Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಶ್ರಾವಣ ಮಾಸ 2023 : ವೈವಾಹಿಕ ಸಮಸ್ಯೆ ದೂರಾಗಲು ಶ್ರಾವಣ ಮಾಸದಲ್ಲಿ ಈ ರೀತಿ ಶಿವನ ಆರಾಧನೆ ಮಾಡಿ
ಶ್ರಾವಣ ಮಾಸ ಶಿವನಿಗೆ ಸಮರ್ಪಿತವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಶಿವನನ್ನು ಭಕ್ತಿಯಿಂದ ನೆನೆದರೆ ನಮ್ಮ ಇಷ್ಟಾರ್ಥಗಳೆಲ್ಲಾ ನೆರವೇರುತ್ತೆ ಅನ್ನೋ ನಂಬಿಕೆ ಇದೆ. ಅದ್ರಲ್ಲೂ ಪತಿ ಪತ್ನಿಯ ನಡುವೆ ಕಲಹ ಮನಸ್ಥಾಪಗಳು ಇದ್ದರೆ ಈ ಮಾಸದಲ್ಲಿ ಶಿವನನ್ನು ಭಕ್ತಿಯಿಂದ ಆರಾಧನೆ ಮಾಡೋದ್ರ ಮೂಲಕ ನಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಂತೆ.
ಶ್ರಾವಣ ಸೋಮವಾರ ಶಿವನಿಗೆ ಪ್ರಿಯವಾದ ದಿನ. ಈ ದಿನ ದಂಪತಿಗಳು ಮಹಾದೇವನನ್ನು ಸ್ಮರಿಸಿದರೆ ವಿಶೇಷ ಪೂಜೆ ಹಾಗೂ ಪುನಸ್ಕಾರಗಳನ್ನು ಕೈಗೊಳ್ಳಬೇಕಂತೆ. ಅಷ್ಟಕ್ಕು ಶ್ರಾವಣ ಸೋಮವಾರದ ದಿನ ಶಿವನನ್ನು ಪೂಜಿಸೋದ್ರಿಂದ ದಾಂಪತ್ಯದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತೆ? ಯಾವ ರೀತಿಯ ಸಮಸ್ಯೆಗಳೆಲ್ಲಾ ದೂರವಾಗುತ್ತೆ? ಅನ್ನೋದನ್ನು ಒಂದೊಂದಾಗಿ ತಿಳಿಯೋಣ.

1. ದಂಪತಿಗಳ ನಡುವಿನ ಸಾಮರಸ್ಯ ಬಗೆಹರಿಯುತ್ತೆ
ಕೆಲವೊಂದು ಮನೆಗಳಲ್ಲಿ ದಂಪತಿಗಳು ಯಾವತ್ತೂ ಜಗಳವಾಡುತ್ತಿರುತ್ತಾರೆ. ಅವರ ನಡುವೆ ಹೊಂದಾಣಿಕೆ ಅನ್ನೋದು ಇರೋದೇ ಇಲ್ಲ. ಈ ಎಲ್ಲಾ ಸಮಸ್ಯೆಗಳು ಬಗೆ ಹರಿಯಬೇಕಂದ್ರೆ ಶ್ರಾವಣ ಮಾಸದಲ್ಲಿ ಶಿವನ ಧ್ಯಾನ ಮಾಡಬೇಕು. ಒಂದು ಲೋಟ ನೀರು ತೆಗೆದುಕೊಂಡು ಅದ್ರಲ್ಲಿ ಕೆಂಪು ಹೂವುಗಳು, ಹಾಲು ಮತ್ತು ಕುಂಕುಮವನ್ನು ನಿಯಮಿತವಾಗಿ ಶಿವಲಿಂಗಕ್ಕೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ನಡುವಿನ ಪ್ರೀತಿ ಹೆಚ್ಚುತ್ತದೆ.
2. ಬಯಸಿದ ಸಂಗಾತಿ ಸಿಗುತ್ತಾರೆ
ಉತ್ತಮ ಸಂಗಾತಿಯನ್ನು ಪಡೆದಾಗ ಮಾತ್ರ ನಮ್ಮ ಜೀವನ ಚೆನ್ನಾಗಿರೋದಕ್ಕೆ ಸಾಧ್ಯ. ಹೀಗಾಗಿ ಹೆಣ್ಣು ಮಕ್ಕಳು ಉತ್ತಮ ಪತಿಯನ್ನು ಪಡೆಯೋದಕ್ಕಾಗಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಪೂಜೆಯನ್ನು ಮಾಡುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.
ಅದೇನಂದ್ರೆ ಸ್ವಲ್ಪ ಹಾಲು, ಕುಂಕುಮ, ಕೆಂಪು ಹೂವುಗಳನ್ನು ಶುದ್ಧ ನೀರಿನಲ್ಲಿ ಹಾಕಿ ಮತ್ತು ಶಿವಲಿಂಗಕ್ಕೆ ಬುಧವಾರದಂದು ಅರ್ಪಿಸಬೇಕು. ಹೀಗೆ ಮಾಡೋದ್ರಿಂದ ನೀವು ಬಯಸಿದ ಸಂಗಾತಿ ಸಿಗುತ್ತಾರೆ. ಅಷ್ಟೇ ಅಲ್ಲದೇ, ಪಾರ್ವತಿ ದೇವಿ ಮತ್ತು ಶಿವನು ಪ್ರಸನ್ನರಾಗಿ ನಮ್ಮನ್ನು ಆಶೀರ್ವದಿಸುತ್ತಾರಂತೆ.
3. ವೈವಾಹಿಕ ಸಮಸ್ಯೆಗೆ ಮುಕ್ತಿ ಸಿಗುತ್ತದೆ
ದಾಂಪತ್ಯ ಎಂದ ಮೇಲೆ ಅಲ್ಲಿ ಕಲಹ, ಮನಸ್ಥಾಪಗಳು ಇದ್ದೇ ಇರುತ್ತದೆ. ಕೆಲವೊಂದು ಸಾರಿ ಇದಕ್ಕೆಲ್ಲಾ ಶಾಶ್ವತ ಪರಿಹಾರ ಸಿಕ್ಕಿಬಿಟ್ಟರೆ ಸಾಕು ಅಂತ ಅಂದುಕೊಳ್ತೀವಿ. ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಹಳದಿ ಅಥವಾ ಬಿಳಿ ಬಟ್ಟೆಯನ್ನು ಧರಿಸಬೇಕು. ಅದರ ನಂತರ ಬರಿಗಾಲಿನಲ್ಲಿ ಶಿವ ದೇವಾಲಯಕ್ಕೆ ಹೋಗಿ ಶಿವ, ಗಣೇಶ, ಪಾರ್ವತಿ, ನಂದಿ ಮತ್ತು ಕಾರ್ತಿಕೇಯರನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
4. ಮದುವೆ ಮಂಗಳಕರವಾಗಿ ನೆರವೇರುತ್ತದೆ
ಮದುವೆ ಅನ್ನೋದು ಪ್ರತಿಯೊಬ್ಬರ ಬಾಳಿನಲ್ಲಿ ಬರುವ ಶುಭ ಗಳಿಗೆಯದು. ಮದುವೆ ಯಾವುದೇ ವಿಘ್ನಗಳಿಲ್ಲದೇ ನಿರ್ವಿಘ್ನವಾಗಿ ನೆರವೇರಬೇಕೆಂದರೆ ಶಿವನ್ನು ಕುರಿತು ಕೆಲವೊಂದು ವಿಶೇಷ ಪೂಜೆಯನ್ನು ಮಾಡಬೇಕಾಗುತ್ತದೆ. ಅವಿವಾಹಿತ ದಂಪತಿಗಳು ಶ್ರಾವಣ ಮಾಸದ ಸೋಮವಾರದಂದು ಒಟ್ಟಿಗೆ ಶಿವನನ್ನು ಪೂಜಿಸಬೇಕು. ಇದು ಮದುವೆಗೆ ಶುಭ ಎಂದು ಸೂಚಿಸುತ್ತದೆ. ಹಾಗೂ ನಿಮ್ಮ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ.
5. ಪ್ರೇಮಿಗಳು ಈ ರೀತಿ ಮಾಡಿ
ಪ್ರೀತಿಸಿದವರನ್ನೇ ಮದುವೆಯಾಗಬೇಕು ಅನ್ನೋ ಆಸೆ ನಮಗೆ ಖಂಡಿತ ಇರುತ್ತದೆ. ಕೆಲವೊಂದು ಸಲ ಕೆಲವೊಂದು ಕಾರಣಗಳಿಂದ ಆ ಆಸೆ ನೆರವೇರೋದಿಲ್ಲ. ಹಲವಾರು ಅಡ್ಡಿ-ಆತಂಕಗಳು ಬರುತ್ತದೆ. ಇಂತಹ ಸಂದರ್ಭದಲ್ಲಿ ಸೋಮವಾರ ಯಾವುದಾದರೂ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಬೇಕು. ಇನ್ನೂ 108 ಎಲೆಗಳ ಮೇಲೆ ಜೈ ಶ್ರೀರಾಮ್ ಎಂದು ಬರೆದು ಶಿವನಿಗೆ ಅರ್ಪಿಸಿ. ಈ ರೀತಿ ಪರಿಹಾರ ಮಾಡಿದರೆ ಮಂಗಳಕರ ಫಲಿತಾಂಶ ಪಡೆಯಬಹುದು.
6. ಪ್ರೀತಿ ಪಡೆಯಲು
ಕೆಲವೊಂದು ಸಲ ನಾವು ಒಬ್ಬರನ್ನು ತುಂಬಾನೇ ಪ್ರೀತಿ ಮಾಡುತ್ತೇವೆ. ಆದರೆ ಆ ಪ್ರೀತಿಯನ್ನು ಅವರೊಂದಿಗೆ ಹೇಳಿಕೊಳ್ಳೋದಕ್ಕೆ ದೈರ್ಯ ಸಾಲೋದಿಲ್ಲ. ಅವರು ನಮ್ಮ ಪ್ರೀತಿಯನ್ನು ಒಪ್ಪಿಕೊಳ್ತಾರೋ ಇಲ್ವೋ ಅನ್ನೋ ಭಯ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಬುಧವಾರದ ದಿನ ನೀವು ಪ್ರೀತಿಸಿದವರಿಗೆ ಪ್ರಪೋಸ್ ಮಾಡಿದ್ರೆ ತುಂಬಾನೇ ಒಳ್ಳೆಯದು.
ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ಬಿಳಿ ಹೂವುಗಳನ್ನು ಕೊಟ್ಟು ಪ್ರಪೋಸ್ ಮಾಡಿ. ನಿಮ್ಮ ಪ್ರೀತಿಯನ್ನು ಪೂರ್ಣ ವಿಶ್ವಾಸದಿಂದ ಹಾಗೂ ಪ್ರಾಮಾಣಿಕವಾಗಿ ಹೇಳಿದರೆ ಖಂಡಿತ ಅವರು ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ.
ದಾಂಪತ್ಯ ಅಥವಾ ಪ್ರೇಮಿಗಳ ಮಧ್ಯೆ ಎಂತಹ ಸಮಸ್ಯೆಗಳಿದ್ದರೂ ಕೂಡ ಶ್ರಾವಣ ಮಾಸದಲ್ಲಿ ಮಹಾದೇವನ್ನು ಭಕ್ತಿಯಿಂದ ಪೂಜಿಸಿದ್ರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.



Click it and Unblock the Notifications

