Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Samosa Origin: ಸಮೋಸವನ್ನು ಮೊದಲು ತಯಾರು ಮಾಡಿದ್ದು ಯಾರು? ಇದು ಭಾರತಕ್ಕೆ ಬಂದಿದ್ಹೇಗೆ?
ಸಮೋಸ ಇಷ್ಟ ಪಡದೇ ಇರುವವರು ಯಾರು ಇಲ್ಲ ಅನ್ಸುತ್ತೆ. ಹೆಚ್ಚಿನವರಿಗೆ ಸಮೋಸ ಅಂದ್ರೆ ತುಂಬಾನೇ ಇಷ್ಟ. ಸ್ನಾಕ್ಸ್ ತಿನ್ನೋ ಸಮಯದಲ್ಲಿ ಹೆಚ್ಚಿನವರು ಸಮೋಸವನ್ನು ತಿನ್ನುತ್ತಾರೆ. ಯಾರಾದರೂ ಬೆಸ್ಟ ಸ್ನಾಕ್ಸ್ ಯಾವುದು ಅಂತ ಕೇಳಿದ್ರೆ ಹೆಚ್ಚಿನವರ ಉತ್ತರ ಸಮೋಸನೇ ಆಗಿರುತ್ತೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ಜನ ಹೆಚ್ಚಾಗಿ ಸಮೋಸವನ್ನು ಸೇವನೆ ಮಾಡ್ತಾರೆ.
ಅದ್ರಲ್ಲೂ ಹೆಚ್ಚಿನವರಿಗೆ ಟೀ ಜೊತೆಗೆ ಸಮೋಸ ಇರಲೇಬೇಕು. ಉತ್ತರ ಭಾರತ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಕೂಡ ಹೆಚ್ಚಾಗಿ ಸೇಲ್ ಆಗೋ ಸ್ನಾಕ್ಸ್ ಗಳಲ್ಲಿ ಇದೂ ಕೂಡ ಒಂದು. ಸಮೋಸವನ್ನು ಇಷ್ಟೊಂದು ಇಷ್ಟ ಒಟ್ಟು ತಿನ್ನುವ ನಿಮಗೆ ಸಮೋಸ ಎಲ್ಲಿಂದ ಹುಟ್ಟಿಕೊಂಡಿತು ಅನ್ನೋದು ಗೊತ್ತಿದ್ಯಾ? ಮೊದಲು ಯಾರು ಇದನ್ನು ತಯಾರಿಸಿದ್ದು ಗೊತ್ತಾ? ಎಲ್ಲವನ್ನೂ ತಿಳಿಯೋಣ.

ಸಮೋಸವನ್ನು ಮೊದಲು ತಯಾರಿಸಿದ್ದು ಯಾಕೆ?
ಭಾರತದಲ್ಲಿ ಪ್ರತಿನಿತ್ಯ ಲಕ್ಷಾಂತರ ಸಮೋಸ ಮಾರಾಟವಾಗುತ್ತೆ. ಭಾರತೀಯ ಫೇವರೇಟ್ ಆಹಾರ ಕೂಡ ಹೌದು. ಹೀಗಾಗಿ ಎಲ್ಲರೂ ಸಮೋಸ ಭಾರತದಲ್ಲೇ ಹುಟ್ಟಿಕೊಂಡಿದೆ ಅಂತ ಅಂದುಕೊಂಡಿದ್ರು. ಆದ್ರೆ ನಿಮ್ಮ ಕಲ್ಪನೆ ತಪ್ಪು. ಸುಮಾರು 10 ನೇ ಶತಮಾನದಲ್ಲಿ ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಸಮೋಸವನ್ನು ಮೊದಲಿಗೆ ತಯಾರು ಮಾಡಲಾಗಿತ್ತಂತೆ.
ಸಮೋಸಾದ ಮೊದಲ ಅಧಿಕೃತ ಉಲ್ಲೇಖವು ಇರಾನಿನ ಇತಿಹಾಸಕಾರರಾದ ಅಬೋಲ್ಫಾಜ್ಲ್ ಬೇಹಕಿ ಅವರ ಕೃತಿ ತಾರಿಖ್-ಇ ಬೇಹಘಿಯಲ್ಲಿ ಕಂಡುಬಂದಿದೆ. ಅಲ್ಲಿ ಇದನ್ನು 'ಸಂಬೋಸಾ' ಎಂದು ಉಲ್ಲೇಖಿಸಲಾಗಿದೆ. ಅವುಗಳು ಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದವು. ಹೀಗಾಗಿ ಅವುಗಳನ್ನು ಪ್ರಯಾಣಿಕರು ಲಘು ಉಪಹಾರವಾಗಿ ಬಳಸುತ್ತಿದ್ದರು. ಗಾತ್ರದಲ್ಲಿ ಸಣ್ಣದಾಗಿ ಇದ್ದಿದ್ರಿಂದ ಅದನ್ನು ಬ್ಯಾಗ್ ನಲ್ಲಿ ಸುಲಭವಾಗಿ ಪ್ಯಾಕ್ ಮಾಡೋದಕ್ಕೆ ಸಾಧ್ಯವಾಗ್ತಿತ್ತು. ಹೀಗಾಗಿ ಹೆಚ್ಚಿನವರು ಟ್ರಾವೆಲ್ ಮಾಡುವಾಗ ಸಮೋಸವನ್ನು ತೆಗೆದುಕೊಂಡು ಹೋಗ್ತಿದ್ರಂತೆ.
ಸಮೋಸದ ಬಗ್ಗೆ ಇತಿಹಾಸಕಾರರು ಏನೆಂದು ಉಲ್ಲೇಖಿಸಿದ್ದಾರೆ?
ಸಮೋಸದ ಬಗ್ಗೆ ಒಬ್ಬೊಬ್ಬ ಇತಿಹಾಸಕಾರರು ಒಂದೊಂದು ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ದೆಹಲಿ ಸುಲ್ತಾನರ ಪ್ರಸಿದ್ಧ ಕವಿ ಮತ್ತು ವಿದ್ವಾಂಸರಾದ ಅಮೀರ್ ಖುಸ್ರೊ ಅವರು ಮಾಂಸ, ತುಪ್ಪ ಮತ್ತು ಈರುಳ್ಳಿಯನ್ನು ಬಳಸಿ ಸಮೋಸವನ್ನು ತಯಾರು ಮಾಡಲಾಗ್ತಿತ್ತು. ಹಾಗೂ ರಾಜ ಯುಗದಲ್ಲಿ ಸಮೋಸಾವನ್ನು ಮೊದಲ ಬಾರಿಗೆ ತಯಾರು ಮಾಡಲಾಗ್ತಿತ್ತು ಅಂತ ಉಲ್ಲೇಖಿಸಿದ್ದಾರೆ.
ಇನ್ನೂ 14 ನೇ ಶತಮಾನದಲ್ಲಿ ಇಬ್ನಾ ಬಟೂಟಾನು ಸಮೋಸವನ್ನು ಕೊಚ್ಚಿದ ಮಾಂಸ, ವಾಲ್‌ನಟ್ಸ್, ಪಿಸ್ತಾ, ಬಾದಾಮಿ ಮತ್ತು ಮಸಾಲೆಗಳನ್ನು ಹಾಕಿ ತಯಾರು ಮಾಡಲಾಗಿತ್ತು ಎಂದು ಹೇಳಿದ್ದಾರೆ. ಈ ಸಾಂಬುಸಾಕ್ (ಅಕಾ ಸಮೋಸಾ) ಅನ್ನು ಮಹಮ್ಮದ್ ಬಿನ್ ತುಘಲಕ್ ಅವರ ಆಸ್ಥಾನದಲ್ಲಿ ರಾಜಮನೆತನದ ಭೋಜನದ ಭಾಗವಾಗಿ ಬಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಿದ್ದಾರೆ. ಇನ್ನೂ ಮೊಘಲ್ ರಾಜವಂಶದಲ್ಲಿ ಐನ್-ಇ-ಅಕ್ಬರಿ, 'ಸಾನ್ಬುಸಾ' ಎಂದು ಕರೆಯಲ್ಪಡುವ ಸಮೋಸಾದ ಬಗ್ಗೆ ಉಲ್ಲೇಖ ನೀಡಿದ್ದಾರೆ.
ದೇಶಿಯ ಸಮೋಸದಲ್ಲಿ ಎಷ್ಟೆಲ್ಲಾ ವಿಧಗಳಿದೆ ಗೊತ್ತಾ?
ಭಾರತದಲ್ಲಿ ವಿವಿಧ ರೀತಿಯ ಸಮೋಸಗಳನ್ನು ತಯಾರು ಮಾಡಲಾಗುತ್ತದೆ. ಹಿಸುಕಿದ ಆಲೂಗಡ್ಡೆ ಹಾಗೂ ಬಟಾಣಿಯಿಂದ ಮಾಡಿದ ಸಮೋಸ ಸಾಮಾನ್ಯವಾಗಿ ಎಲ್ಲಾ ಕಡೆ ಲಭ್ಯವಾಗುತ್ತದೆ. ಕರ್ನಾಟಕದಲ್ಲಿ ಕ್ಯಾಬೇಜ್ ನಿಂದ ತಯಾರಿಸಿದ ಪುಟ್ಟ ಪುಟ್ಟ ಸಮೋಸಗಳು ಕೂಡ ಸಿಗುತ್ತದೆ. ಭಾರತದಲ್ಲಿ ಒಟ್ಟು 15-20 ವಿಧದ ಸಮೋಸಗಳು ಲಭ್ಯವಿದ್ದು, ಹೈದರಾಬಾದ್‌ನಲ್ಲಿ ಇದನ್ನು 'ಲುಖ್ಮಿ' ಎಂದು ಕರೆಯಲಾಗುತ್ತದೆ. ಈ ಸಮೋಸದ ಒಳಗಡೆ ಮಾಂಸವನ್ನು ಕೊಚ್ಚಿ ಬೇಯಿಸಿ ತುಂಬಿಸಿರುತ್ತಾರೆ.
ಇನ್ನೂ ದಕ್ಷಿಣ ಭಾರತದಲ್ಲಿ ಸಮೋಸಾಗಳನ್ನು ಎಲೆಕೋಸು, ಕ್ಯಾರೆಟ್ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಸ್ಟಫಿಂಗ್ ಮಾಡಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇದನ್ನು 'ಶಿಂಗಾರಸ್' ಎಂದು ಕರೆಯಲಾಗುತ್ತದೆ. ಇದು ಖಾರ ಮತ್ತು ಸಿಹಿ ಎರಡು ವಿಧದಲ್ಲೂ ಕೂಡ ಲಭ್ಯವಿದೆ.
ಇನ್ನೂ ಗುಜರಾತ್‌ನಲ್ಲಿ ಇದನ್ನು ಫ್ರೆಂಚ್ ಬೀನ್ಸ್ ಮತ್ತು ಸಿಹಿ ಅವರೆಕಾಳುಗಳಿಂದ ತಯಾರು ಮಾಡಲಾಗುತ್ತದೆ. ಗೋವಾದಲ್ಲಿ ಸಮೋಸಾವನ್ನು 'ಚಾಮುಕಾಸ್' ಎಂದು ಕರೆಯಲಾಗುತ್ತದೆ. ಇದನ್ನು ಕೊಚ್ಚಿದ ಗೋಮಾಂಸ, ಕೋಳಿ ಅಥವಾ ಹಂದಿಮಾಂಸದಿಂದ ತಯಾರು ಮಾಡಲಾಗುತ್ತದೆ.
ಒಂದು ಸಮೋಸವನ್ನು ಯಾರೂ ತಿನ್ನೋದಿಲ್ಲ!
ಸಮೋಸವನ್ನು ತಿನ್ನೋದಕ್ಕೆ ಶುರು ಮಾಡಿದ್ರೆ ನಿಲ್ಲಿಸೋದಕ್ಕೆ ಸಾಧ್ಯಾನೇ ಇಲ್ಲ. ಬರೀ ಒಂದು ಸಮೋಸ ತಿಂದು ಹೊಟ್ಟೆ ತುಂಬಿಸಿಕೊಳ್ಳುವವರು ಯಾರು ಇಲ್ಲ ಅನ್ಸುತ್ತೆ. ಕಮ್ಮಿ ಅಂದ್ರ ಟೀ ಜೊತೆಗೆ ಎರಡರಿಂದ ಮೂರು ಸಮೋಸವನ್ನು ತಿನ್ನಲೇಬೇಕು.
ವಿಶ್ವದಾದ್ಯಂತ ಜನ ಸಮೋಸವನ್ನು ತಯಾರಿಸಿ ತಿನ್ನುತ್ತಾರೆ. ಆದರೆ ಆ ಪ್ರದೇಶಕ್ಕೆ ತಕ್ಕ ಹಾಗೆ ಸಮೋಸದ ರುಚಿ ಬದಲಾಗುತ್ತದೆ. ಅದೇ ರೀತಿ ಭಾರತದ ಅನೇಕ ಕಡೆಗಳಲ್ಲಿ ನೀವು ಬಹು ವಿಧದ ಸಮೋಸಗಳನ್ನು ಸವಿಯಬಹುದು.



Click it and Unblock the Notifications

