Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಗಸ್ಟ್ 31ಕ್ಕೆ ಈ ವರ್ಷದ ಕೊನೆಯ ಶನಿ ತ್ರಯೋದಶಿ: ಶನಿದೋಷ ನಿವಾರಣೆಗೆ ಈ ದಿನ ತುಂಬಾ ಮುಖ್ಯ, ಏಕೆ?
ಈ ಶನಿವಾರ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವವಾದ ದಿನ, ಏಕೆಂದರೆ ಈ ದಿನ ಶನಿ ತ್ರಯೋದಶಿ ಅಥವಾ ಶನಿ ಪ್ರದೋಷ ವ್ರತವಿದೆ. ಶನಿ ದೋಷವಿರುವವರು ಈ ದಿನ ಪರಿಹಾರ ಮಾಡಿದರೆ ಶನಿ ಕಾಟ ಕಡಿಮೆಯಾಗುವುದು ಎಂದು ಹೇಳಲಾಗುವುದು.
ಪ್ರದೋಷ ವ್ರತ ಶಿವನಿಗೆ ಮೀಸಲಾದ ದಿನ. ಶನಿವಾರ ಶನಿ ದೇವನಿಗೆ ಮೀಸಲಾದ ದಿನ. ಪ್ರದೋಷ ವ್ರತ ಶನಿವಾರದಂದು ಬಂದರೆ ಆ ದಿನವನ್ನು ಶನಿ ತ್ರಯೋದಶಿಯೆಂದು ಆಚರಿಸಲಾಗುವುದು.

ಶನಿ ದೇವನ ಆರಾಧನೆಗೆ ಶ್ರೇಷ್ಠವಾದ ದಿನ
ಈ ದಿನ ಶನಿ ದೇವನ ಆರಾಧನೆ ಮಾಡವುದರಿಂದ ಶನಿಯ ಕೃಪೆ ನಮ್ಮ ಮೇಲಿರಲಿದೆ, ಶನಿ ೋಷ, ಶನಿ ಧೈಯ್ಯ ಇರುವವರು ತುಂಬಾನೇ ಕಷ್ಟ ಅನುಭವಿಸುತ್ತಾರೆ. ಈ ದಿನ ಭಕ್ತಿಯಿಂದ ಶನಿಯನ್ನು ಆರಾಧನೆ ಮಾಡುವುದರಿಂದ ಕಷ್ಟಗಳು ಕಡಿಮೆಯಾಗುವುದು, ಹಾಗಾಗಿ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ.
ಶನಿ ತ್ರಯೋದಶಿಯಂದು ಎನು ಮಾಡಬೇಕು?
ಈ ದಿನ ಉಪವಾಸವಿದ್ದು ಶನಿಯ ಆರಾಧನೆ ಮಡಬೇಕು. ಶನಿ ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆಯಲ್ಲಿ ನಿಮ್ಮ ಮುಖವನ್ನು ನೋಡಿ ಆ ಎಣ್ಣೆಯನ್ನು ದೇವಾಯಕ್ಕೆ ಅರ್ಪಿಸಬೇಕು.
ಈ ದಿನ ಬಡವರಿಗೆ ದಾನ ಮಾಡಿದರೆ ಒಳ್ಳಯದು
ಬಡವರಿಗೆ ಕಪ್ಪು ಕಂಬಳಿ, ಎಳ್ಳು, ಸಾಸಿವೆಯೆಣ್ಣೆ ಈ ಬಗೆಯ ವಸ್ತುಗಳನ್ನು ದಾನ ಮಾಡಿ.
ಇನ್ನು ಶಿವ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿದರೆ ಒಳ್ಳೆಯದು
ಈ ದಿನ ಶಿವ ದೇವಾಲಕ್ಕೆ ಹೋಗಿ ರುದ್ರಾಭಿಷೇಕ ಮಾಡಿ. ಶಿವನ ಕೃಪೆಯಿಂದ ಕೂಡ ಶನಿಯ ಕಾಟ ಕಡಿಮೆಯಾಗುವುದು.
ಈ ದಿನ ಹೀಗೆ ಮಾಡಿದರೆ ಕಷ್ಟಗಳು, ಸವಾಲುಗಳು ಕಡಿಮೆಯಾಗುವುದು, ಬದುಕಿನಲ್ಲಿ ಧನಾತ್ಮಕ ಬದಲಾವಣೆಯಾಗುವುದು ಎಂದು ಹೇಳಲಾಗುವುದು:
ಶನಿವಾರ ಸೂರ್ಯಾಸ್ತದ ಬಳಿಕ ಕಪ್ಪು ಉದ್ದು ಹಾಕಿ ಮಾಡಿದ ಕಿಚಡಿ ಸೇವನೆ ಮಾಡಿದರೆ ಒಳ್ಳೆಯದು
ಈ ದಿನ ನೀಲಮಣಿ ಧರಿಸುವುದರಿಂದ ಅದರ ರಕ್ಷೆ ಇರಲಿದೆ ಎಂದು ಹೇಳಲಾಗುವುದು.
ರುದ್ರಾಕ್ಷಿ ಧರಿಸಲು ಈ ದಿನ ಶ್ರೇಷ್ಠವಾಗಿದೆ
14 ಮುಖಿ ರುದ್ರಾಕ್ಷಿ ಅಥವಾ ಸಪ್ತಮುಖಿ ರುದ್ರಾಕ್ಷಿಯನ್ನು ಶನಿಮಾಲೆಯ ಜೊತೆ ಧರಿಸಿದರೆ ಕಷ್ಟಗಳು ಕಡಿಮೆಯಾಗುವುದು ನಂಬಲಾಗುವುದು.
ಈ ದಿನ ಹನುಮಾನ್ ಚಾಲೀಸಾ ಪಠಿಸಿ: , ಶನಿ ಸಾಡೇಸಾತಿ ಇರುವವರು ಶನಿಯ ಕೆಟ್ಟದೃಷ್ಟಿಯಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು ಹೇಳಲಾಗುವುದು, ಆದರೆ ಶನಿಯ ಕೆಟ್ಟ ಪರಿಣಾಮ ಕಡಿಮೆ ಮಾಡುವ ಶಕ್ತಿ ಹನುಮಾನ್ ಚಾಲೀಸಾಗೆ ಇದೆ. ಹನುಮಾನ್ ಚಾಲೀಸಾ ಪಠಣೆ ಮಾಡುವುದರಂದ ಎದುರಾಗುವ ಸವಾಲುಗಳು ದೂರಾಗುವುದು. ಶನಿಯ ತೀಕ್ಷ್ಣ ಪರಿಣಾಮ ಕಡಿಮೆಯಾಗುವುದು ಎಂದು ಹೇಳಲಾಗುವುದು.
ಈ ಮಂತ್ರಗಳನ್ನು ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ '
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications
