Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಕೇರಳದ ವಿಷ ಕನ್ಯೆಗೆ ಮರಣದಂಡನೆ ವಿಧಿಸಿದ ಕೋರ್ಟ್: ಅಪೂರ್ವದಲ್ಲಿ ಅಪೂರ್ವವಾಗಿದ್ದ ಪ್ರಕರಣವಿದು
ಕೇರಳದ ವಿಷ ಕನ್ಯೆ ಗ್ರೀಷ್ಮಾಳಿಗೆ ಕೋರ್ಟ್ ಮರಣದಂಡನೆ ನೀಡಿದೆ,ಈ ತೀರ್ಪು ಸಾಕಷ್ಟು ಜನರಿಗೆ ಸಂತಸ ತಂದಿದೆ, ಕೊನೆಗೂ ಸತ್ತ ಹುಡುಗನ ಆತ್ಮಕ್ಕೆ ಶಾಂತಿ ಸಿಗುವಂತಾಯ್ತು ಎಂದು ಮಾತನಾಡುತ್ತಿದ್ದಾರೆ. ಗ್ರೀಷ್ಮಾ ಎಂಬ ಕೊಲೆಗಾತಿಗೆ ಮರಣ ದಂಡನೆ ಶಿಕ್ಷೆ ನೀಡುವ ಮೂಲಕ ಶಾರೂನ್ ಸಾವಿಗೆ ನ್ಯಾಯ ಸಿಕ್ಕಿದೆ. ಅಪೂರ್ವಗಳಲ್ಲಿ ಅಪೂರ್ವವಾಗಿರುವ ಈ ಪ್ರಕರಣ ಏನು? ಎಷ್ಟೋ ಕೊಲೆಗಾರರು ಜೈಲ್‌ನಲ್ಲಿದ್ದಾರೆ ಅವರಿಗೆಲ್ಲಾ ಜೈಲು ಶಿಕ್ಷೆಯಿದೆ,ಆದರೆ ಮರಣ ದಂಡನೆ ಶಿಕ್ಷೆಯಾಗಿಲ್ಲ, ಆದರೆ ಈಕೆಗೆ ಕೇರಳ ಹೈಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ ಏಕೆ ಎಂಬುವುದು ನೋಡೋಣ:
ಏನಿದು ಪ್ರಕರಣ?
2022ರಲ್ಲಿ ಶಾರೂನ್ ಎಂಬ ಯುವಕನ ಸಾವು ರಾಷ್ಟ್ರದ ಗಮನ ಸೆಳೆದಿತ್ತು, ಈತನನ್ನು ಈತನ ಪ್ರೇಯಿಸಿಯೇ ವಿಷ ನೀಡಿ ಸಾಯಿಸಿದ್ದಳು, ಈ ಪ್ರಕಣರಣ ಹೊರ ಹೊರ ಬಂದಾಗ ಅಂದಗಾತಿಯ ಮನಸ್ಸು ಇಷ್ಟೊಂದು ಕ್ರೂರಿಯಾಗಿತ್ತೇ? ಅವಳಿಗೆ ಬೇಡವೆಂದರೆ ಅವನನ್ನು ಬಿಡಬಹುದಿತ್ತು, ಅನ್ಯಾಯವಾಗಿ ಆ ಹುಡುಗನನ್ನು ಕೊಂದಳು ಎಂದು ಜನರು ಆಕೆಗೆ ಹಿಡಿ ಶಾಪ ಹಾಕಿದರು.

ಮೊದಲಿಗೆ ಶಾರೂನ್ ಸಾವಿಗೆ ಕಾರಣವೇನು ಎಂಬುವುದೇ ತಿಳಿದಿರಲಿಲ್ಲ, ಶಾರೂನ್ ಸಾಯುವ ಪರಿಸ್ಥಿತಿಯಲ್ಲಿಯೂ ತನ್ನ ಪ್ರೇಯಸಿಯನ್ನು ಬಿಟ್ಟುಕೊಟ್ಟಿರಲಿಲ್ಲ
ಶಾರೂನ್‌ರಾಜ್‌ಗೆ ಮೊದಲಿಗೆ ವಾಂತಿ ಶುರುವಾಗುತ್ತೆ, ಆತನ ಮನೆಯವರು ಆಸ್ಪತ್ರೆಗೆ ದಾಖಲು ಮಾಡುತ್ತಾರೆ, ವೈದ್ಯರು ಫುಡ್ ಪಾಯಿಸನ್ ಇರಬಹುದು ಎಂದು ಊಹಿಸುತ್ತಾರೆ, ಆತನಿಗೆ ಬಹು ಅಂಗಾಂಗಗಳ ವೈಫಲ್ಯ ಉಂಟಾಗುತ್ತೆ, ಆತನ ದೇಹಕ್ಕೆ ಸ್ಲೋ ಪಾಯಿಸನ್ ಸೇರಿರುತ್ತೆ, ಆತ ಆಸ್ಪತ್ರೆಯಲ್ಲಿ ಮಲಗಿದ್ದಾಗ ಆತನ ಬಂಧುವೊಬ್ಬರು ಆಕೆಗೆ ಫೋನ್ ಮಾಡಿ ನೀನು ಅವನಿಗೆ ಒಂದು ಲೇಹ್ಯಾ ಕೊಟ್ಟಿದ್ದೆ ಅಲ್ವಾ ಅದರ ಹೆಸರೇನು ಎಂದು ಕೇಳುತ್ತಾರೆ ಅದಕ್ಕವಳು ಇಲ್ಲಾ ನನಗೆ ಅದರ ಹೆಸರು ಗೊತ್ತಿಲ್ಲ ಅಂತಾಳೆ, ನನಗೆ ಹೊಟ್ಟೆನೋವು ಇದ್ದ ಕಾರಣ ತಾಯಿ ತಂದ ಲೇಹ್ಯ ಎಂಬುವುದಾಗಿ ಹೇಳುತ್ತಾಳೆ. ಲೇಹ್ಯಾವನ್ನು ಬೇರೆ ಬಾಟಲಿಗೆ ಹಾಕಿ ಕೊಟ್ಟಿದ್ದರು ಅದರ ಹೆಸರು ಅಷ್ಟಾಗಿ ನೆನಪಿಲ್ಲ ಎಂದು ಹೇಳುತ್ತಾಳೆ. ಅಕ್ಟೋಬರ್ 25, 2022ಕ್ಕೆ ಶಾರೂನ್ ರಾಜ್ ಸಾವನ್ನಪ್ಪುತ್ತಾನೆ, ಆತನ ಮನೆಯವರಿಗೆ ಇವಳ ಮೇಲೆ ಸಂಶಯ ಮೂಡುತ್ತೆ, ಆಕೆಯನ್ನು ಅಕ್ಟೋಬರ್ 31ಕ್ಕೆ ಅರೆಸ್ಟ್ ಮಾಡಲಾಗುವುದು, ಆವಾಗ ತೆರೆದುಕೊಳ್ಳುತ್ತೆ ಕರಾಳ ಕತೆ
ಗ್ರೀಷ್ಮಾಳನ್ನು ಹುಚ್ಚನಂತೆ ಪ್ರೀತಿಸಿದ್ದ ಶಾರೂನ್
ಶಾರೂನ್ ಮತ್ತು ಗ್ರೀಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು, ಇಬ್ಬರು ಜೊತೆಯಾಗಿ ಸುತ್ತಾಡಿದ್ದರು, ಅವರ ಖಾಸಗಿ ಫೋಟೋಗಳು ಶಾರೂನ್ ಫೋನ್‌ನಲ್ಲಿತ್ತು, ಹೀಗಿರುವಾಗ ಆಕೆಗೆ ಆರ್ಮಿಯಲ್ಲಿರುವ ವ್ಯಕ್ತಿಯ ಮದುವೆ ಪ್ರಪೋಸಲ್ ಬರುತ್ತದೆ. ಈಕೆ ಶಾರೂನ್ ಜೊತೆ ಬ್ರೇಕಪ್ ಮಾಡಿ ಆತನನ್ನು ಮದುವೆಯಾಗುವುದರ ಬಗ್ಗೆ ಆಲೋಚಿಸುತ್ತಾಳೆ.
ಜ್ಯೋತಿಷಿ ಮಾತು ಕೇಳಿದ ಬಳಿಕ ಶಾರೂನ್‌ನ ಬಲಿ ಕೊಡಲು ತೀರ್ಮಾನಿಸಿದಳು
ಈಕೆಯ ಮನೆಯವರು ಯಾವುದೋ ಜ್ಯೋತಿಷಿಯನ್ನು ಭೇಟಿಯಾದಾಗ ಈಕೆ ಮದುವೆಯಾದರೆ ಮೊದಲ ಗಂಡ ಸಾಯುತ್ತಾನೆ ಎಂದು ಹೇಳಿದ್ದರಂತೆ ಇದನ್ನು ನಂಬಿದ ಗ್ರೀಷ್ಮಾ ಒಂದು ಪ್ಲ್ಯಾನ್ ಮಾಡುತ್ತಾಳೆ, ಮತ್ತೆ ಶಾರೂನ್‌ನಿಗೆ ಕರೆ ಮಾಡಿ ಪ್ರೀತಿ ಪ್ರೇಮ ಎಂದು ನಟಿಸುತ್ತಾಳೆ, ಇಬ್ಬರು ಮದುವೆಯಾಗೋಣ ಅಂತಾಳೆ, ಅವಳನ್ನು ಯಾರಿಗೂ ಗೊತ್ತಾಗದಂತೆ ಶಾರೂನ್ ಮದುವೆಯಾಗುತ್ತಾನೆ, ನಂತರ ಆಕೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅವನನ್ನು ಕರೆಸಿ ಆತನಿಗೆ ಸ್ಲೋ ಪಾಯಿಸನ್ ನೀಡುತ್ತಾಳೆ.
ಆತ ಸ್ಲೋಪಾಯಸಿನ್ ಹಾಕಿರುವ ಲೇಹ್ಯ ಕೂಡ ಉಪಾಯದಿಂದಲೇ ತಿನ್ನಿಸುತ್ತಾಳೆ
ಅವಳು ಅವನಿಗೆ ಲೇಹ್ಯ ತೋರಿಸಿ ಇದು ತುಂಬಾ ಕಹಿಯಿದೆ ನಿನಗೆ ಇದನ್ನು ತಿನ್ನಲು ಸಾಧ್ಯನೇ ಇಲ್ಲ, ನನ್ನ ಮೇಲೆ ಪ್ರೀತಿ ಇದ್ದರೆ ತಿನ್ನು ನೋಡುವ ಅಂತಾಳೆ, ಆತ ಆ ಲೇಹ್ಯ ಸೇವಿಸುತ್ತಾನೆ, ಸ್ಲೋ ಪಾಯಿಸನ್ ಆತನ ಹೊಟ್ಟೆ ಸೇರಿ ನಿಧಾನಕ್ಕೆ ಆತನ ಆರೋಗ್ಯ ಹದಗೆಡುತ್ತೆ, ಮೊದಲಿಗೆ ವಾಂತಿ ಶುರುವಾಗಿ ನಂತರ ಬಹು ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪುತ್ತಾನೆ.
ಗ್ರೀಷ್ಮಾ ವರ್ಷದವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಳು , ನಂತರ ಆಕೆ ಬೇಲ್ ಪಡೆದು ಹೊರ ಬಂದಿದ್ದಳು, ಆವಾಗಲೇ ಈ ಕ್ರೂರಿ ಹೆಣ್ಣಿಗೆ ಬೇಲ್ ಸಿಕ್ಕಬಾರದಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಶಾರೂನ್ ಪೋಷಕರು ಏನೇ ಆಗಲಿ ನಮ್ಮ ಮಗನಿಗೆ ಖಂಡಿತ ನಾವು ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೋರಾಡಿದರು, ಈಗ ಈಕೆಗೆ ಮರಣ ದಂಡನೆ ಶಿಕ್ಷೆಯಾದ ಬಳಿಕ ಶಾರೂನ್ ಜಡ್ಜ್ ನಮಗೆ ದೇವರ ಸಮಾನರಾಗಿದ್ದಾರೆ, ನಾನು ಈಗ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ, ಬಂದ ತೀರ್ಪು ಮನಸ್ಸಿಗೆ ಖುಷಿ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.



Click it and Unblock the Notifications