Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಶ್ರಾವಣ ಶಿವರಾತ್ರಿ 2023 : ಇಷ್ಟಾರ್ಥ ಸಿದ್ಧಿಗಾಗಿ ಈ ಪರಿಹಾರ ಮಾಡಿ!
ಹಿಂದೂ ಪಂಚಾಂಗದ ಪ್ರಕಾರ ಒಂದು ವರ್ಷದಲ್ಲಿ ಒಟ್ಟು 12 ಶಿವರಾತ್ರಿಗಳು ಬರುತ್ತವೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯು ಜುಲೈ 15 ರಂದು ರಾತ್ರಿ 08:32 ಕ್ಕೆ ಪ್ರಾರಂಭವಾಗಿ ಜುಲೈ 16 ರಂದು ರಾತ್ರಿ 10:08 ಕ್ಕೆ ಕೊನೆಗೊಳ್ಳುತ್ತದೆ. ಶ್ರಾವಣ ಶಿವರಾತ್ರಿಯ ದಿನ ರಾತ್ರಿಯಲ್ಲಿ ಪೂಜೆ ಮಾಡುವ ವಿಧಿ-ವಿಧಾನಗಳು ಇರೋದ್ರಿಂದ ಉಪವಾಸವನ್ನು ಜುಲೈ 15, 2023 ರಂದು ಶನಿವಾರ ಆಚರಿಸಲಾಗುತ್ತದೆ.

ಶ್ರಾವಣ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಶಿವ ದೇವಾಲಯಗಳಲ್ಲಿ ಭಕ್ತರು ರುದ್ರಾಭಿಷೇಕ ಹಾಗೂ ಪೂಜೆಗಳನ್ನು ಕೈಗೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಶಿವನಲ್ಲಿ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಅನೇಕ ಜನರು ಶ್ರಾವಣ ಶಿವರಾತ್ರಿಯಂದು ಉಪವಾಸ ಮಾಡುತ್ತಾರೆ.
ಶಿವರಾತ್ರಿಯು ಪವಿತ್ರವಾದ ದಿನವಾಗಿದ್ದು, ಈ ಶಿವನ ಧ್ಯಾನದಲ್ಲಿ ತಲ್ಲೀನರಾದರೆ ಆತ ನಮ್ಮ ಕಷ್ಟಗಳನ್ನೆಲ್ಲಾ ದೂರ ಮಾಡುತ್ತಾನೆ ಅನ್ನೋ ನಂಬಿಕೆಯಿದೆ. ಅಷ್ಟಕ್ಕೂ ಶಿವರಾತ್ರಿ ದಿನ ನಮ್ಮ ಇಷ್ಟಾರ್ಥ ಸಿದ್ಧಿಗಾಗಿ ಏನು ಮಾಡಬೇಕು? ಯಾವ ರೀತಿ ಪರಿಹಾರಗಳನ್ನು ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.
ಶ್ರಾವಣ ಶಿವರಾತ್ರಿ ದಿನ ಈ ರೀತಿ ಪರಿಹಾರ ಮಾಡಿ :
* ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ
* ಶಿವನ ಸಂಕಲ್ಪ ಮಾಡಿ ಹಾಲಿನಿಂದ ಅಭಿಷೇಕ ಮಾಡಿದ ನಂತರ ಓಂ ಹಿ ಈಶಾನಾಯ ನಮಃ ಎಂದು ಜಪಿಸಿ
* ಎರಡನೇ ಹಂತದಲ್ಲಿ ಅಭಿಷೇಕ ಮಾಡಿದ ನಂತರ ಓಂ ಹಿ ಅಘೋರಾಯ ನಮಃ ಎಂದು ಜಪಿಸಿ
* ಮೂರನೇ ಹಂತದಲ್ಲಿ ಧೃತ ಸ್ನಾನ ಮಾಡಿ ಮತ್ತು ಓಂ ಹಿ ವಾಮದೇವಾಯ ನಮಃ ಎಂಬ ಮಂತ್ರವನ್ನು ಜಪಿಸಿ
* ನಾಲ್ಕನೇ ಹಂತದಲ್ಲಿ ಜೇನಿನ ಅಭಿಷೇಕ ಮಾಡಿ. ಮತ್ತು ಓಂ ಹಿ ಸದ್ಯೋಜಾತಯೇ ನಮಃ ಮಂತ್ರವನ್ನು ಜಪಿಸಿ.
ಸಮಸ್ಯೆಗೆ ಪರಿಹಾರಗಳು ಪಡೆಯೋದು ಹೇಗೆ?
* ಮನುಷ್ಯ ಎಂದ ಮೇಲೆ ಆತನಿಗೆ ನೂರಾರು ಆಸೆ, ಕನಸುಗಳಿರುತ್ತದೆ. ಉದಾಹರಣೆಗೆ ಉದಾಹರಣೆಗೆ ನಿಮಗೆ ಸಂಬಳ ಬರದಿದ್ದರೆ "ನನಗೆ ಸಂಬಳ ಸಿಕ್ಕಿದೆ ನನಗೆ ಸಂತೋಷವಾಗಿದೆ" ಎಂದು ಬರೆಯಬೇಕು. ಕೆಂಪು ಪೆನ್ನಿನಿಂದ ಕಾಗದದ ಮೇಲೆ ಬರೆದು ಆ ಕಾಗದವನ್ನು ಮಡಚಿ ಶಿವರಾತ್ರಿಯ ದಿನದಂದು ಮನೆಯ ಹೊರಗೆ ನೆಲದ ಮೇಲೆ ಹೂತುಹಾಕಿ. ಅಲ್ಲದೆ ಆ ಜಾಗದಲ್ಲಿ ಗಿಡ ನೆಟ್ಟು ಪ್ರತಿನಿತ್ಯ ನೀರುಣಿಸಬೇಕು.
* ಪಂಚ ಮುಖಿ ರುದ್ರಾಕ್ಷವನ್ನು ನೀರಿನಿಂದ ಸ್ವಚ್ಛಗೊಳಿಸಿ ಒಣಗಿಸಿ. ಒಣಗಿದ ನಂತರ ಅದನ್ನು ನಿಮ್ಮ ಎಡಗೈಯಲ್ಲಿ ಇರಿಸಿ. ಮತ್ತು ಅದನ್ನು ನಿಮ್ಮ ಬಲಗೈಯಿಂದ ಮುಚ್ಚಿ. ಮತ್ತು ನಿಮ್ಮ ಮನಸ್ಸಿನಲ್ಲಿರುವ ಹಾರೈಕೆಗಳನ್ನು ಹೇಳಿಕೊಳ್ಳಿ. ಇದು ನನ್ನ ಒಂದು ಮಾಂತ್ರಿಕ ರುದ್ರಾಕ್ಷಿಯಾಗಿದ್ದು ಅದು ನನ್ನ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ಮನಸ್ಸಿನಲ್ಲಿ ಯೋಚಿಸಿ. ಇದಾದ ಬಳಿಕ ಅದನ್ನು ಎಲ್ಲೋ ಸುರಕ್ಷಿತವಾಗಿ ಇರಿಸಿ ಮತ್ತು ದಿನಕ್ಕೆ ಒಮ್ಮೆ ನೋಡಿ.
* ಒಂದು ಕರಿಮೆಣಸು ಮತ್ತು ಏಳು ಕರಿ ಎಳ್ಳನ್ನು ಅಂಗೈಯಲ್ಲಿ ಇರಿಸಿ. ಮತ್ತು ನಿಮ್ಮ ಹೃದಯದಿಂದ ಹಾರೈಕೆ ಮಾಡಿ ಮತ್ತು ಅದನ್ನು ಶಿವಲಿಂಗಕ್ಕೆ ಅರ್ಪಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಖಂಡಿತ ಈಡೇರುತ್ತದೆ.
* ಶಿವರಾತ್ರಿಯ ದಿನದಂದು 21 ಬಿಲ್ವಪತ್ರೆಯನ್ನು
ತೆಗೆದುಕೊಂಡು ಪ್ರತಿಯೊಬ್ಬರ ಮೇಲೆ ಶ್ರೀಗಂಧದಿಂದ 'ಓಂ ನಮಃ ಶಿವಾಯ' ಎಂದು ಬರೆಯಿರಿ. ಮತ್ತು ನಿಮ್ಮ ಇಚ್ಛೆಯನ್ನು ಮನಸ್ಸಿನಲ್ಲಿ ನೆನೆದುಕೊಂಡು ಶಿವಲಿಂಗಕ್ಕೆ ಅರ್ಪಿಸಿ.
ಶಿವರಾತ್ರಿಯ ದಿನ ಈ ರೀತಿ ಪೂಜೆ ಸಲ್ಲಿಸಿ ಪರಿಹಾರಗಳನ್ನು ಮಾಡಿದ್ರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತೆ ಅನ್ನೋ ನಂಬಿಕೆಯಿದೆ.
ಸೂಚನೆ : ಇಂಟರ್ನೆಟ್ ನಲ್ಲಿ ಸಿಗುವ ಮಾಹಿತಿಯನ್ನು ಆಧಾರಿಸಿ ಈ ಲೇಖನ ಬರೆಯಲಾಗಿದೆ. ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಜವಾಬ್ದಾರರಾಗಿ ಇರೋದಿಲ್ಲ. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ತಜ್ಞರ ಮಾಹಿತಿ ಪಡೆಯೋದು ಉತ್ತಮ.



Click it and Unblock the Notifications
