Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವ ರಾಶಿಯವರು ಯಾವ ತಿಂಗಳಿನಲ್ಲಿ ಮನೆ ಖರೀದಿ ಮಾಡಬೇಕು?
ಸ್ವಂತ ಮನೆಯನ್ನು ಹೊಂದಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಪ್ರತಿಯೊಬ್ಬರು ಕನಸಿನ ಗೂಡು ಮಾಡಬೇಕೆಂದು ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಕೆಲವೊಂದು ಸಾರಿ ಎಷ್ಟೇ ಕಷ್ಟಪಟ್ಟರೂ ಕೂಡ ನಮ್ಮ ಗ್ರಹಗತಿಗಳು ಸರಿ ಇಲ್ಲದಿದ್ದರೆ ನಾವು ಅಂದುಕೊಂಡ ಯಾವುದೇ ಕೆಲಸಗಳನ್ನು ಮಾಡೋದಕ್ಕೆ ಕಷ್ಟವಾಗುತ್ತೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಯಾ ರಾಶಿಯವರು ಆಯಾ ತಿಂಗಳಿನಲ್ಲಿ ಮನೆಯನ್ನು ಖರೀದಿ ಮಾಡಬಹುದು. ಅಥವಾ ಹೊಸ ಮನೆಯನ್ನು ನಿರ್ಮಿಸಬಹುದಂತೆ. ಇದರಿಂದ ಒಳ್ಳೆಯದಾಗುತ್ತಂತೆ. ಅಷ್ಟಕ್ಕು ಯಾವ ರಾಶಿಯವರು ಯಾವ ತಿಂಗಳಿನಲ್ಲಿ ಮನೆ ಮಾಡಿದರೆ ಒಳ್ಳೆಯದಾಗುತ್ತೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ತಿಂಗಳು : ಜುಲೈ
ಮೇಷ ರಾಶಿಯವರು ಜುಲೈ ತಿಂಗಳಲ್ಲಿ ಮನೆ ಖರೀದಿಸಿದರೆ ಅಥವಾ ನಿರ್ಮಿಸಿದರೆ ಒಳ್ಳೆಯದಾಗುತ್ತೆ. ಈ ರಾಶಿಯವರು ಹಠವಾದಿಗಳಾಗಿರುತ್ತಾರೆ. ಇವರಲ್ಲಿ ಸ್ಪರ್ಧಾರ್ತಕ ಮನೋಭಾವ ಹೆಚ್ಚಾಗಿರುತ್ತದೆ. ಎಷ್ಟೇ ಕಷ್ಟಗಳು ಬಂದರೂ ಜಗ್ಗದೇ ಅದರ ವಿರುದ್ಧ ಹೋರಾಡುವ ಗುಣ ಇವರಲ್ಲಿದೆ. ಅಂದುಕೊಂಡ ಕೆಲಸವನ್ನು ಇವರು ಮಾಡಿಯೇ ತೀರುತ್ತಾರೆ.
ವೃಷಭ ರಾಶಿ
ತಿಂಗಳು : ಆಗಸ್ಟ್
ವೃಷಭ ರಾಶಿಯವರು ಆಗಸ್ಟ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಒಳ್ಳೆಯದಾಗುತ್ತದೆ. ವೃಷಭ ರಾಶಿಯವರು ತುಂಬಾ ಸಮಯದಿಂದ ಮನೆಯನ್ನು ಹೊಂದಬೇಕೆಂಬ ಆಸೆ ಹೊಂದಿರುತ್ತಾರೆ. ಇದಕ್ಕಾಗಿ ಶ್ರಮಪಟ್ಟು ಕೆಲಸ ಕೂಡ ಮಾಡಿರುತ್ತಾರೆ. ಇದಕ್ಕಾಗಿ ನೀವು ನಿಮ್ಮ ಹೆಚ್ಚಿನ ಸಮಯ ಹಾಗೂ ದುಡ್ಡನ್ನು ಮೀಸಲಿಡಬೇಕಾಗುತ್ತದೆ. ಸಮಯ ತೆಗೆದುಕೊಂಡರೂ ಕೂಡ ಒಳ್ಳೆಯ ಮನೆಯನ್ನೇ ಮಾಡುತ್ತೀರಿ.
ಮಿಥುನ ರಾಶಿ
ತಿಂಗಳು : ಸೆಪ್ಟೆಂಬರ್
ಮಿಥುನ ರಾಶಿಯವರು ಸೆಪ್ಟೆಂಬರ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಒಳ್ಳೆಯದಾಗುತ್ತದೆ. ಎಷ್ಟೇ ಕಷ್ಟ ಆದರೂ ಸರಿ ನೀವು ಖಂಡಿತ ಮನೆಯನ್ನು ಹೊಂದುತ್ತೀರಿ. ನೀವು ನಿಮ್ಮ ಪ್ರಯತ್ನ ಮುಂದುವರಿಸಿದರೆ ಖಂಡಿತ ನೀವು ಅಂದುಕೊಂಡ ಕೆಲಸ ಆಗುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ.
ಕರ್ಕಾಟಕ
ತಿಂಗಳು : ಅಕ್ಟೋಬರ್
ಕರ್ಕಾಟಕ ರಾಶಿಯವರು ಅಕ್ಟೋಬರ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಉತ್ತಮವಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಸ್ವಂತ ಮನೆಯನ್ನು ಹೊಂದುವ ಆಸೆ ತುಂಬಾ ಸಮಯದಿಂದ ಇರುತ್ತದೆ. ಅದಕ್ಕಾಗಿ ನೀವು ಕಷ್ಟ ಪಟ್ಟು ಕೆಲಸ ಮಾಡುತ್ತೀರಿ. ಒಂದಲ್ಲ ಒಂದು ದಿನ ಖಂಡಿತ ನೀವು ಅಂದುಕೊಂಡ ಕೆಲಸವನ್ನು ಮಾಡುತ್ತೀರಿ.
ಸಿಂಹ ರಾಶಿ
ತಿಂಗಳು : ನವೆಂಬರ್
ಸಿಂಹ ರಾಶಿಯವರು ನವೆಂಬರ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಉತ್ತಮವಾಗುತ್ತದೆ. ಯಾವುದಾದರೂ ಕನಸನ್ನು ಪೂರೈಸುವ ಮುಂದಾಳತ್ವವನ್ನು ವಹಿಸಿಕೊಂಡರೆ ಅದನ್ನು ನೀವು ಪೂರ್ಣಗೊಳಿಸದೇ ಇರೋದಿಲ್ಲ. ನಿಮ್ಮ ಕನಸನ್ನು ತಲುಪಲು ನೀವು ಕಷ್ಟ ಪಟ್ಟು ಕೆಲಸ ಮಾಡುತ್ತೀರಿ. ಇನ್ನೂ ಮನೆ ಹೊಂದುವ ವಿಚಾರಕ್ಕೆ ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ನಿಮ್ಮ ಗುರಿ ತಲುಪುತ್ತೀರಿ.
ಕನ್ಯಾ ರಾಶಿ
ತಿಂಗಳು : ಡಿಸೆಂಬರ್
ಕನ್ಯಾ ರಾಶಿಯವರು ಡಿಸೆಂಬರ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಉತ್ತಮವಾಗುತ್ತದೆ. ಈ ರಾಶಿಯವರು ಒಂದು ಕೆಲಸವನ್ನು ಮಾಡಬೇಕು ಅಂತ ಯೋಚಿಸಿದರೆ ಅದನ್ನು ಪೂರ್ಣಗೊಳಿಸಿದೇ ಬಿಡುವವರಲ್ಲ. ಯೋಗ್ಯವಾದ ಮನೆ ಸಿಗುವವರೆಗೂ ಇವರು ಹೂಡಿಕೆ ಮಾಡೋದಕ್ಕೆ ಹೋಗೋದಿಲ್ಲ. ಮನೆ ವಿಚಾರದಲ್ಲಿ ದುಡುಕದೇ ನಿರ್ಧಾರ ತೆಗೆದುಕೊಳ್ಳುತ್ತಾರೆ.
ತುಲಾ ರಾಶಿ
ತಿಂಗಳು : ಜನವರಿ
ತುಲಾ ರಾಶಿಯವರು ಜನವರಿ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಉತ್ತಮವಾಗುತ್ತದೆ. ಈ ರಾಶಿಯವರು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳೋದಿಲ್ಲ. ಪರಿಶ್ರಮ ಪಟ್ಟರೆ ಖಂಡಿತ ಒಂದಲ್ಲ ಒಂದು ದಿನ ಮನೆ ಹೊಂದುತ್ತೀರಿ. ಆದರೆ ನಿಮ್ಮ ಪ್ರಯತ್ನ ನಿರಂತರವಾಗಿ ಇರಬೇಕು. ಹಾಗೂ ನಿಮ್ಮಲ್ಲಿ ತಾಳ್ಮೆ ಅನ್ನೋದು ಮುಖ್ಯವಾಗಿ ಇರಬೇಕಾಗುತ್ತದೆ.
ವೃಶ್ಚಿಕ ರಾಶಿ
ತಿಂಗಳು : ಫೆಬ್ರವರಿ
ವೃಶ್ಚಿಕ ರಾಶಿಯವರು ಫೆಬ್ರವರಿ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಒಳ್ಳೆಯದಾಗುತ್ತದೆ. ಇವರು ಮನೆಯನ್ನು ಖರೀದಿಸುವಾಗ ದುಂದು ವೆಚ್ಚ ಮಾಡೋದಕ್ಕೆ ಇಷ್ಟ ಪಡೋದಿಲ್ಲ. ಅಳತೆ-ತೂಗಿ ಒಳ್ಳೆಯ ಬೆಲೆಗೆ ಒಂದು ಮನೆಯನ್ನು ಖರೀದಿ ಮಾಡುತ್ತಾರೆ. ಈ ರಾಶಿಯವರು ಪ್ರತಿಯೊಂದು ವಿಚಾರದಲ್ಲೂ ಲೆಕ್ಕಾಚಾರ ಮಾಡಿ ವ್ಯವಹಾರ ಮಾಡುತ್ತಾರೆ.
ಧನು ರಾಶಿ
ತಿಂಗಳು : ಮಾರ್ಚ್
ವೃಶ್ಚಿಕ ರಾಶಿಯವರು ಮಾರ್ಚ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಒಳ್ಳೆಯದಾಗುತ್ತದೆ. ಈ ರಾಶಿಯವರಯ ರಿಸ್ಕ್ ತೆಗೆದುಕೊಳ್ಳೋದಕ್ಕೆ ಹಿಂದೆ-ಮುಂದೆ ನೋಡೋದಿಲ್ಲ. ಇವರಲ್ಲಿರುವ ಆತ್ಮ ವಿಶ್ವಾಸದಿಂದ ಇವರು ಎಂತಹ ಅಪಾಯಗಳನ್ನು ಬೇಕಾದರೂ ಎದುರಿಸುತ್ತಾರೆ. ನೀವು ಹಾಕಿಕೊಂಡ ಬಜೆಟ್ ಗಿಂತ ನಿಮ್ಮ ಮನೆಯ ಖರ್ಚು ಅಧಿಕವಾಗಿದ್ದರೆ, ಮನೆ ಖರೀದಿಸುವ ಯೋಜನೆಯಿಂದ ಹಿಂದೆ ಸರಿಯೋದಕ್ಕೆ ಹೋಗಬೇಡಿ. ಕಷ್ಟ ಪಟ್ಟದರೂ ಮನೆಯನ್ನು ಹೊಂದಲು ಪ್ರಯತ್ನಿಸಿ.
ಮಕರ ರಾಶಿ
ತಿಂಗಳು : ಏಪ್ರಿಲ್
ವೃಶ್ಚಿಕ ರಾಶಿಯವರು ಏಪ್ರಿಲ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಪರಿಪೂರ್ಣ ಮನೆಯನ್ನು ಹೊಂದುವ ಆಸೆ ಬಹು ದಿನಗಳ ಆಸೆಯಾಗಿರುತ್ತದೆ. ಈ ರಾಶಿಯವರು ಬಜೆಟ್ ಪ್ಲಾನ್ ತುಂಬಾ ಚೆನ್ನಾಗಿ ಮಾಡುತ್ತಾರೆ. ಇವರು ಖರ್ಚು ಮಾಡೋದಕ್ಕಿಂತ ಹೆಚ್ಚಾಗಿ ಉಳಿತಾಯ ಮಾಡುತ್ತಾರೆ. ಕನಸನ್ನು ನನಸು ಮಾಡುವ ಕಡೆಗೆ ಕೆಲಸ ಮಾಡುತ್ತಾರೆ.
ಕುಂಭ ರಾಶಿ
ತಿಂಗಳು : ಮೇ
ಕುಂಭ ರಾಶಿಯವರು ಮೇ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಒಳ್ಳೆಯದಾಗುತ್ತದೆ. ಈ ರಾಶಿಯವರು ಯಾವಾಗಲೂ ಆಲೋಚಿಸಿ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಹಣಕಾಸಿನ ವಿಚಾರದಲ್ಲಿ ಇವರು ತುಂಬಾನೇ ಕಟ್ಟುನಿಟ್ಟು. ಇದೇ ಕಾರಣಕ್ಕೆ ಇವರು ಅಂದುಕೊಂಡ ಕನಸಿನ ಮನೆಯನ್ನು ಬಹುಬೇಗ ಹೊಂದುತ್ತಾರೆ.
ಮೀನ ರಾಶಿ
ತಿಂಗಳು : ಜೂನ್
ಮೀನ ರಾಶಿಯವರು ಜೂನ್ ತಿಂಗಳಲ್ಲಿ ಮನೆಯನ್ನು ಹೊಂದಿದರೆ ಒಳ್ಳೆಯವಾಗುತ್ತದೆ. ನಿಮ್ಮಲ್ಲಿ ದುಡ್ಡಿರುತ್ತೋ ಇಲ್ವೋ ಹೇಗಾದರೂ ಮಾಡಿ ಮನೆಯನ್ನು ಹೊಂದಬೇಕು ಅನ್ನೋ ಆಸೆ ನಿಮ್ಮಲ್ಲಿ ಇರುತ್ತದೆ. ಇದೇ ನಂಬಿಕೆಯಿಂದ ನೀವು ಮುನ್ನಡೆದರೆ ಖಂಡಿತ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದಿದ್ದರೂ ನೀವು ಮನೆಯನ್ನು ಹೊಂದುತ್ತೀರಿ. ಹೀಗಾಗಿ ನೀವು ಆರ್ಥಿಕತೆ ಬಗ್ಗೆ ಇತರರಿಂದ ಸಲಹೆ ಪಡೆದರೆ ಉತ್ತಮ.



Click it and Unblock the Notifications

