Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ತಪ್ಪುಗಳನ್ನು ಅಪ್ಪಿ-ತಪ್ಪಿಯೂ ಮಾಡಬೇಡಿ ಇದರಿಂದ ಶನಿಯ ವಕ್ರದೃಷ್ಟಿ ನಿಮ್ಮ ಮೇಲೆ ಬೀಳಬಹುದು!
ಶನಿಯ ಪ್ರಭಾವ ಒರ್ವ ವ್ಯಕ್ತಿಯ ಬಾಳಿನಲ್ಲಿ ದೀರ್ಘವಾಗಿ ಇರುತ್ತದೆ. ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ. ಒಂದು ವೇಳೆ ಶನಿಯ ವಕ್ರದೃಷ್ಟಿ ಮನುಷ್ಯನ ಮೇಲೆ ಬಿದ್ದರೆ ಅದರಿಂದ ತಪ್ಪಿಸಿಕೊಳ್ಳುವುದು ತುಂಬಾನೇ ಕಷ್ಟ. ಮನುಷ್ಯ ಮಾಡುವ ಕೆಲವೊಂದು ಕೆಲಸಗಳು ಆತನನ್ನು ಶನಿಯ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತಂತೆ. ಹಾಗಾದ್ರೆ ಯಾವೆಲ್ಲಾ ತಪ್ಪು ಕೆಲಸಗಳನ್ನು ಮಾಡಿದ್ರೆ ಶನಿಯ ಕೋಪಕ್ಕೆ ಗುರಿಯಾಗುತ್ತೀವಿ ಅನ್ನೋದನ್ನು ನೋಡೋಣ.
ಬಟ್ಟೆಯನ್ನು ಎಲ್ಲೆಂದರಲ್ಲಿ ಎಸೆಯಬೇಡಿ!
ಅನೇಕರು ಮನೆ ತಲುಪಿದ ತಕ್ಷಣ ಬಟ್ಟೆಯನ್ನು ಬಿಚ್ಚಿ ತಮ್ಮ ಮನಸ್ಸಿಗೆ ಬಂದ ಹಾಗೆ ಎಲ್ಲೆಂದರಲ್ಲಿ ಎಸೆದು ಬಿಡುತ್ತಾರೆ. ಇಲ್ಲ ಅಂದರೆ ಸ್ನಾನದ ಮನೆಗೆ ಹೋದರೆ ಅಲ್ಲೇ ಬಟ್ಟೆಯ್ನು ಬಿಟ್ಟು ಬರುತ್ತಾರೆ. ಈ ರೀತಿ ಮಾಡೋದ್ರಿಂದ ಶನಿಯ ವಕ್ರದೃಷ್ಟಿಗೆ ಗುರಿಯಾಗಬೇಕಾಗುತ್ತಂತೆ. ಶನಿಯಿಂದ ಅಶುಭ ಫಲಗಳನ್ನು ಪಡೆಯಬೇಕಾಗುತ್ತದೆ. ಇದರಿಂದ ನಿಮ್ಮ ಬಾಳಿನಲ್ಲಿ ನೀವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಂತೆ.

ಜೋರಾಗಿ ಮಾತನಾಡುವುದು
ತಾಳ್ಮೆ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ಏನಾದರೂ ಸಮಸ್ಯೆ ಆದರೂ ಕೂಡ ಅದನ್ನು ತಾಳ್ಮೆಯಿಂದ ನಿಭಾಯಿಸುವ ಕಲೆ ನಮಗೆ ಗೊತ್ತಿರಬೇಕು. ಆದರೆ ಹೆಚ್ಚಿನವರು ಸಣ್ಣ ತಪ್ಪಾದರೆ ಸಾಕು ಮನೆ ಮಂದಿಗೆಲ್ಲಾ ಕೇಳಿಸುವ ಹಾಗೆ ಕಿರುಚಾಡಿ ಮಾತನಾಡುತ್ತಾರೆ. ಈ ರೀತಿಯ ಗುಣದಿಂದಾಗಿ ನೀವು ಶನಿಯ ಕೋಪಕ್ಕೆ ತುತ್ತಾಗುವ ಸಾಧ್ಯತೆಯಿದೆ.
ಮನೆಯಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಶನಿಗೆ ಇಷ್ಟ ಆಗೋದಿಲ್ವಂತೆ. ಶುಕ್ರನನ್ನು ಒಲಿಸಿಕೊಳ್ಳಬೇಕಾದರೆ ಮಾತು ಮಧುರವಾಗಿರಬೇಕೆಂತೆ. ಆಗ ಶುಕ್ರನ ಕೃಪೆಯಿಂದಾಗಿ ಮನೆಯಲ್ಲಿ ಸುಖ, ಶಾಂತಿ ಮತ್ತು ಸಂತೋಷ ತುಂಬಿರುತ್ತಂತೆ. ಒಂದು ವೇಳೆ ಶನಿಯ ಕೆಂಗಣ್ಣಿಗೆ ಗುರಿಯಾದರೆ ಜೀವನದಲ್ಲಿ ಕಷ್ಟಗಳನ್ನೇ ಎದುರಿಸಬೇಕಾಗುತ್ತದೆ. ಮತ್ತು ಮಾನಸಿಕ ನೆಮ್ಮದಿ ಇರೋದಿಲ್ಲ.
ತಟ್ಟೆಯಲ್ಲಿ ಊಟವನ್ನು ಹಾಗೆಯೇ ಬಿಡುವುದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಊಟ ಮಾಡುವ ಸಂದರ್ಭದಲ್ಲಿ ಹೊಟ್ಟೆ ತುಂಬಿತೆಂದು ಅರ್ಧದಲ್ಲೇ ಊಟ ಹಾಗೂ ತಟ್ಟೆಯನ್ನು ಅಲ್ಲೇ ಬಿಟ್ಟು ಹೋಗಬಾರದು. ಇದರಿಂದ ಶನಿ ಕೋಪಗೊಳ್ಳುತ್ತಾನಂತೆ. ನೀವು ಪ್ರತಿ ಸಲ ಈ ರೀತಿ ಮಾಡುತ್ತಿದ್ದರೆ ಇದರಿಂದ ಅಶುಭ ಫಲಗಳನ್ನೇ ನಿರೀಕ್ಷೇ ಮಾಡಬೇಕಾಗುತ್ತದೆ.
ಶನಿ ಅಷ್ಟೇ ಅಲ್ಲ, ಚಂದ್ರನಿಂದಲೂ ಅಶುಭ ಪಲವನ್ನು ಪಡೆಯಬೇಕಾಗುತ್ತಂತೆ. ಹೆಚ್ಚಿನವರಿಗೆ ಈ ಅಭ್ಯಾಸ ಇದೆ. ಮನೆಯಲ್ಲಿ ಊಟ ಮಾಡಿದ ನಂತರ ಸಾಕಾಯ್ತು ಎಂದು ಕಾರಣ ಕೊಟ್ಟು ಊಟದ ತಟ್ಟೆಯನ್ನು ಅರ್ಧದಲ್ಲೇ ಎದ್ದು ಹೋಗುತ್ತಾರೆ. ತಿಂದ ತಟ್ಟೆಯನ್ನೂ ತೊಳೆಯೋದಿಲ್ಲ. ಈ ರೀತಿ ಮಾಡುವುದು ತಪ್ಪು. ಇಷ್ಟು ದಿನ ನೀವು ಈ ರೀತಿ ಮಾಡುತ್ತಿದ್ದರೆ ಇನ್ನಾದರೂ ನಿಮ್ಮ ಕೆಲಸಗಳನ್ನು ನೀವೆ ಮಾಡಿಕೊಳ್ಳಿ.
ಪೊರಕೆಯನ್ನು ಎಲ್ಲಂದರಲ್ಲಿ ಇಡಬಾರದು
ಪ್ರತಿ ಮನೆಯನ್ನು ಸ್ವಚ್ಛಗೊಳಿಸೋದಕ್ಕೆ ಪೊರಕೆಯನ್ನು ಖಂಡಿತವಾಗಿ ಬಳಸಲಾಗುತ್ತದೆ. ಆದರೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ನೀವು ಪೊರಕೆಯನ್ನು ಎಲ್ಲಿ ಇಡುತ್ತೀರಿ. ಪೊರಕೆ ಅನ್ನೋದು ತುಂಬಾನೇ ಸೂಕ್ಷ್ಮ ವಿಚಾರ. ಹೀಗಾಗಿ ಮನೆ ಸ್ವಚ್ಛಗೊಳಿಸಿದ ನಂತರ ಪೊರಕೆಯನ್ನು ಎಲ್ಲಂದರಲ್ಲಿ ಎಸೆಯುವ ಅಭ್ಯಾಸ ಒಳ್ಳೆಯದಲ್ಲ. ಈ ರೀತಿ ಮಾಡಿದರೆ ಶನಿಯ ಕೋಪಕ್ಕೆ ಗುರಿಯಾಗುತ್ತಾರಂತೆ. ಹೀಗಾಗಿ ಪೊರಕೆಯನ್ನು ಮನೆಯ ಒಂದು ಮೂಲೆಯಲ್ಲಿ ಇಟ್ಟರೆ ಉತ್ತಮ.
ಕೈಲಾಗದವರಿಗೆ ಸಹಾಯ ಮಾಡಬೇಕು
ನಿಮ್ಮ ಮನೆಬಾಗಿಲಿಗೆ ಬಂದ ನಿರ್ಗತಿಕರು, ಭಿಕ್ಷುಕರು ಅಥವಾ ದುರ್ಬಲರನ್ನು ಅವಮಾನ ಮಾಡಿ ಕಳುಹಿಸಬೇಡಿ. ಊಟ, ನೀರು ಕೇಳುತ್ತಾ ಬಂದ ನಿರ್ಗತಿಕನಿಗೆ ಕರುಣೆ ತೋರಿಸುವ ಗುಣ ನಮ್ಮಲ್ಲಿ ಇರಬೇಕು. ಅವನಿಗೆ ಒಂದು ಹೊತ್ತಿನ ಊಟ ಕೊಡೋದ್ರಿಂದ ನಾವು ಕಳೆದುಕೊಳ್ಳೋದು ಏನು ಇಲ್ಲ. ನಮ್ಮ ಮನೆಬಾಗಿಲಿಗೆ ಸಹಾಯ ಕೇಳುತ್ತಾ ಬಂದವನಿಗೆ ಯಾರು ಅವಮಾನ ಮಾಡುತ್ತಾರೋ ಅವರು ಶನಿಯ ಕೆಟ್ಟ ದೃಷ್ಟಿಗೆ ಗುರಿಯಾಗುತ್ತಾರಂತೆ.
ಬೇರೆಯವರಿಗೆ ಸಿಗಬೇಕಾದ ಹಣ ಸಿಗದಂತೆ ಮಾಡುವುದು
ಕಷ್ಟಪಟ್ಟು ದುಡಿದ ವ್ಯಕ್ತಿಯ ಹಣವನ್ನು ಆತನಿಗೆ ಹಿಂತಿರುಗಿಸಲೇಬೇಕು. ಉದಾಹರಣೆಗೆ ನಿಮ್ಮ ಕೈ ಕೆಳಗೆ ಒರ್ವ ವ್ಯಕ್ತಿ ಕೆಲಸ ಮಾಡಿರುತ್ತಾನೆ ಅಂದುಕೊಳ್ಳಿ. ಆತ ಮಾಡಿದ ಕೆಲಸಕ್ಕೆ ತಕ್ಕ ಸಂಭಳವನ್ನು ಆತನಿಗೆ ಕೊಡೋದು ನಿಮ್ಮ ಕರ್ತವ್ಯ. ಆದರೆ ಹೆಚ್ಚಿನ ಜನ ತಮ್ಮ ಕೆಲಸವನ್ನು ಮಾಡಿಸಿ ಕೆಲಸದವರಿಗೆ ದುಡ್ಡು ಕೊಡದೇ ಮೋಸ ಮಾಡುತ್ತಾರೆ. ಇದು ಖಂಡಿತ ಸರಿಯಲ್ಲ. ಈ ರೀತಿ ಮಾಡಿದರೆ ಖಂಡಿತ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.
ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡೋದಕ್ಕೆ ಹೋಗಬೇಡಿ. ಇದರಿಂದ ಶನಿಯ ಕೋಪಕ್ಕೆ ಗುರಿಯಾಗೋದು ಖಂಡಿತ. ಹೀಗಾಗಿ ಈ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ನೀಡಿ.



Click it and Unblock the Notifications

