Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸಿಕ ಭವಿಷ್ಯ: ಸೆಪ್ಟೆಂಬರ್‌ನಲ್ಲಿ ಕನ್ಯಾ ರಾಶಿಗೆ ಶುಭ, ಅಶುಭ ಎರಡೂ ಇದೆ
ಸೆಪ್ಟೆಂಬರ್ ಮಾಸಿಕ ಭವಿಷ್ಯ 2023 ರ ಪ್ರಕಾರ, ಈ ತಿಂಗಳು ಕನ್ಯಾ ರಾಶಿಯವರಿಗೆ ಹೇಗಿರಲಿದೆ? ನಿಮ್ಮ ವೃತ್ತಿ ಜೀವನ, ವೈಯಕ್ತಿಕ ಬದುಕು, ಆರ್ಥಿಕ ಜೀವನ, ಆರೋಗ್ಯ ಜೀವನ ಹೇಗಿರಲಿದೆ ಎಂದು ತಿಳಿಯೋಣ ಬನ್ನಿ:
ಕನ್ಯಾ ರಾಶಿಯವರ ವೃತ್ತಿ ಜೀವನ
ಗುರುವು ಎಂಟನೇ ಮನೆಯಲ್ಲಿ ಇರುವುದರಿಂದ ವ್ಯಕ್ತಿಯು ಈ ತಿಂಗಳು ವೃತ್ತಿ ಕ್ಷೇತ್ರದಲ್ಲಿ ಸರಾಸರಿ ಫಲಿತಾಂಶಗಳನ್ನು ಪಡೆಯಬಹುದು. ಹನ್ನೆರಡನೇ ಮನೆಯಲ್ಲಿ ಕುಳಿತಿರುವ ಶುಕ್ರನು ವೃತ್ತಿ ಕ್ಷೇತ್ರದಲ್ಲಿ ನಿಮಗೆ ಶುಭ ಸೂಚನೆ ನೀಡಲಾಗಿದೆ. ಆರನೇ ಮನೆಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ ನೀವು ಕೆಲಸದಲ್ಲಿ ಸರಾಸರಿ ಲಾಭವನ್ನು ನಿರೀಕ್ಷಿಸಬಹುದು.

ಎಂಟನೇ ಮನೆಯಲ್ಲಿ ಗುರುವಿನ ಉಪಸ್ಥಿತಿಯಿಂದಾಗಿ ಕೆಲಸದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಮಾಸದಲ್ಲಿ ರಾಹು ಎಂಟನೇ ಮನೆಯಲ್ಲಿದ್ದು, ಕೇತು ಎರಡನೇ ಮನೆಯಲ್ಲಿರುವುದರಿಂದ ಮೇಲಾಧಿಕಾರಿಗಳೊಂದಿಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ವ್ಯಾಪಾರ ಕ್ಷೇತ್ರದಲ್ಲಿ ಇರುವವರು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆ ಇದೆ.
ಆರ್ಥಿಕ ಸ್ಥಿತಿ
ಗುರುವು ರಾಹು ಜೊತೆ ಎಂಟನೇ ಮನೆಯಲ್ಲಿ ಇರುವುದರಿಂದ ಈ ತಿಂಗಳು ಖರ್ಚು ಹೆಚ್ಚಾಗಬಹುದು. ಅಲ್ಲದೆ ಶುಕ್ರ ಕೂಡ ಹಿಮ್ಮುಖ ಚಲನೆಯಲ್ಲಿರುವುದರಿಂದ ನಿಮ್ಮ ಖರ್ಚುಗಳು ಹೆಚ್ಚಾಗುವುದು, ಆರ್ಥಿಕ ನಷ್ಟ ಕೂಡ ಸಂಭವಿಸಬಹುದು, ವ್ಯಕ್ತಿಯು ತನ್ನ ಅಗತ್ಯಗಳನ್ನು ಪೂರೈಸಲು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು, ಆದರೆ ಶನಿಯು ನಿಮಗೆ 6ನೇ ಮನೆಯಲ್ಲಿಇರುವುದರಿಂದ ಸಾಲ ಸುಲಭದಲ್ಲಿ ಸಿಗುವುದು. ಎರಡನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯಿಂದಾಗಿ ಗಳಿಸಿದ ಹಣ ಕೂಡ ಬೇಗನೆ ಖರ್ಚಾಗುವುದು. ವ್ಯಾಪಾರಸ್ಥರಿಗೆ ಈ ತಿಂಗಳು ಅಧಿಕ ಲಾಭ ಇರುವುದಿಲ್ಲ. ಈ ತಿಂಗಳು ಆರೋಗ್ಯ ಕ್ಷೇತ್ರದಲ್ಲಿ ಸರಾಸರಿ ಫಲಿತಾಂಶಗಳನ್ನು ಪಡೆಯಬಹುದು, ಒಟ್ಟಿನಲ್ಲಿ ಆರ್ಥಿಕವಾಗಿ ಈ ಅವಧಿ ಅಷ್ಟು ಒಳ್ಳೆಯದಲ್ಲ.
ಆರೋಗ್ಯ
ಆರೋಗ್ಯದ ದೃಷ್ಟಿಯಿಂದ ಈ ಸಮಯ ಅಷ್ಟು ಅನುಕೂಲಕರವಲ್ಲ. ಈ ಅವಧಿಯಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು.
ಪ್ರೀತಿ ಮತ್ತು ಮದುವೆ
ಪ್ರೇಮಿಗಳಿಗೆ, ವಿವಾಹಿತರಿಗೆ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ನಿಮ್ಮಿಬ್ಬರಲ್ಲಿ ಆಕರ್ಷಣೆ ಕೊರತೆ ಇರಬಹುದು. ಅನೇಕ ರೀತಿಯ ಭಿನ್ನಾಭಿಪ್ರಾಯ ಬರಬಹುದು.
ಈ ಸಮಯದಲ್ಲಿ ನೀವು ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು. ನೀವು ನಿಮ್ಮ ಕುಟುಂಬ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ನಾಲ್ಕನೇ ಮನೆಯ ಅಧಿಪತಿಯಾಗಿ ಎಂಟನೇ ಮನೆಯಲ್ಲಿ ಗುರು ಇರುವುದರಿಂದ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಗುರುವಿನ ಈ ಪ್ರತಿಕೂಲ ಸ್ಥಾನದಿಂದಾಗಿ ಕುಟುಂಬದಲ್ಲಿ ಸಮಸ್ಯೆಗಳಿರಬಹುದು.
ಪರಿಹಾರ
"ಓಂ ರಾಹವೇ ನಮಃ" ಮಂತ್ರವನ್ನು ಪ್ರತಿದಿನ 41 ಬಾರಿ ಜಪಿಸಿ.
"ಓಂ ಕೇತ್ವೇ ನಮಃ" ಎಂಬ ಮಂತ್ರವನ್ನು ಪ್ರತಿದಿನ 41 ಬಾರಿ ಜಪಿಸಿ.
ಪ್ರತಿದಿನ ದುರ್ಗಾ ದೇವಿಯನ್ನು ಆರಾಧಿಸಿ.



Click it and Unblock the Notifications
