Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಮಹಾ ಶಿವರಾತ್ರಿಯಂದು ಈ ವಸ್ತು ನೋಡಿದ್ರೆ ಅದೃಷ್ಟ ಬದಲಾಗುತ್ತೆ! ಆ ವಸ್ತು ಯಾವುದು ಗೊತ್ತಾ?
ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಹಾ ಶಿವರಾತ್ರಿ ಹತ್ತಿರವಾಗುತ್ತಿದೆ. ಈ ಶಿವರಾತ್ರಿಯ ಸಮಯದಲ್ಲಿ ಶಿವನ ಆರಾಧಿಸುವುದು ಜೀವನದಲ್ಲಿ ಸುಖ, ಸಂಪತ್ತು ಒಲಿಯಲಿದೆ, ಶಿವನ ಆಶೀರ್ವಾದ ಪಡೆಯುವ ಮಂದಿ ಆತನಿಂದ ಜೀವನದ ದೊಡ್ಡ ದೊಡ್ಡ ಯಶಸ್ಸನ್ನು ಸುಲಭವಾಗಿ ಪಡೆಯಬಹುದು. ಹಾಗೆ ಶಿವನ ಅನುಗ್ರಹವು ನಿಮ್ಮಲ್ಲಿ ಧನಾತ್ಮಕ ವಿಚಾರಗಳನ್ನು ಹೆಚ್ಚಾಗಿಸಲಿದ್ದಾನೆ.
ಈ ಶಿವರಾತ್ರಿ ಸಮಯದಲ್ಲಿ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಜಾಗರಣೆ ನೋಡಬಹುದು. ಇದರಿಂದ ಶಿವನು ಸಂಪನ್ನನಾಗುತ್ತಾನೆ ಎಂದು ಹೇಳಲಾಗಿದೆ. ಈ ಪವಿತ್ರ ದಿನದಂದು ಹಸ ಕಾರ್ಯಗಳು, ಆರಂಭಗಳು, ಅಥವಾ ಹೊಸ ಪ್ರತಿಜ್ಞೆಗಳ ಮಾಡುವುದು ಹೊಸ ಜೀವನ ರೂಪಿಸಲು ಕಾರಣವಾಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಶಿವರಾತ್ರಿಯಲ್ಲಿ ಶಿವನ ದೇವಾಲಯಗಳು, ಪ್ರಾರ್ಥನ ಸ್ಥಳಗಳಲ್ಲಿ ಭಕ್ತರು ನೆರೆಯುತ್ತಾರೆ.

ಹಾಗೆ ಶಿವರಾತ್ರಿಯ ದಿನದಂದು ಕೆಲವೊಂದು ವಸ್ತುಗಳು ಕೂಡ ನಿಮಗೆ ಶುಭ ತರಲಿವೆ. ಶಿವರಾತ್ರಿ ದಿನದಂದು ಈ ರೀತಿಯ ಶಕುನಗಳು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳ ತರಲಿದೆ. ಹಾಗಾದ್ರೆ ಶಿವರಾತ್ರಿಯಲ್ಲಿ ಯಾವ ವಸ್ತುಗಳ ನೋಡಿದ್ರೆ ನಿಮಗೆ ಶುಭವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬಿಲ್ವಪತ್ರೆ
ಬಿಲ್ವಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದ ಎಲೆಯಾಗಿದೆ. ಶಿವನ ಪೂಜೆಯಲ್ಲಿ ಈ ಎಲೆಯನ್ನು ಯಾವಾಗಲು ಬಳಸುತ್ತಾರೆ. ಹಾಗೆ ಸೋಮವಾರದ ಶಿವನ ಪೂಜೆಯಲ್ಲಿ ಬಿಲ್ವಾ ಪತ್ರೆ ಬಹಳ ಪ್ರಮುಖ ವಸ್ತು ಆಗಿರಲಿದೆ. ಇನ್ನು ಶಿವರಾತ್ರಿಯ ದಿನದಂದು ಬಿಲ್ವಪತ್ರೆ ಎಲೆಯನ್ನು ಅಥವಾ ಬಿಲ್ವ ಮರವನ್ನು ನೋಡುವುದು ಪ್ರಸಾದವಾಗಿ ಪಡೆಯುವುದು ಶುಭಕರ. ಹಾಗೆ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು ನಿಮ್ಮ ಜೀವನದಲ್ಲಿನ ಅಡ್ಡಿಗಳು, ಈಡೇರದ ಬಯಕೆಗಳನ್ನು ಈಡೇರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
ರುದ್ರಾಕ್ಷಿ
ರುದ್ರಾಕ್ಷಿಯು ಶಾಂತಿ ಹಾಗೂ ಸಕಾರಾತ್ಮಕ ಶಕ್ತಿಯ ಹೊಂದಿರುವ ರುದ್ರಾಕ್ಷಿಯನ್ನು ಈ ದಿನದಂದು ನೋಡುವುದು ಅಥವಾ ಧರಿಸುವುದು ಬಹಳ ಉತ್ತಮ. ಶಿವನ ಕರುಣೆಯ ಪ್ರತಿರೂಪಕವಾಗಿ ರುದ್ರಾಕ್ಷಿ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. ಈ ದಿನ ಶಿವನಲ್ಲಿ ಪೂಜೆ ಸಲ್ಲಿಸಿ ರುದ್ರಾಕ್ಷಿ ಮಾಲೆ ಧರಿಸುವುದು ಯೋಗವನ್ನು ತರಲಿದೆ ಎಂದು ಹೇಳಲಾಗಿದೆ. ರುದ್ರಾಕ್ಷಿಯನ್ನು ಧರಿಸುವುದು ಮಾನಸಿಕ ನೆಮ್ಮದಿ ಹಾಗೂ ನಿಮ್ಮ ಆಧ್ಯಾತ್ಮಿಕ ಒಲವಿಗೆ ಕಾರಣವಾಗಲಿದೆ. ಹಾಗೆ ಈ ದಿನ ರುದ್ರಾಕ್ಷಿಯನ್ನು ಮನೆಗೆ ತರುವುದು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ.
ನಂದಿ ಮತ್ತು ನೀಲಕಂಠ
ಶಿವನ ವಾಹನವಾದ ನಂದಿಯನ್ನು ನೋಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶಿವರಾತ್ರಿಯಂದು ನಂದಿಯ ಮುಂದೆ ದೀಪ ಹಚ್ಚುವಾಗ ನಿಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಅನುಭವಿಸಲಿದ್ದೀರಿ. ಅದೇ ರೀತಿ ನೀಲಕಂಠ ಪಕ್ಷಿಯನ್ನು ನೋಡುವುದು ಸಹ ಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಪ್ರಗತಿ, ಒತ್ತಡ ನಿವಾರಣೆಗೆ ಈ ನಂದಿ ಮತ್ತು ನೀಲಕಂಠ ಪಕ್ಷಿಯು ಉತ್ತಮ ಸಂಕೇತಗಳ ತರಲಿದೆ ಎಂದು ಹೇಳಲಾಗಿದೆ.
ಶಿವನ ಮೂರ್ತಿ ಅಥವಾ ಫೋಟೋ
ಈ ಶಿವರಾತ್ರಿಯ ದಿನ ಶಿವನ ಮೂರ್ತಿ ಅಥವಾ ಶಿವನ ಫೋಟೋವನ್ನು ಮನೆಗೆ ತರುವುದು ಶುಭವೆಂದು ಹೇಳಲಾಗಿದೆ. ಅದ್ರಲ್ಲೂ ಪಾವರ್ತಿಯೊಂದಿಗೆ ಇರುವ ಶಿವನ ಫೋಟೋ ಅಥವಾ ಮೂರ್ತಿ ಬಹಳ ಶ್ರೇಷ್ಠ ಎಂದು ಕರೆಯಲಾಗಿದೆ. ಈ ದಿನ ಮನೆಯಲ್ಲಿ ಈ ಮೂರ್ತಿಯ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಶುಭ ತರಲಿದೆ.



Click it and Unblock the Notifications