Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸೆ.7ಕ್ಕೆ ಗಣೇಶ ಪ್ರತಿಷ್ಠಾಪನೆಗೆ ಪೂಜಾ ಸಮಯ? ಗಣೇಶನನ್ನು ಮಧ್ಯಾಹ್ನ ಸಮಯದಲ್ಲಿ ಪೂಜಿಸುವುದೇಕೆ?
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ, ಸಡಗರ-ಸಂಭ್ರಮದ ಹಬ್ಬ, ಈ ಸಡಗರ ಮನೆ-ಮನೆಗಳಿಗೆ ಸೀಮಿತವಾಗಿರದೆ ಊರಿಗೇ ಊರೇ ಸಿಂಗರಿಸಿಕೊಂಡಿರುತ್ತದೆ. ಕೆಲವರು ಮನೆಯಲ್ಲಿ ಗಣಪತಿ ಕೂರಿಸಿದರೆ, ಊರಿನವರು ಸೇರಿ ಗಣಪನ ಕೂರಿಸುತ್ತಾರೆ, ಬೆಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ಪ್ರತಿಯೊಂದ ಗಲ್ಲಿಯಲ್ಲಿಯೂ ಗಣೆಶನ ಕೂರಿಸಿ ಆರಾಧಿಸಿಸುತ್ತಾರೆ.
ಕೆಲವು ಕಡೆ 3 ದಿನ ಗಣೇಶನ ಕೂರಿಸಿದರೆ , ಕೆಲವು ಕಡೆ 7 ದಿನ, 10 ದಿನ ಇಟ್ಟು ಗಣೇಶನಿಗೆ ಶಾಸ್ತ್ರೋಕ್ತವಾಗಿ ಪೂಜಿಸಿ ನಂತರ ವಿಸರ್ಜನೆ ಮಾಡಲಾಗುವುದು.

ಗಣೇಶನ ಪ್ರತಿಷ್ಠಾಪನೆ ಮಾಡುವಾಗ ಶ್ರಾಸ್ತೋಕ್ಷವಾಗಿ ಮಾಡಬೇಕು, ಗಣೇಶನ ಕೂರಿಸುವ ಕಡೆ ಈ ಬಗ್ಗೆ ಗಮನಹರಿಸಬೇಕು:
ಗಣೇಶನ ಪ್ರತಿಷ್ಠಾಪನೆ ಮಾಡುವ ಮುನ್ನ ಆ ಸ್ಥಳಗಳನ್ನು ಸುದ್ಧ ಮಾಡಬೇಕು.
ಗಣೇಶ ಮೂರ್ತಿಯನ್ನು ಆಯ್ಕೆ ಮಾಡುವಾಗ ಡೊಳ್ಳು ಹೊಟ್ಟೆಯ ಗಣಪನ ಆಯ್ಕೆ ಮಾಡಿ. ಡೊಳ್ಳು ಹೊಟ್ಟೆ ನಕರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಆ ಪರಿಸರದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುವುದು ಎಂದು ಹೇಳಲಾಗುವುದು
ನಂತರ ಗಣೇಶನನ್ನು ಮಂತ್ರಗಳನ್ನು ಪಠಿಸುತ್ತಾ ಮಾಡಿ.
ಗಣೇಶನನ್ನು ಈ ಸಮಯದಲ್ಲಿ ಪ್ರತಿಷ್ಠಾಪಿಸಿ
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ
ಪ್ರತಿಷ್ಟಾಪನೆ ಹಾಗೂ ಪೂಜಾ ಸಮಯ
ಮಧ್ಯಾಹ್ನ ಗಣೇಶ ಪೂಜಾ ಮುಹೂರ್ತ ಸೆಪ್ಟೆಂಬರ್ 7, 11:04ರಿಂದ 01:31ರವರೆಗೆ
ಸಮಯ: 2 ಗಂಟೆ 28 ನಿಮಿಷವಿದೆ.
ಗಣೇಶನಿಗೆ ಮದ್ಯಾಹ್ನ ಸಮಯದಲ್ಲಿ ಪೂಜೆ ಸಲ್ಲಿಸುವುದೇಕೆ?
ಶ್ರೀ ಗಣೇಶನು ಮಧ್ಯಾಹ್ನದ ಹೊತ್ತಿನಲ್ಲಿ ಜನಿಸಿದನು ಎಂದು ಹೇಳಲಾಗುವುದು, ಹಾಗಾಗಿ ಗಣೇಶನನ್ನು ಮಧ್ಯಾಹ್ನದ ಹೊತ್ತಿನಲ್ಲಿ ಪೂಜಿಸಬೇಕು ಎಂದು ಹೇಳಲಾಗುವುದು.
ಗಣೇಶನ ಪ್ರತಿಷ್ಟಾಪನೆ ಮಾಡುವಾಗ ಷೋಡೋಪಚಾರ ಪೂಜೆಯ ಮೂಲಕ ಮಾಡಬೇಕು:
ಮೊದಲಿಗೆ ಆವಾಹನೆ ಮಾಡಬೇಕು:ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿ ಆವಾಹನೆ ಮಾಡಬೇಕು.
ಪ್ರತಿಷ್ಟಾಪನೆ
ಗಣೇಶನ ಆವಾಹನೆ ಮಾಡಿದ ಬಳಿಕ ಗಣೇಶನ ಪಾದಗಳಿಗೆ 5 ಎಲೆಗಳನ್ನು ಇಟ್ಟು, ನಂತರ ಅಡಿಕೆ, ಅರಿಶಿಣ ಪುಡಿ, ಕುಂಕುಮ ಹಾಕಿ.
ನಂತರ ಐದು ಹೂವುಗಳನ್ನು ತೆಗೆದುಕೊಂಡು ಕೈಗಳನ್ನು ಜೋಡಿಸಿ ಪೀಠಕ್ಕೆ ಹಾಕಬೇಕು.
ಪಾಡ್ಯಾ ಸರ್ಮಪಣೆ: ಗಣೇಶನ ಪಾದಗಳಿಗೆ ನೀರು ಹಾಕಿ.
ಆರ್ಘ್ಯ ಸಮರ್ಪಣೆ
ಪಾಡ್ಯಾ ಮಾಡಿದ ಬಳಿಕ ಆರ್ಘ್ಯ ಸಮರ್ಪಣೆ ಮಾಡಬೇಕು
ನಂತರ ಅಚಮನ ಅಂದರೆ ದೇವರಿಗೆ ನಿರನ್ನು ಅರ್ಪಿಸಬೇಕು.
ನಂತರ ಮೂರ್ತಿಗೆ ನೀರು, ಹಾಲು, ಮೊಸರು, ಜೇನು, ಸಕ್ಕರೆ, ಸುಗಂಧದ್ರವ್ಯ, ಶುದ್ಧ ನೀರು ಹಾಕಿ ಸ್ನಾನ ಮಾಡಿಸಿ
ನಂತರ ವಸ್ತ್ರ ಸಮರ್ಪಣೆ, ಉತ್ತೇರಿಯಾ ಸಮರ್ಪಣೆ ಮಾಡಲಾಗುವುದು
ಗಂಧವನ್ನು ಅರ್ಪಿಸಲಾಗುವುದು
ಅಕ್ಷತೆ ಅರ್ಪಿಸಿ
ಗರಿಕೆ ಹಾಗೂ ಪುಷ್ಪ ಮಾಲೆ ಅರ್ಪಿಸಿ ಗಣೇಶನಿಗೆ ಪೂಜೆ ಸಲ್ಲಿಸಬೇಕು.



Click it and Unblock the Notifications
