Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮದುವೆಯಾದ 3 ನಿಮಿಷಕ್ಕೆ ವಿಚ್ಛೇದನ ಪಡೆದ ದಂಪತಿ..! ಕಾರಣ ಇನ್ನೂ ವಿಚಿತ್ರ.!!
ದಾಂಪತ್ಯ ಅನ್ನೋದು ಏಳೇಳು ಜನ್ಮದ ಅನುಬಂಧ, ಒಮ್ಮೆ ಮದುವೆಯಾದರು ಜೀವನದ ಕೊನೆಯವರೆಗೂ ಒಟ್ಟಿಗೆ ಜೀವಿಸಬೇಕಾದ ಒಂದು ಸುಂದರ ಬದುಕು ಎಂದು ಹೇಳಲಾಗುತ್ತದೆ. ಗಂಡ-ಹೆಂಡತಿ ಈ ಸಂಬಂಧ ಸಾಕು ಬೇರೆ-ಬೇರೆ ಆಗೋಣ ಎಂದು ತೀರ್ಮಾನ ಮಾಡೋದು ಸಹ ತುಂಬಾನೆ ಕಷ್ಟದ ಕೆಲಸವೇ ಆಗಿರುತ್ತೆ.
ಮತ್ತೆ ಕೆಲವರು ಮದುವೆಯಾಗಿ ಜೀವನದ ಕೊನೆಯವರೆಗೂ ಜೊತೆಯಾಗಿರುತ್ತಾರೆ. ಆದ್ರೆ ಮತ್ತೆ ಕೆಲವರದ್ದು ಮದುವೆಯಾಗಿ ಕೆಲವೇ ದಿನದಲ್ಲಿ, ತಿಂಗಳಲ್ಲಿ, ವರ್ಷದಲ್ಲೇ ಮದುವೆ ಮುರಿದು ಬೀಳುವುದನ್ನು ನಾವು ನೋಡಿದ್ದೇವೆ. ಅದೇ ರೀತಿ, ಮದುವೆಯಾಗಿ ಒಂದೇ ದಿನದಲ್ಲಿ ವಿಚ್ಛೇದನಕ್ಕೆ ಮುಂದಾದ ಜೋಡಿ ಕಥೆ ನೋಡಿದ್ದೀರಾ?

ಹೌದು ಇಲ್ಲೊಂದು ಜೋಡಿ ಮದುವೆಯಾದ ದಿನವೇ ವಿಚ್ಛೇದನ ಪಡೆದುಕೊಂಡಿದೆ. ಅಚ್ಚರಿಯ ವಿಚಾರ ಎಂದರೆ ಅವರಿಬ್ಬರು ಮದುವೆಯಾಗಿ ಕೇವಲ 3 ನಿಮಿಷಗಳ ಕಾಲ ಕಳೆದಿತ್ತು. ಮದುವೆಯಾಗಿ ಕೋರ್ಟ್‌ನಿಂದ ಹೊರಬರುವಾಗಲೇ ಇಬ್ಬರ ವಿವಾಹವೂ ಮುರಿದುಬಿದ್ದಿದೆ.
ಈ ಘಟನೆ ನಡೆದಿರುವುದು ಕುವೈತ್‌ನಲ್ಲಿ ಇಬ್ಬರು ಮದುವೆಯಾಗಿ ಮೂರು ನಿಮಿಷದೊಳಗೆ ವಿಚ್ಛೇದನ ಪಡೆದಿದ್ದು, ಇದು ಕುವೈತ್‌ನಲ್ಲಿ ನಡೆದ ಅತ್ಯಂತ ಕಡಿಮೆ ಅವಧಿಯ ಮದುವೆ ಇದಾಗಿದೆ. ಇಂಡಿಪೆಂಡೆಂಟ್ಸ್ ಇಂಡಿಯಲ್ಲಿನ ವರದಿಯ ಪ್ರಕಾರ, ವಿವಾಹ ಸಮಾರಂಭದಿಂದ ಹೊರಡುತ್ತಿರುವಾಗ ಈ ಮದುವೆ ಮುರಿದು ಬಿದ್ದಿದೆ ಎಂದು ವರದಿಯಾಗಿದೆ.
ಈ ಮದುವೆ ಮುರಿಯಲು ಕಾರಣವೇನು?
ಮದುವೆಯಾಗಿ ಒಂದೆರಡು ದಿನದಲ್ಲಿ ಯಾರಾದರು ಬೇರೆ ಬೇರೆ ಆದರೆ ಒಬ್ಬರ ನಡುವೆ ಹೊಂದಾಣಿಕೆ ಆಗದೆ ವಿಚ್ಛೇದನ ಪಡೆದಿರಬಹುದು ಎಂದು ಊಹಿಸಬಹುದು. ಆದ್ರೆ ಇಲ್ಲಿ ಮದುವೆಯಾಗಿ 3 ನಿಮಿಷದ ಒಳಗೆ ವಿಚ್ಛೇದನ ಪಡೆಯುತ್ತಾರೆ ಎಂದರೆ ಅಲ್ಲಿನ ಕಾರಣ ಕೇಳಿ ಜನರೇ ಶಾಕ್ ಆಗಿದ್ದಾರೆ.
ಮದುವೆಗಾಗಿ ಅಲಂಕೃತಗೊಂಡು ಕೋರ್ಟ್‌ಗೆ ಬಂದಿದ್ದ ಜೋಡಿ ಮದುವೆಯ ಸಂಭ್ರಮದಲ್ಲಿ ಮುಳುಗಿತ್ತು. ಮದುವೆಯ ಅಂಗವಾಗಿ ರಿಂಗ್ ಬದಲಾವಣೆ ಮಾಡುವುದು, ಶಾಸ್ತ್ರ ಸಂಪ್ರದಾಯ ಎಲ್ಲವೂ ಸರಿಯಾಗಿಯೆ ನಡೆದಿತ್ತು. ಆದ್ರೆ ಮದುವೆ ಮುಗಿಸಿ ಕೋರ್ಟ್ ರೂಮ್‌ನಿಂದ ಹೊರಬರುವಾಗ ವಧು ಕಾಲು ಎಡುವಿ ವರನ ಮೇಲೆ ಬಿದ್ದಿದ್ದಾಳೆ. ಆದ್ರೆ ವರ ಆಕೆಯ ಪಕ್ಕಕ್ಕೆ ತಳ್ಳಿ ಸ್ಟುಪಿಡ್ ಎಂದು ಬೈದಿದ್ದಾನೆ ಅಷ್ಟೆ. ಇಷ್ಟಕ್ಕೆ ಸಿಟ್ಟಿಗೆದ್ದ ಹುಡುಗಿ ಆತನ ವಿರುದ್ಧ ಕೋರ್ಟ್‌ನಲ್ಲೇ ಗುಡುಗಿದ್ದಾಳೆ. ಅಲ್ಲದೆ ಈ ಮದುವೆ ಬೇಡವೆಂದು ಅದೇ ಕೋರ್ಟ್‌ನಲ್ಲಿ ವಿಚ್ಛೇದನ ಪಡೆದಿದ್ದಾಳೆ. ಆಗತಾನೆ ಮದುವೆಯಾದ ಕಾರಣ ಅಲ್ಲಿಯೇ ವಿಚ್ಛೇದನವೂ ನಡೆದುಬಿಟ್ಟಿದೆ.ಇದು ಅತ್ಯಂತ ಕಡಿಮೆ ಅವಧಿಯಲ್ಲಿ ವಿಚ್ಛೇದನ ಪಡೆದ ದಂಪತಿಯ ಪ್ರಕರಣ ಎಂದು ವರದಿಯಾಗಿದೆ.
2004 ರಲ್ಲಿ, ಯುನೈಟೆಡ್ ಕಿಂಗ್‌ಡಂನಲ್ಲಿ ದಂಪತಿ ಮದುವೆಯಾದ 90 ನಿಮಿಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿರುವ ಸ್ಟಾಕ್‌ಪೋರ್ಟ್ ರಿಜಿಸ್ಟರ್ ಆಫೀಸ್‌ನಲ್ಲಿ ಸ್ಕಾಟ್ ಮೆಕ್ಕಿ ಮತ್ತು ವಿಕ್ಟೋರಿಯಾ ಆಂಡರ್ಸನ್ ಬೈಬಲ್ ಓದಿದ 1 ಗಂಟೆಯ ನಂತರ ಈ ಸಂಬಂಧಕ್ಕೆ ಕೊನೆ ಹಾಡಲಾಗಿತ್ತು. ವಧುವಿನ ಕಡೆಯ ಯುವತಿಯರ ಜೊತೆ ಆತ ಮಾತನಾಡಿದ ಎಂದು ಅಲ್ಲಿಯೇ ಇದ್ದ ತಟ್ಟೆಯಿಂದ ತಲೆಗೆ ಹೊಡದಿದ್ದಳು. ಇದರಿಂದ ಮದುವೆ ಮುರಿದುಬಿದ್ದಿತ್ತು.
ಈಗ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಾಂಪತ್ಯ ಸಂಬಂಧದ ಬಗ್ಗೆಯೇ ಪ್ರಶ್ನೆ ಎದ್ದಿದೆ. ಒಂದು ಮಾತಿನಿಂದ ಒಂದು ಸಂಬಂಧ ಮುರಿದು ಬೀಳುತ್ತಿದೆ ಎಂದರೆ ಈ ಸಂಬಂಧಗಳ ಅರ್ಥವೇ ಬದಲಾಗಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ ಸಂಬಂಧಕ್ಕೆ ಅರ್ಥವಿಲ್ಲದಂತಾಗಿದೆ. ಮದುವೆಯಾದ ಕ್ಷಣದಲ್ಲೇ ಸಂಬಂಧ ಮುರಿದುಕೊಳ್ಳುವುದು ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.



Click it and Unblock the Notifications
