Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಶಿವಾಜಿ ಪ್ರತಿಮೆಯ ಶಿಲ್ಪಿ ಜಯ್‌ದೀಪ್ ಆಪ್ಟೆ ಅರೆಸ್ಟ್.! ಯಾರು ಈ ಶಿಲ್ಪಿ..!
ಭಾರತದ ಗಲ್ಲಿ ಗಲ್ಲಿ ಮೂರ್ತಿಗಳು, ಪ್ರತಿಮೆಗಳ ನಾವು ನೋಡಬಹುದು. ಆದ್ರೆ ಈಗ ಮಹಾರಾಷ್ಟ್ರದ ಶಿವಾಜಿ ಮಹಾರಾಜರ ಪ್ರತಿಮೆ ನೆಲಕ್ಕುರುಳಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಳೆದ ವರ್ಷವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಮೆ ಅನಾವರಣ ಮಾಡಿದ್ದರು. ಆದರೆ ಸಿಂಧುದುರ್ಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆ ಕುಸಿದು ಛಿದ್ರವಾಗಿದೆ.
ಭಾರೀ ಮಳೆ ಹಾಗೂ ಗಾಳಿಯ ಕಾರಣದಿಂದಾಗಿ ಆಗಸ್ಟ್ 26ರಂದು ಮುರಿದು ಬಿದ್ದಿತ್ತು, ಪ್ರಧಾನಿ ನರೇಂದ್ರ ಮೋದಿ ಅವರು 2023ರ ಡಿಸೆಂಬರ್‌ನಲ್ಲಿ ರಾಜ್‌ಕೋಟ್ ಕೋಟೆಯಲ್ಲಿ ಈ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಬಳಿಕ ಈ ಪ್ರತಿಮೆ ಮುರಿದು ಬಿದ್ದ ಘಟನೆಗೆ ಪ್ರಧಾನಿ ಮೋದಿ ಅವರು ದೇಶದ ಜನರ ಕ್ಷಮೆಯಾಚಿಸಿದ್ದರು. ಇದು ರಾಜಕೀಯ ವಲಯದಲ್ಲಿ ಭಾರೀ ವಿವಾದ ಹುಟ್ಟುಹಾಕಿದ ಘಟನೆಯಾಗಿತ್ತು. ಅಲ್ಲದೆ ಪ್ರತಿಪಕ್ಷಗಳು ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಿದ್ದವು.

ಈಗ ಈ ಪ್ರತಿಮೆಯ ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರು ಶಿಲ್ಪಿ-ಗುತ್ತಿಗೆದಾರ ಜಯದೀಪ್ ಆಪ್ಟೆಯ ಸಹಚರನ ಬಂಧಿಸಿದ್ದಾರೆ. ಆಪ್ಟೆ ಅವರನ್ನು ಬುಧವಾರ ರಾತ್ರಿ ಥಾಣೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿ ಬಂಧಿಸಲಾಗಿದೆ.
ಜಯದೀಪ್ ಆಪ್ಟೆ ಯಾರು?
ಜಯದೀಪ್ ಆಪ್ಟೆ ಥಾಣೆ ಮೂಲದ ಶಿಲ್ಪಿಯಾಗಿದ್ದು, ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಾಣದ ಗುತ್ತಿಗೆ ಪಡೆದಿದ್ದ. ಆದ್ರೆ ಈ ಪ್ರತಿಮೆ ಕುಸಿದ ಬಳಿಕ ಆತ ಹಾಗೂ ಆತನ ಸಹಚರನ ವಿರುದ್ದ ಸೆಕ್ಷನ್ 109, 110, 125, 318 ಮತ್ತು 3(5) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಪ್ಟೆಯ ಸಹಚರ ಪಾಟೀಲ್ ಅವರನ್ನು ಕೊಲ್ಲಾಪುರದಿಂದ ಬಂಧಿಸಲಾಗಿದ್ದು, ಆಪ್ಟೆಗಾಗಿ ಇನ್ನು ಶೋಧ ಮುಂದುವರೆದಿದೆ.
ಇನ್ನು ಶಿವಾಜಿ ಪ್ರತಿಮೆ ಉರುಳಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಇಡೀ ಮಹಾರಾಷ್ಟ್ರದಲ್ಲಿ ರಾಜಕೀಯ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಮಹಾರಾಜ ಶಿವಾಜಿ. ಹಾಗಾದ್ರೆ ಮಹಾರಾಷ್ಟ್ರಕ್ಕೆ ಶಿವಾಜಿ ಏಕೆ ಮುಖ್ಯ, ಅವರ ಕುರಿತ ಅಚ್ಚರಿಯ ಮಾಹಿತಿಗಳು ಇಲ್ಲಿವೆ.
ಛತ್ರಪತಿ ಶಿವಾಜಿ ಮಹಾರಾಜರು ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ನಾಯಕ. ಶಿವಾಜಿ ಮಹಾರಾಜರು 19 ಫೆಬ್ರವರಿ 1630 ರಂದು ಇಂದಿನ ಮಹಾರಾಷ್ಟ್ರದ ಭೋಂಸ್ಲೆ ಮರಾಠಾ ವಂಶದಲ್ಲಿ ಜನಿಸಿದ್ದರು. ಶಿವಾಜಿ ಮಹಾರಾಜರ ಪುಣ್ಯತಿಥಿಯನ್ನು ಪ್ರತಿ ವರ್ಷ ಏಪ್ರಿಲ್ 3 ರಂದು ಆಚರಿಸಲಾಗುತ್ತದೆ. ಶಿವಾಜಿ ಯಾವುದೇ ಯುದ್ಧದಲ್ಲಿ ಮಡಿಯಲಿಲ್ಲ ಬದಲಿಗೆ ಅವರು ಅನಾರೋಗ್ಯದ ಕಾರಣದಂದಾಗಿ ಮೃತರಾದರು.
ಛತ್ರಪತಿ ಶಿವಾಜಿ ಮಹಾರಾಜರು 1674 ರಲ್ಲಿ ತಮ್ಮ ಸಾಮ್ರಾಜ್ಯದ ಚಕ್ರವರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಮಹಿಳೆಯರನ್ನು ಅವಮಾನಿಸುವುದನ್ನು ಕಾನೂನುಬಾಹಿರವಾಗಿಸುವ ಕಾನೂನುಗಳನ್ನು ಜಾರಿಗೆ ತಂದರು. ಮಹಿಳೆಯರ ವಿರುದ್ಧದ ಯಾವುದೇ ಅಪರಾಧಕ್ಕೆ ಶಿಕ್ಷೆಯು ಕಠಿಣವಾಗಿತ್ತು. ಅವರ ಅಧಿಕಾರಿಗಳು ಮತ್ತು ಸೈನಿಕರು ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಷೇಧಿಸಿದ್ದರು.
ಶಿವಾಜಿ ತಮ್ಮ ರಾಜ್ಯದಲ್ಲಿ ನೌಕಾಪಡೆ ಹೊಂದಿದ್ದರು. ಇದು ಭಾರತದ ಮೊಟ್ಟ ಮೊದಲ ನೌಕಾಬಲ ಎನಿಸಿಕೊಂಡಿತ್ತು. ಶಿವಾಜಿ ಮಹಾರಾಜರು ಯಾವುದೇ ಶಿಕ್ಷಣ ಪಡೆದಿರಲಿಲ್ಲ. ಅವರು ಅನಕ್ಷರಸ್ಥರಾಗಿದ್ದರು. ಅವರು ತೀವ್ರ ಜ್ವರ ಹಾಗೂ ಭೇದಿಯಿಂದ ಅನಾರೋಗ್ಯಕ್ಕೆ ಒಳಗಾದರು ಹಾಗೆ ತಮ್ಮ 52ನೇ ವಯಸ್ಸಿನಲ್ಲಿ ಮೃತಪಟ್ಟರು.
ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಜಾತ್ಯತೀತ ಧಾರ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಜನರ ಸಹಬಾಳ್ವೆಯನ್ನು ನಂಬಿದ್ದರು ಮತ್ತು ಧಾರ್ಮಿಕ ತಾರತಮ್ಯದ ವಿರುದ್ಧವಾಗಿದ್ದರು. ಅವರ ಆಸ್ಥಾನದಲ್ಲಿ ಎಲ್ಲಾ ಧರ್ಮದ ಮಂದಿ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಿದರು.



Click it and Unblock the Notifications
