಶನಿಗೆ ಗರಿಕೆ ಅರ್ಪಿಸಿ
ದೀಪ ಹಚ್ಚಿ, ಕರ್ಪೂರ ಹಚ್ಚಿ ಗಣೇಶನಗೆ ಗಮಧದ ಕಡ್ಡಿ ಹಚ್ಚಿಡಿ. ಹೂವು-ಹಣ್ಣುಗಳನ್ನು ಅರ್ಪಿಸಿ, ನೀವು ಗಣೇಶನಿಗೆ ಗರಿಕೆಯನ್ನು ಅರ್ಪಿಸಿ, ನಂತರ ಭಕ್ತಿಯಿಂದ ಪೂಜಿಸಿ, ಗಣೇಶನಿಗೆ ಇಷ್ಟದ ಮೋದಕಗಳನ್ನು ಅರ್ಪಿಸಿ ನಿಮ್ಮ ಇಷ್ಟಾರ್ಥ ನೆರವೇರಲು ಭಕ್ತಿಯಿಂದ ಪ್ರಾರ್ಥಿಸಿ.
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್‌ತ್ರಾಯ ನಮಃ
ಈ ಮಂತ್ರದ ಅರ್ಥಗಳು
ಓಂ ಗಮ್ ಗಣಪತಯೇ ನಮಃ
ಇದು ಬೀಜ ಮಂತ್ರವಾಗಿದ್ದು ಗಣೇಶನ ಒಲಿಸಿಕೊಳ್ಳಲು ಈ ಮಂತ್ರ ಪಠಣೆ ಮಾಡಲಾಗುವುದು.
ಓಂ ಶ್ರೀ ಗಣೇಶಾಯ ನಮಃ
ಈ ಮಂತ್ರ ಹೇಳುವ ಮುಲಕ ಗಣೇಶನನ್ನು ನಮಸ್ಕರಿಸಲಾಗುವುದು.
ಓಂ ಏಕದಂತಾಯ ನಮಃ
ಆನೆಯ ತಲೆಯ ಗಣೇಶನ ರೂಪವನ್ನು ವರ್ಣಿಸಿ ಹೇಳುವ ಮಂತ್ರ ಇದಾಗಿದೆ.
ಓಂ ಸುಮುಖಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಮನಸ್ಸಿನಲ್ಲಿ ಸುಂದರ ಆಲೋಚನೆಗಳು ಮೂಡುವುದು.
ಓಂ ಕ್ಷಿಪ್ರ ಪ್ರಸಾದಾಯ ನಮಃ
ಶೀಘ್ರವೇ ವರವನ್ನು ಕರುಣಿಸುವವನು ಎಂದರ್ಥ
ಓಂ ಬಾಲಚಂದ್ರಾಯ ನಮಃ
ಹಣೆಯಲ್ಲಿ ಚಂದ್ರನನ್ನು ಇಡಿಸಿಕೊಂಡವವನು ಎಂದರ್ಥ
ಓಂ ಗಣಾಧ್ಯಕ್ಷಾಯ ನಮಃ
ಈ ಮಂತ್ರ ಪಠಣೆ ನಿಮ್ಮಲ್ಲಿ ಚೈತನ್ಯ ಮೂಡಿಸುವುದು
ಓಂ ವಿನಾಯಕಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಕಷ್ಟಗಳು ದೂರಾಗುವುದು
ಓಂ ವಿಘ್ನನಾಶಾಯ ನಮಃ
ವಿಘ್ನಗಳೆಲ್ಲಾ ನಿವಾರಣೆಯಾಗುವುದು
ಓಂ ಲಂಬೋಧರಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ನಿಮ್ಮಲಲ್ಲಿ ಹೊಸ ಚೈತನ್ಯ ಮೂಡುವುದು
ಓಂ ಗಜಕರ್ಣಿಕಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಯಾವ ಕೆಡಕು ನಮಗೆ ಆಗುವುದಿಲ್ಲ
ಓಂ ಕಪಿಲಾಯ ನಮಃ
ಈ ಮಂತ್ರ ಪಠಣೆಯಿಂದ ನೆನೆಸಿದ ಕಾರ್ಯ ನೆರವೆರುವುದು
ಓಂ ವಿಕ್‌ತ್ರಾಯ ನಮಃ
ವಿಶ್ವಕ್ಕೆ ಶ್ರೇಯಸ್ಸು ಉಂಟು ಮಾಡು ಎಂದು ಪ್ರಾರ್ಥಿಸಲಾಗುವುದು.
ಈ ಮಂತ್ರವನ್ನು 108 ಬಾರಿ ಪಠಣೆ ಮಾಡಿದರೆ ಇಷ್ಟಾರ್ಥಗಳು ನೆರವೇರುವುದು, ಗಣೇಶನ ಕೃಪೆಯಿಂದ ಬದುಕಿನಲ್ಲಿ ಧನಾತ್ಮಕ ಘಟನೆಗಳು ಸಂಭವಿಸುವುದು.



Click it and Unblock the Notifications
