Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜುಲೈ 24ಕ್ಕೆ ಶ್ರಾವಣ ಮೊದಲ ಸೋಮವಾರ: ಈ ದಿನ ಶಿವನ ಆರಾಧನೆಯ ಪೂಜಾ ವಿಧಿ ವಿಧಾನಗಳೇನು?
ಜುಲೈ 24ಕ್ಕೆ ಶ್ರಾವಣ ಮೊದಲ ಸೋಮವಾರ. ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನ, ಈ ದಿನ ಶಿವನನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮೆಲ್ಲಾ ಬೇಡಿಕೆಗಳು, ಇಷ್ಟಾರ್ಥಗಳು ಶಿವನ ಕೃಪೆಯಿಂದ ನೆರವೇರುವುದು. ಶ್ರಾವಣ ಸೋಮವಾರದಂದು ಉಪವಾಸವಿದ್ದು ಕೈಲಾಸನಾಥನ ಆರಾಧನೆ ಮಾಡಲಾಗುವುದು.
ಶ್ರಾವಣ ಸೋಮವಾರ ನೀವು ಶಿವನ ಆರಾಧನೆ ಹೇಗೆ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಸೋಮವಾರ ಶಿವಪೂಜೆ ಮಾಡುವಾಗ ಪಾಲಿಸಬೇಕಾದ ಪೂಜಾ ವಿಧಾನಗಳು
ಗಂಗಾಜಲದೊಂದಿಗೆ ಶಿವನ ಪ್ರತಿಷ್ಠಾಪನೆ
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಶಿವ ಕುಟುಂಬವನ್ನು ಪೂಜಿಸಲಾಗುವುದು. ಈ ದಿನ ಶಿವನನ್ನು ಗಂಗಾಜಲದೊಂದಿಗೆ ಪ್ರತಿಷ್ಠಾಪಿಸಿ, ಶಿವನಿಗೆ ವಿಭೂತಿ ಅರ್ಪಿಸಿ ಪೂಜಿಸಬೇಕು. ಶಿವಪೂಜೆಯಲ್ಲಿ ಹಾಲು, ಗಂಗಾಜಲ, ಬಿಲ್ವಪತ್ರೆ, ಎಳ್ಳು, ಹಣ್ಣುಗಳು, ನೇವೇದ್ಯ ಅರ್ಪಿಸಿ ಪೂಜಿಸಲಾಗುವುದು.
ಈ ದಿನ ಶಿವನಿಗೆ ಅಭಿಷೇಕ ಮಾಡಿಸಿ
ನಿಮ್ಮ ಇಷ್ಟಾರ್ಥಗಳು ನೆರವೇರಲು ಈ ದಿನ ನೀವು ಶಿವನಿಗೆ ಅಭಿಷೇಕ ಮಾಡಿಸಿ. ಈ ದಿನ ಶಿವನಿಗೆ ನಿಮ್ಮ ಇಷ್ಟಾರ್ಥಗಳು ನೆರವೇರಲು ನೀವು ನಿರ್ದಿಷ್ಟ ವಸ್ತುವಿನಿಂದ ಅಭಿಷೇಕ ಮಾಡಿದರೆ ಒಳ್ಳೆಯದು. ಹಾಲಿನಿಂದ ಅಭಿಷೇಕ ಮಾಡಿಸಿದೆ ಸಂತಾನ ಭಾಗ್ಯ, ಕುಟುಂಬದಲ್ಲಿ ನೆಮ್ಮದಿ, ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿದರೆ ಧನ ಲಾಭ, ಸಾಸಿವೆ ಎಣ್ಣೆಯಿಂದ ಅಭಿಷೇಕ ಮಾಡಿದರೆ ಶತ್ರುನಾಶ, ತುಪ್ಪದಿಂದ ಅಭಿಷೇಕ ಮಾಡುವುದರಿಂದ ಇಷ್ಟಾರ್ಥ ನೆರವೇರುವುದು.
ಶ್ರಾವಣ ಸೋಮವಾರ ಈ ಉಪವಾಸ ನಿಯಮಗಳನ್ನು ಅನುಭವಿಸಿ
ಶ್ರಾವಣ ಸೋಮವಾರ ಕಠಿಣ ಉಪವಾಸ ನಿಯಮವನ್ನು ಪಾಲಿಸಿದರೆ ತುಂಬಾ ಒಳ್ಳೆಯದು. ಕೆಲವರು ಈ ದಿನ ಏನೂ ತಿನ್ನುವುದಿಲ್ಲ, ಇನ್ನು ಕೆಲವರು ಹಾಲು, ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ಕಠಿಣ ಉಪವಾಸ ನಿಯಮ ಪಾಲಿಸಲು ಕೆಲವರಿಗೆ ಕಷ್ಟವಾಗುವುದು ಅಂಥವರು ಸಾಬುದಾನ ಖಿಚಡಿ ಸೇವಿಸಬಹುದು.
ಶ್ರಾವಣ ಪೂಜೆಯ ವಿಧಾನ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ
* ಶಿವನ ವಿಗ್ರಹ ಅಥವಾ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಓಂ ನಮಃ ಶಿವಾಯ ಎಂಬ ಮಂತ್ರ ಪಠಿಸಿ.
* ಶಿವನಿಗೆ ಅಭಿಷೇಕ ಮಾಡಿ
* ಗಣಪತಿಯನ್ನು ಮೊದಲು ಪೂಜಿಸಬೇಕು
* ಪಾರ್ವತಿ ದೇವಿ, ನಂದಿಗೆ ಗಂಗಾಜಲ ಅರ್ಪಿಸಿ.
* ಶಿವನಿಗೆ 108 ಬಿಲ್ವಪತ್ರೆ ಅರ್ಪಿಸಿ.
ಶಿವನ ಮಂತ್ರಗಳನ್ನು ಪಠಿಸಿ
ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.
ಅರ್ಥ ತ್ರ್ಯಯಂಬಕಮ್: ಓ ಶಿವನೇ ನೀವು ಮೂರು ಕಣ್ಣುಗಳನ್ನು ಹೊಂದಿದ್ದೀರಿ
ಯಜ್ಮಹೇ : ನಿರಂತರವಾಗಿ ಪೂಜಿಸಲ್ಪಡುತ್ತೀರಿ
ಸುಗಂಧಿನ್: ಪರಿಮಳವನ್ನು ಆಸ್ವಾದಿಸುವವರು
ಪುಷ್ಠಿ ವರ್ಧನಂ: ಭಕ್ತಿಯನ್ನು ಹೆಚ್ಚಿಸುವವರು
ಉರ್ವಾರುಕಮೀವ
ಬಂಧನಾತ್: ಮುಕ್ತಿದಾತ
ಮೃತ್ಯು: ಮರಣ
ಮೋಕ್ಷ: ಜನನ ಮರಣ ಚಕ್ರದಿಂದ ಬಿಡುಗಡೆ
ಮಮ್ರಿತಾತ್: ಅಮರ ಅಲ್ಲ
ಅರ್ಥ: ನಾವು ನಿನ್ನನ್ನು ಧ್ಯಾನಿಸುತ್ತೇವೆ ಓಹ್ ಶಿವ. ಸಾವಿನ ಬಂಧಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡಿ ಮತ್ತು ಅಮರತ್ವವು ಸಾಧ್ಯವಾಗದಿದ್ದರೂ, ದಯವಿಟ್ಟು ಮೋಕ್ಷವನ್ನು ಸಾಧಿಸಲು ನಮಗೆ ಸಹಾಯ ಮಾಡಿ ಎಂದು ಇದರ ಅರ್ಥವನ್ನು ಹೇಳಬಹುದು.



Click it and Unblock the Notifications
